ವ್ಯಾಪಾರಿಗಳಿಂದ ಒಂದೇ ದಿನ 408 ಕೋಟಿ ಮದ್ಯ ಖರೀದಿ!

Published : Dec 31, 2024, 11:56 AM ISTUpdated : Dec 31, 2024, 11:58 AM IST
ವ್ಯಾಪಾರಿಗಳಿಂದ ಒಂದೇ ದಿನ 408 ಕೋಟಿ ಮದ್ಯ ಖರೀದಿ!

ಸಾರಾಂಶ

₹327.50 ಕೋಟಿ ಮೊತ್ತದ 6.22 ಲಕ್ಷ ಬಾಕ್ಸ್ ಮದ್ಯ ಮತ್ತು ₹80.58 ಕೋಟಿ ಮೊತ್ತದ 4.04 ಲಕ್ಷ ಬಾಕ್ಸ್ ಬಿಯರ್ ಸೇರಿದಂತೆ ಒಟ್ಟಾರೆ ₹408.08 ಕೋಟಿ ಮೊತ್ತದ ಮದ್ಯವನ್ನು ನಿಗಮದಿಂದ ಖರೀದಿಸಿದ್ದು, ಇದು ದಾಖಲೆಯ ಖರೀದಿಯಾಗಿದೆ. 

ಬೆಂಗಳೂರು(ಡಿ.31): ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ ಶನಿವಾರ ಮದ್ಯ ಮಾರಾಟಗಾರರು ₹408. 08 ಕೋಟಿ ಮೊತ್ತದ ಮದ್ಯ ಖರೀದಿಸಿದ್ದು, ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಖರೀದಿಸಿರುವುದು ದಾಖಲೆ ಯಾಗಿದೆ. 

₹327.50 ಕೋಟಿ ಮೊತ್ತದ 6.22 ಲಕ್ಷ ಬಾಕ್ಸ್ ಮದ್ಯ ಮತ್ತು ₹80.58 ಕೋಟಿ ಮೊತ್ತದ 4.04 ಲಕ್ಷ ಬಾಕ್ಸ್ ಬಿಯರ್ ಸೇರಿದಂತೆ ಒಟ್ಟಾರೆ ₹408.08 ಕೋಟಿ ಮೊತ್ತದ ಮದ್ಯವನ್ನು ನಿಗಮದಿಂದ ಖರೀದಿಸಿದ್ದು, ಇದು ದಾಖಲೆಯ ಖರೀದಿ ಯಾಗಿದೆ. 

3 ಮದ್ಯದ ಬಾಟಲ್‌ ಖರೀದಿಸಿದ್ರೆ 1 ಫ್ರೀ, ಹೊಸ ವರ್ಷದ ಆಫರ್‌: ಯಾರಿಗುಂಟು ಯಾರಿಗಿಲ್ಲ!

ಈ ಬಗ್ಗೆ ಹೇಳಿಕೆ ನೀಡಿರುವ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಡಿ.27 ರಂದು ರಜೆ ಘೋಷಿಸಲಾಗಿದ್ದು, ನಿಗಮದಿಂದ ಮದ್ಯ ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ಡಿ.28ರಂದು ನಾಲ್ಕನೇ ಶನಿವಾರ ರಜಾ ದಿನವಾದರೂ ಒಕ್ಕೂಟದ ಮನವಿ ಮೇರೆಗೆ ಡಿಪೋಗಳನ್ನು ತೆಗೆಯಲಾಗಿತ್ತು. ಅಷ್ಟೇ ಅಲ್ಲ. ಸನ್ನದುದಾರರರಿಗೆ ₹150 ಕೋಟಿ ರುಪಾಯಿಗೂ ಅಧಿಕ ಸಾಲ ಸೌಲಭ್ಯವನ್ನೂ ನೀಡಿದ್ದಾರೆ. ಇದಕ್ಕಾಗಿ ನಿಗಮ ಮತ್ತು ಅಬಕಾರಿ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ನ್ಯೂ ಇಯರ್‌ ಪಾರ್ಟಿ ಮಾಡೋರಿಗೆ ಅಬಕಾರಿ ಇಲಾಖೆ ಬಂಪರ್ ಗಿಫ್ಟ್!

ಚಿಕ್ಕಮಗಳೂರು: ಹೊಸ ವರ್ಷ ಆಚರಣೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಇಯರ್ ಎಂಡ್, ಹೊಸ ವರ್ಷ ಆಚರಣೆ, ಕ್ರಿಸ್ಮಸ್ ಹಬ್ಬದ ಅಂಗವಾಗಿ ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ಅಬಕಾರಿ ಇಲಾಖೆಯ ಮೂಲಕ ಪ್ಲಾನ್ ಮಾಡಿದೆ. ವರ್ಷಾಂತ್ಯದಲ್ಲಿ ಸರ್ಕಾರದಿಂದ ತೆರಿಗೆ ಹೆಚ್ಚಿಸಿಕೊಳ್ಳಲು ಹೊಸ ಪ್ಲಾನ್ ನಡೆದಿದೆ, ಅಬಕಾರಿ ಇಲಾಖೆಯಲ್ಲಿನ ಸಿಎಲ್ 5 ಬಾರ್ ಲೈಸೆನ್ಸ್ ಕೊಡಲು ಸರ್ಕಾರ ಮುಂದಾಗಿದೆ.‌

ಒಂದು ದಿನ ಲೈಸನ್ಸ್  :

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಅಬಕಾರಿ ಇಲಾಖೆಯೂ ಒಂದು ದಿನದ ಸಾಂದರ್ಭಿಕ ಲೈಸನ್ಸ್ ನೀಡಲು ಮುಂದಾಗಿದೆ. ಪಾರ್ಟಿ ಆಯೋಜನೆ ಮಾಡುವ ಆಯೋಜಕರಿಗೆ ಅಬಕಾರಿ ಇಲಾಖೆಯ ನಿಯಮದಂತೆ ಒಂದು ದಿನದ ಲೈಸೆನ್ಸ್ ನೀಡಲು ಇದೀಗ ಇಲಾಖೆ ಪ್ರಕಟಣೆ ಹೊರಡಿಸಿದೆ.

ಅಬಕಾರಿ ನಿಯಮದಂತೆ ಸಾಂದರ್ಭಿಕ ಲೈಸನ್ಸ್ ನೀಡಲು ಇಲಾಖೆ ಮುಂದಾಗಿದೆ. ಈ ಮೂಲಕ ಕ್ರಿಸ್ ಮಸ್, ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ತೆರಿಗೆ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡಿದೆ. ಒಂದು ದಿನದ ಸಾಂದರ್ಭಿಕ ಬಾರ್ ಲೈಸೆನ್ಸ್ ಕೊಡುವುದು ಇದರ ಉದ್ದೇಶವಾಗಿದೆ. ಇಲಾಖೆಯಲ್ಲಿ ಅವಕಾಶ ಇರುವ ಹಿನ್ನೆಲೆಯಲ್ಲಿ ಲೈಸೆನ್ಸ್ ಕೊಡಲಾಗುತ್ತಿದೆ. ಲೈಸೆನ್ಸ್ ಪಡೆಯಲು ಆಸಕ್ತರು ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಪಾರ್ಟಿ ನಡೆಯುವ ಜಾಗ ನಕ್ಷೆ, ಸ್ಥಳೀಯ ಆಡಳಿತದ ಅನುಮತಿ ಪತ್ರವನ್ನು ಇಲಾಖೆಗೆ ನೀಡಿದರೆ ಇಲಾಖೆಯು ಲೈಸೆನ್ಸ್ ನೀಡುತ್ತಿದೆ.

ಟೇಕಾಫ್ ಆಗ್ತಿದ್ದಂತೆ ಖಾಲಿಯಾಯ್ತು 1.8 ಲಕ್ಷ ಮೌಲ್ಯದ 15 ಲೀಟರ್ ಮದ್ಯ; ಪ್ರಯಾಣಿಕರ ವಿಲಕ್ಷಣ ವರ್ತನೆ ವಿಡಿಯೋ ವೈರಲ್

ಕಾಫಿನಾಡಿನಲ್ಲಿ ಹೆಚ್ಚಿನ ಬೇಡಿಕೆ : 

ಪ್ರವಾಸಿಗರ ಪಾಲಿನ ಸ್ವರ್ಗ ಎನಿಸಿರುವ ಚಿಕ್ಕಮಗಳೂರಿನಲ್ಲಿ ಸಿಎಲ್ 5 ಲೈಸೆನ್ಸ್ ಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.24 ಗಂಟೆಯ ಈ ಲೈಸೆನ್ಸ್ ಗೆ 12 ಸಾವಿರ ರೂಪಾಯಿಗಳ ದರ ನಿಗದಿ ಪಡಿಸಲಾಗಿದೆ. ಇಂದು ಕ್ರಿಸ್ಮಸ್ ಹಬ್ಬದ ಆಚರಣೆ ನಿಮಿತ್ತ ಆರು ಅರ್ಜಿಗಳು ಈಗಾಗಲೇ ಅಬಕಾರಿ ಇಲಾಖೆಗೆ ಸಲ್ಲಿಕೆಯಾಗಿವೆ, ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಸಾಂದರ್ಭಿಕ ಲೈಸನ್ಸ್ ನೀಡಲು ಇಲಾಖೆ ಮುಂದಾಗಿದೆ. 

ಹೊಸ ವರ್ಷವನ್ನು ಮಾಗಿಯ ಚಳಿ ಜೊತೆಗೆ ಪ್ರವಾಸಿಗರ ಸ್ವರ್ಗ ಎನಿಸಿರುವ ಚಿಕ್ಕಮಗಳೂರಿನಲ್ಲಿ ಆಚರಣೆ ಮಾಡಲು ಪ್ರವಾಸಿಗರು ಪ್ಲಾನ್ ಹಾಕಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಒಂದು ತಿಂಗಳ ಹಿಂದೆಯೇ ಪ್ರವಾಸಿಗರು ರೂಮ್  ಬುಕಿಂಗ್ ಮಾಡಿಕೊಳ್ಳುತ್ತಾರೆ. ಇದನ್ನು ಅಂದಾಜಿಸಿರುವ ಇಲಾಖೆಯು ಹೋಂ ಸ್ಟೇ , ರೆಸಾರ್ಟ್ ಗಳಿಗೆ ಲೈಸೆನ್ಸ್ ನೀಡಿದರೆ ನಕಲಿ ಮಧ್ಯ ಸೇರಿದಂತೆ ಹೊರ ರಾನ್ಯದ ಮದ್ಯವನ್ನು ತಡೆಗಟ್ಟಬಹುದೆನ್ನುವುದು ಇಲಾಖೆಯ ಲೆಕ್ಕಾಚಾರವಾಗಿದೆ. ಅದಕ್ಕಾಗಿ ರೆಸ್ಟೋರೆಂಟ್, ಹೋಂ ಸ್ಟೇ ರೆಸಾರ್ಟ್, ಹೋಟೆಲ್, ಪಾರ್ಟಿ ಮಾಡುವ ಜಾಗಗಳಿಗೆ ಲೈಸೆನ್ಸ್ ನೀಡಲು ಮುಂದಾಗಿರುವ ಇಲಾಖೆಯ ನಿಯಮಕ್ಕೆ ಮೂಲ ಸನ್ನದುದಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!