ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ ₹370 ಕೋಟಿ ಲಾಭ

By Kannadaprabha News  |  First Published Aug 4, 2023, 9:13 AM IST

ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ(30.06.2023) .370.70 ಕೋಟಿ ನಿವ್ವಳ ಲಾಭ ಘೋಷಿಸಿದೆ. ಬ್ಯಾಂಕ್‌ ಕಳೆದ ವರ್ಷದ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಅಂದರೆ 30.06.2022ರಲ್ಲಿ .114.18 ಕೋಟಿ ಲಾಭ ದಾಖಲಿಸಿತ್ತು. ಇದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ ಶೇ.224.66ರ ಬೆಳವಣಿಗೆ ಸಾಧಿಸಿದಂತಾಗಿದೆ.


ಮಂಗಳೂರು (ಆ.4) :  ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ(30.06.2023) .370.70 ಕೋಟಿ ನಿವ್ವಳ ಲಾಭ ಘೋಷಿಸಿದೆ. ಬ್ಯಾಂಕ್‌ ಕಳೆದ ವರ್ಷದ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಅಂದರೆ 30.06.2022ರಲ್ಲಿ .114.18 ಕೋಟಿ ಲಾಭ ದಾಖಲಿಸಿತ್ತು. ಇದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ ಶೇ.224.66ರ ಬೆಳವಣಿಗೆ ಸಾಧಿಸಿದಂತಾಗಿದೆ.

ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿತ್ತೀಯ ವರ್ಷ 2023-24ರ ಮೊದಲ ತ್ರೈಮಾಸಿಕದ ಹಣಕಾಸು ವರದಿ ಅಂಗೀಕರಿಸಲಾಯಿತು.

Tap to resize

Latest Videos

ಬ್ಯಾಂಕಿನ ನಿರ್ವಹಣಾ ಲಾಭ 30.06.2023ರ ಅಂತ್ಯಕ್ಕೆ .601.17 ಕೋಟಿಗೆ ಹಾಗೂ ನಿವ್ವಳ ಬಡ್ಡಿ ಆದಾಯ .814.68 ಕೋಟಿಗೆ ತಲುಪಿದೆ. ಬ್ಯಾಂಕಿನ ಒಟ್ಟು ವ್ಯವಹಾರ 30.06.2023ರ ಅಂತ್ಯಕ್ಕೆ ಶೇ.6.85ರ ವೃದ್ಧಿಯೊಂದಿಗೆ .1,48,449.27 ಕೋಟಿ ತಲುಪಿದ್ದು, ಇದು 30.06.2022ರಲ್ಲಿ .1,38,936.17 ಕೋಟಿ ಆಗಿತ್ತು. 30.06.2023ರ ಅಂತ್ಯಕ್ಕೆ ಠೇವಣಿಗಳ ಮೊತ್ತ ಶೇ.7.92ರ ವೃದ್ಧಿಯೊಂದಿಗೆ .86,959.86 ಕೋಟಿ ಹಾಗೂ ಮುಂಗಡಗಳು ಶೇ.5.36ರ ವೃದ್ಧಿಯೊಂದಿಗೆ .61,489.41 ಕೋಟಿಗೆ ಏರಿವೆ.

ಬೆಂಗ್ಳೂರಲ್ಲಿ ಕರ್ಣಾಟಕ ಬ್ಯಾಂಕ್‌ನ ಟೆಕ್ನಾಲಜಿ, ಡಿಜಿಟಲ್‌ ಹಬ್‌ ಆರಂಭ

ಬ್ಯಾಂಕಿನ ಅನುತ್ಪಾದಕ ಆಸ್ತಿಗಳಲ್ಲಿ ಸಾಕಷ್ಟುಚೇತರಿಕೆ ಕಂಡಿದ್ದು, ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು ಶೇ.3.68ಕ್ಕೆ ಇಳಿಕೆ ಕಂಡಿದ್ದು, ಅದು 30.06.2022ರಲ್ಲಿ ಶೇ.4.03ರಷ್ಟಿತ್ತು. ಅದರಂತೆಯೇ ಬ್ಯಾಂಕಿನ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ.1.43ಕ್ಕೆ ಇಳಿಕೆಯಾಗಿದ್ದು, 30.06.2022ರಲ್ಲಿ ಶೇ.2.16ರಷ್ಟಿತ್ತು.

ಗ್ರಾಹಕ ಸ್ನೇಹಿ ಕರ್ಣಾಟಕ ಬ್ಯಾಂಕಿನಲ್ಲಿ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ 1.72 ಲಕ್ಷ ಗ್ರಾಹಕರು ಹೊಸ ಖಾತೆಗಳನ್ನು ತೆರೆಯುವ ಮೂಲಕ ಕೆಬಿಎಲ್‌ ಪರಿವಾರಕ್ಕೆ ಸೇರ್ಪಡೆಯಾಗಿದ್ದಾರೆ. ಅದಲ್ಲದೆ, ಬ್ಯಾಂಕ್‌ ಈ ತ್ರೈಮಾಸಿಕದಲ್ಲಿ ಮ್ಯೂಚ್ಯುವಲ್‌ ಫಂಡ್‌ಗಳು ಹಾಗೂ ಸಹಭಾಗಿತ್ವದ ಕ್ರೆಡಿಟ್‌ ಕಾರ್ಡುಗಳು, ಮುಂಗಡಗಳ ವಿಸ್ತರಣೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ.

30.06.2022ರಲ್ಲಿ ಶೇ.15.51ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತ ಈ ತ್ರೈಮಾಸಿಕದ ಅಂತ್ಯಕ್ಕೆ ಇನ್ನೂ ಉತ್ತಮಗೊಂಡು ಶೇ. 17.00ಕ್ಕೆ ತಲುಪಿದೆ. ಬ್ಯಾಂಕಿನ ಪ್ರಾವಿಶನ್‌ ಕವರೇಜ್‌ ರೇಶಿಯೋ ಶೇ.83.47ಕ್ಕೆ ತಲುಪಿ ಹೊಸ ಎತ್ತರ ಕಂಡಿದೆ. ಇದು ಹಿಂದಿನ ಕ್ಯೂ1ರಲ್ಲಿ ಶೇ. 76.77ರಷ್ಟಿತ್ತು.

 

ಮಂಗಳೂರು: ಕರ್ಣಾಟಕ ಬ್ಯಾಂಕಿಗೆ 1179 ಕೋಟಿ ಲಾಭ, ಹೊಸ ಮೈಲಿಗಲ್ಲು

ಎರಡನೇ ಶತಮಾನದತ್ತ ಬ್ಯಾಂಕ್‌ ದಾಪುಗಾಲು: ಎಂಡಿ ಶ್ರೀಕೃಷ್ಣನ್‌

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶ ಬಗ್ಗೆ ಹರ್ಷ ವ್ಯಕ್ತಪಡಿಸುತ್ತ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಸಿ.ಇ.ಒ ಶ್ರೀಕೃಷ್ಣನ್‌ ಎಚ್‌, ಸದೃಢವಾದ ಮೂಲಭೂತ ಅಂಶಗಳ ಭದ್ರಬುನಾದಿಯಲ್ಲಿರುವ ಕರ್ಣಾಟಕ ಬ್ಯಾಂಕ್‌, ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಪ್ರಗತಿ ಪಥದಲ್ಲಿ ದೃಢವಾದ ಹೆಜ್ಜೆ ಇಡುತ್ತಿದೆ. ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗುವಂತೆ ಹೊಸ ಯುಗದ ಫಿನ್‌ಟೆಕ್‌ ಕಂಪೆನಿಗಳ ಸಹಭಾಗಿತ್ವದೊಂದಿಗೆ 2ನೇ ಶತಮಾನದತ್ತ ಬ್ಯಾಂಕ್‌ ದಾಪುಗಾಲು ಹಾಕಲಿದೆ ಎಂದು ಹೇಳಿದರು.

click me!