ಭಾರತದಲ್ಲಿ ಯಮಹಾ ಭರ್ಜರಿ ಕೊಡುಗೆ, ಅತ್ಯಾಧುನಿಕ ತಂತ್ರಜ್ಞಾನದ ಬೈಕ್ ಬಿಡುಗಡೆಗೆ ತಯಾರಿ!

By Suvarna News  |  First Published Jul 23, 2022, 9:56 PM IST

ಭಾರತದಲ್ಲಿ ಯಮಹಾ ಮೋಟಾರ್ ಬೇಡಿಕೆ ಹೆಚ್ಚಾಗಿದೆ. ದಕ್ಷ ಎಂಜಿನ್, ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳ ಯಮಹಾ ಬೈಕ್ ಹಾಗೂ ಸ್ಕೂಟರ್ ಭಾರತೀಯರ ಮನಗೆದ್ದಿದೆ. ಇದೀಗ ಭಾರತೀಯರಿಗಾಗಿ ಯಮಹಾ ಮತ್ತಷ್ಟು ಕೂಡುಗೆ ನೀಡಲು ಮುಂದಾಗಿದೆ.


ಭಾರತದ ಜನಸಂಖ್ಯೆಯ ಅರ್ಧದಷ್ಟು ಜನಸಂಖ್ಯೆ 25 ವರ್ಷದೊಳಗೆ ಮತ್ತು ಮೂರನೇ ಎರಡರಷ್ಟು ಜನರು 35 ವರ್ಷದ ಒಳಗೆ ಇರುವುದರಿಂದ ಯಮಹಾ ಭಾರತದಲ್ಲಿ ವಿಶೇಷ ಕೂಡುಗೆ ನೀಡಲು ಮುಂದಾಗಿದೆ. ಜನರ ಬೇಡಿಕೆ ತಕ್ಕಂತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಬೈಕ್ ಬಿಡುಗಡೆಯಾಗಲಿದೆ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ವಾಹನ ಕೂಡ ಭಾರತದ ರಸ್ತೆಗೆ ಇಳಿಯಲಿದೆ. ಈ ಕುರಿತು ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ  ರವಿಂದರ್ ಸಿಂಗ್  ಜೊತೆ ನಡೆಸಿದ ಸಂದರ್ಶನ ಇಲ್ಲಿದೆ. 

1.ದೇಶದಲ್ಲಿ ದ್ವಿಚಕ ವಾಹನ ಆಟೊಮೊಬೈಲ್ ಉದ್ಯಮದ ಚೇತರಿಕೆ ಹೇಗಿದೆ? 2022ನೇ ವರ್ಷವು 2021ಕ್ಕಿಂತ ಉತ್ತಮವಾಗಿರಲಿದೆ ಎಂದು ಭಾವಿಸುತ್ತೀರಾ?
ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆ ವೇಳೆ ದ್ವಿಚಕ್ರ ವಾಹನ ಉದ್ಯಮದ ಮೇಲೆ ಗಂಭೀರ ಹೊಡೆತ ಬಿದ್ದಿದೆ. 2021ರಲ್ಲಿ ಬಹುತೇಕ ರಾಜ್ಯಗಳು ಲಾಕ್‍ಡೌನ್ ಘೋಷಿಸಿದ್ದರ ನಡುವೆಯೂ ಪರಿಸ್ಥಿತಿ ಕೊಂಚ ಸುಧಾರಿಸಿದೆ, ಆದರೆ ಜಾಗತಿಕವಾಗಿ ಸೆಮಿಕಂಡಕ್ಟರ್‍ಗಳ ಪೂರೈಕೆ ಕೊರತೆ ಮುಂದುವರಿದಿರುವುದರಿಂದ, ಉದ್ಯಮಕ್ಕೆ ಹೊಸ ಸವಲು ಎದುರಾಗಿದೆ.

Latest Videos

undefined

ಬೆಂಗಳೂರಿನಲ್ಲಿ ಯಮಹಾ ಬ್ಲೂ ಸ್ಕ್ವಾಯರ್ ಶೋರೂಮ್ ಆರಂಭ!

ಉದ್ಯಮವು 2022ನೇ ವರ್ಷ ಉತ್ತಮವಾಗಿರಲಿದೆ ಎನ್ನುವ ಆಶಾಭಾವನೆ ಹೊಂದಿದೆಯಾದರೂ, ಹಾಲಿ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಕಾರತ್ಮಕ ಬೆಳವಣಿಗೆಯನ್ನೇ ದಾಖಲಿಸಿದೆ. ಅದಕ್ಕೆ ಓಮಿಕ್ರಾನ್ ಪ್ರಸರಣ ಮತ್ತು ಸೆಮಿಕಂಡಕ್ಟರ್‍ಗಳ ಪೂರೈಕೆ ಕೊರತೆ ಕಾರಣ. ಸೆಮಿಕಂಡಕ್ಟರ್ ಸಮಸ್ಯೆಯಿಂದ ಹೊರಬಂದ ಬಳಿಕ 2022ರಲ್ಲಿ ದಗವಿಚಕ್ರ ವಾಹನ ಉದ್ಯಮವು ಬಲಿಷ್ಠ ಬೆಳವಣಿಗೆ ಸಾಧಿಸುತ್ತದೆ ಎನ್ನುವ ವಿಶ್ವಾಸವಿದೆ. ಆದರೆ ಎರಡನೇ ತ್ರೈಮಾಸಿಕದಲ್ಲಿ, ಉದ್ಯಮವು ಕಳೆದ ವರ್ಷಕ್ಕೆ ಹೋಲಿಸಿದೆರೆ (YoY) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕ್ರಮವಾಗಿ ಶೇ.15 ಹಾಗೂ ಶೇ.246ರಷ್ಟು ಬೆಳವಣಿಗೆಯನ್ನು ದಾಖಲಿಸುವ ಬಲವಾದ ಮಾರಾಟದೊಂದಿಗೆ ಪುಟಿದೆದ್ದಿದೆ.  ಆರ್ಥಿಕ ಚಟುವಟಿಕೆಯ ಹೆಚ್ಚಳ, ಗ್ರಾಹಕರ ಸುಧಾರಿತ ಭಾವನೆಗಳು ಮತ್ತು ನಿರ್ಬಂಧಗಳಲ ಸಡಿಲಿಕೆಗಳಿಂದಾಗಿ  ಮುಂಬರುವ ತಿಂಗಳುಗಳಲ್ಲಿ ಉದ್ಯಮವು 2021 ಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಜುಲೈನಿಂದ ಪ್ರಾರಂಭವಾಗುವ ಹಬ್ಬದ ಋತುವಿನೊಂದಿಗೆ, ಉದ್ಯಮವು ಬೇಡಿಕೆಯ ಉಲ್ಬಣಕ್ಕೆ ಸಾಕ್ಷಿಯಾಗಬಹುದು ಎಂದು ನಾವು ಭಾವಿಸುತ್ತೇವೆ.

2.ಭಾರತೀಯ ಮಾರುಕಟ್ಟೆಗೆ ಯಮಹಾದ ಯೋಜನೆ ಏನು ಮತ್ತು ಮುಂದಿನ 2-3 ವರ್ಷಗಳ ಯೋಜನೆ ಏನು?
ಭಾರತವು ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ ಹಾಗೂ ಇಲ್ಲಿ ಬೇಡಿಕೆ ಮತ್ತು ಬೆಳವಣಿಗೆ ಎರಡಕ್ಕೂ ವಿಫುಲ ಅವಕಾಶಗಳಿವೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಜನಸಂಖ್ಯೆ 25 ವರ್ಷದೊಳಗೆ ಮತ್ತು ಮೂರನೇ ಎರಡರಷ್ಟು ಜನರು 35 ವರ್ಷದ ಒಳಗೆ ಇರುವುದರಿಂದ ಯಮಹಾಕ್ಕೆ ಭಾರತವು ಬಹಳ ಪ್ರಮುಖವಾಗಿದೆ. ಈ ಯುವ ಗ್ರಾಹಕರು ಲೈಫ್‍ಸ್ಟೈಲ್ ಕೇಂದ್ರಿತ ಮೊಬಿಲಿಟಿಯನ್ನು ಬಯಸುತ್ತಾರೆ. ಪ್ರೀಮಿಯಂ ಮಾಡೆಲ್‍ಗಳನ್ನು ಹೊಂದಿರುವ ಯಮಹಾ ಅವರ ಬೆಳೆಯುತ್ತಿರುವ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲಿದೆ.

Upcoming Scooter ಪೈಪೋಟಿ ಸಜ್ಜಾದ ಯಮಹಾ , ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!
 
2018ರಿಂದ `ದಿ ಕಾಲ್ ಆಫ್ ಬ್ಲ್ಯೂ’ ಬ್ರಾಂಡ್ ಸ್ಟ್ರಾಟೆಜಿ ರೂಪಿಸಿದ ಬಳಿಕ, ಸದೃಢ ರೇಸಿಂಗ್ ಪರಂಪರೆಯೊಂದಿಗೆ ಯಮಹಾವನ್ನು ಯಶಸ್ವಿ ಪ್ರೀಮಿಯಂ ಬ್ರಾಂಡ್ ಆಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಸ್ಟ್ರಾಟೆಜಿಯು ನಮಗೆ ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸಾಯ್‍ಟಿಂಗ್, ಸ್ಟೈಲಿಶ್ ಮತ್ತು ಸ್ಪೋರ್ಟಿ ಉತ್ಪನ್ನಗಳ ವೈವಿಧ್ಯಮಯ ಶ್ರೇಣಿಯೊಂದಿಗೆ ಪ್ರೀಮಿಯಂ ಬ್ರಾಂಡ್‍ಗಳ ಸಾಲಿನಲ್ಲಿ ನಮ್ಮ ಪಾಲು ಹೆಚ್ಚಿಸಿಕೊಳ್ಳಲು ನೆರವಾಗಿದೆ. ಈ ದೃಷ್ಟಿಕೋನದೊಂದಿಗೆ ಮೋಟಾರ್‍ಸೈಕಲ್‍ಗಳ ಪ್ರೀಮಿಯಂ ವಲಯದಲ್ಲಿ 15 ಪರ್ಸೆಂಟ್ ಮತ್ತು 125 ಸಿಸಿ ಸ್ಕೂಟರ್ ವಲಯದಲ್ಲಿ 17 ಪರ್ಸೆಂಟ್ ಪಾಲು ಹೊಂದುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲ ಸ್ಥಾನದಲ್ಲಿದ್ದೇವೆ.
 
ಮೋಟಾರ್‍ಸೈಕಲಿಂಗ್ ಸಂಸ್ಕೃತಿಯಲ್ಲಿ ಜಾಗತಿಕ ಸ್ಫೂರ್ತಿ ನೀಡುವ `ದಿ ಕಾಲ್ ಆಫ್ ಬ್ಲ್ಯೂ’ ಬ್ರಾಂಡ್ ಸ್ಟ್ರಾಟೆಜಿ ಅಡಿಯಲ್ಲಿ ಹೊಸ ಗ್ರಾಹಕರನ್ನು ತಲುಪುವ ಪ್ರಯತ್ನ ಮುಂದುವರಿಸುತ್ತೇವೆ. ಒಂದನೇ ಶ್ರೇಣಿಯ ನಗರದಿಂದ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಿಗೆ ಮಾರುಕಟ್ಟೆ ಜಾಲ ವಿಸ್ತರಿಸುವ ಗುರಿ ಹೊಂದಿದ್ದೇವೆ ಮತ್ತು ನಮ್ಮ ಗುರಿ ಇರುವ ಮಾರುಕಟ್ಟೆಗಳಲ್ಲಿ ಹಲವು ಆನ್-ಗ್ರೌಂಡ್ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಹಕರಿಗೆ ಆನಂದದ ಅನುಭವ ನೀಡುವ ಯೋಜನೆಗಳನ್ನು ರೂಪಿಸಿದ್ದೇವೆ. ನಮ್ಮ ಉತ್ಪನ್ನ, ಆಫರ್ ಮತ್ತು ಸೇವೆಗಳ ಬಗ್ಗೆ ಡಿಜಿಟಲ್ ಪ್ಲಾಟ್‍ಫಾರಂಗಳಲ್ಲಿಯೂ ನವೀನ  ರೀತಿಯ ಪ್ರಚಾರಾಂದೋಲನಗಳನ್ನು ಹಮ್ಮಿಕೊಳ್ಳುತ್ತೇವೆ.
 
3.ಭಾರತಕ್ಕೆ ಯಮಹಾದ ಉತ್ಪನ್ನ ತಂತ್ರವೇನು? ಭಾರತೀಯ ಮರುಕಟ್ಟೆಗೆ ಯಾವ ರೀತಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದೀರಿ? 
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 125 ಸಿಸಿ ಮತ್ತು 150 ಸಿಸಿ ವಲಯದಲ್ಲಿ ಮತ್ತು 150 ಸಿಸಿ ಮತ್ತು 250 ಸಿಸಿ ಮೋಟಾರ್‍ಸೈಕಲ್ ವಲಯದಲ್ಲಿ ನಮ್ಮ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದೇವೆ. `ಜನರೇಷನ್ ಝೆಡ್’ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಈ ಗುರಿ ತಲುಪುತ್ತೇವೆ.

ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!
 
4. ಇವಿ ವಿಚಾರದಲ್ಲಿ ನಿಮ್ಮ ಯೋಜನೆ ಏನು? ಭಾರತೀಯ ಮಾರಕಟ್ಟೆಯಲ್ಲಿ ಯಮಹಾದ ಇವಿ ಉತ್ಪನ್ನಗಳನ್ನು  ಯಾವಾಗ ನಿರೀಕ್ಷಿಸಬಹುದು?
ಎಲೆಕ್ಟ್ರಿಕ್  ದ್ವಿಚಕ್ರ ವಾಹನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಇವಿಗಳ ಸಾಮರ್ಥ್ಯವನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದ, ನಾವು ಬೆಲೆ, ಕಾರ್ಯಕ್ಷಮತೆ, ಬ್ಯಾಟರಿ ಶಾಖ ನಿರ್ವಹಣೆ, ವಿದ್ಯುತ್ ಸರಬರಾಜು ಮತ್ತು ಚಾರ್ಜಿಂಗ್/ಸ್ವಾಪ್ ಮಾಡಬಹುದಾದ ಮೂಲಸೌಕರ್ಯಗಳಂತಹ ಹಲವಾರು ಅಂಶಗಳನ್ನು ಒಳಗೊಂಡ ವಿವರವಾದ ಸಂಶೋಧನೆಯನ್ನು ನಡೆಸುತ್ತಿದ್ದೇವೆ.  ನಮ್ಮ ಎಲೆಕ್ಟ್ರಿಕ್ ವೆಹಿಕಲ್  ಕೊಡುಗೆಗಳನ್ನು ನಮ್ಮ ಸಾಂಪ್ರದಾಯಿಕ ICE (ಆಂತರಿಕ ದಹನಕಾರಿ ಎಂಜಿನ್) ದ್ವಿಚಕ್ರ ವಾಹನಗಳಿಗೆ ಸಮಾನವಾಗಿ ವಿಶ್ವಾಸಾರ್ಹವೆಂದು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.

ಯಮಹಾ ತಂಡವು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಮೇಲಿನ ನಿಯತಾಂಕಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಇತ್ತೀಚೆಗೆ ಯುರೋಪ್ನಲ್ಲಿ  ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ನಿಯೋಸ್  ಅನ್ನು ಒಂದೇ ರೀತಿಯ ಹವಾಮಾನ ಹೊಂದಿರುವ ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ನಿಂದ ಪ್ರಾರಂಭಿಸಿ ಜಪಾನ್, ತೈವಾನ್ ಮತ್ತು  ಅಸಿಯಾನ್ ಪ್ರದೇಶಗಳಲ್ಲಿ ಹಂತ ಹಂತವಾಗಿ ಪರಿಚಯಿಸಲಾಗುತ್ತದೆ. ಆದರೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮುನ್ನ ನಾವು ಇಲ್ಲಿನ ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ಬ್ಯಾಟರಿಯ ಸಾಮಥ್ರ್ಯವನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ, ಜಪಾನ್ ತಂಡ ಮತ್ತು ಚೆನ್ನೈನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯಪಡೆಗಳು ಭಾರತಕ್ಕೆ ಸಾಧ್ಯವಿರುವ ಅತ್ಯುತ್ತಮ ಪರಿಹಾರಗಳಿಗಾಗಿ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ.
 
5. ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಯಮಹಾದ ಯೋಜನೆ ಮತ್ತು ಸ್ಟ್ರಾಟೆಜಿ ಏನು?
 ಗ್ರಾಹಕರ ತಿಳಿವಳಿಕೆ, ದ್ವಿಚಕ್ರ ವಾಹನ ಉದ್ಯಮದಲ್ಲಿನ ಜಾಗತಿಕ ಬೆಳವಣಿಗೆ ಮತ್ತು ಭಾರತದಲ್ಲಿ ಲಭ್ಯವಿರುವ ಅದೇರೀತಿಯ ಉತ್ಪನ್ನಗಳನ್ನು ಕುರಿತಂತೆ ಕುರಿತು ಮಾಹಿತಿ ನೀಡುವಲ್ಲಿ ಡಿಜಿಟಲ್ ತಂತ್ರಜ್ಞಾನವು ಬಹುಮುಖ್ಯವಾದ ಪಾತ್ರ ವಹಿಸುತ್ತಿದೆ. ಜನರು ಲೈಫ್‍ಸ್ಟೈಲ್ ಕೇಂದ್ರಿತ ವಾಹನಗಳನ್ನು ಬಯಸುತ್ತಿರುವುದರಿಂದ, ಸಾಂಪ್ರದಾಯಿಕ ಬಳಕೆಯು ಹಿಂದಕ್ಕೆ ಸರಿದು, ಟ್ರೆಂಡ್‍ನಲ್ಲಿ ಗಣನೀಯ ಬದಲಾವಣೆ ಆಗಿರುವುದನ್ನು ನಾವು ಗಮನಿಸಿದ್ದೇವೆ. ಹೊಸ ಅನುಭವ ಮತ್ತು ಹೊಸತನವನ್ನು ಹೊಂದಬೇಕೆಂಬ ಹೊಸ ಪೀಳಿಗೆಯ ತುಡಿತದಿಂದ ಈ ಬದಲಾವಣೆ ಆಗಿದೆ.
 
ಆಸಕ್ತಿಯ ಹಂತದಲ್ಲಿಯೇ ಬದಲಾವಣೆ ಆಗಿರುವುದನ್ನು ಗಮನಿಸಿರುವ ಯಮಹಾ, ಪ್ರತಿ ಗ್ರಾಹಕರ ಅಗತ್ಯವನ್ನು ಪೂರೈಸಲು ಹೊಸ ಮಾದರಿಗಳು ಮತ್ತು ಮೇಲ್ದರ್ಜೆಗೆ ಏರಿದ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಉದಾಹರಣೆಗೆ, ಕಳೆÉದ ವರ್ಷ ಯಮಹಾ ಕ್ವಿಕ್ ಶಿಫ್ಟರ್, ಟ್ರಾಕ್ಷನ್ ಕಂಟ್ರೋಲ್, ಬ್ಲ್ಯೂ ಎನೆಬಲ್ಡ್ ವೈ-ಕನೆಕ್ಟ್ ಆ್ಯಪ್, ಯುಎಸ್‍ಡಿ ಫೋರ್ಕ್ ಮೊದಲಾದ ಫೀಚರ್‍ಗಳೋನ್ನು ಹೊಂದಿರುವ ಸೂಪರ್ ಸ್ಪೋಟ್ರ್ಸ್ ಮಾಡೆಲ್ ಆರ್15ವಿ4 ಮತ್ತು ಆರ್15ಎಂಗಳನ್ನು ಬಿಡುಗಡೆ ಮಾಡಿತು. ನಾವು ಲಿಕ್ವಿಡ್ ಕೂಲಿಂಗ್ ಮತ್ತು ವಿವಿಎ ತಂತ್ರಜ್ಞಾನ ಹೊಂದಿರುವ ಭಾರತದ ಮೊದಲ ಮ್ತಾಕ್ಸಿ ಸ್ಪೋಟ್ರ್ಸ್ ಸ್ಕೂಟರ್ ಬಿಡುಗಡೆ ಮಾಡಿದೆವು. ನಮ್ಮ ಹೈಬ್ರಿಡ್ ಮತ್ತು ಸ್ಪೋರ್ಟಿ 125 ಸಿಸಿ ಸ್ಕೂಟರ್ ಮಾಡೆಲ್‍ಗಳು ಹೈಬ್ರಿಡ್ ಸಿಸ್ಟಮ್‍ಗಳನ್ನು ಹೊಂದಿವೆ. ಹಾಗೆಯೇ,  ಫ್ಯಾಸಿನೊ, ಝೆಡ್‍ಆರ್‍ಗಳನ್ನು ಮೇಲ್ದರ್ಜೆಗೆ ಏರಿಸಿದ್ದೇವೆ. ನಮ್ಮ ಪ್ರೀಮಿಯಂ ಮಾಡೆಲ್‍ಗಳ ವೈವಿಧ್ಯಮಯ ಶ್ರೇಣಿಯನ್ನು ನಮ್ಮ ಗ್ರಾಹಕರು ವ್ಯಾಪಕವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಪ್ರತಿ ಯಮಹಾವು ಯಮಹಾ ಫ್ಯಾಂಟಸಿಗಳ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇನ್ನೂ ಮುಂದುವರಿದು, ನಾವು ತಂತ್ರಜ್ಞಾನ ಅಧಾರಿತ ವೈವಿಧ್ಯಮಯ ಉತ್ಪನ್ನಗಳನ್ನು ಪರಿಚಯಿಸುವುದನ್ನು ಮುಂದುವರಿಸುತ್ತೇವೆ, ಸ್ಟೈಲ್, ಪರ್ಫಾಮೆನ್ಸ್, ಯೂನಿಕ್‍ನೆಸ್ ಮತ್ತು ಸೇಫ್ಟಿ ನಮ್ಮ ಮಂತ್ರವಾಗಿದೆ.
 
6. ಬ್ಲ್ಯೂ ಸ್ಕ್ವೇರ್ ಪರಿಕಲ್ಪನೆ ಮತ್ತು ಭಾರತೀಯ ಮಾರುಕಟ್ಟೆಗೆ ಇದರ ಯೋಜನೆ ಕುರಿತು ಮಾಹಿತಿ ಹಂಚಿಕೊಳ್ಳುವಿರಾ?
ಯಮಹಾದ `ಬ್ಲ್ಯೂ ಸ್ಕ್ವೇರ್’ ಷೋರೂಮ್‍ಗಳನ್ನು ಸಮುದಾಯ ಪ್ರಜ್ಞೆಯೊಂದಿಗೆ ರೂಪಿಸಲಾಗಿದ್ದು, ಗ್ರಾಹಕರನ್ನು ಬ್ರಾಂಡ್‍ನ ನೀತಿಯೊಂದಿಗೆ ಬೆಸೆಯುವ ರಿತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. `ಬ್ಲ್ಯೂ’ ಕಂಪನಿಯ ರೇಸಿಂಗ್ ಡಿಎನ್‍ಎಯನ್ನೂ, `ಸ್ಕ್ವೇರ್’ ಯಮಹಾ ಜಗತ್ತಿಗೆ ಪ್ರವೇಶವನ್ನೂ ಸೂಚಿಸುತ್ತದೆ. ಹೀಗಾಗಿ `ಬ್ಲ್ಯೂ ಸ್ಕ್ವೇರ್’ ಅನ್ನು ಜಾಗತಿಕ ಮೋಟಾರ್‍ಸ್ಪೋಟ್ರ್ಸ್‍ನಲ್ಲಿ ಯಮಹಾದ ಪರಂಪರೆಯನ್ನು ವ್ಯಾಖ್ಯಾನಿಸಲು ವಿನ್ಯಾಸಗೊಳಿಸಲಾಗಿದೆ.  `ಬ್ಲ್ಯೂ ಸ್ಕ್ವೇರ್’ ಷೋರೂಮ್‍ಗಳು ಬ್ರಾಂಡ್‍ನ ರೇಸಿಂಗ್ ಡಿಎನ್‍ಎಯನ್ನು ಯಮಹಾ ಬ್ಲ್ಯೂ ಥೀಮ್ ಆಧಾರಿತ ಒಳಾಂಗಣ ಮತ್ತು ಹೊರಾಂಗಣದಲ್ಲಿ ಗಮನ ಸೆಳೆಯುವಂತೆ ಗೋಚರವಾಗುವ ರೇಖೆಗಳ ಮೂಲಕ ವಿನ್ಯಾಸಗೊಳಿಸಲಾಗಿದೆ.

ಆಫ್‌-ರೋಡ್ ಸ್ಕೂಟರ್ ಯಮಹಾ ಝುಮಾ ಹೇಗಿದೆ ಗೊತ್ತಾ?
 
ಈಗ ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳು ಮತ್ತು ಹೊಸ ಮರುಕಟ್ಟೆಗಳಲ್ಲಿ 2022ರಲ್ಲಿ `ಬ್ಲ್ಯೂ ಸ್ಕ್ವೇರ್’ ಷೋರೂಮ್‍ಗಳನ್ನು ತೆರೆಯುವ ಪ್ರಕ್ರಿಯೆಗೆ ವೇಗ ನೀಡಲು ನಿರ್ಧರಿಸಿದ್ದೇವೆ. ಈವರೆಗೆ, ದೇಶದಲ್ಲಿ 59 `ಬ್ಲ್ಯೂ ಸ್ಕ್ವೇರ್’ ಷೋರೂಮ್‍ಗಳಿವೆ. 2022ರಲ್ಲಿ ಭಾರತದಾದ್ಯಂತ ಇನ್ನೂ 54 `ಬ್ಲ್ಯೂ ಸ್ಕ್ವೇರ್’ ಷೋರೂಮ್ ಆರಂಭಿಸುವ ಗುರಿ ಹೊಂದಲಾಗಿದೆ.
 
7. ಮಾರುಕಟ್ಟೆಯ ಖ್ಯಾತ ಪಾಲುದಾರರಾಗಿ ಗ್ರಾಹಕರ ಸುಲಭ ಖರೀದಿ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಳ್ಳಬಹುದೆ?
2020ರಲ್ಲಿ ಕಿರಿಕಿರಿ ರಹಿತ ಖರೀದಿಗಾಗಿ ನಾವು ನಮ್ಮ ವೆಬ್‍ಸೈಟ್ ಅನ್ನು ಮೇಲ್ದರ್ಜೆಗೆ ಏರಿಸಿದ್ದೇವೆ. ಇದನ್ನು ಮತ್ತಷ್ಟು ಬಳಕೆದಾರ ಸ್ನೇಹಿಯಾಗಿಸಲು `ವಚ್ರ್ಯುವಲ್ ಸ್ಟೋರ್’ ಎಂದು ಹೇಳಲಾಗುವ ಆನ್‍ಲೈನ್ ಮಾರಾಟ ವ್ಯವಸ್ಥೆ ರೂಪಿಸಿದ್ದೇವೆ. ಇದರಲ್ಲಿ 360 ಡಿಗ್ರಿ ಉತ್ಪನ್ನ ವೀಕ್ಷಣೆ, ಯಮಹಾ ಉತ್ಪನ್ನಗಳ ಸ್ಪೆಸಿಫಿಕೇಷನ್‍ಗಳ ತುಲನೆ, ಖರೀದಿದಾರರ ಮಾರ್ಗದರ್ಶಿಯಂತಹ ಹಲವು ಆಯ್ಕೆಗಳನ್ನು ನೀಡಿದ್ದೇವೆ. ಯಮಹಾ ಉತ್ಪನ್ನ ಮತ್ತು ಬಿಡಿಭಾಗಗಳ ಖರೀದಿಗಾಗಿ ನಾವು ಅಮೇಜಾನ್ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಯಮಹಾ ವಿತರಕರು ಸಹ ಡಿಜಿಟಲ್ ಸಂವಹನ ಉಪಕರಣಗಳ ನೆರವಿನಿಂದ ಸಂಪರ್ಕರಹಿತ ಡೆಲಿವರಿಯನ್ನು ಉತ್ತೇಜಿಸುತ್ತಾರೆ.  ಒತ್ತಡ-ಮುಕ್ತವಾಗಿ ಯಮಹಾ ಉತ್ಪನ್ನದ ಮಾಲೀಕರಾಗುವ ಈ ಅನುಭವವು ಗ್ರಾಹಕರಲ್ಲಿ ವಿಶ್ವಾಸ ಮೂಡಿಸುತ್ತದೆ. ಇವುಗಳ ಜತೆಗೆ, ಆಕರ್ಷಕ ಆಫರ್‍ಗಳು ಮತ್ತು ಹಣಕಾಸು ಯೋಜನೆಗಳನ್ನು ಸುಲಭ ಖರೀದಿಗಾಗಿ ಪರಿಚಯಿಸಿದ್ದೇವೆ.

click me!