Business Loan Benefits ವ್ಯವಹಾರದಲ್ಲಿ ಬಹುಮುಖ್ಯ ಪಾತ್ರವಹಿಸುತ್ತೆ ಬ್ಯುಸಿನೆಸ್ ಸಾಲ!

Suvarna News   | Asianet News
Published : Feb 15, 2022, 08:24 PM IST
Business Loan Benefits ವ್ಯವಹಾರದಲ್ಲಿ ಬಹುಮುಖ್ಯ ಪಾತ್ರವಹಿಸುತ್ತೆ ಬ್ಯುಸಿನೆಸ್ ಸಾಲ!

ಸಾರಾಂಶ

ವ್ಯಾಪಾರ ಶುರು ಮಾಡುವುದು ದೊಡ್ಡ ಸಂಗತಿಯಲ್ಲ,ಅದ್ರಲ್ಲಿ ಯಶಸ್ಸು ಕಾಣುವುದು ಸಾಧನೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರನ್ನು ಸೆಳೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು. ನಮ್ಮ ಕೈನಲ್ಲಿ ಹಣವಿದ್ದರೆ ಮಾತ್ರ ಎಲ್ಲವೂ ಸುಸೂತ್ರವಾಗಿ ನಡೆಯುತ್ತವೆ. ಬೇರೆಯವರ ಮುಂದೆ ಕೈಚಾಚುವ ಬದಲು ವ್ಯಾಪಾರ ಸಾಲ ನಿಮ್ಮ ಏಳ್ಗೆಗೆ ನೆರವಾಗುತ್ತದೆ,   

ಹಣ (Money)ವನ್ನು ಗಳಿಸಲು ಹಣವನ್ನು ಖರ್ಚು ಮಾಡಬೇಕು ಎಂಬ ಮಾತು ನೂರಕ್ಕೆ ನೂರು ಸತ್ಯ. ಇದು ಸ್ಪರ್ಧೆ (Competition)ಯ ಯುಗವಾಗಿದ್ದು,ಒಂದು ವ್ಯಾಪಾರ (Business) ಶುರು ಮಾಡಿ ಅದರ ಪಾಡಿಗೆ ಅದನ್ನು ಬಿಡುವುದು ಸೂಕ್ತವಲ್ಲ. ವ್ಯವಹಾರದಲ್ಲಿ ಯಶಸ್ವಿಯಾಗಲು ನಿರಂತರವಾಗಿ ನಮ್ಮ ಸಂಪನ್ಮೂಲಗಳನ್ನು ಆವಿಷ್ಕರಿಸಬೇಕು. ಸುಧಾರಿತ ತಂತ್ರಜ್ಞಾನದ ಬಲದಿಂದ ಮಾತ್ರ ನಾವು ವ್ಯಾಪಾರ ಜಗತ್ತಿನಲ್ಲಿ ನಡೆಯುತ್ತಿರುವ ಸ್ಪರ್ಧೆಯನ್ನು ಗೆಲ್ಲಬಹುದು. ಆದ್ರೆ ವ್ಯಾಪಾರ ಒಂದು ಹಂತದವರೆಗೆ ಬರುವವರೆಗೂ ಸುಧಾರಿತ ಉಪಕರಣಗಳು, ನುರಿತ ಸಿಬ್ಬಂದಿಯನ್ನು ನೇಮಿಸಿಕೊಳ್ಳುವು ಕಷ್ಟ. ಆದ್ರೆ ಇವಿಲ್ಲದೆ ನಿಮ್ಮ ವ್ಯಾಪಾರ ವೃದ್ಧಿಯಾಗಲು ಸಾಧ್ಯವಿಲ್ಲ. ಇದೊಂದು ಜಟಿಲ ಸಮಸ್ಯೆ. ಕೆಲವರು ತಮ್ಮ ಸ್ವಂತ ಸಂಪನ್ಮೂಲಗಳನ್ನು ವ್ಯವಹಾರಕ್ಕೆ ಬಳಕೆ  ಮಾಡ್ತಾರೆ. ಆದ್ರೆ ಎಲ್ಲರ ಬಳಿಯೂ ವ್ಯವಹಾರಕ್ಕೆ ಅಗತ್ಯವಿರುವಷ್ಟು ವೈಯಕ್ತಿಕ ಸಂಪನ್ಮೂಲವಿರುವುದಿಲ್ಲ. ಅಂತವರು ಬ್ಯಾಂಕ್,ಬ್ಯಾಂಕೇತರ ಸಂಸ್ಥೆಗಳ ಮೊರೆ ಹೋಗಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದ್ರೆ ವ್ಯಾಪಾರ ಸಾಲ. ಬಿಸಿನೆಸ್ ಲೋನ್‌ಗಳ ಸಹಾಯದಿಂದ, ನೀವು ಹೊಸ ಯಂತ್ರೋಪಕರಣಗಳು ಮತ್ತು ಉದ್ಯೋಗಿಗಳನ್ನು ನೇಮಿಸಿಕೊಳ್ಳಬಹುದು.  ಇಂದು ಬ್ಯುಸಿನೆಸ್ ಲೋನ್ ಬಗ್ಗೆ ಮಾಹಿತಿ ನೀಡ್ತೆವೆ.
ಬ್ಯುಸಿನೆಸ್ ಲೋನ್ : ವ್ಯಾಪಾರ ಸಾಲವು ಒಂದು ರೀತಿಯ ಅಸುರಕ್ಷಿತ ಸಾಲವಾಗಿದೆ. ಸಾಲಗಾರನ ಕ್ರೆಡಿಟ್ ಅರ್ಹತೆಯ ಆಧಾರದ ಮೇಲೆ ವ್ಯಾಪಾರ ಸಾಲವನ್ನು ನೀಡಲಾಗುತ್ತದೆ. ಅನೇಕ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಅಗತ್ಯವಿರುವ ದಾಖಲೆಗಳ ಆಧಾರದ ಮೇಲೆ ಉದ್ಯಮಿಗೆ ವ್ಯಾಪಾರ ಸಾಲಗಳನ್ನು ನೀಡುತ್ತವೆ.

ಬ್ಯುಸಿನೆಸ್ ಸಾಲದ ಲಾಭಗಳು : 

ವ್ಯವಹಾರ ವಿಸ್ತರಣೆ : ಮೊದಲೇ ಹೇಳಿದಂತೆ ಬ್ಯುಸಿನೆಸ್ ಲೋನ್ ಸ್ಪರ್ಧಾತ್ಮಕ ಯುಗದಲ್ಲಿ  ವ್ಯಾಪಾರವನ್ನು ಮುನ್ನಡೆಸಲು ನೆರವಾಗುತ್ತದೆ.ವ್ಯವಹಾರದಲ್ಲಿ ಸಾಕಷ್ಟು ಬೆಳವಣಿಗೆ ಕಂಡು,ಲಾಭ ಪಡೆಯಲು ಇದು ನೆರವಾಗುತ್ತದೆ. 

ಸಂಪೂರ್ಣ ಸ್ವಾತಂತ್ರ್ಯ : ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗಳಿಂದ ನೀವು ವ್ಯಾಪಾರ ಸಾಲವನ್ನು ಪಡೆದ ನಂತ್ರ ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ನೀವು ಅದನ್ನು ಹೇಗೆ ಬೇಕಾದರೂ ಬಳಸಬಹುದು. ಅದ್ರಲ್ಲಿ ಬ್ಯಾಂಕ್ ಗಳು  ಹಸ್ತಕ್ಷೇಪ ಮಾಡುವುದಿಲ್ಲ. ವ್ಯಾಪಾರ ಸಾಲದ ಹಣವನ್ನು ಹೇಗೆ ಬಳಸಬೇಕೆಂದು ಅವರು ನಿರ್ದೇಶಿಸುವುದಿಲ್ಲ. ಸಾಲ ಮರುಪಾವತಿ ಬಗ್ಗೆ ಮಾತ್ರ ನಿಮ್ಮನ್ನು ಎಚ್ಚರಿಸುತ್ತಿರುತ್ತಾರೆ.. ಹಾಗಾಗಿ ಹಣವನ್ನು ಹೇಗೆ ಖರ್ಚು ಮಾಡುತ್ತೀರಿ ಎಂಬುದರ ಸಂಪೂರ್ಣ ನಿಯಂತ್ರಣ ನಿಮ್ಮ ಮೇಲಿರುತ್ತದೆ.

ಸಾಲ ಪಡೆಯುವುದು ಸುಲಭ : ಬ್ಯಾಂಕ್ ಹಾಗೂ ಬ್ಯಾಂಕೇತರ ಸಂಸ್ಥೆಗಳಿಂದ ವ್ಯಾಪಾರ ಸಾಲ ಪಡೆಯುವುದು ಸುಲಭ. ಇದಕ್ಕೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ವ್ಯವಹಾರದ ಬೆಳವಣಿಗೆಯನ್ನು ಗಮನಿಸಿ ಬ್ಯಾಂಕ್ ಗಳು ಸಾಲವನ್ನು ನೀಡುತ್ತವೆ.   

ಸೂಕ್ತ ಬಡ್ಡಿದರ : ವ್ಯಾಪಾರ ಸಾಲದಲ್ಲಿ ಅತಿರೇಕದ ಬಡ್ಡಿದರವಿಲ್ಲ. ವ್ಯಾಪಾರ ಸಾಲಗಾರರನ್ನು ಸೆಳೆಯಲು ಅನೇಕ ಸಂಸ್ಥೆಗಳು ಕಡಿಮೆ ಬಡ್ಡಿದರಕ್ಕೆ ಸಾಲವನ್ನು ನೀಡುತ್ತವೆ. ಕಡಿಮೆ ಬಡ್ಡಿ ನೀಡುವ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.  

LIC Kanyadan Policy : ಮಗಳ ಮದುವೆ ಚಿಂತೆ ಬಿಡ್ಬಿಡಿ,ಇಲ್ಲಿ ಹೂಡಿಕೆ ಮಾಡಿ

ಕ್ರೆಡಿಟ್ ಸ್ಕೋರ್ ಸುಧಾರಣೆ : ನಮ್ಮ ವ್ಯಾಪಾರ ಸಾಲವನ್ನು ಸಮಯಕ್ಕೆ ಮರುಪಾವತಿಸಿದರೆ ಅದು ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುತ್ತದೆ. ಭವಿಷ್ಯದಲ್ಲಿ ಅಗತ್ಯವಿದ್ದರೆ ಕಡಿಮೆ ಬಡ್ಡಿಯಲ್ಲಿ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ.

ಲಾಭದ ಹಂಚಿಕೆ ಇಲ್ಲ : ಬೇರೆಯವರು ನಿಮ್ಮ ವ್ಯವಹಾರದಲ್ಲಿ ಹೂಡಿಕೆ ಮಾಡಿದಲ್ಲಿ ನೀವು ಅವರಿಗೆ ನಿಮ್ಮ ವ್ಯವಹಾರದಲ್ಲಿ ಬಂದ ಲಾಭವನ್ನು ನೀಡಬೇಕಾಗುತ್ತದೆ. ಆದ್ರೆ ವ್ಯಾಪಾರ ಸಾಲದಲ್ಲಿ ಈ ಸಮಸ್ಯೆಯಿಲ್ಲ. ವ್ಯಾಪಾರ ಸಾಲದಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿಯನ್ನು ಮಾತ್ರ ಮರುಪಾವತಿ ಮಾಡಬೇಕು. 

Post Office: ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಶೀಘ್ರದಲ್ಲಿ ನೆಟ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ!

ಬಹು ಸಾಲದ ಆಯ್ಕೆಗಳು : ಬ್ಯಾಂಕ್ ಹಾಗೂ ಬ್ಯಾಂಕೇತರ ಸಂಸ್ಥೆಗಳು  ವಿವಿಧ ಅಗತ್ಯಗಳನ್ನು ಪೂರೈಸಲು ವಿವಿಧ ರೀತಿಯ ವ್ಯಾಪಾರ ಸಾಲ ಯೋಜನೆಗಳನ್ನು ಹೊಂದಿರುತ್ತಾರೆ. ವ್ಯಾಪಾರ ಸಾಲಗಳು, ಯಂತ್ರೋಪಕರಣಗಳ ಸಾಲಗಳು ಇತ್ಯಾದಿ ಸೇರಿವೆ. 

ತೆರಿಗೆ ಪ್ರಯೋಜನಗಳು : ವ್ಯಾಪಾರ ಸಾಲದ ಮೇಲೆ ಪಾವತಿಸಬೇಕಾದ ಬಡ್ಡಿಯು ಸಾಮಾನ್ಯವಾಗಿ ತೆರಿಗೆ ವಿನಾಯತಿಗೆ ಒಳಪಟ್ಟಿರುತ್ತದೆ. ನೀವು ಬಿಸಿನೆಸ್ ಲೋನ್‌ಗೆ ಅರ್ಜಿ ಸಲ್ಲಿಸುವ ಮೊದಲು ಬಡ್ಡಿ ಮಿತಿ ಮತ್ತು ಅರ್ಹತೆಯನ್ನು ಪರಿಶೀಲಿಸಬೇಕು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..