ರಿಯಲ್ ಎಸ್ಟೇಟ್ ಹೂಡಿಕೆದಾರರ ಪಾಲಿಗೆ ಸದಾ ಆಕರ್ಷಣಿಯ ಕ್ಷೇತ್ರ. ಆದರೆ, ಹಲವರಿಗೆ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡೋದಾ ಬೇಡ್ವಾ ಎಂಬ ಗೊಂದಲ ಕಾಡೇ ಕಾಡುತ್ತದೆ. ಕೆಲವು ಕಾರಣಗಳಿಂದ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡೋದು ನಿಜಕ್ಕೂ ಉತ್ತಮ ಆಲೋಚನೆ. ಹಾಗಾದ್ರೆ ಆ ಕಾರಣಗಳು ಯಾವುವು? ಇಲ್ಲಿದೆ ಮಾಹಿತಿ.
Business Desk: ಭೂಮಿ ಮೇಲೆ ಮಾಡಿದ ಹೂಡಿಕೆ ಯಾವತ್ತೂ ಕೈಬಿಡೋದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಇದೇ ಕಾರಣಕ್ಕೆ ಇಂದಿಗೂ ರಿಯಲ್ ಎಸ್ಟೇಟ್ ಹೂಡಿಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಹಾಗೆಯೇ ಹೂಡಿಕೆದಾರರು ಕೂಡ ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಅವರ ಆರ್ಥಿಕ ಜ್ಞಾನದ ಮಟ್ಟ ಕೂಡ ಹೆಚ್ಚಿದೆ. ಇನ್ನು ಇಂದಿನ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ. ಇದೇ ಕಾರಣಕ್ಕೆ ಷೇರುಗಳು, ಈಕ್ವಿಟಿ, ಮ್ಯೂಚುವಲ್ ಫಂಡ್, ಡೆಟ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನವರು ಆಸಕ್ತಿ ತೋರುತ್ತಾರೆ. ಇದೇ ಕಾರಣಕ್ಕೆ ಇಂದು ರಿಯಲ್ ಎಸ್ಟೇಟ್ ಕ್ಷೇತ್ರ ಹಿಂದಿನಷ್ಟು ಹೂಡಿಕೆದಾರರನ್ನು ಸೆಳೆಯುತ್ತಿಲ್ಲ. ಆದರೂ ರಿಯಲ್ ಎಸ್ಟೇಟ್ ಕ್ಷೇತ್ರದ ಆಕರ್ಷಣೆ ತಗ್ಗಿಲ್ಲ. ಈ ನಡುವೆ ಕೆಲವರಿಗೆ ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿಕೆ ಮಾಡೋದಾ ಅಥವಾ ಬೇಡ್ವಾ ಎಂಬ ಗೊಂದಲ ಕಾಡುತ್ತಿರುತ್ತದೆ. ಆದರೆ, ಕೆಲವು ಕಾರಣಗಳಿಂದ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡೋದು ನಿಜಕ್ಕೂ ಉತ್ತಮ ಆಲೋಚನೆ. ಹಾಗಾದ್ರೆ ಆ ಕಾರಣಗಳು ಯಾವುವು? ಇಲ್ಲಿದೆ ಮಾಹಿತಿ.
ಹೂಡಿಕೆಗೆ ರಿಯಲ್ ಎಸ್ಟೇಟ್ ಖಂಡಿತಾ ಉತ್ತಮ ಆಯ್ಕೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡೋದ್ರಿಂದ ಏನೆಲ್ಲ ಪ್ರಯೋಜನಗಳಿವೆ? ಇಲ್ಲಿದೆ ಮಾಹಿತಿ.
1.ಬಲವಂತದ ಉಳಿತಾಯ: ಹೌದು, ನೀವು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದರೆ ಅದು ಖಂಡಿತಾ ಬಲವಂತದ ಉಳಿತಾಯವೇ ಆಗುತ್ತದೆ. ಹೇಗೆ ಅಂತೀರಾ? ಸಾಮಾನ್ಯವಾಗಿ ನಾವೆಲ್ಲರೂ ಪ್ರತಿ ತಿಂಗಳು ಒಂದಿಷ್ಟು ಉಳಿತಾಯ ಮಾಡಬೇಕು ಎಂದೇ ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿರುತ್ತೇವೆ. ಆದರೆ, ಯಾವುದೋ ಕಾರಣಕ್ಕೆ ಅದು ಸಾಧ್ಯವಾಗೋದಿಲ್ಲ. ಏನೋ ಆಕಸ್ಮಿಕ ವೆಚ್ಚ ಅಥವಾ ಮನೋಬಲದ ಕೊರತೆಯಿಂದ ಉಳಿತಾಯದ ಯೋಚನೆಯನ್ನು ಮುಂದಕ್ಕೆ ಹಾಕುತ್ತಿರುತ್ತೇವೆ. ಆದರೆ, ನೀವು ಒಂದು ನಿವೇಶನ ಅಥವಾ ಮನೆ ಇಲ್ಲವೇ ಕಟ್ಟಡ ಖರೀದಿಸಿದ್ದೀರಿ ಎಂದು ಭಾವಿಸೋಣ. ಅದಕ್ಕೆ ಸಾಲ ಮಾಡಿರುತ್ತೀರಿ. ಆ ಸಾಲದ ಇಎಂಐಯನ್ನು ಪ್ರತಿ ತಿಂಗಳು ಬ್ಯಾಂಕ್ ಗೆ ತಪ್ಪದೆ ಕಟ್ಟುತ್ತೀರಿ. ಏಕೆಂದರೆ ನೀವು ಇಎಂಐ ಕಟ್ಟಿಲ್ಲ ಅಂದ್ರೆ ಮುಂದೆ ತೊಂದರೆ ಎದುರಾಗಬಹುದು ಎಂಬ ಭಯ ಇರುತ್ತದೆ. ಹೀಗೆ ನೀವು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಒಂದಿಷ್ಟು ಉಳಿತಾಯ ಮಾಡಿದಂತೆ ಆಯ್ತಲ್ಲವೇ? ಇನ್ನು ಕೆಲವು ವರ್ಷಗಳ ಬಳಿಕ ನೀವು ನೀಡಿರುವ ಮೊತ್ತಕ್ಕಿಂತ ಹೆಚ್ಚಿನ ಬೆಲೆ ಆ ನಿವೇಶನಕ್ಕೆ ಬಂದೇ ಬರುತ್ತದೆ.
ಹೂಡಿಕೆ ಮಾಡುವಾಗ ತಪ್ಪದೇ ಈ ಟಿಪ್ಸ್ ಫಾಲೋ ಮಾಡಿದ್ರೆ ನೀವು ಗುರಿ ತಲುಪೋದು ಗ್ಯಾರಂಟಿ
2.ದೀರ್ಘಕಾಲದ ಹೂಡಿಕೆ: ಇನ್ನು ಆಸ್ತಿ ಖರೀದಿಸೋದು ಹಾಗೂ ಮಾರಾಟ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿ ನಿವೇಶನ ಅಥವಾ ಮನೆ ಖರೀದಿಸಿದ್ರೆ ಅದು ದೀರ್ಘಕಾಲದ ಹೂಡಿಕೆಯಾಗುತ್ತದೆ. ಹೂಡಿಕೆ ಅವಧಿ ಹೆಚ್ಚಿದ್ದಷ್ಟೂ ಉತ್ತಮ ರಿಟರ್ನ್ಸ್ ಸಿಗುತ್ತದೆ. ಹೀಗಾಗಿ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡುವುದು ಪಕ್ಕಾ.
3. ಖುಷಿ, ನೆಮ್ಮದಿ: ಇನ್ನು ನೀವು ಅಥವಾ ನಿಮ್ಮ ಕುಟುಂಬ ಸ್ವಂತ ಮನೆ ಹೊಂದಿಲ್ಲದಿದ್ರೆ ಮನೆ ಖರೀದಿ ನಿಮಗೆ ಖುಷಿ ಹಾಗೂ ನೆಮ್ಮದಿ ನೀಡಬಲ್ಲದು. ಈ ನೆಮ್ಮದಿಯ ಮುಂದೆ ಬೇರೆಲ್ಲೂ ನಗಣ್ಯ. ಅಲ್ಲದೆ, ಪ್ರತಿ ತಿಂಗಳು ಬಾಡಿಗೆ ಹೆಸರಲ್ಲಿ ಮಾಡುವ ವೆಚ್ಚ ತಪ್ಪುತ್ತದೆ. ಬಾಡಿಗೆ ಹಣವನ್ನೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತವನ್ನು ಇಎಂಐಗೆ ಪಾವತಿಸಬಹುದು. ಇದರಿಂದ ಬಾಡಿಗೆ ರೂಪದಲ್ಲಿ ನಿಮ್ಮ ಹಣ ವ್ಯರ್ಥವಾಗುವುದಿಲ್ಲ.
ಕ್ರೆಡಿಟ್ ಕಾರ್ಡ್ ಸಾಲದ ಹೊರೆ ನೆಮ್ಮದಿ ಕೆಡಿಸಿದೆಯಾ? ಡೋಂಟ್ ವರಿ, ಈ 5 ಟಿಪ್ಸ್ ಫಾಲೋ ಮಾಡಿ ಸಾಲ ತೀರಿಸಿ
4.ನಷ್ಟದ ಭಯವಿಲ್ಲ: ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಮೇಲೆ ಮಾಡಿದ ಹೂಡಿಕೆಯಿಂದ ನಷ್ಟವಾಗೋದಿಲ್ಲ. ಸಾಮಾನ್ಯವಾಗಿ ಹೂಡಿಕೆಗಿಂತ ಹೆಚ್ಚಿನ ಮೊತ್ತ ಬಂದೇ ಬರುತ್ತದೆ. ಇಲ್ಲವಾದರೂ ಕನಿಷ್ಠ ಪಕ್ಷ ನೀವು ಹೂಡಿಕೆ ಮಾಡಿದ ಹಣ ನಿಮಗೆ ಸಿಕ್ಕೇಸಿಗುತ್ತದೆ.