ಇದು ಅಮೃತ ಕಾಲದ ಮೊದಲ ಬಜೆಟ್ ಅಗಿದ್ದು, ಈ ಹಿಂದಿನ ಬಜೆಟ್‌ಗಳಲ್ಲಿ ಹಾಕಿದ ಅಡಿಪಾಯದ ಮೇಲೆ ಹೊಸ ಇತಿಹಾಸ ನಿರ್ಮಿಸಲು ಆಶಿಸುತ್ತದೆ ಮತ್ತು ಸ್ವಾತಂತ್ರ್ಯದ ಶತಮಾನೋತ್ಸವ ಕಾಲಕ್ಕೆ ನೀಲ ನಕ್ಷೆಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಮಂಡನೆಯ ಮುನ್ನುಡಿಯಲ್ಲಿ ಹೇಳಿದರು.
ಇದು ಅಮೃತ ಕಾಲದ ಮೊದಲ ಬಜೆಟ್ ಅಗಿದ್ದು, ಈ ಹಿಂದಿನ ಬಜೆಟ್‌ಗಳಲ್ಲಿ ಹಾಕಿದ ಅಡಿಪಾಯದ ಮೇಲೆ ಹೊಸ ಇತಿಹಾಸ ನಿರ್ಮಿಸಲು ಆಶಿಸುತ್ತದೆ ಮತ್ತು ಸ್ವಾತಂತ್ರ್ಯದ ಶತಮಾನೋತ್ಸವ ಕಾಲಕ್ಕೆ ನೀಲ ನಕ್ಷೆಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಮಂಡನೆಯ ಮುನ್ನುಡಿಯಲ್ಲಿ ಹೇಳಿದರು. ರಾಷ್ಟ್ರಹಿತದೊಂದಿಗೆ ಸಮೃದ್ಧ ಭಾರತವನ್ನು ಒಳಗೊಡಂತೆ ಅಭಿವೃದ್ಧಿಯ ಫಲಗಳು ಎಲ್ಲಾ ಪ್ರದೇಶಗಳನ್ನು ಹಾಗೂ ನಾಗರಿಕರನ್ನು ಅದರಲ್ಲೂ ವಿಶೇಷವಾಗಿ ಯುವಕರು, ಮಹಿಳೆಯರು, ರೈತರು, ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟರನ್ನು ತಲುಪುವ ಗುರಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಅಮೃತಕಾಲದಲ್ಲಿ ಜಗತ್ತು ಭಾರತವನ್ನು ‘ಮಿನುಗುವ ನಕ್ಷತ್ರ’ ಎಂದು ಗುರುತಿಸಿದ್ದು, ಜಾಗತಿಕವಾಗಿ ಕೋವಿಡ್ ಸಂಕಷ್ಟಹಾಗೂ ಯುದ್ಧದಂತ ಪರಿಸ್ಥಿತಿಗಳ ನಂತರವೂ ದೇಶದ ಆರ್ಥಿಕತೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಇಂದು ಭಾರತೀಯರು ತಲೆ ಎತ್ತಿ ನಿಂತಿದ್ದು, ಜಗತ್ತು ಭಾರತದ ಸಾಧನೆ ಮತ್ತು ಯಶಸ್ಸನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಮೃತ ಕಾಲದ ದೃಷ್ಟಿಕೋನವು ತಂತ್ರಜ್ಞಾನ ಆಧಾರಿತ ಮತ್ತು ಜ್ಞಾನಾಧಾರಿತ ಆರ್ಥಿಕತೆಯಾಗಿದ್ದು, ಬಲವಾದ ಸಾರ್ವಜನಿಕ ಹಣಕಾಸು ಮತ್ತು ದೃಢವಾದ ಆರ್ಥಿಕ ವಲಯವನ್ನು ಒಳಗೊಡಿದೆ. ಈ ದೃಷ್ಟಿಕೋನವನ್ನು ತಲುಪಲು ಮೂರು ಮುಖ್ಯ ಗುರಿಗಳನ್ನು ಹೊಂದಲಾಗಿದೆ.
Budget 2023: ಅಂತರ್ಗತ ಅಭಿವೃದ್ಧಿಗೆ ಉತ್ತೇಜನ ನೀಡುವ ಬಜೆಟ್: ಡಾ.ಎಸ್.ಆರ್.ಕೇಶವ
ಮೊದಲನೆಯದಾಗಿ ಯುವಕರನ್ನು ಕೇಂದ್ರವಾಗಿಟ್ಟುಕೊಂಡು ದೇಶದ ನಾಗರಿಕರಿಗೆ ಅವರ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ವಿಫುಲ ಅವಕಾಶ ಒದಗಿಸುವುದು, ಎರಡನೆಯದಾಗಿ ಉದ್ಯೋಗ ಸೃಷ್ಟಿಮತ್ತು ಬೆಳವಣಿಗೆಗೆ ಬಲವಾದ ಪ್ರಚೋದನೆ ನೀಡುವುದು, ಮೂರನೇಯದಾಗಿ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವುದಾಗಿದೆ. ಅದರ ಜೊತೆಗೆ ಅಮೃತ ಕಾಲದ ಮೂಲಕ ಭಾರತಕ್ಕೆ ಮಾರ್ಗದರ್ಶನ ಮಾಡಲು ಬಜೆಟ್‌ನಲ್ಲಿ ಏಳು ಪ್ರಮುಖ ಆದ್ಯತೆಗಳನ್ನು ಹೊಂದಲಾಗಿದ್ದು, ಅವುಗಳನ್ನು ಸಪ್ತರ್ಷಿ ಆದ್ಯತೆಗಳೆಂದು ಕರೆಯಲಾಗಿದೆ. ಅಮೃತಕಾಲವು 25 ವರ್ಷಗಳ ಅವಧಿಯದ್ದಾಗಿದ್ದು, ಭಾರತದ ಶತಮಾನೋತ್ಸವದಲ್ಲಿ ಪೂರ್ಣಗೊಳ್ಳುವ ಪರಾಕಾಷ್ಠೆ ಎಂದು ಸರ್ಕಾರದಿಂದ ಬಣ್ಣಿಸಲಾಗಿದೆ.
ಬಜೆಟ್‌ನ ಈ ಏಳೂ ಆದ್ಯತೆಗಳು ಪರಸ್ಪರ ಪೂರಕವಾಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಅವು ಇಂತಿವೆ. 1. ಸರ್ವಾಂಗೀಣ ಅಭಿವೃದ್ಧಿ (ಇನ್ಕೂ$್ಲಸಿವ್ ಡೆವಲಪ್‌ಮೆಂಟ್), 2. ಕೊನೆಯ ಮೈಲಿಗಲ್ಲು ತಲುಪುವುದು (ರಿಚಿಂಗ್ ಲಾಸ್ಟ್ ಮೈಲ್), 3. ಮೂಲಸೌಕರ್ಯ ಮತ್ತು ಹೂಡಿಕೆ (ಇನಾ್ೊ್ರಸ್ಟ್ರಕ್ಚರ್ ಆ್ಯಂಡ್ ಇನ್ವೆಸ್ಟ್‌ಮೆಂಟ್), 4.ಸಂಭಾವ್ಯತೆಯ ಸಡಿಲಿಕೆ (ನ್‌ಲೀಶಿಂಗ್ ದಿ ಪೊಟೆನ್ಸಿಯಲ್), 5. ಹಸಿರು ಬೆಳವಣಿಗೆ (ಗ್ರೀನ್ ಗ್ರೋಥ್), 6. ಯುವ ಶಕ್ತಿ (ಯೂತ್ ಪವರ್), 7. ಹಣಕಾಸು ವಲಯ (ಫಿನಾನ್ನಸಿಯಲ್ ಸೆಕ್ಟರ್).
ಅಮೃತ ಕಾಲದಿಂದ ಶತಮಾನೋತ್ಸವದೆಡೆಗಿನ ಪಯಣದಲ್ಲಿ ಮಹಿಳಾ ಆರ್ಥಿಕ ಸಬಲೀಕರಣ, ಪಿಎಂ ವಿಶ್ವಕರ್ಮ ಕೌಶಲ ಸಮ್ಮಾನ್ (ಪಿಎಂ ವಿಕಾಸ್), ಪ್ರವಾಸೋದ್ಯಮ, ಹಸಿರು ಬೆಳವಣಿಗೆ (ಗ್ರೀನ್ ಗ್ರೋಥ್) ಎಂಬ ನಾಲ್ಕು ಕೇಂದ್ರಿಕೃತ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಬಯಸಿದ್ದು, ಆರ್ಥಿಕ ಸಬಲೀಕರಣಕ್ಕೆ ರೂಪಾಂತರಗೊಳ್ಳುವ ಈ ಅಂಶಗಳನ್ನು ಬಳಸಬಹುದು ಎಂದು ತಿಳಿಸಿದ್ದಾರೆ.
ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೂಕರ್ಯವನ್ನು ಮುಕ್ತಮೂಲ, ಮುಕ್ತ ಗುಣಮಟ್ಟಮತ್ತು ಸಾರ್ವಜನಿಕರ ಪರಸ್ಪರ ಕಾರ್ಯ ಸಾಧ್ಯತೆ ಮೂಲಕ ರೂಪಿಸಲಾಗುವುದು. ಅಮೃತಕಾಲಕ್ಕೆ ಸರಿಹೊಂದುವ ವಿಂಗಡಣೆಯನ್ನು, ಶಿಫಾರಸ್ಸುಗಳನ್ನು ಮಾಡಲು ಮತ್ತು ಆರ್ಥಿಕ ಸಹಕಾರ ನೀಡಲು ನಿರ್ದಿಷ್ಟಪಟ್ಟಿಯಲ್ಲಿರುವ ಮೂಲಸೌಕರ್ಯಗಳನ್ನು ತಜ್ಞರ ಸಮಿತಿ ಪರೀಕ್ಷಿಸಲಿದೆ ಎಂದು ತಿಳಿದರು. ಒಟ್ಟಿನಲ್ಲಿ ಸಂಪೂರ್ಣ ಬಜೆಟ್ ಅಮೃತ ಕಾಲವನ್ನು ಕೇಂದ್ರೀಕರಿಸಿದ್ದು, ಯುವಕರು, ಸ್ತ್ರೀಯರು, ರೈತರು, ಹಿಂದುಳಿದ ವರ್ಗ ಮತ್ತು ಪರಿಶಿಷ್ಟರನ್ನು ಒಳಗೊಂಡ, ಆರ್ಥಿಕ ಸಬಲತೆ ಸಾಧಿಸುವ ಗುರಿ ಹೊಂದಿದ ಮಹತ್ವದ ಬಜೆಟ್ ಆಗಿದೆ.
ಅಮೃತ ಧರೋಹರ್: ಜೌಗು ಪ್ರದೇಶಗಳು ಜೈವಿಕ ವೈವಿಧ್ಯವನ್ನು ಉಳಿಸಿಕೊಳ್ಳಲು ಪ್ರಮುಖ ಪರಿಸರ ವ್ಯವಸ್ಥೆಯಾಗಿದ್ದು, ತಮ್ಮ ಇತ್ತೀಚಿನ ಮನ್ ಕಿ ಬಾತ್‌ನಲ್ಲಿ ಪ್ರಧಾನ ಮಂತ್ರಿಯವರು ‘ ಈಗ ದೇಶದಲ್ಲಿ ರಾಮ್‌ಸರ್ ಜೌಗು ಪ್ರದೇಶಗಳ ಸಂಖ್ಯೆ 75 ತಲುಪಿದ್ದು, 2014ರ ಪೂರ್ವದಲ್ಲಿ ಈ ಸಂಖ್ಯೆ 26 ಮಾತ್ರ ಇತ್ತು’ ಎಂದಿದ್ದರು ಎಂದು ನೆನಪಿಸಿಕೊಂಡ ಸಚಿವೆ ಈ ಪ್ರದೇಶಗಳ ರಕ್ಷಣಾ ಕಾರ್ಯದಲ್ಲಿ ಸ್ಥಳೀಯ ಸಂಸ್ಥೆಗಳು ಸದಾ ಮುಂಚೂಣಿಯಲ್ಲಿದ್ದು, ಸರ್ಕಾರವು ಅವರ ವಿಭಿನ್ನ ಪ್ರಯತ್ನವನ್ನು ‘ಅಮೃತ್ ಧರೋಹರ್’ ಯೋಜನೆಯ ಮೂಲಕ ಪ್ರಚಾರಗೊಳಿಸುತ್ತದೆ. ಜೌಗು ಪ್ರದೇಶಗಳ ಅತ್ಯುತ್ತಮ ಬಳಕೆಯನ್ನು ಉತ್ತೇಜಿಸಲು, ಜೈವಿಕ ವೈವಿಧ್ಯತೆಯನ್ನು ವೃದ್ಧಿಸಲು, ಕಾರ್ಬನ್ ಸ್ಟಾಕ್‌ಗಾಗಿ, ಪರಿಸರ ಪ್ರವಾಸೋದ್ಯಮ ಅವಕಾಶಗಳನ್ನು ಒದಗಿಸಲು ಮತ್ತು ಸ್ಥಳೀಯ ಸಮುದಾಯಗಳಿಗೆ ಆದಾಯ ಉತ್ಪಾದಿಸುವ ದೃಷ್ಟಿಯಿಂದ ಮುಂದಿನ 3 ವರ್ಷಗಳಲ್ಲಿ ಈ ಯೋಜನೆಯನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
Budget 2023: ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲ ಬಜೆಟ್: ವಿಜಯರಾಜೇಶ್
‘ಅಮೃತ ಪೀಡಿ’ಗಾಗಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಿ, ನಮ್ಮ ಯುವಕರನ್ನು ಸಬಲಗೊಳಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೇವೆ. ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿದ್ದೇವೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡಿದ್ದೇವೆ ಹಾಗೂ ಉದ್ಯಮದ ಅವಕಾಶಗಳನ್ನು ಬೆಂಬಲಿಸಿದ್ದೇವೆ ಎಂದು ಸರ್ಕಾರದ ಕಳಕಳಿಯನ್ನು ತಿಳಿಸಿರು. ಹಣಕಾಸು ವಲಯದ ನಿಯಮಗಳ ಬಗ್ಗೆ ಮಾತನಾಡಿದರು.
ಅಮೃತಕಾಲದ ಅಗತ್ಯತೆಗಳನ್ನು ಪೂರೈಸಲು ಹಾಗೂ ಆರ್ಥಿಕ ವಲಯದಲ್ಲಿ ಗರಿಷ್ಠ ಅನುಕೂಲ ಕಲ್ಪಿಸಲು ಅಗತ್ಯತೆ ಮತ್ತು ಕಾರ್ಯಸಾಧ್ಯತೆಯ ಅನುಸಾರ ಸಾರ್ವಜನಿಕ ಸಮಾಲೋಚನೆ ಮೂಲಕ ನಿಯಂತ್ರಣವನ್ನು ರೂಪಿಸಲಾಗುವುದು ಹಾಗೂ ಸಹಾಯಕ ನಿರ್ದೇನಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಸವಿ ನೆನಪಿಗಾಗಿ, ಒಂದು ಬಾರಿಯ ಹೊಸ ಚಿಕ್ಕ ಉಳಿತಾಯ ಯೋಜನೆ ಮಹಿಳಾ ಸಮ್ಮಾನ್ ಪ್ರಮಾಣಪತ್ರವು 2025ರ ಮಾಚ್‌ರ್‍ವರೆಗೆ 2 ವರ್ಷಗಳ ಅವಧಿಗೆ ಲಭ್ಯವಾಗುವಂತೆ ಮಾಡಲಾಗುವುದು. ಇದು ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ ಶೇ. 7.5ರ ಸ್ಥಿರ ಬಡ್ಡಿದರದಲ್ಲಿ 2 ವರ್ಷದ ಅವಧಿಗೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ 2 ಲಕ್ಷ ರುಪಾಯಿವರೆಗಿನ ಸ್ಥಿರ ಠೇವಣಿ ಸೌಲಭ್ಯ ನೀಡುತ್ತದೆ ಎಂದರು.