ಎಜುಟೆಕ್‌ ಕಂಪನಿ ಬೈಜೂಸ್‌ನಿಂದ 1000 ನೌಕರರು ವಜಾ

By Kannadaprabha News  |  First Published Feb 3, 2023, 8:27 AM IST

ವಿದೇಶಿ ಟೆಕ್‌ ಕಂಪನಿಗಳಾದ ಮೈಕ್ರೋಸಾಫ್ಟ್, ಗೂಗಲ್‌ ಬಳಿಕ ಭಾರತದ ಶೈಕ್ಷಣಿಕ ಯೂನಿಕಾರ್ನ್‌ ‘ಬೈಜೂಸ್‌’ನಲ್ಲೂ ವಜಾ ಪರ್ವ ಆರಂಭವಾಗಿದೆ. ಒಟ್ಟು 1 ಸಾವಿರ ಮಂದಿಯನ್ನು ಉದ್ಯೋಗದಿಂದ ಬೈಜೂಸ್‌ ವಜಾ ಮಾಡಿದೆ.


ನವದೆಹಲಿ: ವಿದೇಶಿ ಟೆಕ್‌ ಕಂಪನಿಗಳಾದ ಮೈಕ್ರೋಸಾಫ್ಟ್, ಗೂಗಲ್‌ ಬಳಿಕ ಭಾರತದ ಶೈಕ್ಷಣಿಕ ಯೂನಿಕಾರ್ನ್‌ ‘ಬೈಜೂಸ್‌’ನಲ್ಲೂ ವಜಾ ಪರ್ವ ಆರಂಭವಾಗಿದೆ. ಒಟ್ಟು 1 ಸಾವಿರ ಮಂದಿಯನ್ನು ಉದ್ಯೋಗದಿಂದ ಬೈಜೂಸ್‌ ವಜಾ ಮಾಡಿದೆ. ಕೆಲಸ ಕಳೆದುಕೊಂಡವರಲ್ಲಿ ಎಂಜಿನಿಯರಿಂಗ್‌ ತಂಡದ ಶೇ.15ರಷ್ಟುಜನರಿದ್ದಾರೆ. ಇವರ ಸಂಖ್ಯೆ ಸುಮಾರು 1000 ಆಗಬಹುದು ಎನ್ನಲಾಗಿದೆ ಎಂದು ವರದಿಯೊಂದು ಹೇಳಿದೆ.  ಕೆಲಸದಿಂದ ತೆಗೆಯಲ್ಪಟ್ಟ ಉದ್ಯೋಗಿಯೊಬ್ಬರು, ಕಂಪನಿಯಿಂದ ಎಲ್ಲಾ ಫ್ರೆಶರ್‌ಗಳನ್ನು ತೆಗೆಯಲಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲೂ ಬೈಜೂಸ್‌ ಶೇ.30ರಷ್ಟು ನೌಕರರನ್ನು ಕೆಲಸದಿಂದ ತೆಗೆದುಹಾಕಿತ್ತು. ನಷ್ಟಕ್ಕೆ ಸಿಲುಕಿರುವ ಕಂಪನಿಯನ್ನು ಲಾಭದ ಹಾದಿಗೆ ತರುವ ಉದ್ದೇಶದಿಂದ ಕಳೆದ ವರ್ಷ 50 ಸಾವಿರ ಉದ್ಯೋಗಿಗಳಲ್ಲಿ 2,500 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಶಾಲೆ-ಕಾಲೇಜು ಮುಚ್ಚಿದ್ದರಿಂದ ಬೈಜೂಸ್‌ ಆನ್‌ಲೈನ್‌ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿತ್ತು. ಆದರೆ ಕೊರೋನಾ ಕಮ್ಮಿ ಆಗಿ ಶಿಕ್ಷಣ ಸಂಸ್ಥೆಗಳು ತೆರೆದ ಬಳಿಕ ಆನ್‌ಲೈನ್‌ ಶಿಕ್ಷಣಕ್ಕೆ ಬೇಡಿಕೆ ಕುಸಿದು ಬೈಜೂಸ್‌ ನಷ್ಟಅನುಭವಿಸಿತ್ತು.

Tap to resize

Latest Videos

BCCI ಬಳಿ 130 ಕೋಟಿ ರುಪಾಯಿ ಡಿಸ್ಕೌಂಟ್‌ ಕೇಳಿದ ಸ್ಟಾರ್‌ ಸಂಸ್ಥೆ! ಬೈಜುಸ್‌ನಿಂದ್ಲೂ ಹೊಸ ಪ್ರಸ್ತಾಪ..!

ಬೈಜೂಸ್‌ನಿಂದ ಮಕ್ಕಳು, ಪಾಲಕರಿಗೆ ಬೆದರಿಕೆ: ಮಕ್ಕಳ ಆಯೋಗ

ಈ ಹಿಂದೆ ಎಜುಟೆಕ್‌ ಸಂಸ್ಥೆಯಾದ ಬೈಜೂಸ್‌ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ನಂಬರ್‌ಗಳನ್ನು ಖರೀದಿಸಿ ತಮ್ಮ ಸಂಸ್ಥೆಯ ಕೋರ್ಸುಗಳನ್ನು ಪಡೆಯದಿದ್ದರೆ ಮಕ್ಕಳ ಭವಿಷ್ಯವು ಹಾಳಾಗುವುದು ಎಂದು ಬೆದರಿಸುತ್ತದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆರೋಪಿಸಿತ್ತು.  ಆದರೆ, ಇದು ಸುಳ್ಳು ಆರೋಪ. ಬೆದರಿಕೆ ಹಾಕಿಲ್ಲ. ಬೈಜೂಸ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರನ್ನು ಮಾತ್ರ ಕಂಪನಿ ಸಂಪರ್ಕಿಸುತ್ತದೆ ಎಂದು ಬೈಜೂಸ್‌ ಹೇಳಿತ್ತು.

ಬೈಜೂಸ್‌ ಕೋರ್ಸು ಪಡೆಯದಿದ್ದರೆ ಮಕ್ಕಳ ಭವಿಷ್ಯ ಹಾಳು ಎಂದು ಬೆದರಿಕೆ

ಆಯೋಗ ಆರೋಪ:

ಪಾಲಕರಿಗೆ ಕೋರ್ಸುಗಳನ್ನು ಪಡೆಯಲು ಒತ್ತಾಯಿಸುವುದಲ್ಲದೇ ಬೈಜೂಸ್‌ ಕೋರ್ಸು ಪಡೆದ ಬಳಿಕವೂ ಮಧ್ಯದಲ್ಲೇ ಅದನ್ನು ಬಿಡಲು ಪ್ರಯತ್ನಿಸಿದರೆ ಪಾವತಿಸಿದ ಹಣವನ್ನು ಹಿಂದಿರುಗಿಸುವುದಿಲ್ಲ. ಪಾಲಕರು ನೀಡಿದ ದೂರುಗಳ ಬಗ್ಗೆಯೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಆಯೋಗ ಆರೋಪಿಸಿತ್ತು . ಕೋರ್ಸುಗಳ ಮಾರಾಟಕ್ಕಾಗಿ ಅಕ್ರಮ ವಿಧಾನಗಳನ್ನು ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಬೈಜೂಸ್‌ ಸಿಇಒ ರವೀಂದ್ರನ್‌ ಅವರಿಗೆ ಆಯೋಗ ಸಮನ್ಸ್‌ ಜಾರಿ ಮಾಡಿದೆ.

click me!