Union Budget 2022 ಆರ್ಥಿಕ ಸಮೀಕ್ಷೆಯಲ್ಲಿ ಶೇ.8.5 ಜಿಡಿಪಿ ಪ್ರಗತಿ ಸೂಚಿಸಿದ ಬೆನ್ನಲ್ಲೇ ಷೇರು ಸೂಚ್ಯಂಕ 1,000 ಅಂಕ ಏರಿಕೆ!

By Suvarna News  |  First Published Jan 31, 2022, 2:15 PM IST
  • ಬಜೆಟ್ ಅಧಿವೇಶನದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ
  • ಷೇರು ಸೂಚ್ಯಂಕದಲ್ಲಿ 1,000 ಅಂಕ  ಏರಿಕೆ
  • ನಿಫ್ಟಿ ಸೂಚ್ಯಂಕ  17,381.5ಕ್ಕೆ ಏರಿಕೆ, ಸೆನ್ಸೆಕ್ಸ್ 58,169.4 ಅಂಕ

ನವದೆಹಲಿ(ಜ.31):  ಕೇಂದ್ರ ಬಜೆಟ್ ಅಧಿವೇಶನದ(union Budget 2022) ಬೆನ್ನಲ್ಲೇ ಷೇರು ಮಾರುಕಟ್ಟೆ ಭಾರಿ ಏರಿಕೆ ಕಂಡಿದೆ. ನಿರ್ಮಲಾ ಸೀತಾರಾಮನ್ ತಮ್ಮ ಆರ್ಥಿಕ ಸಮೀಕ್ಷೆಯಲ್ಲಿ ಭಾರತದ ಜಿಡಿಪಿಯನ್ನು ಶೇಕಡಾ 8.5 ರಷ್ಟು ಏರಿಕೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ನಿಫ್ಟಿ ಹಾಗೂ ಸೆನ್ಸೆಕ್ಸ್ ಷೇರು ಸೂಚ್ಯಂಕ(stock market) ಸರಿಸುಮಾರು 1,000 ಅಂಕ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ.

ಇಂದು(ಜ.31) ನಿಫ್ಟಿ 50 ಹಾಗೂ ಸೆನ್ಸೆಕ್ಸ್(nifty 50 and sensex) ಅಂಕ ಏರಿಕೆಯತ್ತ ಸಾಗಿದೆ. ಕೇಂದ್ರ ಬಜೆಟ್ ಅಧಿವೇಶನ(Union Budget session) ಬೆನ್ನಲ್ಲೇ ನಿಫ್ಟಿ 50 ದಿಢೀರ್ 279 ಅಂಕ ಏರಿಕೆ ಕಂಡಿದೆ. ನಿಫ್ಟಿ 50 ಶೇಕಡಾ 1.6 ರಷ್ಟು ಏರಿಕೆ ಕಂಡಿದೆ. ಈ ಮೂಲಕ ನಿಫ್ಟಿ 50 ಒಟ್ಟು  17,381.5 ಅಂಕಕ್ಕೆ ಏರಿಕೆಯಾಗಿದೆ. ಇನ್ನು BSE ಸೆನ್ಸೆಕ್ಸ್  963 ಅಂಕ ಏರಿಕೆಯಾಗಿದೆ. ಅಂದರೆ ಶೇಕಡಾ 1.7ರಷ್ಟು ಏರಿಕೆ ಕಾಣುವ ಮೂಲಕ ಒಟ್ಟು 58,169.4 ಅಂಕಕ್ಕೆ ತಲುಪಿದೆ.

Latest Videos

Economic Survey 2022:ಪ್ರಸಕ್ತ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 9.2 ನಿರೀಕ್ಷೆ

2022-23ರಲ್ಲಿ ಆರ್ಥಿಕ ಬೆಳವಣಿಗೆ ಶೇಕಡಾ 8 ರಿಂದ 8.5ಕ್ಕೆ ಸೂಚಿಸಲಾಗಿದೆ. ಇದು 202-22ರಲ್ಲಿ ನಿರೀಕ್ಷಿತ ಪ್ರತಿಶತ 9.2 ರ ಆರ್ಥಿಕ ಬೆಳವಣಿಗೆಯಿಂದ ಕಡಿಮೆಯಾಗಿದ್ದರೂ ಷೇರು ಮಾರುಕಟ್ಟೆ ಹೊಸ ಚೈತನ್ಯದೊಂದಿಗೆ ಏರಿಕೆಯಾಗಿದೆ. ಈ ಮೂಲಕ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿದೆ.

ನಿಫ್ಟಿ 50 ಫೆಬ್ರವರಿ ಒಪ್ಪಂದದಲ್ಲಿ ಬಡ್ಡಿ ಶೇಕಡಾ 9.75 ಮಿಲಿಯನ್‌ಗೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.   ಬಜೆಟ್‌ಗೆ ಮುಂಚಿತವಾಗಿ, ವಿದೇಶಿ ಬಂಡವಾಳ ಹೂಡಿಕೆದಾರರು ನಿಫ್ಟಿ 50 ರ ಫೆಬ್ರುವರಿ ಫ್ಯೂಚರ್ಸ್‌ನಲ್ಲಿ 50,000 ಕ್ಕೂ ಹೆಚ್ಚು ಕರಾರುಗಳ ನಿವ್ವಳ ಶಾರ್ಟ್ ಪೊಸಿಷನ್‌ಗಳನ್ನು ಹೊಂದಿದ್ದರು. 2022 ರಲ್ಲಿ ಯುಎಸ್‌ನಲ್ಲಿ ನಿರೀಕ್ಷಿತಕ್ಕಿಂತ ವೇಗವಾಗಿ ಬಡ್ಡಿದರ ಹೆಚ್ಚಳದ ಭಯದ ನಡುವೆ ನಿರಾಶಾವಾದವನ್ನು ಪ್ರತಿಬಿಂಬಿಸುತ್ತದೆ.

Budget Session 11 ಕೋಟಿ ರೈತರಿಗೆ PM ಕಿಸಾನ್, ಜೀವ ಉಳಿಸಿಲು ಲಸಿಕೆ, ಅಭಿವೃದ್ಧಿ ಭಾರತ ಅಭಿನಂದಿಸಿದ ರಾಷ್ಟ್ರಪತಿ!

ಕಳೆದು ಒಂದು ವಾರದಿಂದ ಬಜೆಟ್ ಅಧಿವೇಶನದ ಷೇರು ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಳವಣಿಗೆಗೆ ಕಾರಣವಾಗಿತ್ತು. ಹೂಡಿಕೆದಾರರು ನಿರೀಕ್ಷಾದಾಯಕ ಬಜೆಟ್‌ನತ್ತ ಗಮನಹರಿಸಿದ್ದರು. ಸರ್ಕಾರ ಬಂಡವಾಳ ವೆಚ್ಚ ಹೆಚ್ಚಿಸಲು ಹಾಗೂ ಆರ್ಥಿಕ ಬೆಂಬಲ ನಿರೀಕ್ಷೆಯಲ್ಲಿ ಹೂಡಿಕೆದಾರರು ಷೇರು ಮಾರುಕಟ್ಟೆ ಚಟುವಟಿಕೆಯಲ್ಲಿ ತೊಡಗಿದ್ದರು. ಇದಕ್ಕೆ ಪೂರಕವಾಗಿ ಜಿಡಿಪಿ ಹಾಗೂ ಆರ್ಥಿಕ ಬೆಳವಣಿಗೆ ಏರಿಕೆಯನ್ನೂ ಸಮೀಕ್ಷಾ ವರದಿಯಲ್ಲಿ ಸೂಚಿಸಲಾಗಿದೆ. 

ಹರಿದು ಬರುತ್ತಿರುವ ವಿದೇಶಿ ಬಂಡವಾಳ ಹೂಡಿಕೆ ದೇಶದ ಆರ್ಥಿಕ ಚೇತರಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಇತ್ತ ಹೂಡಿಕೆ ಚಾಲಿತ ಆರ್ಥಿಕ ಚೇತರಿಕೆ ಹಾದಿಯನ್ನು ಸರ್ಕಾರ ಸೂಚಿಸಿದೆ. ಇದರಿಂದ ಬಂಡವಾಳ ಮೇಲಿನ ಖರ್ಚು ಶೇಕಡಾ 20 ಪ್ರತಿಶತಕ್ಕೆ ಹೆಚ್ಚಾಗುವುದನ್ನು ಬ್ರೋಕರೇಜ್‌ಗಳು ನಿರೀಕ್ಷಿಸುತ್ತಿದ್ದಾರೆ.

Budget 2022: ಚುನಾವಣೆ, ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಬಜೆಟ್‌ನಲ್ಲಿ ಭಾಗವಹಿಸಿ: ಪ್ರಧಾನಿ ಮೋದಿ! 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ 9.2 ಶೇಕಡಾ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಆದರೆ 2022-23ರ ಸಾಲಿನಲ್ಲಿ ಜಿಡಿಪಿ ಪ್ರಗತಿಯನ್ನು ಶೇಕಡಾ 8 ರಿಂದ 8.5 ರಷ್ಟು ಸೂಚಿಸಲಾಗಿದೆ. FY21ರಲ್ಲಿ ಕೊರೋನಾ ಅಲೆ ಹೊಡೆತ ಕಾರಣ ಆರ್ಥಿಕತೆ ಶೇಕಡಾ 7ರಷ್ಟು ಕುಸಿತ ಕಂಡಿತ್ತು. ಇದು ಕೊರೋನಾ ಮೊದಲ ಅಲೆ ಪರಿಣಾಮದಿಂದ ಈ ಕುಸಿತ ಸಂಭವಿಸಿತ್ತು.

ಬಜೆಟ್ ಅಧಿವೇಶನ ಭಾರತದ ಷೇರು ಸೂಚ್ಯಂಕದ ಮೇಲೆ ನೇರ ಪರಿಣಾಮ ಬೀರಲಿದೆ. ಭಾರತದ ಆರ್ಥಿಕ ಪ್ರಗತಿಗೂ ಕಾರಣವಾಗಲಿದೆ. ಕೊರೋನಾ 2ನೇ ಅಲೆ ಹೊಡೆತೆ, ಕೊರೋನಾ 3ನೇ ಅಲೆ ಪರಿಣಾಮ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಬೀರಲಿದೆ. ಇದರಿಂದ ಹೊರಬರಲು ಹಾಗೂ ಆರ್ಥಿಕ ಪುನ್ಚೇತನ ನೀಡಬಲ್ಲ ಬಜೆಟ್ ನಿರೀಕ್ಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಬಜೆಟ್ ಸೆಶನ್‌ನಲ್ಲಿ ಪ್ರಗತಿ ಸೂಚನೆಗಳನ್ನು ನೀಡಲಾಗಿದೆ. ನಾಳೆ(ಫೆ.01) ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದೀಗ ಷೇರು ಸೂಚ್ಯಂಕ ಇದೀಗ ನಿರ್ಮಲಾ ಸೀತಾರಾಮಾನ್ ಬಜೆಟ್ ಮೇಲೆ ಏರಿಕೆ ಇಳಿಕೆ ದಾಖಲಿಸಲಿದೆ.
 

click me!