ಜುಲೈನಲ್ಲಿ ಭರ್ಜರಿ ₹1.96 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

Kannadaprabha News   | Kannada Prabha
Published : Aug 02, 2025, 05:23 AM IST
GST

ಸಾರಾಂಶ

ಜುಲೈ ತಿಂಗಳಿನಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.96 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಇದು ಕಳೆದ ಸಲಕ್ಕಿಂತ ಶೇ.7.5ರಷ್ಟು ಹೆಚ್ಚಳ.

  ನವದೆಹಲಿ :  ಜುಲೈ ತಿಂಗಳಿನಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.96 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಇದು ಕಳೆದ ಸಲಕ್ಕಿಂತ ಶೇ.7.5ರಷ್ಟು ಹೆಚ್ಚಳ.

ಇದೇ ವೇಳೆ, ಮಹಾರಾಷ್ಟ್ರ 30,590 ಕೋಟಿ ರು, ಕರ್ನಾಟಕ: 13,967 ಕೋಟಿ ರು. ಹಾಗೂ ಗುಜರಾತ್: 11,358 ಕೋಟಿ ರು. ಜಿಎಸ್ಟಿ ಸಂಗ್ರಹಿಸಿ ಮೊದಲ 3 ಸ್ಥಾನ ಪಡೆದಿವೆ.

ಕಳೆದ ವರ್ಷ ಜುಲೈನಲ್ಲಿ ಜಿಎಸ್ಟಿ ಸಂಗ್ರಹ ಮೊತ್ತವು 1.82 ಲಕ್ಷ ಕೋಟಿ ರು.ನಷ್ಟಿತ್ತು. ಕಳೆದ ತಿಂಗಳು 1.84 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.

ಜಿಎಸ್‌ಟಿ ಸಂಗ್ರಹದಲ್ಲಿ ದೇಶೀಯ ಸಂಗ್ರವು ಶೇ.6.7ರಷ್ಟು ಹೆಚ್ಚಳವಾಗಿ 1.43 ಲಕ್ಷ ಕೋಟಿ ರು., ಆಮದಿನ ಮೇಲಿನ ತೆರಿಗೆಯಿಂದ 52,712 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದೇ ವೇಳೆ ಜಿಎಸ್ಟಿ ರೀಫಂಡ್‌ಗಳು ಶೇ.66.8ರಷ್ಟು ಏರಿಕೆಯಾಗಿ 27,147 ಕೋಟಿ ರು. ರೀಫಂಡ್‌ ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!
Swiggy Report 2025: ಸೆಕೆಂಡಿಗೆ 3ರಂತೆ, 93 ಮಿಲಿಯನ್ ಬಿರಿಯಾನಿ ಆರ್ಡರ್‌ ಬಂದಿವೆ! ಬೆಚ್ಚಿಬೀಳಿಸುತ್ತೆ ವರದಿ!