Multibagger Stock Hunter ಈ ಕಂಪನಿಯಲ್ಲಿ ಒಂದು ದಶಕದ ಹಿಂದೆ ಒಬ್ಬರು ಸುಮಾರು 10,000 ರೂ. ಅನ್ನು ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ್ದರೆ, ಈಗ ಆ ಮೊತ್ತವು 17 ಲಕ್ಷ ರೂ. ಆಗಿರುತ್ತಿತ್ತು.
ನವದೆಹಲಿ (ಆಗಸ್ಟ್ 26, 2023): ಹಣ ಮಾಡಲು ನಾನಾ ಮಾರ್ಗಗಳಿರುತ್ತದೆ. ಈ ಪೈಕಿ ಷೇರು ಮಾರುಕಟ್ಟೆಯೂ ಒಂದು. ಕೆಲವು ಸಣ್ಣ ಸಣ್ಣ ಕಂಪನಿಗಳೂ ಸಹ ಹೆಚ್ಚು ಲಾಭ ತಂದುಕೊಡಬಹುದು. ಇದೇ ರೀತಿ, ಶಿವಾಲಿಕ್ ಬೈಮೆಟಲ್ ಕಂಟ್ರೋಲ್ಸ್ ಷೇರುಗಳು ಕಳೆದ 10 ವರ್ಷಗಳಲ್ಲಿ 17,600% ರಷ್ಟು ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂದರೆ, ಹೂಡಿಕೆದಾರರಿಗೆ ಸಿಕ್ಕಾಪಟ್ಟೆ ಲಾಭ ಅಥವಾ ರಿಟರ್ನ್ಸ್ ಅನ್ನು ನೀಡಿದೆ.
ಈ ಕಂಪನಿಯಲ್ಲಿ ಒಂದು ದಶಕದ ಹಿಂದೆ ಒಬ್ಬರು ಸುಮಾರು 10,000 ರೂ. ಅನ್ನು ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ್ದರೆ, ಈಗ ಆ ಮೊತ್ತವು 17 ಲಕ್ಷ ರೂ. ಆಗಿರುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ. ಶಿವಾಲಿಕ್ ಬೈಮೆಟಲ್ ಕಂಟ್ರೋಲ್ಸ್ ಷೇರುಗಳು ಕಳೆದ ಮೂರು ವರ್ಷಗಳಲ್ಲಿ 2150% ಏರಿಕೆಯಾಗಿದ್ದು, ಉತ್ತಮ ಆದಾಯವನ್ನು ನೀಡಿದೆ ಮತ್ತು ಅದೇ ಅವಧಿಯಲ್ಲಿ ಸುಮಾರು 400% ಲಾಭವನ್ನೂ ಗಳಿಸಿವೆ.
ಇದನ್ನು ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 7 ಲಕ್ಷ ರೂ. ಇರ್ತಿತ್ತು!
ಶಿವಾಲಿಕ್ ಬೈಮೆಟಲ್ ಕಂಟ್ರೋಲ್ಸ್ ಡಿಫ್ಯೂಷನ್ ಬಾಂಡಿಂಗ್, ಎಲೆಕ್ಟ್ರಾನ್ ಬೀಮ್ ವೆಲ್ಡಿಂಗ್, ಸಾಲ್ಡರ್ ರೀಫ್ಲೋ ಮತ್ತು ರೆಸಿಸ್ಟೆನ್ಸ್ ವೆಲ್ಡಿಂಗ್‌ನಂತಹ ವಿವಿಧ ವಿಧಾನಗಳ ಮೂಲಕ ವಸ್ತುಗಳನ್ನು ಸೇರುವಲ್ಲಿ ಪರಿಣತಿ ಹೊಂದಿರುವ ಕಂಪನಿಯಾಗಿದೆ. ಇದು ಸುಮಾರು 3,204 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿದೆ.
ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಷೇರುದಾರರ ಮಾದರಿಯ ಪ್ರಕಾರ, ಈ ಕಂಪನಿಯ ಪ್ರೊಮೋಟರ್‌ಗಳು 60.61% ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ 39.39% ಸಾರ್ವಜನಿಕ ಷೇರುದಾರರ ಬಳಿ ಇರುತ್ತದೆ. ಸಾರ್ವಜನಿಕ ಷೇರುದಾರರಲ್ಲಿ, ಮ್ಯೂಚುವಲ್ ಫಂಡ್‌ಗಳು ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರು ಯಾವುದೇ ಪಾಲನ್ನು ಹೊಂದಿಲ್ಲ. ಆದರೆ ಚಿಲ್ಲರೆ ಹೂಡಿಕೆದಾರರು, 25% ಪಾಲನ್ನು ಹೊಂದಿದ್ದಾರೆ.
ಇದನ್ನೂ ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 4 ಲಕ್ಷ ರೂ. ಇರ್ತಿತ್ತು!
ಶಿವಾಲಿಕ್ ಬೈಮೆಟಲ್ಸ್ ಮೊದಲ ತ್ರೈಮಾಸಿಕ ಲಾಭದಲ್ಲಿ 18% ಜಿಗಿತ ಕಂಡಿದ್ದು, 20.23 ಕೋಟಿ ರೂ. ಗೆ ಏರಿಕೆಯಾಗಿದೆ. ಹಾಗೂ, ಕಾರ್ಯಾಚರಣೆಗಳಿಂದ ಆದಾಯವು 16% ಹೆಚ್ಚಿದ್ದು 113.07 ಕೋಟಿ ರೂ. ಗೆ ತಲುಪಿದೆ.
ಹೂಡಿಕೆದಾರರು ಏನು ಮಾಡಬೇಕು?
ವಿಶ್ಲೇಷಕರು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಸ್ಟಾಕ್ ಅನ್ನು ಹಿಡಿದಿಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಹಾಗೂ, ಸ್ಟಾಕ್ ಮೌಲ್ಯ 510 ರೂ. ಗಿಂತ ಹೆಚ್ಚಾಗುವ ತನಕ ತಾಜಾ ಖರೀದಿಗಳನ್ನು ಮಾಡಬಹುದು ಎಂದೂ ಸಲಹೆ ನೀಡಲಾಗಿದೆ.
ಇದನ್ನೂ ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ರೂ. ಇರ್ತಿತ್ತು!