Union Budget 2022: ರಕ್ಷಣಾ ಕ್ಷೇತ್ರಕ್ಕೆ 5.25 ಲಕ್ಷ ಕೋಟಿ ; ಸ್ವ ರಕ್ಷಣೆಗೆ ಆತ್ಮನಿರ್ಭರ ಭಾರತ ಬಳಕೆ, ಸಂಶೋಧನೆಗೆ ಒತ್ತು

By Suvarna News  |  First Published Feb 1, 2022, 7:33 PM IST

*ರಕ್ಷಣಾ ಸಚಿವಾಲಯಕ್ಕೆ ಈ ಬಾರಿ  ಕಳೆದ ಸಾಲಿಗಿಂತ 47,000 ಕೋಟಿ ರೂ. ಹೆಚ್ಚುವರಿ ಅನುದಾನ
*ರಕ್ಷಣಾ ಪಡೆಗಳ ಆಧುನೀಕರಣಕ್ಕೆ1.52ಲಕ್ಷ ಕೋಟಿ ರೂ. 
*ಶೇ. 68 ಬಂಡವಾಳ ದೇಶೀಯ ಕೈಗಾರಿಕೆಗಳಿಗಾಗಿಯೇ ಮೀಸಲು


ನವದೆಹಲಿ (ಫೆ.1): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರ ಭಾರತ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದು,  ಒಟ್ಟು 5.25 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ರಕ್ಷಣಾ ಸಚಿವಾಲಯಕ್ಕೆ ಈ ಬಾರಿ  ಕಳೆದ ಸಾಲಿಗಿಂತ 47,000 ಕೋಟಿ ರೂ. ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಕಳೆದ ಸಾಲಿನಲ್ಲಿ 4.78 ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಇದು ಕಳೆದ ಸಾಲಿಗಿಂತ ಸುಮಾರು ಶೇ.10ರಷ್ಟು ಹೆಚ್ಚಿದೆ. 

ರಕ್ಷಣಾ ಪಡೆಗಳ ಆಧುನೀಕರಣ
ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಬಂಡವಾಳ ಗಳಿಕೆಗಾಗಿಯೇ ರಕ್ಷಣಾ ಸಚಿವಾಲಯ 1.52ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಈ ಮೊತ್ತದಲ್ಲಿ ಶೇ.68ರಷ್ಟನ್ನು ದೇಶೀಯ ಸಂಸ್ಥೆಗಳಿಂದಲೇ ಶಸ್ತ್ರಾಸ್ತ್ರಗಳ ಖರೀದಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಮೀಸಲಿಟ್ಟಿರೋ ಅನುದಾನ ಕಳೆದ ಸಾಲಿಗಿಂತ 1.35 ಲಕ್ಷ ಕೋಟಿ ರೂ. ಅಂದ್ರೆ ಶೇ.13ರಷ್ಟು ಹೆಚ್ಚಿದೆ. ಕಳೆದ ಸಾಲಿನಲ್ಲಿ ಇದಕ್ಕಾಗಿ ರಕ್ಷಣಾ ಸಚಿವಾಲಯ 2.33 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಈ ವರ್ಷ 2.39 ಲಕ್ಷ ಕೋಟಿ ರೂ. ಇಡಲಾಗಿದೆ.

Latest Videos

undefined

ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ 

ಆತ್ಮನಿರ್ಭರ ಭಾರತಕ್ಕೆ ಒತ್ತು
ರಕ್ಷಣಾ ಪಡೆಗಳ ಸಶಸ್ತ್ರೀಕರಣಕ್ಕೆ ರಫ್ತಿನ ಮೇಲಿನ ಅವಲಂಬನೆ ತಗ್ಗಿಸಿ ಆತ್ಮನಿರ್ಭರ ಭಾರತದಡಿಯಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದಕ್ಕಾಗಿ 2022-23ನೇ ಸಾಲಿನಲ್ಲಿ ಶೇ. 68 ಬಂಡವಾಳವನ್ನು ದೇಶೀಯ ಕೈಗಾರಿಕೆಗಳಿಗಾಗಿಯೇ ಮೀಸಲಿಡಲಾಗಿದೆ. ಇದರ ಪ್ರಮಾಣ 2021-22ನೇ ಸಾಲಿನಲ್ಲಿ ಶೇ.58 ರಷ್ಟಿತ್ತು. 

ಸಂಶೋಧನೆಗೆ ಮಹತ್ವ 
ರಕ್ಷಣಾ ಕ್ಷೇತ್ರದಲ್ಲಿನ ಸಂಶೋಧನೆಗೂ ಬಜೆಟ್ ನಲ್ಲಿ ಮಹತ್ವ ನೀಡಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿನ ಸಂಶೋಧನೆಗಾಗಿರೋ ಬಜೆಟ್ ನ ಶೇ.25ರಷ್ಟು ಭಾಗವನ್ನು ಕೈಗಾರಿಕೆ, ಸ್ಟಾರ್ಟ್ ಅಪ್ ಗಳಿಗೆ ಮೀಸಲಿಡಲಾಗೋದು ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ಎಸ್ ಪಿವಿ ಮಾದರಿ ಮೂಲಕ ಖಾಸಗಿ ಕೈಗಾರಿಕೆಗಳು ಸೇನೆಗೆ ಸಂಬಂಧಿಸಿದ ಸಾಮಗ್ರಿಗಳ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ಡಿಆರ್ ಡಿಒ  ಹಾಗೂ ಇತರ ಸಂಸ್ಥೆಗಳ ಜೊತೆಗೆ ತೊಡಗಿಕೊಳ್ಳಲು ಉತ್ತೇಜನ ನೀಡಲಾಗೋದು ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ಪರೀಕ್ಷೆ ಹಾಗೂ ಪ್ರಮಾಣೀಕರಣಕ್ಕಾಗಿ ಸ್ವತಂತ್ರ ಸಂಸ್ಥೆಯೊಂದನ್ನು ಸ್ಥಾಪಿಸೋ ಬಗ್ಗೆ ಕೂಡ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. 

ಪಿಂಚಣಿಗೆ 1.19 ಲಕ್ಷ ಕೋಟಿ ರೂ.
ರಕ್ಷಣಾ ಸಿಬ್ಬಂದಿಗಳ ಪಿಂಚಣಿಗಾಗಿ ಸಚಿವಾಲಯದ ಬಜೆಟ್ ನಲ್ಲಿ 1.19 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. 

Union Budget 2022: ಕ್ರೀಡಾ ಕ್ಷೇತ್ರಕ್ಕೆ ಅತಿಹೆಚ್ಚು ಬಜೆಟ್ ಒದಗಿಸಿದ ಕೇಂದ್ರ ಸರ್ಕಾರ..!

ರಕ್ಷಣಾ ಸಚಿವರ ಶ್ಲಾಘನೆ 
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟರ್ ಮೂಲಕ ರಕ್ಷಣಾ ಕ್ಷೇತ್ರ ಸೇರಿದಂತೆ ಅನೇಕ ವಲಯಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ. 'ರಕ್ಷಣಾ  ಶಸ್ತ್ರಾಸ್ತ್ರಗಳ  ಸಂಗ್ರಹಣೆ  ಬಂಡವಾಳದಲ್ಲಿ ಶೇ.68ರಷ್ಟು ಸ್ಥಳೀಯವಾಗಿ ಶಸ್ತ್ರಾಸ್ತ್ರಗಳ ಖರೀದಿಗೆ ಮೀಸಲಿಡಲಾಗಿದೆ. ಇದು ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮವಾಗಿದ್ದು, ದೇಶೀಯ ರಕ್ಷಣಾ ಕೈಗಾರಿಕೆಗಳಿಗೆ ಇದು ಖಂಡಿತವಾಗಿಯೂ ಉತ್ತೇಜನ ನೀಡಲಿದೆ' ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ. ಇನ್ನು ಸ್ಟಾರ್ಟ್ ಅಪ್ ಹಾಗೂ ಖಾಸಗಿ ಸಂಸ್ಥೆಗಳಿಗೆ ಸಂಶೋಧನೆ ಹಾಗೂ ಅಭಿವೃದ್ಧಿ ಬಜೆಟ್ ನಲ್ಲಿ ಶೇ.25ರಷ್ಟು ಅನುದಾನ ಮೀಸಲಿಡೋ ಪ್ರಸ್ತಾವನೆ ಕೂಡ ಅತ್ಯುತ್ತಮ ಕ್ರಮವಾಗಿದೆ ಎಂದು ರಾಜನಾಥ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 
 

click me!