
ಪೆಟ್ರೋಲ್ ಏರಿಕೆ ನಡುವೆ ಬಜೆಟ್ ಸ್ನೇಹಿ ಬೈಕ್ ಹುಡುಕಾಟವೇ? ನಿಮಗಾಗಿ ಇಲ್ಲಿದೆ ಹೋಂಡಾದ ಟಾಪ್-4 ಕಮ್ಯೂಟರ್ ಬೈಕ್‌ಗಳು!
ದಿನೇ ದಿನೇ ಏರುತ್ತಿರುವ ಪೆಟ್ರೋಲ್ ದರ ಮತ್ತು ಸಿಟಿ ಟ್ರಾಫಿಕ್‌ನಲ್ಲಿ ಕಡಿಮೆ ಮೈಲೇಜ್ ನೀಡುವ ವಾಹನಗಳಿಂದ ಸವಾರರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಮೈಲೇಜ್, ಕೈಗೆಟುಕುವ ಬೆಲೆ ಮತ್ತು ಉತ್ತಮ ಕಾರ್ಯಕ್ಷಮತೆ ನೀಡುವ ಬೈಕ್ ಖರೀದಿಸಲು ಬಯಸುವವರಿಗೆ ಹೋಂಡಾ ಕಂಪನಿಯ 4 ಜನಪ್ರಿಯ ಬೈಕ್‌ಗಳ ವಿವರ ಇಲ್ಲಿದೆ:
ದೈನಂದಿನ ಪ್ರಯಾಣಕ್ಕೆ ಮತ್ತು ಕೆಲಸಕ್ಕೆ ಹೋಗುವ ವೃತ್ತಿಪರರಿಗೆ ಇದು ಅತ್ಯಂತ ಆರಾಮದಾಯಕ ಹಾಗೂ ಕೈಗೆಟುಕುವ ಬೆಲೆಯ ಬೈಕ್.
ಬೆಲೆ; ₹65,642 (ಎಕ್ಸ್-ಶೋರೂಂ)
ಎಂಜಿನ್ ಹಾಗೂ ಪವರ್; 98.98cc, ಏರ್-ಕೂಲ್ಡ್ ಎಂಜಿನ್ (7.28 bhp ಪವರ್, 8.05 Nm ಟಾರ್ಕ್, 4-ಸ್ಪೀಡ್ ಗೇರ್‌ಬಾಕ್ಸ್).
ವಿಶೇಷತೆಗಳು; 99 ಕೆಜಿ ತೂಕ, ಅನಲಾಗ್ ಕ್ಲಸ್ಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಸಿಬಿಎಸ್ ಬ್ರೇಕಿಂಗ್.
ಮೈಲೇಜ್; 60 ರಿಂದ 65 ಕಿಮೀ/ಲೀ.
110 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಹಾಗೂ ಪ್ರೀಮಿಯಂ ಲುಕ್ ಬಯಸುವ ಯುವಜನತೆಗೆ ಇದು ಸೂಕ್ತ ಆಯ್ಕೆ.
ಬೆಲೆ; ₹78,500 - ₹82,500 (ಎಕ್ಸ್-ಶೋರೂಂ)
ಎಂಜಿನ್ ಹಾಗೂ ಪವರ್; 109.51cc eSP ಎಂಜಿನ್ (8.67 bhp ಪವರ್, 9.30 Nm ಟಾರ್ಕ್, 4-ಸ್ಪೀಡ್ ಗೇರ್‌ಬಾಕ್ಸ್).
ವಿಶೇಷತೆಗಳು; ಅಥ್ಲೆಟಿಕ್ ವಿನ್ಯಾಸ, ಸೆಮಿ-ಡಿಜಿಟಲ್ ಕ್ಲಸ್ಟರ್, ಸರ್ವಿಸ್ ಇಂಡಿಕೇಟರ್, ಎಂಜಿನ್ ಕಿಲ್ ಸ್ವಿಚ್, ಐಚ್ಛಿಕ ಡಿಸ್ಕ್ ಬ್ರೇಕ್.
ಮೈಲೇಜ್; 55 ರಿಂದ 60 ಕಿಮೀ/ಲೀ.
ದೇಶದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುವ 125 ಸಿಸಿ ಬೈಕ್ ಇದಾಗಿದ್ದು, ಕುಟುಂಬದೊಂದಿಗೆ ಸವಾರಿ ಮಾಡಲು ಪ್ರಶಸ್ತವಾಗಿದೆ.
ಬೆಲೆ; ₹80,000 - ₹84,000 (ಎಕ್ಸ್-ಶೋರೂಂ)
ಎಂಜಿನ್ ಹಾಗೂ ಪವರ್; 123.94cc SI ಎಂಜಿನ್ (10.59 bhp ಪವರ್, 11 Nm ಟಾರ್ಕ್, 5-ಸ್ಪೀಡ್ ಗೇರ್‌ಬಾಕ್ಸ್).
ವಿಶೇಷತೆಗಳು; 'ಸೈಲೆಂಟ್ ಸ್ಟಾರ್ಟ್' ತಂತ್ರಜ್ಞಾನ, ಕ್ರೋಮ್ ಫಿನಿಶಿಂಗ್, 3D ಲೋಗೋ, ಕಂಪನ-ಮುಕ್ತ ಸವಾರಿ.
ಮೈಲೇಜ್; 55 ರಿಂದ 60 ಕಿಮೀ/ಲೀ.
ಸ್ಟೈಲಿಶ್ ಲುಕ್ ಜೊತೆಗೆ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಬಯಸುವ ಯುವಕರ ಮೊದಲ ಆಯ್ಕೆ.
ಬೆಲೆ; ₹86,000 - ₹90,500 (ಎಕ್ಸ್-ಶೋರೂಂ)
ಎಂಜಿನ್ ಹಾಗೂ ಪವರ್; 123.94cc PGM-FI ಎಂಜಿನ್ (10.72 bhp ಪವರ್, 10.9 Nm ಟಾರ್ಕ್, 5-ಸ್ಪೀಡ್ ಗೇರ್‌ಬಾಕ್ಸ್).
ವಿಶೇಷತೆಗಳು; ಫುಲ್ ಡಿಜಿಟಲ್ LCD ಕ್ಲಸ್ಟರ್ (ರಿಯಲ್-ಟೈಮ್ ಮೈಲೇಜ್ ತೋರಿಸುತ್ತದೆ), LED ಹೆಡ್‌ಲ್ಯಾಂಪ್, ಸ್ಪೋರ್ಟಿ ಲುಕ್.
ಮೈಲೇಜ್; 60 ರಿಂದ 65 ಕಿಮೀ/ಲೀ.
ನೀವು ಕಡಿಮೆ ಬೆಲೆಗೆ ಗರಿಷ್ಠ ಮೈಲೇಜ್ ಬಯಸಿದರೆ ಶೈನ್ 100, ಪ್ರೀಮಿಯಂ ಲುಕ್ ಮತ್ತು ಆಧುನಿಕ ಫೀಚರ್ಸ್ ಬೇಕಿದ್ದರೆ SP 125 ಸೂಕ್ತ.