Union Budget 2022 : ಹೊಸ ಇವಿಎಂಗಳ ಖರೀದಿಗೆ 1525 ಕೋಟಿ ಮೀಸಲು, ಸಬ್ಸಿಡಿಗಳಲ್ಲಿ ಇಳಿಕೆ!

By Suvarna News  |  First Published Feb 1, 2022, 8:47 PM IST

ಹೊಸ ಇವಿಎಂಗಳ ಖರೀದಿಗೆ 1525 ಕೋಟಿ ರೂ.
ಹಳೆಯ ಹಾಗೂ ಹಾಳಾಗಿರುವ ಇವಿಎಂಗಳ ನಾಶ
ಆಹಾರ, ಪೆಟ್ರೋಲಿಯಂ ಮತ್ತು ರಸಗೊಬ್ಬರಗಳ ಸಬ್ಸಿಡಿ ಹಣದಲ್ಲಿ ಇಳಿಕೆ
 


ನವದೆಹಲಿ (ಫೆ.1): ಹೊಸ ವಿದ್ಯುನ್ಮಾನ ಮತಯಂತ್ರಗಳ ಖರೀದಿ (electronic voting machine) ಮತ್ತು ಬಳಕೆಯಲ್ಲಿಲ್ಲದ ಮತಯಂತ್ರಗಳ ನಾಶಕ್ಕಾಗಿ ಚುನಾವಣಾ ಆಯೋಗಕ್ಕೆ ಹಣ ಒದಗಿಸಲು 2022-23ರ ಕೇಂದ್ರ ಬಜೆಟ್‌ನಲ್ಲಿ ಕಾನೂನು ಸಚಿವಾಲಯಕ್ಕೆ(Law Ministr) 1,525 ಕೋಟಿ ರೂ. ಮೀಸಲಿಡಲಾಗಿದೆ. ಅದರೊಂದಿಗೆ ಮುಂಬರುವ ಲೋಕಸಭೆ ಚುನಾವಣೆಗೆ (Lok Sabha polls) ಹಾಗೂ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಾಗಿ ಸಚಿವಾಲಯಕ್ಕೆ ಹಣ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಪ್ರಮುಖ ರಾಜ್ಯಗಳ ಚುನಾವಣೆಗಳು ಹೊಸ್ತಿಲಲ್ಲಿ ಇರುವಾಗಲೇ ಕೇಂದ್ರ ನೀಡುವ ಸಬ್ಸಿಡಿಗಳಲ್ಲಿ (subsidies slashed) ಶೇ. 27ರಷ್ಟು ಕಡಿಮೆ ಮಾಡಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕೇಂದ್ರ ಕಾನೂನು ಸಚಿವಾಲಯದಲ್ಲಿನ ಶಾಸಕಾಂಗ ಇಲಾಖೆಯು ಚುನಾವಣಾ ಆಯೋಗ ಮತ್ತು ಚುನಾವಣಾ ಕಾನೂನುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ನೋಡಲ್ ಏಜೆನ್ಸಿಯಾಗಿದೆ. ಬ್ಯಾಲೆಟ್ ಯೂನಿಟ್‌ಗಳು, ಕಂಟ್ರೋಲ್ ಯೂನಿಟ್‌ಗಳು ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ ಯೂನಿಟ್‌ಗಳು (ವಿವಿಪ್ಯಾಟ್ ಅಥವಾ ಪೇಪರ್ ಟ್ರಯಲ್ ಯಂತ್ರಗಳು) ಮತ್ತು ವಿದ್ಯುನ್ಮಾನ ಮತಯಂತ್ರಗಳ ಮೇಲಿನ ಪೂರಕ ವೆಚ್ಚ ಮತ್ತು ಬಳಕೆಯಲ್ಲಿಲ್ಲದ ಮತಯಂತ್ರಗಳ ನಾಶಕ್ಕಾಗಿ ಚುನಾವಣಾ ಆಯೋಗಕ್ಕೆ ಹಣವನ್ನು ಒದಗಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ 1525 ಕೋಟಿ ರೂ. ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಒಂದು ಇವಿಎಂಗಾಗಿ ಒಂದು ಕಂಟ್ರೋಲ್ ಯೂನಿಟ್ ಮತ್ತು ಕನಿಷ್ಠ ಒಂದು ಬ್ಯಾಲೆಟ್ ಯೂನಿಟ್ ಇರುತ್ತದೆ. ಕಟ್ಟುನಿಟ್ಟಾದ ಪ್ರೋಟೋಕಾಲ್ ಅನ್ನು ಅನುಸರಿಸಿ, ಹಳೆಯ ಇವಿಎಂಗಳನ್ನು ತಜ್ಞರ ಸಮಿತಿಯ ಮೇಲ್ವಿಚಾರಣೆಯಲ್ಲಿ ನಾಶಪಡಿಸಲಾಗುತ್ತದೆ. ಇವಿಎಂ ಸರಾಸರಿ 15 ವರ್ಷಗಳ ಅವಧಿಯ ಕಾಲ ಬಳಕೆ ಮಾಡಬಹುದಾಗಿದೆ.

ಚುನಾವಣಾ ಅಂಗಗಳ ಅಡಿಯಲ್ಲಿ 292 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇದರಲ್ಲಿ ಲೋಕಸಭಾ ಚುನಾವಣೆಗೆ 180 ಕೋಟಿ ರೂಪಾಯಿ ಹಾಗೂ ಮತದಾರರ ಗುರುತಿನ ಚೀಟಿಗಾಗಿ 18 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಕಳೆದ ಲೋಕಸಭೆ ಚುನಾವಣೆ 2019ರಲ್ಲಿ ನಡೆದಿತ್ತು.

ಸಬ್ಸಿಡಿಗಳಲ್ಲಿ ಇಳಿಕೆ: ಕೇಂದ್ರ ಬಜೆಟ್ 2022-23 ರಲ್ಲಿ ಪೆಟ್ರೋಲಿಯಂ, ಆಹಾರ ಮತ್ತು ರಸಗೊಬ್ಬರಗಳಿಗೆ (petroleum, food and fertilisers) ಕೇಂದ್ರವು ನೀಡುವ ಸಬ್ಸಿಡಿಗಳ ಹಂಚಿಕೆಯನ್ನು ಶೇಕಡಾ 26.6 ರಷ್ಟು ಕಡಿಮೆ ಮಾಡಿದೆ. ಪ್ರಮುಖ ರಾಜ್ಯಗಳ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿರುವಾಗ, ಕೇಂದ್ರ ಸರ್ಕಾರ ಮಾಡಿರುವ ಈ ಕ್ರಮವು ಅಚ್ಚರಿಗೆ ಕಾರಣವಾಗಿದೆ.

ಬಜೆಟ್ ಕುರಿತಾದ ಮತ್ತಷ್ಟು ಸುದ್ದಿಗಳು, ಅಭಿಪ್ರಾಯಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ 2022-23 ಹಣಕಾಸು ವರ್ಷದಲ್ಲಿ ಕೇಂದ್ರ ನೀಡುವ ಸಬ್ಸಿಡಿಯು 3.18 ಲಕ್ಷ ಕೋಟಿ ಇರಲಿದೆ ಎಂದು ಅಂದಾಜಿಸಿದ್ದಾರೆ. ಇದು 2021-22ರ ಹಣಕಾಸು ವರ್ಷದಲ್ಲಿ ನೀಡಲಾದ ಅಂದಾಜು ಸಬ್ಸಿಡಿಯಲ್ಲಿ ಶೇ. 26.6 ರಷ್ಟು ಇಳಿಕೆ ಎನ್ನಲಾಗಿದೆ. 2022ರ ಹಣಕಾಸು ವರ್ಷದಲ್ಲಿ 4.33 ಲಕ್ಷ ಕೋಟಿ ಸಬ್ಸಿಡಿ ನೀಡುವ ಅಂದಾಜು ಮಾಡಲಾಗಿತ್ತು. 2022ರಲ್ಲಿ ಹಾಲಿ ಘೋಷಣೆಯಾಗಿರುವ ಪಂಚ ರಾಜ್ಯಗಳ ಚುನಾವಣೆಯೊಂದಿಗೆ ಇನ್ನೂ ಎರಡು ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಸಾಮಾನ್ಯವಾಗಿ ಸರ್ಕಾರವು ರೈತ ಸಮುದಾಯ ಹಾಗೂ ಕೆಳ ಮಧ್ಯಮವರ್ಗದ ಕೋಪಕ್ಕೆ ಗುರಿಯಾಗುವಂಥ ಯಾವುದೇ ಕ್ರಮಗಳಿಗೆ ಕೈಹಾಕವುದಿಲ್ಲ. ಈ ನಡುವೆ ಕೇಂದ್ರ ಸರ್ಕಾರ ಸಬ್ಸಿಡಿ ಅಂದಾಜಿನಲ್ಲಿ ಇಳಿಕೆ ಘೋಷಣೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. 2022ರ ಹಣಕಾಸು ವರ್ಷದಲ್ಲಿ ಸಬ್ಸಿಡಿಗಳಿಗೆ ಆರಂಭಿಕ ಬಜೆಟ್ ಹಂಚಿಕೆ ರೂ 3.36 ಲಕ್ಷ ಕೋಟಿ ಆಗಿತ್ತು, ಆದರೆ ಇದು ಆಹಾರ ಸಬ್ಸಿಡಿಗಳು ಹೆಚ್ಚಾದಂತೆ ರೂ 4.33 ಲಕ್ಷ ಕೋಟಿಗೆ ಏರಿದ್ದವು.

Union Budget 2022 ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ
ಹಾಲಿ ಬಜೆಟ್ ನಲ್ಲಿ ಆಹಾರ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. 2022ರ ಹಣಕಾಸು ವರ್ಷದಲ್ಲಿ 2.86 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಆಹಾರ ಸಬ್ಸಿಡಿ ನೀಡಲಾಗಿದ್ದರೆ, ಹಾಲಿ ಬಜೆಟ್ ನಲ್ಲಿ ಇದರ ಗಾತ್ರವನ್ನು 2.06 ಲಕ್ಷ ಕೋಟಿ ರೂಪಾಯಿಗೆ ಇಳಿಸಲಾಗಿದೆ.

click me!