ಕೇವಲ 15 ಸೆಕೆಂಡ್ ಒಂದು ರೀಲ್ಸ್‌ ಗೆ 7 ಲಕ್ಷ ! gen z ಇನ್‌ಫ್ಲುಯೆನ್ಸರ್ ಗಳಿಕೆ ಕೇಳಿದ್ರೆ ಶಾಕ್‌ ಆಗ್ತೀರಿ

Published : Oct 27, 2026, 11:16 AM IST
Influencer earnings

ಸಾರಾಂಶ

ಈಗ ಜೆನ್‌ ಜಿಗಳ ಗಳಿಕೆ ವಿಧಾನ ಬದಲಾಗಿದೆ. ಜೆನ್‌ ಜಿಗಳು ಬರೀ ಕೆಲ್ಸಕ್ಕೆ ಹೋಗಿ ಹಣ ಸಂಪಾದನೆ ಮಾಡ್ತಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಕೆಲವೇ ಕೆಲವು ಸೆಕೆಂಡ್‌ ಗಳ ವಿಡಿಯೋ ಪೋಸ್ಟ್‌ ಮಾಡ್ತಾ ಹಣ ಗಳಿಸ್ತಿದ್ದಾರೆ.

ಸ್ಮಾರ್ಟ್ಫೋನ್ ಮತ್ತು ಫಾಸ್ಟ್ ಇಂಟರ್ನೆಟ್ ಯುಗದಲ್ಲಿ ಫ್ಯಾಷನ್ ಅಂದರೆ ಕೇವಲ ರ್ಯಾಂಪ್ ವಾಕ್ ಅಥವಾ ಬಾಲಿವುಡ್ಗೆ ಮಾತ್ರ ಸೀಮಿತವಾಗಿಲ್ಲ. ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಲ್ಲಿ 15ರಿಂದ 30 ಸೆಕೆಂಡ್ಗಳ ವಿಡಿಯೋ ಮಾಡುವ ಮೂಲಕ ಭಾರತದ Gen Z ಫ್ಯಾಷನ್ ಮತ್ತು ಬ್ಯೂಟಿ ಇನ್ಫ್ಲುಯೆನ್ಸರ್ಗಳು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಇದನ್ನು ಕೇವಲ ಹವ್ಯಾಸ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಇದು ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ. ವರದಿಯ ಪ್ರಕಾರ, ಭಾರತದ ಟಾಪ್ 5 Gen Z ಫ್ಯಾಷನ್ ಮತ್ತು ಬ್ಯೂಟಿ ಇನ್ಫ್ಲುಯೆನ್ಸರ್ಗಳು ಕೇವಲ 15 ಸೆಕೆಂಡ್ನ ಒಂದು ಬ್ರಾಂಡೆಡ್ ರೀಲ್ಗೆ 2 ಲಕ್ಷದಿಂದ 7 ಲಕ್ಷ ರೂಪಾಯಿವರೆಗೆ ಚಾರ್ಜ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಇವರ ಆದಾಯ ಕೇವಲ ರೀಲ್ಗಳಿಗೆ ಸೀಮಿತವಾಗಿಲ್ಲ.

ಕೋಮಲ್ ಪಾಂಡೆ – ಎಕ್ಸ್ಪೆರಿಮೆಂಟಲ್ ಫ್ಯಾಷನ್ನ ಕ್ವೀನ್

Gen Z ಫ್ಯಾಷನ್ ಬಗ್ಗೆ ಮಾತನಾಡುವಾಗ ಕೋಮಲ್ ಪಾಂಡೆ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ವಿಭಿನ್ನ ಸ್ಟೈಲಿಂಗ್, ಬೋಲ್ಡ್ ಲುಕ್ ಮತ್ತು ಹೈ ಫ್ಯಾಷನ್ ವಿಡಿಯೋಗಳ ಮೂಲಕ ಅವರು ಜನಪ್ರಿಯರಾಗಿದ್ದಾರೆ. ಲಕ್ಸುರಿ ಮತ್ತು ಪ್ರೀಮಿಯಂ ಫ್ಯಾಷನ್ ಬ್ರ್ಯಾಂಡ್ಗಳ ಜೊತೆ ಕೆಲಸ ಮಾಡುವ ಕೋಮಲ್ ಪಾಂಡೆ, ಒಂದು ರೀಲ್ಗೆ ಸುಮಾರು 4ರಿಂದ 6 ಲಕ್ಷ ರೂಪಾಯಿವರೆಗೆ ಚಾರ್ಜ್ ಮಾಡ್ತಾರೆ. ಇದರ ಜೊತೆಗೆ ಯೂಟ್ಯೂಬ್ ಆ್ಯಡ್ಸೆನ್ಸ್ ಮತ್ತು ಫ್ಯಾಷನ್ ಬ್ರ್ಯಾಂಡ್ಗಳ ಜೊತೆಗಿನ ಪಾರ್ಟನರ್ಶಿಪ್ ಕೂಡ ಅವರ ಆದಾಯದ ಪ್ರಮುಖ ಮೂಲಗಳಾಗಿವೆ.

ಕೃತಿಕಾ ಖುರಾನಾ – ಬೋಹೋ ಚಿಕ್ ಮತ್ತು ಡೈಲಿ ವೇರ್ ಸ್ಟೈಲ್

ಇಂಡೋ-ವೆಸ್ಟರ್ನ್ ಮತ್ತು ಬೋಹೋ ಸ್ಟೈಲ್ಗಳನ್ನು ಜನಪ್ರಿಯಗೊಳಿಸಿರುವ ಕೃತಿಕಾ ಖುರಾನಾ, Gen Z ಜೊತೆಗೆ ಮಿಲೇನಿಯಲ್ಸ್ನಲ್ಲೂ ಸಾಕಷ್ಟು ಫೇಮಸ್ ಆಗಿದ್ದಾರೆ. ಫ್ಯಾಷನ್ ಮಾತ್ರವಲ್ಲದೆ, ತಮ್ಮ ಲೈಫ್ಸ್ಟೈಲ್ ಮತ್ತು ಬ್ಯೂಟಿ ಪ್ರಾಡಕ್ಟ್ಗಳ ಬಗ್ಗೆಯೂ ಅವರು ವಿಡಿಯೋಗಳನ್ನು ಮಾಡುತ್ತಾರೆ. ಬ್ಯೂಟಿ ಬ್ರ್ಯಾಂಡ್ಗಳ ಜೊತೆಗಿನ ದೀರ್ಘಾವಧಿಯ ಒಪ್ಪಂದಗಳು ಮತ್ತು ಇನ್ಸ್ಟಾಗ್ರಾಮ್ ರೀಲ್ಗಳ ಮೂಲಕ ಕೃತಿಕಾ ಒಂದು ರೀಲ್ಗೆ ಸುಮಾರು 3ರಿಂದ 5 ಲಕ್ಷ ರೂಪಾಯಿವರೆಗೆ ಸಂಪಾದಿಸುತ್ತಾರೆ.

ರೋಶ್ನಿ ಭಾಟಿಯಾ – ಎಲಿಗಂಟ್ ಮತ್ತು ಸ್ಟ್ರೀಟ್ ಸ್ಟೈಲ್

ಕ್ಲಾಸಿಕ್ ಫ್ಯಾಷನ್ ಮತ್ತು ಮಾಡರ್ನ್ ಸ್ಟ್ರೀಟ್ವೇರ್ ಲುಕ್ಗಳ ಮೂಲಕ ರೋಶ್ನಿ ಭಾಟಿಯಾ ತಮ್ಮದೇ ಆದ ಗುರುತು ಹೊಂದಿದ್ದಾರೆ. ಟೈರ್-1 ಮತ್ತು ಟೈರ್-2 ನಗರಗಳ ಪ್ರೇಕ್ಷಕರಲ್ಲೂ ಅವರಿಗೆ ಉತ್ತಮ ಜನಪ್ರಿಯತೆ ಇದೆ. ಇದೇ ಕಾರಣಕ್ಕೆ ಮಿಂತ್ರಾ, ಅಜಿಯೋ ಮತ್ತು ನೈಕಾ ರೀತಿಯ ಆನ್ಲೈನ್ ಶಾಪಿಂಗ್ ಹಾಗೂ ಬ್ಯೂಟಿ ಪ್ಲಾಟ್ಫಾರ್ಮ್ಗಳ ಬ್ರ್ಯಾಂಡ್ ಕ್ಯಾಂಪೇನ್ಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಒಂದು ಬ್ರಾಂಡೆಡ್ ಕ್ಯಾಂಪೇನ್ ಅಥವಾ ರೀಲ್ಗೆ ರೋಶ್ನಿ ಸುಮಾರು 2.5 ಲಕ್ಷದಿಂದ 4.5 ಲಕ್ಷ ರೂಪಾಯಿವರೆಗೆ ಚಾರ್ಜ್ ಮಾಡ್ತಾರೆ.

ಸಾಕ್ಷಿ ಶಿವದಾಸಾನಿ

ತಮ್ಮ ವಿಭಿನ್ನ ಶೈಲಿ ಮತ್ತು ಮನರಂಜನೆಯ ಬ್ಯೂಟಿ ವಿಡಿಯೋಗಳಿಂದ ಸಾಕ್ಷಿ ಶಿವದಾಸಾನಿ ಯುವಜನರಲ್ಲಿ ಜನಪ್ರಿಯರಾಗಿದ್ದಾರೆ. ಮೇಕಪ್ ಟಿಪ್ಸ್, ಸ್ಕಿನ್ಕೇರ್ ಮತ್ತು ಕಡಿಮೆ ಬಜೆಟ್ನಲ್ಲಿ ಫ್ಯಾಷನಬಲ್ ಆಗಿ ಕಾಣಿಸಿಕೊಳ್ಳುವ ವಿಧಾನಗಳನ್ನು ಅವರು ತಮ್ಮ ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಾರೆ. ಹೀಗಾಗಿ ಸ್ಕಿನ್ಕೇರ್ ಮತ್ತು ಪರ್ಸನಲ್ ಕೇರ್ ಬ್ರ್ಯಾಂಡ್ಗಳು ಅವರ ಜೊತೆ ಕೆಲಸ ಮಾಡಲು ಆಸಕ್ತಿ ತೋರುತ್ತವೆ. ಸಾಕ್ಷಿ ಒಂದು ರೀಲ್ಗೆ ಸುಮಾರು 2 ಲಕ್ಷದಿಂದ 3.5 ಲಕ್ಷ ರೂಪಾಯಿವರೆಗೆ ಚಾರ್ಜ್ ಮಾಡುತ್ತಾರೆ.

ಅನಮ್ ದರ್ಬಾರ್

ಟ್ರೆಂಡಿ ಬಟ್ಟೆಗಳು, ಡ್ಯಾನ್ಸ್ ಮತ್ತು ಎನರ್ಜಿಟಿಕ್ ವಿಡಿಯೋಗಳ ಮೂಲಕ ಅನಮ್ ದರ್ಬಾರ್ ಯುವಜನರಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಫ್ಯಾಷನ್ ಮತ್ತು ಬ್ಯೂಟಿ ಜೊತೆಗೆ ಯುವಜನರನ್ನು ಆಕರ್ಷಿಸುವ ಕಂಟೆಂಟ್ ಮಾಡೋದ್ರಲ್ಲಿ ಫೇಮಸ್. ಒಂದು ಸ್ಪಾನ್ಸರ್ಡ್ ಪೋಸ್ಟ್ ಅಥವಾ ರೀಲ್ಗೆ ಅನಮ್ ಸುಮಾರು 1.5 ಲಕ್ಷದಿಂದ 3 ಲಕ್ಷ ರೂಪಾಯಿವರೆಗೆ ಚಾರ್ಜ್ ಮಾಡುತ್ತಾರೆ.

ಇನ್ಫ್ಲುಯೆನ್ಸರ್ ಸಂಪಾದನೆಯ 3 ಪ್ರಮುಖ ಮೂಲಗಳು

ಈ ಇನ್ಫ್ಲುಯೆನ್ಸರ್ಗಳು ರೀಲ್ಗಳಿಂದ ಮಾತ್ರ ಹಣ ಸಂಪಾದಿಸ್ತಿಲ್ಲ. ಇವರಿಗೆ ಆದಾಯ ತರುವ ಮೂರು ಪ್ರಮುಖ ಮೂಲಗಳಿವೆ. ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಮತ್ತು ಸ್ಪಾನ್ಸರ್ಡ್ ರೀಲ್ಸ್ ಒಂದಾದ್ರೆ. ಅಫಿಲಿಯೇಟ್ ಮಾರ್ಕೆಟಿಂಗ್ ಎರಡನೇಯದು. ಸ್ವಂತ ಬ್ರ್ಯಾಂಡ್ ಮತ್ತು ಮಾಸ್ಟರ್ಕ್ಲಾಸ್ ಮೂಲಕ ಕೂಡ ಅವರು ಸಂಪಾದನೆ ಮಾಡ್ತಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ದೀಪಾವಳಿ ಹೊಸ್ತಿಲಲ್ಲೇ ಮತ್ತೆ ಜಿಗಿದ ಚಿನ್ನದ ದರ: ಪ್ರಮುಖ ನಗರಗಳ ಇಂದಿನ ಗೋಲ್ಡ್ ರೇಟ್ ಇಲ್ಲಿದೆ ನೋಡಿ!
17ನೇ ವಯಸ್ಸಿನಲ್ಲೇ ಬಿಸಿನೆಸ್ ಮೈಂಡ್! ದಾಂಡಿಯಾ ನೈಟ್ ನಲ್ಲಿ ನೀರಿನ ಬಾಟಲ್ ಮಾರಿ ಈತ ಗಳಿಸಿದ್ದೆಷ್ಟು ಗೊತ್ತಾ?