ಬಿಎಸ್ಎನ್ಎಲ್ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು ಹೆಚ್ಚಿನ ವ್ಯಾಲಿಡಿಟಿ, ಡೇಟಾ ಮತ್ತು ಉಚಿತ SMS ಒಳಗೊಂಡಿವೆ. ಎರಡೂ ಹೊಸ ಪ್ಯಾಕೇಜ್‌ಗಳು ಇತ್ತೀಚೆಗೆ BSNL ಪರಿಚಯಿಸಿದ ರೀಚಾರ್ಜ್ ಯೋಜನೆಗಳ ಮುಂದುವರಿಕೆಯಾಗಿದೆ.
ನವದೆಹಲಿ: ಟೆಲಿಕಾಂ ಅಂಗಳದಲ್ಲಿ ಬಿಎಸ್‌ಎನ್ಎಲ್ ಅಚ್ಚರಿಯ ಹೆಜ್ಜೆಗಳನ್ನು ಇರಿಸುವ ಮೂಲಕ ಎದುರಾಳಿಗಳನ್ನು ಅಚ್ಚರಿಗೊಳಿಸುತ್ತಿದ್ದು, ಹಂತ ಹಂತವಾಗಿ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಈಗಾಗಲೇ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಘೋಷಿಸಿರುವ ಬಿಎಸ್‌ಎನ್‌ಎಲ್, ಇದೀಗ ಎರಡು ಬಂಪರ್ ಯೋಜನೆಗಳನ್ನು ಹೊರ ತಂದಿದೆ. ಕಡಿಮೆ ಬೆಲೆಯ ಈ ಎರಡು ಪ್ಲಾನ್‌ಗಳು ಹೆಚ್ಚು ವ್ಯಾಲಿಡಿಟಿ ಮತ್ತು ಡೇಟಾ ಪ್ಯಾಕ್ ಒಳಗೊಂಡಿವೆ. ಇಷ್ಟು ಮಾತ್ರವಲ್ಲ ಇನ್ನುಳಿದ ಟೆಲಿಕಾಂ ಕಂಪನಿಗಳ ರೀತಿಯಲ್ಲಿ ಉಚಿತ ಎಸ್‌ಎಂಎಸ್ ಕಳುಹಿಸುವ ಆಯ್ಕೆಯನ್ನು ಸಹ ಗ್ರಾಹಕರಿಗೆ ನೀಡುತ್ತಿವೆ. ಆ ಎರಡು ಸೂಪರ್ ಪ್ಲಾನ್‌ಗಳು ಯಾವವು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಸಾರ್ವಜನಿಕ ವಲಯದ ಟೆಲಿಕಾಂ ಆಪರೇಟರ್ BSNL ಎರಡು ಹೊಸ ರೀಚಾರ್ಜ್ ಯೋಜನೆಗಳು ತಂದಿದೆ. BSNL ರೂ.628 ಮತ್ತು ರೂ.215 ಬೆಲೆಯ ಯೋಜನೆಗಳನ್ನು ಪರಿಚಯಿಸಿದೆ. ಡೇಟಾ ಮತ್ತು SMS ಪ್ರಯೋಜನಗಳೊಂದಿಗೆ ಅನಿಯಮಿತ ಕರೆಗಳೊಂದಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನಿಂದ ಎರಡೂ ರೀಚಾರ್ಜ್‌ಗಳನ್ನು ಪರಿಚಯಿಸಲಾಗಿದೆ.
BSNL Rs 628 Prepaid Plan
BSNL ನ 628 ರೀಚಾರ್ಜ್ ಪ್ಲಾನ್ 84 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ಕಳುಹಿಸಬಹುದು. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 3GB ಡೇಟಾ ಸಿಗುತ್ತದೆ. ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಗೇಮ್‌ಆನ್, ಆಸ್ಟ್ರೋಸೆಲ್ ಮತ್ತು ಪಾಡ್‌ಕಾಸ್ಟ್‌ಗಳು, ಸೀನ್ ಮ್ಯೂಸಿಕ್, ವಾವ್ ಎಂಟರ್‌ಟೈನ್‌ಮೆಂಟ್ ಮತ್ತು ಬಿಎಸ್‌ಎನ್‌ಎಲ್ ಟ್ಯೂನ್‌ನಂತಹ ಹೆಚ್ಚುವರಿ ಪ್ರಯೋಜನಗಳು ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.
ಇದನ್ನೂ ಓದಿ:ಹೊಸ ವರ್ಷಕ್ಕೆ ಮತ್ತಷ್ಟು, ಮಗದಷ್ಟು; ಕಡಿಮೆ ಬೆಲೆಗೆ BSNL ಡೇಟಾ ಪ್ಲಾನ್‌ಗಳು
BSNL Rs 215 Prepaid Plan
ಗ್ರಾಹಕರು 215 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ಇದರ ಜೊತೆ ಉಚಿತ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಪ್ರತಿದಿನ 2 GB ಡೇಟಾವನ್ನು ಬಳಸಬಹುದು. ಈ ಯೋಜನೆಯ ವ್ಯಾಲಿಡಿಟಿ 30 ದಿನ ಆಗಿದೆ. BSNL ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, GameOne, Astrocell, Gamemeum, Listen Podcast, Seeng Muse, WOW Entertainment ಮತ್ತು BSNL ಟ್ಯೂನ್ ಅನ್ನು ರೂ 215 ಯೋಜನೆಯೊಂದಿಗೆ ನೀಡುತ್ತದೆ. ಎರಡೂ ಹೊಸ ಪ್ಯಾಕೇಜ್‌ಗಳು ಇತ್ತೀಚೆಗೆ BSNL ಪರಿಚಯಿಸಿದ ರೀಚಾರ್ಜ್ ಯೋಜನೆಗಳ ಮುಂದುವರಿಕೆಯಾಗಿದೆ.
ಇದನ್ನೂ ಓದಿ: 10 ರೂ ರೀಚಾರ್ಜ್, 365 ದಿನ ವ್ಯಾಲಿಡಿಟಿ; TRAI ಹೊಸ ನಿಯಮಗಳಿಗೆ ಕೋಟ್ಯಂತರ ಮೊಬೈಲ್ ಬಳಕೆದಾರರು ಹ್ಯಾಪಿ ಹ್ಯಾಪಿ