ಕುಟುಂಬದ ನಡುವೆ ಸೌಹಾರ್ದ ವಿಭಜನೆಗೆ ರೆಡಿಯಾಯ್ತು 1.76 ಲಕ್ಷ ಕೋಟಿ ಒಡೆತನದ ಭಾರತದ ಹೆಮ್ಮೆಯ ಕಂಪನಿ!

By Santosh Naik  |  First Published Oct 3, 2023, 8:20 PM IST

ತಾನು ನಿರ್ಮಾಣ ಮಾಡಿದ್ದ ಸರ್ಜಿಕಲ್‌ ಟೂಲ್‌ಗೆ ಮೇಡ್‌ ಇನ್‌ ಇಂಡಿಯಾ ಎನ್ನುವ ಹೆಸರು ಹಾಕಲು ಒಪ್ಪದ ಕಾರಣಕ್ಕಾಗಿ 126 ವರ್ಷಗಳ ಹಿಂದೆ ಈ ಕಂಪನಿ ಆರಂಭವಾಗಿತ್ತು. ಇದು ಈ ಕಂಪನಿಯ ಮೌಲ್ಯ ಬರೋಬ್ಬರಿ 1.76 ಲಕ್ಷ ಕೋಟಿ ರೂಪಾಯಿ. ಈಗ ಇದು ಕುಟುಂಬ ಸದಸ್ಯರ ನಡುವೆ ಸೌಹಾರ್ದ ವಿಭಜನೆಗೆ ರೆಡಿಯಾಗಿದೆ.


ನವದೆಹಲಿ (ಅ.3): ಬಹುಶಃ ಇಂದು ಈ ಕಂಪನಿಯ ಉತ್ಪನ್ನದ ಭಾರತದ ಮನೆಗಳೇ ಇರಲಿಕ್ಕಿಲ್ಲ. ಮನೆಯಲ್ಲಿ ಈ ಕಂಪನಿಯ ಕನಿಷ್ಠ ಒಂದಾದರೂ ಉತ್ಪನ್ನಗಳು ಇದ್ದೇ ಇರುತ್ತದೆ. 126 ವರ್ಷಗಳ ಇತಿಹಾಸವಿರುವ ಭಾರತದ ಹೆಮ್ಮೆಯ ಕಂಪನಿ ಈಗ ಕುಟುಂಬ ಸದಸ್ಯರ ನಡುವೆ ಸೌಹಾರ್ದಯುತವಾಗಿ ವಿಭಜನೆಯಾಗಲು ಸಿದ್ಧವಾಗಿದೆ. ಸಾಮಾನ್ಯವಾಗಿ ಇಷ್ಟು ದೊಡ್ಡ ಮೊತ್ತದ ಕಂಪನಿಯಲ್ಲಿ ವಿಭಜನೆ ಸೌಹಾರ್ದಯುತವಾಗಿ ಆಗುವುದು ಬಹಳ ಅಪರೂಪ. ಆದರೆ, ತೀರಾ ಅಪರೂಪದಲ್ಲಿ ಅಪರೂಪ ಎನ್ನುವಂತೆ ಯಾವುದೇ ಕಿತ್ತಾಟವಿಲ್ಲದೆ, ತಮ್ಮ ನಡುವೆಯೇ ಪ್ರತಿಷ್ಠಿತ ಕಂಪನಿಯನ್ನು ಹಂಚಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಈ ಕಂಪನಿಯ ಹೆಸರು. ದಿ ಗೋದ್ರೇಜ್‌ ಗ್ರೂಪ್‌. 1897ರಲ್ಲಿ ವಕೀಲಿ ವೃತ್ತಿಯಲ್ಲಿದ್ದ ಆರ್ದೆಶೀರ್‌ ಗೋದ್ರೇಜ್‌ ಅವರಿಂದ ಸ್ಥಾಪನೆಯಾದ ಈ ಕಂಪನಿಯ ಮೌಲ್ಯ ಇಂದು 1.76 ಲಕ್ಷ ಕೋಟಿ ರೂಪಾಯಿ. ಡೋರ್‌ ಲಾಕ್‌ಗಳು, ಬೀರುಗಳು, ಸೋಪ್‌ಗಳು ಕೊನೆಗೆ ಸ್ಪೇಸ್‌ ರಾಕೆಟ್‌ಗಳಲ್ಲೂ ಇಂದು ಗೋದ್ರೇಜ್‌ ಹೆಸರಿದೆ. ಈ ಕಂಪನಿ ಇಂದು ಕುಟುಂಬದ ಹಲವು ಸದಸ್ಯರ ನಡುವೆ ಹಂಚಿಹೋಗಲಿದೆ ಎಂದು ಉದ್ಯಮದ ವ್ಯಕ್ತಿಗಳು ತಿಳಿಸಿದ್ದಾರೆ.

ತನ್ನ ವೈವಿಧ್ಯಮಯ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದ ಗೋದ್ರೇಜ್‌ ಗ್ರೂಪ್‌ ತೀರಾ ಇತ್ತೀಚೆಗೆ ಕಾಂಡಮ್‌ ಬ್ಯುಸಿನೆಸ್‌ಗೂ ಕಾಲಿಟ್ಟಿತ್ತು. ತನ್ನದೇ ಸ್ವಂತ ಅನ್ವೇಷಣೆಯೊಂದಿಗೆ ದೊಡ್ಡ ಮಟ್ಟದ ಯಶಸ್ಸಿ ಸಾಧಿಸಿದ ಸಾಕಷ್ಟು ದೀರ್ಘ ಇತಿಹಾಸ ಈ ಕಂಪನಿಗೆ ಇದೆ. ಕುಟುಂಬದ ಸದಸಯರ ನಡುವೇ ಇರುವ ವೈರುಧ್ಯಗಳನ್ನು ಪರಿಹರಿಸಿ ಷೇರುದಾರರಿಗೆ ಮೌಲ್ಯ ನೀಡುವ ದೃಷ್ಟಿಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಗೋದ್ರೇಜ್‌ ಬ್ರ್ಯಾಂಡ್‌ನೇಮ್‌ಅನ್ನು ಬಳಸಿಕೊಳ್ಳುವುದು ಹಾಗೂ ಅದು ಹೊಂದಿರುವ ಭೂಮಿಗಳ ಮೌಲ್ಯಮಾಪನದಂಥ ಪ್ರಮುಖ ವಿಚಾರಗಳು ಮುಂದೆ ಚರ್ಚೆಗೆ ಬರಲಿದೆ.

ಹಾಗೇನಾದರೂ ಕಂಪನಿ ವಿಭಜನೆ ಆದಲ್ಲಿ, ಒಂದು ಶತಮಾನಕ್ಕಿಂತಲೂ ಹೆಚ್ಚಿನ ಕಾಲ ದೇಶದ ಮನೆಮೆನಗಳ ಬ್ರ್ಯಾಂಡ್‌ ಆಗಿರುವ ಗೋದ್ರೇಜ್‌ ಪಾಲಿಗೆ ಪ್ರಮುಖ ತಿರುವು ಎನ್ನಲಡ್ಡಿಯಿಲ್ಲ. ಗೋದ್ರೇಜ್‌ ಹೆಸರು ಎಷ್ಟುಸ ಪ್ರಖ್ಯಾತ ಎಂದರೆ, ಇಂದು ದೇಶದ ಕೆಲವು ಮನೆಗಳಲ್ಲಿ ಗೋದ್ರೇಜ್‌ ಅಂದರೆ ಮಾತ್ರವೇ ಅವು ಯಾವ ವಸ್ತು ಎನ್ನುವುದು ಗೊತ್ತಾಗುತ್ತದೆ. ಅದಕ್ಕೆ ಸ್ಟೀಲ್‌ ಅಲ್ಮರಾ ಸಾಕ್ಷಿ. ದೇಶದ ಮನೆಗಳನ್ನು ಅದು ಯಾವುದದೇ ಕಂಪನಿಯ ಅಲ್ಮರಾ ಖರೀದಿ ಮಾಡಿದರೂ, ಗೋದ್ರೇಜ್‌ ಎನ್ನುವುದು ಅದಕ್ಕೆ ಸಮನಾರ್ಥಕ ಪದ ಎನ್ನುವಂತಾಗಿತ್ತು.

ಕಂಪನಿಯ ಸಂಸ್ಥಾಪಕರಾದ ಆರ್ದೆಶೀರ್‌ ಗೋದ್ರೇಜ್‌ ರಾಷ್ಟ್ರೀಯವಾದಿ. ದೇಶದ ಬಗ್ಗೆ ಹೆಮ್ಮೆ ಹೊಂದಿದ್ದಂಥ ವ್ಯಕ್ತಿ. ಯುರೋಪ್‌ ತಯಾರಿಸುವ ಉತ್ಪನ್ನಗಳನ್ನು ಭಾರತವೂ ತಯಾರಿಸಬಹುದು ಎಂದು ವಿಶ್ವಾಸವಿಟ್ಟಿದದ್ದ ವ್ಯಕ್ತಿ. ಅವರ ಈ ಉತ್ಸಾಹವೇ ಇದನ್ನು ಸಾಬೀತುಪಡಿಸುವಂತೆ ಪ್ರೇರಣೆ ನೀಡಿತ್ತು.

Tap to resize

Latest Videos

ವಕೀಲರಾಗಿ ವೃತ್ತಿಜೀವನ ಆರಂಭಿಸಿದ್ದ ಆರ್ದೆಶೀರ್‌, ಪ್ರಕರಣದಲ್ಲಿ ಸತ್ಯವನ್ನು ಗಮನಿಸದೇ ಕಕ್ಷಿದಾರನ ಪರವಾಗಿ ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ವಕೀಲಿ ವೃತ್ತಿಯನ್ನು ತೊರೆದಿದ್ದರು. ತನ್ನ ತಂದೆಯ ಸ್ನೇಹಿತರಿಂದ ಸ್ವಲ್ಪ ಹಣವನ್ನು ಸಾಲವಾಗಿ ಪಡೆದು ಸರ್ಜಿಕಲ್‌ ಉಪಕರಣಗಳನ್ನು ತಯಾರಿಸುವ ಸಣ್ಣ ಕಂಪನಿ ಆರಂಭಿಸಿದ್ದರು. ಆದರೆ, ಈ ಉಪಕರಣಗಳ ಮೇಲೆ ಮೇಡ್‌ ಇನ್‌ ಇಂಡಿಯಾ ಎಂದು ಪ್ರಿಂಟ್‌ ಮಾಡಲು ತನ್ನ ಯುರೋಪ್‌ ಗ್ರಾಹಕರು ಒಪ್ಪದೇ ಇದ್ದಾಗ ಇಂಥ ಉಪಕರಣವನ್ನು ಉತ್ಪಾದಿಸುವ ಕಂಪನಿಯನ್ನೇ ಮುಚ್ಚಿದ್ದರು. ಅದಾದ ನಂತರ ಅವರು ಬೀಗಗಳನ್ನು ತಯಾರಿಸುವ ಕಂಪನಿ ಆರಂಭಿಸಿದ್ದರು. ಬಾಂಬೆಯಲ್ಲಿ ಕಳ್ಳತನ ಹೆಚ್ಚಾಗಿದ್ದ ಕಾಲದಲ್ಲಿ ಇವರು ಬೀಗಗಳನ್ನು ತಯಾರಿಸುವ ಕಂಪನಿ ಆರಂಭಿಸಿದ್ದು ವರ್ಕ್‌ಔಟ್‌ ಆಯಿತು. ರ್ದೇಶಿರ್ ತನ್ನ ಸಮಯಕ್ಕೆ ಸಾಕಷ್ಟು ನವೀನ ಬೀಗಗಳನ್ನು ತಯಾರಿಸಿದರು ಮತ್ತು 1907 ರಲ್ಲಿ ವಿಶ್ವದ ಮೊದಲ ಸ್ಪ್ರಿಂಗ್‌ಲೆಸ್ ಲಾಕ್‌ಗೆ ಪೇಟೆಂಟ್ ಪಡೆದಿದ್ದರು.

ಚಂದ್ರಯಾನ-3 ಪ್ರಮುಖ ಉಪಕರಣ ತಯಾರಿಸಿದ ಈ ಕಂಪನಿಗಳ ಷೇರಿಗೆ ಫುಲ್‌ ಡಿಮ್ಯಾಂಡ್‌, ನಿಮ್ಮಲಿದ್ಯಾ ಈ ಷೇರುಗಳು?

ಪ್ರಸ್ತುತ ಗೋದ್ರೇಜ್‌ ಗ್ರೂಪ್‌ನ ಗೋದ್ರೇಜ್‌ ಇಂಡಸ್ಟ್ರೀಸ್‌ & ಅಸೋಸಿಯೇಟ್ಸ್‌ಗೆ ಆದಿ ಗೋದ್ರೇಜ್‌ ಹಾಗೂ ನಾದೀರ್‌ ಮುಖ್ಯಸ್ಥರಾಗಿದ್ದರೆ, ಗೋದ್ರೇಜ್‌ & ಬಾಯ್ಸ್‌ ಮ್ಯಾನುಫ್ಯಾಕ್ಟರಿಂಗ್‌ ಕಂಪನಿಗೆ ಕಸಿನ್‌ಗಳಾದ ಜೆಮ್ಶಡ್‌ ಗೋದ್ರೇಜ್‌ ಮತ್ತು ಸ್ಮಿತಾ ಗೋದ್ರೇಜ್‌ ಮುಖ್ಯಸ್ಥರಾಗಿದ್ದಾರೆ. ಇವರ ನಡುವೆ ಗೋದ್ರೇಜ್‌ನ ಹಂಚಿಹೋಗಲಿದೆ.

ಇದೆಂಥಾ ಡೀಲ್‌.. ಕಾಮಸೂತ್ರ ಕಾಂಡಮ್‌ ತಯಾರಿಸೋ ಕಂಪನಿಯನ್ನು ಗೋದ್ರೆಜ್‌ಗೆ ಮಾರಿದ ರೇಮಂಡ್ಸ್‌!

click me!