ಯೆಜ್ಡಿ ರೋಡ್‌ಸ್ಟರ್ ರೆಡ್ ವೋಲ್ಫ್ ಬೈಕ್ ಈಗ ಅಮೇಜಾನ್ , ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ, ಭರ್ಜರಿ ಆಫರ್

Published : Aug 22, 2026, 07:20 PM IST
Yezdi Roadster Red Wolf Goes Online

ಸಾರಾಂಶ

ಭಾರತದ ಜನಪ್ರಿಯ ಯೆಜ್ಡಿ ರೋಡ್‌ಸ್ಟರ್ ರೆಡ್ ವೋಲ್ಫ್ ಬೈಕ್ ಇದೀಗ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಭರ್ಜರಿ ಆಫರ್ ಮೂಲಕ ಬೈಕ್ ಆನ್‌ಲೈನ್ ಮೂಲಕ ಖರೀದಿಗೆ ಲಭ್ಯವಿದೆ.

ಬೆಂಗಳೂರು (ಆ.22) ಜಾವಾ ಯೆಜ್ಡಿ ತನ್ನ ವ್ಯಾಪಾರ ವಹಿವಾಟನ್ನು ಆನ್‌ಲೈನ್ ಮೂಲಕ ಮತ್ತಷ್ಟು ವಿಸ್ತರಿಸುತ್ತಿದೆ. ಯೆಜ್ಡಿ ರೋಡ್‌ಸ್ಟರ್ ರೆಡ್ ವೋಲ್ಫ್ ಬೈಕ್ ಇದೀಗ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಎಲ್ಲಾ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಖರೀದಿಸುವ ಗ್ರಾಹಕರಿಗೆ ಆಫರ್ ಇದ್ದೇ ಇರುತ್ತೆ. ಇದೀಗ ರೆಡ್ ವೋಲ್ಫ್ ಬೈಕ್ ಖರೀದಿ ವೇಳೆಯೂ ಗ್ರಾಹಕರಿಗೆ ಕೆಲ ಪ್ರಮುಖ ಆಫರ್ ನೀಡಲಾಗಿದೆ. ಈ ಸೌಲಭ್ಯಗಳು ಆನ್‌ಲೈನ್ ಮೂಲಕ ಖರೀದಿಸುವ ಗ್ರಾಹಕರಿಗೆ ಲಭ್ಯವಾಗಲಿದೆ.

ಯೆಜ್ಡಿ ರೋಡ್‌ಸ್ಟರ್ ರೆಡ್ ವೋಲ್ಫ್ ಆಫರ್

  • 4 ವರ್ಷ ಅಥವಾ 50,000 ಕಿ.ಮೀ.ವರೆಗೆ ಸ್ಟ್ಯಾಂಡರ್ಡ್‌ ವಾರಂಟಿ
  • ವಿಸ್ತರಿತ ವಾರಂಟಿಯನ್ನು ಗರಿಷ್ಠ 6 ವರ್ಷಗಳವರೆಗೆ ಪಡೆಯುವ ಆಯ್ಕೆ
  • ಗರಿಷ್ಠ 8 ವರ್ಷಗಳವರೆಗೆ ರೋಡ್‌ಸೈಡ್‌ ಅಸಿಸ್ಟೆನ್ಸ್‌
  • ಗರಿಷ್ಠ 5 ವರ್ಷಗಳವರೆಗೆ ವಾರ್ಷಿಕ ನಿರ್ವಹಣಾ ಒಪ್ಪಂದದ ಆಯ್ಕೆ (ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ)

ಬೈಕ್ ಬೆಲೆ ಎಷ್ಟು

ಯೆಜ್ಡಿ ರೋಡ್‌ಸ್ಟರ್ ರೆಡ್ ವೋಲ್ಫ್ ಬೈಕ್ ಬೆಲೆ 2.09 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಬೈಕ್ ಖರೀದಿಸುವ ಗ್ರಾಹಕರು ಅಮೇಜಾನ್ ಅಥವಾ ಪ್ಲಿಫ್‌ಕಾರ್ಟ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಬುಕಿಂಗ್ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಿದ ಬಳಿಕ ಬೈಕ್ ಬುಕಿಂಗ್ ಖಚಿತಗೊಳ್ಳಲಿದೆ. ಬಳಿಕ ಉಳಿದ ಮೊತ್ತ ಹಾಗೂ ನೋಂದಣಿ ಪ್ರಕ್ರಿಯೆಗಳು ಹತ್ತಿರದ ಡೀಲರ್ ಮೂಲಕ ನಡೆಯಲಿದೆ.

ಆನ್‌ಲೈನ್ ಮೂಲಕ ಬೈಕ್ ಖರೀದಿ ಹೇಗೆ?

  • ಅಮೇಜಾನ್ ಅಥವ ಫ್ಲಿಪ್‌ಕಾರ್ಟ್‌ನಲ್ಲಿ ಯೆಜ್ಡಿ ರೋಡ್‌ಸ್ಟರ್ ರೆಡ್ ವೋಲ್ಫ್ ಬೈಕ್ ಆಯ್ಕೆ ಮಾಡಬೇಕು
  • ಎಕ್ಸ್‌-ಶೋರೂಂ ಬುಕ್ಕಿಂಗ್ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಿ
  • ಈ ವೇಳೆ ಹತ್ತಿರದ ಅಧಿಕೃತ Yezdi ಡೀಲರ್‌ ಆರ್ಡರ್‌ ಖಚಿತಪಡಿಸುತ್ತಾರೆ
  • ಉಳಿದ ಆನ್‌-ರೋಡ್‌ ಮೊತ್ತವನ್ನು ಡೀಲರ್‌ಶಿಪ್‌ನಲ್ಲಿ ಪಾವತಿಸಬೇಕು
  • ಬೈಕ್‌ ನೋಂದಣಿ ಮತ್ತು ವಿಮೆ ಪ್ರಕ್ರಿಯೆ ಡೀಲರ್‌ಶಿಪ್‌ನಲ್ಲೇ ನಡೆಯಲಿದೆ
  • ನೋಂದಣಿ ಮತ್ತು ವಿಮೆ ಮುಗಿದ ಬಳಿಕ ಬೈಕ್‌ ಗ್ರಾಹಕರಿಗೆ ಹಸ್ತಾಂತರಿಸಲಾಗುತ್ತದೆ
  • ಆಕ್ಸೆಸರೀಸ್‌ ಮತ್ತು ಇತರ ಹೆಚ್ಚುವರಿ ವಸ್ತುಗಳನ್ನು ಸಹ ಡೀಲರ್‌ಶಿಪ್‌ ಮೂಲಕವೇ ಖರೀದಿಸಬೇಕು

ಹೊಚ್ಚ ಹೊಸ ಯೆಜ್ಡಿ ರೋಡ್‌ಸ್ಟರ್ ವೋಲ್ಫ್ ಬೈಕ್ 350 ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್, ಸ್ಲಿಪ್ಪರ್ ಕ್ಲಚ್ ಗೇರ್ ಹೊಂದಿದೆ. ವಿಶೇಷ ಅಂದರೆ ದೂರ ಪ್ರಯಾಣ, ಸಿಟಿ ರೈಡ್ ಸೇರಿದಂತೆ ಎಲ್ಲಾ ರಸ್ತೆಗೂ ಇದು ಸೈ ಎನಿಸಿಕೊಳ್ಳಲಿದೆ. ವಿಶೇಷವಾಗಿ ದೀರ್ಘ ಪ್ರಯಾಣಕ್ಕೆ ಅನುಗುಣವಾಗಿ ಬೈಕ್ ವಿನ್ಯಾಸಗೊಳಿಸಲಾಗಿದೆ. ಆರಾಮದಾಯಕ ರೈಡಿಂಗ್ ಹಾಗೂ ಅತ್ಯುತ್ತಮ ರೈಡಿಂಗ್ ಫೀಲ್ ಸಿಗಲಿದೆ.

PREV
Read more Articles on
click me!

Recommended Stories

Bikes: ಬಿಗ್‌ ಆಫರ್‌; ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಒಮ್ಮೆ ನೋಡಿ! 65 ಕಿಮೀ ಮೈಲೇಜ್, ಬೆಲೆ ಮಾತ್ರ ₹65,642!
ಕೈಗೆಟುಕುವ ಬೆಲೆಯಲ್ಲಿ ಯಮಹಾ ಫ್ಯಾಸಿನೋ , 125ಸಿಸಿ Fi ಹೈಬ್ರಿಡ್ ಅಪ್‌ಗ್ರೇಡೆಡ್ ಸ್ಕೂಟರ್ ಲಾಂಚ್