
ನವದೆಹಲಿ: ಈ ಹಿಂದೆ ಜಗತ್ತಿನ ಅತ್ಯಾಧುನಿಕ 36 ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸಿದ್ದ ಭಾರತ ಇದೀಗ ಮತ್ತೆ 26 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಸಜ್ಜಾಗಿದೆ. 2 ದಿನಗಳ ಪ್ರವಾಸಕ್ಕಾಗಿ ಗುರುವಾರ ಫ್ರಾನ್ಸ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಇಂದು ಈ ಸಂಬಂಧ ಒಪ್ಪಂದ ಏರ್ಪಡಲಿದೆ. ಇದೇ ವೇಳೆ, 3 ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನೂ ಭಾರತವು ಫ್ರಾನ್ಸ್‌ನಿಂದ ಖರೀದಿಸಲಿದೆ. ಗುರುವಾರ ಸಂಜೆ ಫ್ರಾನ್ಸ್‌ಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಸ್ವಾಗತ ದೊರಕಿತು. ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನೆ ಅವರು ಮೋದಿ ಅವರನ್ನು ಒಂದೆಡೆ ಸ್ವಾಗತಿಸಿದರೆ, ಇನ್ನೊಂದು ಕಡೆ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಂಜಾತರು ತ್ರಿವರ್ಣ ಧ್ವಜ ಹಿಡಿದು ಭಾರತದ ಪ್ರಧಾನಿಗೆ ಸ್ವಾಗತ ಕೋರಿದರು.
ವಿಮಾನದಿಂದ ಇಳಿದ ಬಳಿಕ ಸೇನಾಪಡೆಗಳು ಮೋದಿ ಅವರಿಗೆ ಗೌರವ ವಂದನೆಯನ್ನೂ ಸಲ್ಲಿಸಿದವು. ಇನ್ನು ಏರ್‌ಪೋರ್ಟ್ ಹೊರಗೆ ನೆರೆದಿದ್ದ ಭಾರತೀಯರು, ‘ಮೋದಿ.. ಮೋದಿ..’ ಹಾಗೂ ‘ಭಾರತ ಮಾತಾ ಕೀ ಜೈ’ ಘೋಷಣೆಗಳನ್ನು ಮೊಳಗಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ನನಗೆ ಅದ್ಧೂರಿ ಸ್ವಾಗತ ದೊರಕಿದೆ. ಇದಕ್ಕೆ ನಾನು ಆಭಾರಿ. ಫ್ರಾನ್ಸ್-ಭಾರತ ದ್ವಿಪಕ್ಷೀಯ ನಂಟಿಗೆ ಈಗ 25 ವರ್ಷಗಳಾಗಿವೆ. ಆದರೆ ಇನ್ನು ಮುಂದಿನ 25 ವರ್ಷದಗಳ ನಂಟು ಹೇಗಿರಬೇಕು ಎಂಬುದನ್ನು ಈಗಿನ ನನ್ನ ಭೇಟಿ ನಿರ್ಧರಿಸಲಿದೆ’ ಎಂದರು.
ಇಂದು ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್‌ರನ್ನು ಭೇಟಿ ಮಾಡಿ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಈ ವೇಳೆ 26 ರಫೇಲ್ ಖರೀದಿ ಹಾಗೂ 3 ಸ್ಕಾರ್ಪೀನ್ ಜಲಾಂತರ್ಗಾಮಿ ಖರೀದಿ ಒಪ್ಪಂದ ಹೊರಬೀಳುವ ನಿರೀಕ್ಷೆಯಿದೆ. ಈ ಖರೀದಿ ಮೊತ್ತ 80000-850000 ಕೋಟಿ ರು. ಆಗುವ ನಿರೀಕ್ಷೆ ಇದೆ. ಈಗಾಗಲೇ ಭಾರತ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನ ಖರೀದಿಸಿದ್ದು, ಅವೆಲ್ಲವೂ ಭಾರತಕ್ಕೆ ಬಂದಿವೆ.
ಪ್ಯಾರಿಸ್‌ಗೆ ಬಂದಿಳಿದ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದ ಫ್ರಾನ್ಸ್ ಪ್ರಧಾನಿ!
ಅನುಮೋದನೆ:
ಈ ನಡುವೆ ಫ್ರಾನ್ಸ್‌ನಿಂದ 26 ನೌಕಾಪಡೆ ರಫೇಲ್ ಯುದ್ಧ ವಿಮಾನ ಖರೀದಿ ಮತ್ತು ಫ್ರಾನ್ಸ್ ಸಹಯೋಗದಲ್ಲಿ 3 ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ಗೆ 2 ದಿನಗಳ ಭೇಟಿಯನ್ನು ಆರಂಭಿಸಿದ ದಿನವೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಯೋಜನೆಗೆ ಅನುಮತಿ ನೀಡಿತು
.ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಭಾರತವೇ ಆಧಾರ, ಫ್ರಾನ್ಸ್ ಭೇಟಿ ಬೆನ್ನಲ್ಲೇ ಮೋದಿ ಮನದ ಮಾತು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.