ಪಿಎಸ್‌ಯು ಷೇರುಗಳಲ್ಲಿ ಭಾರೀ ಒತ್ತಡ, ಎರಡೇ ದಿನದಲ್ಲಿ ಹೂಡಿಕೆದಾರರಿಗೆ 5 ಲಕ್ಷ ಕೋಟಿ ನಷ್ಟ!

Published : Feb 12, 2024, 06:59 PM IST
ಪಿಎಸ್‌ಯು ಷೇರುಗಳಲ್ಲಿ ಭಾರೀ ಒತ್ತಡ, ಎರಡೇ ದಿನದಲ್ಲಿ ಹೂಡಿಕೆದಾರರಿಗೆ 5 ಲಕ್ಷ ಕೋಟಿ ನಷ್ಟ!

ಸಾರಾಂಶ

ಎಸ್‌ಜೆವಿಎನ್‌, ಎನ್‌ಬಿಸಿಸಿ, ಐಟಿಡಿಸಿ ಸೋವವಾರದ ವಹಿವಾಟಿನಲ್ಲಿ ತನ್ನ ದಿನದ ಅತ್ಯಂತ ಕೆಳಮಟ್ಟವನ್ನು ಮುಟ್ಟಿದ್ದವು.

ಮುಂಬೈ (ಫೆ.12): ಕೆಲವು ಪಿಎಸ್‌ಯುಗಳಿಂದ 2024ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಆದಾಯಕ್ಕಿಂತ ಕಡಿಮೆ ಆದಾಯದ ಗೋಷಣೆ ಆದ ಬಳಿಕ ಸಾರ್ವಜನಿಕ ವಲಯದ ಕಂಪನಿಗಳ ಷೇರುಗಳ ಮಾರಾಟದ ಒತ್ತಡ 2ನೇ ದಿನವೂ ವಿಸ್ತರಣೆಯಾಗಿದೆ. ಈ ಷೇರುಗಳಲ್ಲಿ ಹೂಡಿಕೆ ಮಾಡಿರುವ ಜನರು ಲಾಭವನ್ನು ಬುಕ್‌ ಮಾಡಲು ಇಳಿದಿರುವ ಕಾರಣ ನಿರಂತರವಾಗಿ ಈ ಷೇರುಗಳ ಬೆಲೆಯಲ್ಲಿ ಇಳಿಕೆ ಆಗುತ್ತಿದೆ. ಶುಕ್ರವಾರ ಪಿಎಸ್‌ಯು ಷೇರುಗಳಲ್ಲಿ 1.5 ಲಕ್ಷ ಕೋಟಿ ಕಳೆದುಕೊಂಡ ಬಳಿಕ, ಸೋಮವಾರದ ವಹಿವಾಟಿನಲ್ಲಿ ಬರೋಬ್ಬರಿ 3.5 ಲಕ್ಷ ಕೋಟಿಯನ್ನು ಹೂಡಿಕೆದಾರರು ಕಳೆದುಕೊಂಡಿದ್ದಾರೆ. ಎರಡೇ ದಿನದಲ್ಲಿ ಪಿಎಸ್‌ಯು ಷೇರುಗಳಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರು 5 ಲಕ್ಷ ಕೋಟಿ ನಷ್ಟ ಎದುರಿಸಿದಂತಾಗಿದೆ. ನಿಫ್ಟಿ ಪಿಎಸ್‌ಇ ಸೂಚ್ಯಂಕ ಕಳೆದ ಎರಡು ಅವಧಿಯ ವಹಿವಾಟಿನಲ್ಲಿ ಶೇ. 6.5ರಷ್ಟು ಕುಸಿದ ದಾಖಲಾಗಿದೆ. ಎನ್‌ಎಚ್‌ಪಿಸಿಯ ಷೇರುಗಳ ಮೌಲ್ಯದಲ್ಲಿ ದೊಡ್ಡ ಮಟ್ಟದ  ಇಳಿಕೆಯಾಗಿದೆ. ಎನ್‌ಎಚ್‌ಪಿಸಿ ಎರಡು ದಿನದಲ್ಲಿ ತನ್ನ ಬೆಲೆಯಲ್ಲಿ ಶೇ. 20.2ರಷ್ಟು ಕುಸಿ ಕಂಡಿದೆ. ಉಳಿದಂತೆ ಸರ್ಕಾರಿ ಮಾಲೀಕತ್ವದ ಕಂಪನಿಗಳಾದ ಪವರ್‌ ಫೈನಾನ್ಸ್‌ ಕಾರ್ಪೋರೇಷನ್‌, ಆರ್‌ಇಸಿ ಲಿಮಿಟೆಡ್‌,  ಸೈಲ್‌, ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌, ಆಯಿಲ್‌ ಇಂಡಿಯಾ ಮತ್ತು ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಕಂಪನಿಯ ಷೇರುಗಳು ಶೇ. 8 ರಿಂದ 12ರ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಸೋಮವಾರ ಹೆಚ್ಚಿನ ಎಲ್ಲಾ ಪಿಎಸ್‌ಯು ಷೇರುಗಳು ಕುಸಿತದಲ್ಲೇ ಇದ್ದವು. ಇದರಲ್ಲಿ ಪ್ರಮುಖವಾಗಿ ಎಸ್‌ಜೆವಿಎನ್‌, ಎನ್‌ಬಿಸಿಸಿ ಮತತ್ತು ಇಂಡಿಯನ್‌ ಟೂರಿಸಂ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ತನ್ನ ದಿನದ ಮಿತಿಯ ಕೆಳಗಿನ ಮಟ್ಟದಲ್ಲಿದ್ದವು. ಸರ್ಕಾರಿ ಮಾಲೀಕತ್ವದ ಕಂಪನಿಗಳ ನಿಫ್ಟಿ ಪಿಎಸ್‌ಯು ಸೂಚ್ಯಂಕ ಕಳೆದ ನಾಲ್ಕು ತಿಂಗಳಲ್ಲಿ ಶೇ. 64ರಷ್ಟು ಏರಿಕೆ ಕಂಡಿದ್ದವು.

ಭಾರತದ ಅತಿದೊಡ್ಡ ಪಿಎಸ್‌ಯು ಆಗಿರುವ ಭಾರತದ ಜೀವ ವಿಮಾ ನಿಗಮ (LIC) ಸಂಪೂರ್ಣ ಮೌಲ್ಯದ ಪರಿಭಾಷೆಯಲ್ಲಿ ಹೆಚ್ಚು ಹಣ ಕಳೆದುಕೊಂಡಿದೆ. ವಿಮಾದಾರ ತನ್ನ ಮಾರುಕಟ್ಟೆ ಮೌಲ್ಯವನ್ನು ಕೇವಲ ಎರಡು ದಿನಗಳಲ್ಲಿ ₹ 52,370 ಕೋಟಿಗಳಷ್ಟು ಇಳಿಕೆ ಕಂಡಿದೆ.  ನಂತರದ ಸ್ಥಾನದಲ್ಲಿ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (IRFC) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಕ್ರಮವಾಗಿ ₹ 30,000 ಕೋಟಿ ಮತ್ತು ₹ 24,000 ಕೋಟಿಗಳಷ್ಟು ಕುಸಿತ ಕಂಡಿದೆ.

ಎಸ್‌ಜಿವಿಎನ್‌ ಕಂಪನಿಯ ಲಾಭ ಮತ್ತು ಆದಾಯ, ಮಾರ್ಕೆಟ್‌ನ ಅಂದಾಜು ಮೀರಿ ಕೆಳಗಿಳಿದ ಕಾರಣ, ಸೋಮವಾರ ಇದರ ಷೇರುಗಳು ಕೆಳಮಟ್ಟದ ಮಿತಿಯಲ್ಲಿ ವ್ಯವಹಾರ ನಡೆಸಿದವು. ಮೂಲಗಳ ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಕಂಪನಿ 282 ಕೋಟಿ ರೂಪಾಯಿ ಒಟ್ಟು ಲಾಭ ಸಾಧನೆ ಮಾಡುವ ಅಂದಾಜುಗಳಿದ್ದವು. ಆದರೆ, ಕಂಪನಿ 139 ಕೋಟಿ ಒಟ್ಟು ಆದಾಯ ಘೋಷಣೆ ಮಾಡಿತ್ತು. ಇದು ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ, ಶೇ.52ರಷ್ಟು ಕುಸಿತವಾಗಿದೆ. ಕಳೆದ ವರ್ಷ ಎಸ್‌ಜಿವಿಎನ್‌ ಷೇರುಗಳು ನಾಲ್ಕು ಪಟ್ಟು ಅಧಿಕವಾಗಿ ಏರಿಕೆ ಕಂಡಿದ್ದವು. ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್‌ ಇದೇ ಅವಧಿಯಲ್ಲಿ ಶೇ. 18ರಷ್ಟು ಏರಿಕೆ ಮಾತ್ರವೇ ಕಂಡಿತ್ತು.

Sensex Today Live: ಕಳೆದ ಕೆಲ ತಿಂಗಳಿಂದ 'ಗೂಳಿ' ಓಟದಲ್ಲಿರುವ ಪ್ರಮುಖ ಷೇರುಗಳಿವು!

ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ONGC) ಡಿಸೆಂಬರ್ ತ್ರೈಮಾಸಿಕದ EBITDA ಅಂದಾಜಿನ ಮೊದಲು ತನ್ನ ಗಳಿಕೆಯನ್ನು ಕಳೆದುಕೊಂಡರೆ, ಐಆರ್‌ಎಫ್‌ಸಿಯ ನಿವ್ವಳ ಲಾಭ ಮತ್ತು NII (ನಿವ್ವಳ ಬಡ್ಡಿ ಆದಾಯ) ವರ್ಷದಿಂದ ವರ್ಷಕ್ಕೆ 2% ರಷ್ಟು ಕುಸಿದಿದೆ. ಇದಲ್ಲದೆ, ONGC ಯ EBITDA ಹಣಕಾಸಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 17,136 ಕೋಟಿಗೆ ಬಂದಿದೆ. ರಿಫೈನರಿ ಮೇಜರ್ ಕೂಡ ಕಚ್ಚಾ ಉತ್ಪಾದನೆಯಲ್ಲಿ 3% ಕುಸಿತವನ್ನು ವರದಿ ಮಾಡಿದೆ.

ಷೇರು ಮಾರುಕಟ್ಟೆಯಲ್ಲಿ ನಿದ್ರೆಯಿಂದ ಎದ್ದ ರೈಲ್ವೆ ಷೇರುಗಳು, ನಾಗಾಲೋಟದ ಹಿಂದಿನ ಕಾರಣವೇನು?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌