Income Tax Return: ಡಿಸೆಂಬರ್ 31ರ ತನಕ ಇ-ಫೈಲಿಂಗ್ ಪೋರ್ಟಲ್ ನಲ್ಲಿ 5.8 ಕೋಟಿ ಐಟಿಆರ್ ಸಲ್ಲಿಕೆ: ಇನ್ಫಿ ಸಿಇಒ

Suvarna News   | Asianet News
Published : Jan 12, 2022, 10:01 PM IST
Income Tax Return: ಡಿಸೆಂಬರ್  31ರ ತನಕ ಇ-ಫೈಲಿಂಗ್ ಪೋರ್ಟಲ್ ನಲ್ಲಿ 5.8 ಕೋಟಿ ಐಟಿಆರ್ ಸಲ್ಲಿಕೆ: ಇನ್ಫಿ ಸಿಇಒ

ಸಾರಾಂಶ

*ಐಟಿಆರ್ ಸಲ್ಲಿಕೆಗೆ ಅಂತಿಮ ದಿನವಾದ ಡಿಸೆಂಬರ್ 31ರಂದೇ 46ಲಕ್ಷ ರಿಟರ್ನ್ಸ್ ಫೈಲ್ *ಇನ್ಫೋಸಿಸ್ ಸಂಸ್ಥೆ ಅಭಿವೃದ್ಧಿಪಡಿಸಿರೋ  ಇ- ಫೈಲಿಂಗ್ ಪೋರ್ಟಲ್  *ಪೋರ್ಟಲ್ ನಲ್ಲಿನ ತಾಂತ್ರಿಕ ಸಮಸ್ಯೆಗಳ ಕುರಿತು ಸಾಕಷ್ಟು ದೂರು *ನಿರ್ದಿಷ್ಟ ವಲಯದ ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆ ಗಡುವು ಮಾರ್ಚ್ 15ಕ್ಕೆ ವಿಸ್ತರಣೆ  

ನವದೆಹಲಿ (ಜ.12): 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ( Income Tax Returns) ಸಲ್ಲಿಕೆಗೆ ಅಂತಿಮ ಗಡುವಾಗಿದ್ದ ಡಿಸೆಂಬರ್ 31ರ ತನಕ ಹೊಸ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ (Portal) ಒಟ್ಟು  5.8 ಕೋಟಿ ರಿಟರ್ನ್ಸ್(Returns) ಸಲ್ಲಿಕೆಯಾಗಿದೆ ಎಂದು ಇನ್ಫೋಸಿಸ್ (Infosys) ಸಿಇಒ (CEO) ಸಲಿಲ್ ಪರೇಖ್ (Salil Parekh) ಮಾಹಿತಿ ನೀಡಿದ್ದಾರೆ. ಕೊನೆಯ ದಿನವೊಂದರಲ್ಲೇ  46ಲಕ್ಷ ರಿಟರ್ನ್ಸ್ ಫೈಲ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯ (Income Tax Department)ಇ-ಫೈಲಿಂಗ್ ಪೋರ್ಟಲ್ (e-filing portal) ಅನ್ನು ಇನ್ಫೋಸಿಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ನಲ್ಲಿನ ತಾಂತ್ರಿಕ ಸಮಸ್ಯೆಗಳ ಕುರಿತು ತೆರಿಗೆದಾರರಿಂದ ಸಾಕಷ್ಟು ದೂರುಗಳು ಬಂದಿದ್ದವು. ಪೋರ್ಟಲ್ ನಲ್ಲಿನ ಸಮಸ್ಯೆಯ ಕಾರಣಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಕೂಡ ಕೆಲವರು ದೂರಿದ್ದರು. ಅಲ್ಲದೆ, ಐಟಿಆರ್ ಸಲ್ಲಿಕೆ ಗಡುವು ವಿಸ್ತರಿಸುವಂತೆ ಮನವಿ ಮಾಡಿದ್ದರು ಕೂಡ. ಆದ್ರೆ ಸರ್ಕಾರ ಮಾತ್ರ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವನ್ನು ವಿಸ್ತರಿಸಿಲ್ಲ. ಆದ್ರೆ ಅಡಿಟ್ ಗೆ ಅರ್ಹತೆ ಹೊಂದಿರೋ ನಿರ್ದಿಷ್ಟ ವಲಯದ ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆ ಗಡುವನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಮಾರ್ಚ್ 15ರ ತನಕ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಪೋರ್ಟಲ್ ನಲ್ಲಿನ  ಸಮಸ್ಯೆಗಳನ್ನು ಸರಿಪಡಿಸೋ ಜೊತೆ ಇನ್ನಷ್ಟು ಅಭಿವೃದ್ಧಿಪಡಿಸೋ ನಿಟ್ಟಿನಲ್ಲಿ ಇನ್ಫೋಸಿಸ್ ಆದಾಯ ತೆರಿಗೆ ಇಲಾಖೆಯೊಂದಿಗೆ (Income Tax Department) ಸೇರಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯನ್ನು ಸಲಿಲ್ ಪರೇಖ್ ಹಂಚಿಕೊಂಡಿದ್ದಾರೆ. 

Income Tax Returns : ಮಾರ್ಚ್ 15ರವರೆಗೆ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ!

ಪೋರ್ಟಲ್ ನಲ್ಲಿ ದೋಷ
ಆದಾಯ ತೆರಿಗೆ ಇಲಾಖೆ 2021ರ ಜೂನ್ 7 ರಂದು ಪ್ರಾರಂಭಿಸಿದ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ(Portal) ಸಮಸ್ಯೆಗಳಿವೆ ಎಂಬ ದೂರು ಕೇಳಿಬರುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ತೆರಿಗೆದಾರರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ   2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಜುಲೈ 31ರಿಂದ ಸೆಪ್ಟೆಂಬರ್ 30ರ ತನಕ ವಿಸ್ತರಿಸಿತ್ತು. ಆ ಬಳಿಕ ಮತ್ತೆ ಅದೇ ರೀತಿ ಸಮಸ್ಯೆ ಕಂಡುಬಂದ ಕಾರಣ ಡಿಸೆಂಬರ್ 31ಕ್ಕೆ ವಿಸ್ತರಿಸಲಾಯಿತು.  ಕೇಂದ್ರ ವಿತ್ತ ಸಚಿವೆ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಪೋರ್ಟಲ್ ಅಭಿವೃದ್ಧಿಪಡಿಸಿರೋ ಇನ್ಫೋಸಿಸ್ ಗೆ ಸಮನ್ಸ್ ನೀಡಿ ಸೆಪ್ಟೆಂಬರ್ 15ರೊಳಗೆ ಸರಿಪಡಿಸುವಂತೆ ಕೂಡ ಸೂಚಿಸಿದ್ದರು. ಡಿಸೆಂಬರ್ 31 ಗಡುವನ್ನು ಕೂಡ ಮಾರ್ಚ್ 31ರ ತನಕ ವಿಸ್ತರಿಸುವಂತೆ ಸರ್ಕಾರಕ್ಕೆ ತೆರಿಗೆದಾರರು ಮನವಿ ಮಾಡಿದ್ದರು. ಅಷ್ಟೇ ಅಲ್ಲ, ಟ್ವಿಟರ್ ನಲ್ಲಿ  #Extend_Due_Date_Immediately ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಟ್ಯಾಕ್ಸ್ ಕನ್ಸಲ್ಟೆಂಟ್ ಚೇಂಬರ್ ಸೇರಿದಂತೆ ಕೆಲವು ಸಂಘಟನೆಗಳು ಐಟಿಆರ್ ಸಲ್ಲಿಕೆ ಗಡುವನ್ನು ಮಾರ್ಚ್ 31ರ ತನಕ ವಿಸ್ತರಿಸುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಗೆ (CBDT) ಪತ್ರ ಬರೆದಿದ್ದರು.

Tax Free Incomes: ಈ ಮೂಲಗಳಿಂದ ಹಣ ಗಳಿಸಿದರೆ ಸಿಗುತ್ತೆ ತೆರಿಗೆ ವಿನಾಯಿತಿ!

ಇ-ಫೈಲಿಂಗ್ ಪೋರ್ಟಲ್ ಅಭಿವೃದ್ಧಿಪಡಿಸಿದ್ದು ಹೇಗೆ?
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಅವಧಿಯನ್ನು 63 ದಿನಗಳಿಂದ ಒಂದು ದಿನಕ್ಕೆ ಇಳಿಸೋ ಗುರಿಯೊಂದಿಗೆ ಹಳೆಯ ಮಾದರಿಗೆ ಬದಲಾಗಿ ಆನ್ ಲೈನ್ ಫೋರ್ಟಲ್ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಇನ್ಫೋಸಿಸ್ ಸಂಸ್ಥೆಯೊಂದಿಗೆ 4,200 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. ಪೋರ್ಟಲ್ ತೆರಿಗೆದಾರರಸ್ನೇಹಿ ಹಾಗೂ ಬಳಕೆಗೆ ಸರಳವಾಗಿರಬೇಕೆಂಬ ಉದ್ದೇಶ ಹೊಂದಿದ್ದರೂ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಮಾತ್ರ ಸುಲಭವಾಗಿರಲಿಲ್ಲ. ಅಲ್ಲದೆ, ಪೋರ್ಟಲ್ ಸಮಸ್ಯೆಗಳ ಕಾರಣದಿಂದಲೇ ಸುದ್ದಿಯಾಯ್ತು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?