ಜನ್‍ಧನ್: ಯೋಜನೆ ಒಂದು, ಪ್ರಯೋಜನ ಹಲವು

By Suvarna News  |  First Published Aug 30, 2020, 1:58 PM IST

ಪ್ರಧಾನಮಂತ್ರಿ ಜನ್‍ಧನ್ ಯೋಜನೆ ಆರು ವರ್ಷ ಪೂರೈಸಿದೆ.ಈ ಸಂದರ್ಭದಲ್ಲಿ ಜನ್‍ಧನ್ ಖಾತೆ ತೆರೆಯೋದ್ರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋದು ಮುಖ್ಯ. ದೇಶದ ಜನರಲ್ಲಿ ಆರ್ಥಿಕ ಸಾಕ್ಷರತೆ ಬಿತ್ತಲು ಪ್ರಯತ್ನಿಸುತ್ತಿರೋ ಈ ಯೋಜನೆ ಬಗ್ಗೆ ಅಷ್ಟೂ ತಿಳಿದುಕೊಂಡಿಲ್ಲ ಅಂದ್ರೆ ಹೇಗೆ?


ಪ್ರಧಾನಮಂತ್ರಿ ಜನ್‍ಧನ್ ಯೋಜನೆ ಪ್ರಾರಂಭವಾಗಿ ಆರು ವರ್ಷ ಪೂರ್ಣಗೊಂಡಿದೆ. 2014ರ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಪಡೆದ ಈ ಯೋಜನೆ, ಬ್ಯಾಂಕ್ ಖಾತೆ ಹೊಂದಿರದ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸಿತು. ಆ ಮೂಲಕ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಯ್ತು. ಅನಕ್ಷರಸ್ಥ, ಬ್ಯಾಂಕಿಂಗ್ ವ್ಯವಹಾರ ಅರಿಯದ ಜನರು ಕೂಡ ಈ ಯೋಜನೆ ಮೂಲಕ ಬ್ಯಾಂಕ್ ಖಾತೆ ತೆರೆದು,ದೇಶದ ಅರ್ಥವ್ಯವಸ್ಥೆಯ ಮುಖ್ಯವಾಹಿನಿಗೆ ಪ್ರವೇಶ ಪಡೆದರು. ಜನ್‍ಧನ್ ಯೋಜನೆ ಭಾರತದ ಅರ್ಥವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎನ್ನೋದಕ್ಕೆ 2020ರ ಆಗಸ್ಟ್ 19ರ ತನಕ ಇದರಡಿಯಲ್ಲಿ 40.35 ಕೋಟಿ ಬ್ಯಾಂಕ್ ಖಾತೆಗಳು ತೆರೆಯಲ್ಪಟ್ಟಿರೋದೆ ಸಾಕ್ಷಿ. ಇದ್ರಲ್ಲಿ ಶೇ.63.6ರಷ್ಟು ಫಲಾನುಭವಿಗಳು ಗ್ರಾಮೀಣ ಭಾಗದವರು ಎನ್ನೋದು ಗಮನಾರ್ಹ. ಅಷ್ಟೇ ಅಲ್ಲ,ಅಡುಗೆಮನೆಯಲ್ಲಿರೋ ಸಾಮಾನು ಡಬ್ಬಿಗಳನ್ನೇ ಅಕೌಂಟ್ ಮಾಡಿಕೊಂಡು ಅದ್ರಲ್ಲೇ ತಿಂಗಳ ಬಜೆಟ್‍ನ ಉಳಿಕೆ ಹಣವನ್ನು ಯಾರಿಗೂ ತಿಳಿಯದಂತೆ ಕೂಡಿಡುತ್ತಿದ್ದ ಮಹಿಳೆಯರೆಲ್ಲ ಈ ಯೋಜನೆಯಿಂದಾಗಿ ಬ್ಯಾಂಕ್ ಮೆಟ್ಟಿಲು ಹತ್ತಿ ತಮ್ಮ ಹೆಸರಲ್ಲಿ ಅಕೌಂಟ್ ತೆರೆಯುವಂತಾಗಿದೆ. ಇದಕ್ಕೆ ಪಿಎಂ-ಜೆಡಿವೈ ಅಕೌಂಟ್ ಹೊಂದಿರೋರಲ್ಲಿ ಶೇ.55ಕ್ಕೂ ಹೆಚ್ಚು ಮಂದಿ ಮಹಿಳೆಯರು ಎನ್ನೋದೇ ಸಾಕ್ಷಿ.

ಸ್ಟೀವ್ ಜಾಬ್ಸ್ ಕಂಡರೆ ಹೊಟ್ಟೆಕಿಚ್ಚಾಗಿತ್ತು: ಬಿಲ್ ಗೇಟ್ಸ್

Tap to resize

Latest Videos

ಏನೆಲ್ಲ ಪ್ರಯೋಜನಗಳಿವೆ?
-ಸಾಮಾನ್ಯವಾಗಿ ಯಾವುದೇ ಬ್ಯಾಂಕ್‍ನಲ್ಲಿ ನೀವು ಖಾತೆ ತೆರೆಯಬೇಕೆಂದ್ರೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಿರುತ್ತದೆ. ಅಲ್ಲದೆ, ಖಾತೆಯಲ್ಲಿ ಕನಿಷ್ಠ ಇಂತಿಷ್ಟು ಹಣ (ಮಿನಿಮಮ್ ಬ್ಯಾಲೆನ್ಸ್) ಇರಲೇಬೇಕು ಎಂಬ ನಿಯಮವಿರುತ್ತೆ. ಆದ್ರೆ ಜನ್‍ಧನ್ ಯೋಜನೆಯಡಿಯಲ್ಲಿ ನೀವು ಬ್ಯಾಂಕ್ ಖಾತೆಯನ್ನು ಉಚಿತವಾಗಿ ತೆರೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು ಎಂದೇನಿಲ್ಲ. ಅಂದ್ರೆ ಶೂನ್ಯ ಬ್ಯಾಲೆನ್ಸ್ ಹಾಗೂ ಶೂನ್ಯ ಶುಲ್ಕಕ್ಕೆ ಖಾತೆ ತೆರೆಯಬಹುದು. ಕೆವೈಸಿ (ನೋ ಯುವರ್ ಕಸ್ಟಮರ್) ಕೂಡ ಸರಳವಾಗಿದೆ. 
-ಖಾತೆ ತೆರೆದು ಆರು ತಿಂಗಳು ಕಳೆದ ಬಳಿಕ ನಿಮಗೆ ಓವರ್ ಡ್ರಾಫ್ಟ್ ಸೌಲಭ್ಯ ನೀಡಲಾಗುತ್ತದೆ. ಗರಿಷ್ಠ 10 ಸಾವಿರ ರೂ. ತನಕ ಓವರ್‍ಡ್ರಾಫ್ಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದ್ರೆ ಇಷ್ಟು ಮೊತ್ತದ ಓವರ್‍ಡ್ರಾಫ್ಟ್ ಪಡೆಯಲು ಕೆಲವು ಷರತ್ತುಗಳಿಗೆ ನೀವು ಬದ್ಧರಾಗಬೇಕು. ಆದ್ರೆ ಯಾವುದೇ ಷರತ್ತುಗಳಿಲ್ಲದೆ ಎರಡು ಸಾವಿರ ರೂ. ತನಕ ಓವರ್ ಡ್ರಾಫ್ಟ್ ಪಡೆಯಬಹುದು.  

HALನ ಶೇ.15ರಷ್ಟು ಪಾಲು ಮಾರಾಟ ಮಾಡಲು ಮುಂದಾದ ಕೇಂದ್ರ!

-ಜನ್‍ಧನ್ ಖಾತೆ ತೆರೆದವರಿಗೆ ರುಪೇ ಡೆಬೆಟ್ ಕಾರ್ಡ್ ನೀಡಲಾಗುತ್ತದೆ. ಇದರ ಮೂಲಕ ನೀವು ಎಟಿಎಂ ಕೇಂದ್ರಗಳಲ್ಲಿ ನಿಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಬಹುದು. ಅಲ್ಲದೆ, ಆನ್‍ಲೈನ್ ಅಥವಾ ಶಾಪ್‍ಗಳಲ್ಲಿ ವಸ್ತುಗಳನ್ನು ಖರೀದಿಸಿದ ಬಳಿಕ ರುಪೇ ಕಾರ್ಡ್ ಬಳಸಿ ಪೇಮೆಂಟ್ ಮಾಡಬಹುದಾಗಿದೆ.
-2018 ಆಗಸ್ಟ್ 28ರ ಬಳಿಕ ತೆರೆದ ಖಾತೆಗಳಿಗೆ ಆಕಸ್ಮಿಕ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.
-ಈ ಖಾತೆ ಹೊಂದಿರೋರಿಗೆ 2ಲಕ್ಷ ರೂ. ತನಕ ಅಪಘಾತ ವಿಮೆ ಕವರೇಜ್ ನೀಡಲಾಗಿದೆ.
-ಖಾತೆದಾರ ಮೃತ್ಯುವಾದ್ರೆ 30ಸಾವಿರ ರೂ. ಜೀವ ವಿಮೆ ನೀಡಲಾಗುತ್ತದೆ. ಆದ್ರೆ ಈ ಸೌಲಭ್ಯ ಪಡೆಯಲು ಕೆಲವು ಷರತ್ತುಗಳಿದ್ದು, ಅವರ ಮೃತ್ಯು ಅದಕ್ಕೆ ಅನುಗುಣವಾಗಿ ಆಗಿದ್ರೆ ಮಾತ್ರ ವಿಮೆ ಹಣ ಸಿಗುತ್ತೆ.
-ಈ ಖಾತೆ ಹೊಂದಿರೋರು ದೇಶಾದ್ಯಂತ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.

13,764 ಕೋಟಿ ರು. ಜಿಎಸ್‌ಟಿ ಪರಿಹಾರಕ್ಕೆ ರಾಜ್ಯ ಆಗ್ರಹ

-ನೀವು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಿದ್ರೆ ನಿಮಗೆ ಸೇರಬೇಕಾದ ಹಣ ನೇರವಾಗಿ ಜನ್‍ಧನ್ ಖಾತೆಗೆ ಜಮಾ ಆಗುತ್ತದೆ. ಈ ಮೊದಲಿನಂತೆ ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಎಡತಾಕಬೇಕಿಲ್ಲ ಅಥವಾ ಯೋಜನೆಯಿಂದ ಸಿಕ್ಕ ಹಣದ ಸ್ವಲ್ಪ ಭಾಗವನ್ನು ಲಂಚದ ರೂಪದಲ್ಲಿ ಅಧಿಕಾರಿಗಳಿಗೆ ನೀಡಬೇಕಿಲ್ಲ.
-ಖಾತೆಯಲ್ಲಿ ನೀವು ಉಳಿತಾಯ ಮಾಡಿರೋ ಹಣಕ್ಕೆ ಇತರ ಬ್ಯಾಂಕ್ ಖಾತೆಗಳಿಗೆ ನೀಡುವಂತೆ ಬಡ್ಡಿಯನ್ನು ಕೂಡ ಜಮಾ ಮಾಡಲಾಗುತ್ತದೆ.
-ಮೊಬೈಲ್ ಅಥವಾ ನೆಟ್ ಬ್ಯಾಂಕಿಂಗ್ ಸೌಲಭ್ಯ ಕೂಡ ನೀಡಲಾಗುತ್ತದೆ.
-ಜನ್‍ಧನ್ ಖಾತೆ ಮೂಲಕ ವಿಮೆ ಹಾಗೂ ಪಿಂಚಣಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಸುಲಭವಾಗಿ ಹಣ ಹೂಡಿಕೆ ಮಾಡಬಹುದು.
-ಜನ್‍ಧನ್ ಖಾತೆಯಿದ್ರೆ ಪಿಎಂ ಕಿಸಾನ್ ಹಾಗೂ ಶ್ರಮಯೋಗಿ ಮಾನಧನ್ ಮುಂತಾದ ಯೋಜನೆಗಳ ಅಡಿಯಲ್ಲಿ ಪಿಂಚಣಿಗಾಗಿ ಖಾತೆ ತೆರೆಯಲಾಗುತ್ತದೆ.

click me!