
ನವದೆಹಲಿ(ಸೆ.30): 7ನೇ ವೇತನ ಆಯೋಗದ ಶಿಫಾರಸ್ಸನ್ನು ಹಂತ ಹಂತವಾಗಿ ಜಾರಿ ಮಾಡುತ್ತಿರುವ ಕೇಂದ್ರ ಸರ್ಕಾರ, ಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ಹಲವು ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ.
ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇ. 2.57 ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಕನಿಷ್ಠ ವೇತನವನ್ನು 18 ಸಾವಿರ ರೂ. ಎಂದು ನಿಗದಿಗೊಳಿಸಿದೆ. ಆದರೆ ಕೇಂದ್ರ ಸರ್ಕಾರಿ ನೌಕರರ ಬೇಡಿಕೆ ಪ್ರಕಾರ ಶೇ. 3.68 ರಷ್ಟು ವೇತನ ಹೆಚ್ಚಳವಾಗಬೇಕಿದ್ದು, ಇದರನ್ವಯ ಕನಿಷ್ಠ ವೇತನ 36 ಸಾವಿರ ರೂ. ಆಗಬೇಕಿದೆ.
ಆದರೆ 7ನೇ ವೇತನ ಆಯೋಗದ ಶಿಫಾರಸ್ಸನ್ನು ಹಂತ ಹಂತವಾಗಿ ಜಾರಿ ಮಾಡುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದ್ದು, ಕೇಂದ್ರ ಸರ್ಕಾರಿ ನೌಕರರ ಎಲ್ಲಾ ಬೇಡಿಕೆಗಳು ಈಡೇರುವ ಭರವಸೆ ಇದೆ. ಅದರಂತೆ ರಾಜ್ಯಗಳೂ ಕೂಡ ಕೇಂದ್ರಕ್ಕೆ ಸಾಥ್ ನೀಡುವ ಅವಶ್ಯಕತೆ ಇದ್ದು, ಈಗಾಗಲೇ ಕೆಲವು ರಾಜ್ಯಗಳು ಕೇಂದ್ರದ ಆದೇಶದನ್ವಯ ನೌಕರರಿಗೆ ಕೆಲವು ಸೌಲಭ್ಯಗಳನ್ನು ಘೋಷಿಸಿದೆ.
ಪ್ರಮುಖವಾಗಿ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಕೇಂದ್ರದ ಆದೇಶಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ನೀಡುತ್ತಿದೆ. ಆ ರಾಜ್ಯಗಳೆಂದರೆ..
1. ಹರಿಯಾಣ:
ದೀಪಾವಳಿಗೂ ಮೊದಲೇ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿರುವ ಹರಿಯಾಣ ಸರ್ಕಾರ, ಶೆ.2 ರಷ್ಟು ತುಟಿ ಭತ್ಯೆ ಏರಿಸಿ ಆದೇಶ ಹೊರಡಿಸಿದೆ. ಈ ಆದೇಶದನ್ವಯ ಜುಲೈ 1, 2018 ರಿಂದಲೇ ಈ ಏರಿಕೆ ಜಾರಿಯಾಗಿದ್ದು, ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ 182ಕೋಟಿ ರೂ. ಹೊರೆಯಾಗಲಿದೆ.
2. ರಾಜಸ್ಥಾನ:
ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲೂ ಸರ್ಕಾರಿ ನೌಕರರ ತುಟಿ ಭತ್ಯೆಯನ್ನು ಶೇ. 7 ರಿಂದ ಶೇ. 9ಕ್ಕೆ ಏರಿಸಿದೆ. ರಾಜಸ್ಥಾನ ಸರ್ಕಾರ ಕೂಡ ಜುಲೈ 1, 2018ರಿಂದ ಜಾರಿಗೆ ಬರುವಂತೆ ತುಟಿ ಭತ್ಯೆ ಹೆಚ್ಚಳ ಮಾಡಿದೆ.
3. ಚತ್ತೀಸಗಡ್:
7ನೇ ವೇತನ ಆದೇಶದನ್ವಯ ವಿಶ್ವಿದ್ಯಾಲಯಗಳ ಶಿಕ್ಷಕರಿಗೆ ಶೇ. ೧೦೦ ರಷ್ಟು ಗ್ರ್ಯಾಂಟ್ಸ್ ಏರಿಕೆ ಮಾಡಿದೆ.
4. ಮಧ್ಯಪ್ರದೇಶ:
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶೀಫಾರಸ್ಸಿನ ಅನ್ವಯ ರಾಜ್ಯದ ಎಲ್ಲಾ ಕಾಲೇಜುಗಳ ಶಿಕ್ಷಕರ ವೇತನದಲ್ಲಿ ಹೆಚ್ಚಳ ಮಾಡಿದೆ.
5. ಉತ್ತರಪ್ರದೇಶ:
ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಕೂಡ ರಾಜ್ಯದ ಎಲ್ಲಾ ಕಾಲೇಜು ಮತ್ತು ವಿಶ್ವವದ್ಯಾಲಯಗಳ ಪ್ರಾದ್ಯಾಪಕರ ವೇತನ ಹೆಚ್ಚಳ ಮಾಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ 921 ಕೋಟಿ ರೂ. ಹೊರೆಯಾಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.