ಮನೆ ಬೇಗ ಮಾರಾಟ ಮಾಡಬೇಕೆ? ಇಂಡಿಯನ್ ರಿಯಾಲ್ಟಿ ಸಂಸ್ಥೆಯ ಈ 10 ಡಿಜಿಟಲ್ ಮಾರ್ಕೆಟಿಂಗ್ ತಂತ್ರ ತಿಳಿಯಿರಿ

Published : Jun 27, 2023, 01:13 PM ISTUpdated : Jun 27, 2023, 01:15 PM IST
ಮನೆ ಬೇಗ ಮಾರಾಟ ಮಾಡಬೇಕೆ? ಇಂಡಿಯನ್ ರಿಯಾಲ್ಟಿ ಸಂಸ್ಥೆಯ ಈ 10 ಡಿಜಿಟಲ್ ಮಾರ್ಕೆಟಿಂಗ್ ತಂತ್ರ ತಿಳಿಯಿರಿ

ಸಾರಾಂಶ

ಮನೆ ಮಾರಾಟ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಯಾವುದೋ ತುರ್ತು ಕಾರಣದಿಂದ ಆದಷ್ಟು ಬೇಗ ಮನೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ, ಹೇಗೆ ಎಂಬುದು ತಿಳಿಯೋದಿಲ್ಲ. ಇಂಥ ಸಂದರ್ಭದಲ್ಲಿ ಇಂಡಿಯನ್ ರಿಯಾಲ್ಟಿ ಸಂಸ್ಥೆ ನಿಮಗೆ ನೆರವು ನೀಡುತ್ತದೆ. ಈ ಸಂಸ್ಥೆ ಅನುಸರಿಸುವ 10 ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳು ನಿಮ್ಮ ಮನೆಯನ್ನು ಬೇಗ ಮಾರಾಟ ಮಾಡಲು ನೆರವು ನೀಡುತ್ತವೆ. 

Business Desk:ನಿಮ್ಮ ಮನೆ ಮಾರಾಟ ಮಾಡೋದು ಹೆಚ್ಚಿನ ಸಮಯ ಹಿಡಿಯುವ ಹಾಗೂ ಒತ್ತಡದಾಯಕ ಪ್ರಕ್ರಿಯೆಯಾಗಿ ಕಾಣಿಸಬಹುದು. ಆದರೆ, ಸೂಕ್ತವಾದ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಬಳಸುವ ಮೂಲಕ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು ಹಾಗೂ ನಿಮ್ಮ ಮನೆಯನ್ನು ಆದಷ್ಟು ಬೇಗ ಮಾರಾಟ ಮಾಡಬಹುದು. ಇಂಡಿಯನ್ ರಿಯಾಲ್ಟಿ ಎಂಬ ರಿಯಲ್ ಎಸ್ಟೇಟ್ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಗ್ರಾಹಕರಿಗೆ ತಮ್ಮ ಮನೆಗಳನ್ನು ತ್ವರಿತ ಹಾಗೂ ಸಮರ್ಥವಾದ ರೀತಿಯಲ್ಲಿ ಮಾರಾಟ ಮಾಡಲು ನೆರವು ನೀಡುತ್ತಿದೆ. ಇಂಡಿಯನ್ ರಿಯಾಲ್ಟಿ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ನಿಮ್ಮ ಮನೆಯನ್ನು ತ್ವರಿತವಾಗಿ ಮಾರಾಟ ಮಾಡಲು ಈ ಕೆಳಗಿನ 10 ಟಿಪ್ಸ್ ಅನುಸರಿಸಿ.

1.ಉತ್ತಮ ಗುಣಮಟ್ಟದ ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ: ನೋಡಿದ ತಕ್ಷಣ ಮೂಡುವ ಮೊದಲ ಅಭಿಪ್ರಾಯ ಅತ್ಯಂತ ಮುಖ್ಯ. ಇದನ್ನು ಇಂಡಿಯನ್ ರಿಯಾಲ್ಟಿ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ನಿಮ್ಮಆಸ್ತಿಯ ಉತ್ತಮ ಗುಣಮಟ್ಟದ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಗ್ರಾಹಕರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸಬಹುದು. ಹಾಗೆಯೇ ಆಸ್ತಿ ಜೊತೆಗೆ ಒಂದು ಭಾವನಾತ್ಮಕ ಸಂಬಂಧವನ್ನು ಕೂಡ ಬೆಸೆಯಬಲ್ಲದು.

2.ವರ್ಚುವಲ್ ಟೂರ್ಸ್: ಇಂಡಿಯನ್ ರಿಯಾಲ್ಟಿ ಖರೀದಿದಾರರಿಗೆ ನಿಮ್ಮ ಮನೆ ಅಥವಾ ಆಸ್ತಿಯನ್ನು ಅಲ್ಲಿಗೆ ಭೇಟಿ ನೀಡದೆ ಆನ್ ಲೈನ್ ನಲ್ಲೇ ವೀಕ್ಷಿಸಲು ಅವಕಾಶ ಕಲ್ಪಿಸುತ್ತದೆ. ಕೋವಿಡ್ -19 ಪೆಂಡಾಮಿಕ್ ಬಳಿಕ ಈ ಡಿಜಿಟಲ್ ಮಾರ್ಕೆಟಿಂಗ್ ತಂತ್ರ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಅಲ್ಲದೆ, ಇದು ನಿಮ್ಮ ಮನೆಯನ್ನು ಹೆಚ್ಚಿನ ಗ್ರಾಹಕರಿಗೆ ತೋರಿಸಲು ತಗಲುವ ಶ್ರಮ ಹಾಗೂ ಸಮಯವನ್ನು ಉಳಿಸುತ್ತದೆ.

ರಿಯಲ್ ಎಸ್ಟೇಟ್‌ನಲ್ಲಿ ಕಂಟೆಂಟ್‌ ಮಾರ್ಕೆಟಿಂಗ್‌ನ ಶಕ್ತಿ ಏನು..? ವಿವರ ಹೀಗಿದೆ.. (INDIAN REALTY)

3.ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್: ಇಂಡಿಯನ್ ರಿಯಾಲ್ಟಿ ವಿಸ್ತಾರವಾದ ಸೋಷಿಯಲ್ ಮೀಡಿಯಾ ನೆಟ್ ವರ್ಕ್ ಹೊಂದಿದೆ. ಇದು ನಿಮ್ಮ ಆಸ್ತಿಯನ್ನು ದೊಡ್ಡ ಪ್ರಮಾಣದ ಗ್ರಾಹಕರಿಗೆ ತಲುಪಿಸಲು ನೆರವು ನೀಡುತ್ತದೆ. ನಿರ್ದಿಷ್ಟ ವರ್ಗದ ಜನರನ್ನು ತಲುಪಲು ಫೇಸ್ ಬುಕ್, ಇನ್ ಸ್ಟಾಗ್ರಾಮ್ ಹಾಗೂ ಲಿಂಕ್ಡ್ ಇನ್ ಮಾದರಿಯ ಸೋಷಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಗಳನ್ನು ಬಳಸಬಹುದು.

4.ಆನ್ ಲೈನ್ ಜಾಹೀರಾತು: ಆನ್ ಲೈನ್ ಜಾಹೀರಾತುಗಳು ಆನ್ ಲೈನ್ ನಲ್ಲಿ ಆಸ್ತಿಗಳಿಗಾಗಿ ಹುಡುಕಾಟ ನಡೆಸುವ ಖರೀದಿದಾರರನ್ನು ತಲುಪಲು ಇರುವ ಪರಿಣಾಮಕಾರಿ ಮಾರ್ಗವಾಗಿದೆ. ಇಂಡಿಯನ್ ರಿಯಾಲ್ಟಿ ಸೂಕ್ತವಾದ ಗ್ರಾಹಕರನ್ನು ತಲುಪಲು ಗೂಗಲ್ ಆಡ್ ವರ್ಕ್ಸ್ ಹಾಗೂ ಸೋಷಿಯಲ್ ಮೀಡಿಯಾ ಜಾಹೀರಾತು ಮುಂತಾದ ವಿವಿಧ ಜಾಹೀರಾತು ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಳ್ಳುತ್ತದೆ.

5.ಸರ್ಚ್ ಎಂಜಿನ್ ಅಪ್ಟಿಮೈಸೇಷನ್  (SEO):ಇಂಡಿಯನ್ ರಿಯಾಲ್ಟಿ ಎಸ್ ಇಒ ತಂತ್ರಗಳು ಗೂಗಲ್ ಮುಂತಾದ ಸರ್ಚ್ ಇಂಜಿನ್ ನಲ್ಲಿ ನಿಮ್ಮ ಆಸ್ತಿ ಮೇಲಿನ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಬಲ್ಲವು. ಈ ತಂತ್ರ ಹೆಚ್ಚಿನ ಖರೀದಿದಾರರಿಗೆ ಸುಲಭ ಹಾಗೂ ತ್ವರಿತವಾಗಿ ನಿಮ್ಮ ಆಸ್ತಿಯನ್ನು ಪತ್ತೆ ಹಚ್ಚಲು ನೆರವು ನೀಡುತ್ತದೆ.

6.ಇ-ಮೇಲ್ ಮಾರ್ಕೆಟಿಂಗ್: ಒಂದೇ ಮಾದರಿಯ ಆಸ್ತಿಯಲ್ಲಿ ಆಸಕ್ತಿ ತೋರಿರುವ ಖರೀದಿದಾರರನ್ನು ಗುರಿಯಾಗಿಸಲು ಇಂಡಿಯನ್ ರಿಯಾಲ್ಟಿಯ ಇ-ಮೇಲ್ ಮಾರ್ಕೆಟಿಂಗ್ ಆಂದೋಲನವನ್ಉ ಬಳಸಿಕೊಳ್ಳಬಹುದು. ಈ ತಂತ್ರ ಟಾರ್ಗೆಟ್ ಅಡಿಯನ್ಸ್ ಅನ್ನು ತಲುಪಲು ನೆರವು ನೀಡುತ್ತದೆ. ಅಲ್ಲದೆ, ಸೂಕ್ತವಾದ ಖರೀದಿದಾರರನ್ನು ಪತ್ತೆ ಹಚ್ಚುವ ಅವಕಾಶವನ್ನು ಹೆಚ್ಚಿಸುತ್ತದೆ.

7.ಇಂಟೀರಿಯರ್ ಡಿಸೈನ್ : ಖರೀದಿದಾರರಿಗೆ ನಿಮ್ಮ ಮನೆ ಆಕರ್ಷಕ ಹಾಗೂ ಗಮನ ಸೆಳೆಯುವಂತೆ ಕಾಣಲು ಇಂಡಿಯನ್ ರಿಯಾಲ್ಟಿ ಇಂಟೀರಿಯರ್ ಡಿಸೈನ್ ಸೇವೆಗಳನ್ನು ಒದಗಿಸುತ್ತದೆ. ಈ ತಂತ್ರ ಆಸ್ತಿಯ ಜೊತೆಗೆ ಅವರಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ನೆರವು ನೀಡುವ ಜೊತೆಗೆ ಬೇಗ ಮಾರಾಟವಾಗಲು ನೆರವು ನೀಡುತ್ತದೆ.

ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಶೇ.10-30ರಷ್ಟು ಏರಿಕೆ ನಿರೀಕ್ಷೆ;ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೊಡೆತ?

8.ಬೆಲೆ ತಂತ್ರ: ಇಂಡಿಯನ್ ರಿಯಾಲ್ಟಿ ಸ್ಥಳೀಯ ಮಾರುಕಟ್ಟೆ ಕುರಿತು ಆಳವಾದ ಜ್ಞಾನ ಹೊಂದಿದ್ದು, ನಿಮ್ಮಆಸ್ತಿಗೆ ಸೂಕ್ತವಾದ ಬೆಲೆ ನಿರ್ಧರಿಸಲು ನೆರವು ನೀಡುತ್ತದೆ. ಈ ತಂತ್ರ ಹೆಚ್ಚಿನ ಖರೀದಿದಾರರನ್ನು ಸೆಳೆಯಲು ಹಾಗೂ ತುರ್ತು ಅಗತ್ಯವಿರುವ ಪರಿಸ್ಥಿತಿಯನ್ನು ಸೃಷ್ಟಿಸಲು ನೆರವು ನೀಡುತ್ತದೆ.

9.ಒಪನ್ ಹೌಸ್ ಕಾರ್ಯಕ್ರಮ: ಇಂಡಿಯನ್ ರಿಯಾಲ್ಟಿ ಆಸಕ್ತ ಗ್ರಾಹಕರಿಗೆ ನಿಮ್ಮ ಆಸ್ತಿಗೆ ಭೇಟಿ ನೀಡಲು ಹಾಗೂ ಅದರ ಅನುಭವವನ್ನು ವೈಯಕ್ತಿಕವಾಗಿ ಪಡೆಯಲು ನೆರವು ನೀಡಲಿದೆ. ಈ ತಂತ್ರವು ಆಸಕ್ತ ಖರೀದಿದಾರರ ಜೊತೆಗೆ ಮಾತುಕತೆ ನಡೆಸಲು ಹಾಗೂ ಅವರ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ಕಲ್ಪಿಸುತ್ತದೆ.

10.ಫಾಲೋಅಪ್ ಹಾಗೂ ಸಂವಹನ: ಈ ಸಂಪೂರ್ಣ ಪ್ರಕ್ರಿಯೆ ಸಂದರ್ಭದಲ್ಲಿ ಇಂಡಿಯನ್ ರಿಯಾಲ್ಟಿ ಅಸಕ್ತ ಖರೀದಿದಾರರಿಂದ ಸೂಕ್ತ ಅಭಿಪ್ರಾಯಗಳನ್ನು ಸಂಗ್ರಹಿಸುವ ಜೊತೆಗೆ ಆ ಕುರಿತು ನಿಮಗೆ ಮಾಹಿತಿ  ನೀಡುತ್ತಲಿರುತ್ತದೆ. ಈ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳು ಆಸಕ್ತ ಖರೀದಿದಾರರಲ್ಲಿ ನಂಬಿಕೆ ಹಾಗೂ ಆತ್ಮವಿಶ್ವಾಸ ಮೂಡಿಸಲು ನೆರವು ನೀಡುವ ಮೂಲಕ ತ್ವರಿತವಾಗಿ ಆಸ್ತಿ ಮಾರಾಟವಾಗುವಂತೆ ಮಾಡಬಲ್ಲದು. 

ಒಟ್ಟಾರೆ ಇಂಡಿಯನ್ ರಿಯಾಲ್ಟಿ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳು ನಿಮ್ಮ ಮನೆಯನ್ನು ತ್ವರಿತವಾಗಿ ಹಾಗೂ ಕಡಿಮೆ ಒತ್ತಡದೊಂದಿಗೆ ಮಾರಾಟ ಮಾಡಲು ನಿಮಗೆ ನೆರವು ನೀಡಲಿವೆ. ಉತ್ತಮ ಗುಣಮಟ್ಟದ ಫೋಟೋಗ್ರಫಿ ಹಾಗೂ ವರ್ಚುವಲ್ ಟೂರ್ ನಿಂದ ಹಿಡಿದು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಹಾಗೂ ಫಾಲೋ ಅಪ್ ತನಕ, ಇಂಡಿಯನ್ ರಿಯಾಲ್ಟಿ ನಿಮ್ಮ ಮನೆ ಮಾರಾಟವನ್ನು ಯಶಸ್ವಿಗೊಳಿಸುವ ವಿಚಾರದಲ್ಲಿ ಅನುಭವ ಹೊಂದಿದೆ. ನಿಮ್ಮ ಮನೆಯನ್ನು ತ್ವರಿತವಾಗಿ ಮಾರಾಟ ಮಾಡಲು ಅವರು ಹೇಗೆ ನೆರವು ನೀಡುತ್ತಾರೆ ಹಾಗೂ ಅವರ ಸೇವೆಗಳ ಬಗ್ಗೆ ಹೆಚ್ಚು ತಿಳಿಯಲು ಇಂದೇ ಇಂಡಿಯನ್ ರಿಯಾಲ್ಟಿ ಸಂಸ್ಥೆಯನ್ನು ಸಂಪರ್ಕಿಸಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!