
ನವದೆಹಲಿ(ಡಿ.30) ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸದ ಸಮಯದ ಹೇಳಿಕೆ ಬಳಿಕ ಹಲವು ಬಾರಿ ವರ್ಕ್ ಲೈಫ್ ಕುರಿತು ಚರ್ಚೆ ನಡೆದಿದೆ. 70 ಗಂಟೆ ಕೆಲಸ ಮಾಡಿದರೆ ಕುಟುಂಬ, ವೈಯುಕ್ತಿಕ ಬದುಕು ನಷ್ಟವಾಗಲಿದೆ ಅನ್ನೋ ವಾದ ಒಂದಡೆಯಾದರೆ, ವೃತ್ತಿಪರ ಯಶಸ್ಸಿಗೆ ಇದು ಅನಿವಾರ್ಯ ಅನ್ನೋ ವಾದ ಮತ್ತೊಂದೆಡೆ. ಈ ವಾದ ವಿವಾದ, ಚರ್ಚೆ ನಡುವೆ ಇದೀಗ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಮಾತನಾಡಿದ್ದಾರೆ. ಇದೇ ವೇಳೆ 8 ಗಂಟೆ ಕಳೆದರೂ ಪತ್ನಿ ಓಡಿ ಹೋಗುತ್ತಾರೆ ಎಂದಿದ್ದಾರೆ. ಗೌತಮ್ ಅದಾನಿ ಮಾತುಗಳು ಇದೀಗ ಭಾರಿ ವೈರಲ್ ಆಗಿದೆ.
ವರ್ಕ್ ಲೈಫ್ ಸಮತೋಲನ ಕಾಪಾಡಿಕೊಳ್ಳುವುದು ಹೇಗೆ ಅನ್ನೋ ಕುರಿತು IANS ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಗೌತಮ್ ಅದಾನಿ ಮಾತನಾಡಿದ್ದಾರೆ. ವಿಶೇಷ ಅಂದರೆ ಗೌತಮ್ ಅದಾನಿ ಹಾಸ್ಯ ಭರಿತ ಮಾತುಗಳು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತ್ತು. ನೀವು ಮಾಡುವ ಕೆಲಸವನ್ನು ಆನಂದಿಸುತ್ತಿದ್ದೀರಿ ಎಂದಾದರೆ ನಿಮ್ಮ ವೃತ್ತಿಪರ ಬದುಕು ಹಾಗೂ ವೈಯುಕ್ತಿಕ ಬದುಕು ಎರಡರಲ್ಲಿ ಸಮತೋಲನ ಹಾಗೂ ಸಂತೋಷ ಕಾಣಲು ಸಾಧ್ಯವಿದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಅದಾನಿಗೆ ಶಾಕ್ ಕೊಟ್ಟ ಸಿಎಂ ರೇವಂತ್ ರೆಡ್ಡಿ, 100 ಕೋಟಿ ರೂ ಒಪ್ಪಂದ ರದ್ದುಗೊಳಿಸಿದ ತೆಲಂಗಾಣ!
ಕೆಲಸ ಹಾಗೂ ಕುಟುಂಬ ಜೊತೆ ಉಪಯುಕ್ತ ಸಮಯ ಕಳೆಯುವುದು ಅವರವರ ವೈಯುಕ್ತಿಕ ವಿಚಾರ ಎಂದು ಅದಾನಿ ಹೇಳಿದ್ದಾರೆ. ಉದಾಹರಣೆಗೆ ನಾನು ಕುಟುಂಬದ ಜೊತೆ ದಿನಕ್ಕೆ ನಾಲ್ಕು ಗಂಟೆ ಕಳೆಯುತೇನೆ ಎಂದರೆ ನನಗೆ ಖುಷಿ, ಸಂತೋಷ ಎಲ್ಲಾ ಸಿಗುತ್ತಿದೆ. ಇನ್ನು ಕೆಲವರು 8 ಗಂಟೆ ಸಮಯ ಕುಟುಂಬದ ಜೊತೆ ಕಳೆದು ಸಂತೋಷ ನೆಮ್ಮದಿ ಪಡೆಯುತ್ತಾರೆ. ಇದರ ನಡುವೆ 8 ಗಂಟೆ ಕಳೆದರೂ ಪತ್ನಿ ಮನೆಯಿಂದ ಓಡಿ ಹೋದ ಘಟನೆಗಳಿವೆ, ಅದು ಬೇರೆ ವಿಚಾರ ಎಂದು ಗೌತಮ್ ಅದಾನಿ ತಮ್ಮ ಮಾತಿನ ನಡುವೆ ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ನೀವು ಖುಷಿಯಾಗಿದ್ದರೆ, ಮತ್ತೊಬ್ಬರು ಅಥವಾ ನಿಮ್ಮ ಅವಲಂಬಿಗಳು, ಕುಟುಂಬ ಸದಸ್ಯರನ್ನು ಸಂತೋಷವಾಗಿಡಲು ಸಾಧ್ಯವಿದೆ. ಎಷ್ಟು ಕಲೆಸ ಮಾಡುತ್ತೀರಿ, ಎಷ್ಟು ಸಮಯ ಕುಟುಂಬದ ಜೊತೆ ಕಳೆಯುತ್ತೀರಿ ಅನ್ನೋದಲ್ಲ, ಕಳೆಯುವ ಸಮಯವನ್ನು ಸಂತೋಷದಿಂದ ಕಳೆಯುತ್ತಿದ್ದೀರಾ? ಅರ್ಥಪೂರ್ಣವಾಗಿ ಕಳೆಯುತ್ತಿದ್ದೀರಾ ಅನ್ನೋದು ಮುಖ್ಯ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.