1.5 ಲಕ್ಷ ರೂ ಮೌಲ್ಯ ನಾಣ್ಯ ಪಾವತಿಸಿ ಹೊಸ ಮೋಟಾರ್ ಸೈಕಲ್ ಖರೀದಿಸಿದ ಪಶ್ಚಿಮ ಬಂಗಾಳದ ವ್ಯಾಪಾರಿ

By Suvarna NewsFirst Published Jul 20, 2022, 5:54 PM IST
Highlights

ಪಶ್ಚಿಮ ಬಂಗಾಳದ  ವ್ಯಾಪಾರಿಯೊಬ್ಬರು ತಮ್ಮ ಆದಾಯದಲ್ಲಿ 1.8 ಲಕ್ಷ ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ, ಹಣದಲ್ಲಿ ಮೋಟಾರ್ ಸೈಕಲ್ ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್‌ ಆಗಿದೆ

ಜನರು ತಮ್ಮಿಷ್ಟದ ವಾಹನಗಳನ್ನು ಖರೀದಿಸಲು ವರ್ಷಗಟ್ಟಲೇ ಕಷ್ಟಪಡುತ್ತಾರೆ.ಇಲ್ಲೊಬ್ಬ ವ್ಯಕ್ತಿ ಹಲವು ವರ್ಷಗಳ ಶ್ರಮದ ಫಲವಾಗಿ ಮೋಟಾರ್ ಸೈಕಲ್ (Motor Cycle) ಖರೀದಿಸಿದ್ದಾರೆ. ಇದಕ್ಕಾಗಿ ಇವರು ನೀಡಿರುವುದು ಬರೋಬ್ಬರಿ 1.8 ಲಕ್ಷ ರೂಪಾಯಿ ಮೊತ್ತದ ನಾಣ್ಯಗಳು! ಪಶ್ಚಿಮ ಬಂಗಾಳದ  ವ್ಯಾಪಾರಿಯೊಬ್ಬರು ತಮ್ಮ ಆದಾಯದಲ್ಲಿ 1.8 ಲಕ್ಷ ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ, ಆ ಹಣದಲ್ಲಿ ಮೋಟಾರ್ ಸೈಕಲ್ ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ. ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ವ್ಯಾಪಾರಿ ಸುಬ್ರತಾ ಸರ್ಕಾರ್ ನವೆಂಬರ್ 2016 ರಿಂದ ನಾಣ್ಯಗಳಲ್ಲಿ ಹಣವನ್ನು ಉಳಿಸಲು ಪ್ರಾರಂಭಿಸಿದ್ದರು.

2016 ರಲ್ಲಿ ನೋಟು ಅಮಾನ್ಯೀಕರಣದ (Demonitization) ನಂತರ ಸುಬ್ರತಾ ಸರ್ಕಾರ್ ನಾಣ್ಯಗಳನ್ನು ಉಳಿಸಲು ಪ್ರಾರಂಭಿಸಿದರು. 46 ವರ್ಷ ವಯಸ್ಸಿನ ಸುಬ್ರತಾ ಸರ್ಕಾರ್ ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಸ್ಥಳೀಯ ಅಂಗಡಿಗಳಿಗೆ ಬೀಡಿಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದಾಗ ಹಣ ಮತ್ತು ಹೆಚ್ಚಿನ ಮುಖಬೆಲೆಯ ಕರೆನ್ಸಿಗಳ ಕೊರತೆ ಉಂಟಾಗಿತ್ತು. 

ಡರ್ಟ್ ಬೈಕಿಂಗ್ ಚಾಲೆಂಜ್ ಆರಂಭಿಸಿದ ಹೀರೋ ಮೋಟೋಕಾರ್ಪ್, ವಿಜೇತರಿಗೆ ಆಕರ್ಷಕ ಬಹುಮಾನ!

ಆದರೆ, ನೋಟುಗಳ ಪ್ರಮಾಣ ಕಡಿಮೆಯಾದರೂ, ನಾಣ್ಯಗಳ ಲಭ್ಯತೆ ಹೇರಳವಾಗಿಯೇ ಇತ್ತು. ಹೆಚ್ಚಿನ ಗ್ರಾಹಕರು ಸಣ್ಣ ಮೊತ್ತದ ಬ್ಯಾಂಕ್ ನೋಟುಗಳು ಮತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದ ನಾಣ್ಯಗಳನ್ನು ಪಾವತಿಸುತ್ತಿದ್ದರು. ಸುಬ್ರತಾ ಅವರು  ಗ್ರಾಹಕರಿಂದ ಸ್ವೀಕರಿಸುತ್ತಿದ್ದ ಪಾವತಿಗಳಿಂದ ಸ್ವಲ್ಪ ಮೊತ್ತವನ್ನು ಉಳಿಸಲು ಪ್ರಾರಂಭಿಸಿದರು. ಹಣವನ್ನು ಉಳಿಸಲು ಪ್ರಾರಂಭಿಸಿದಾಗ,  ಅದನ್ನು ಹೇಗೆ ಖರ್ಚು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಸುಮಾರು 6 ವರ್ಷಗಳ ಕಾಲ ಹಣವನ್ನು ಉಳಿಸುವುದನ್ನು ಮುಂದುವರೆಸಿದರು ಮತ್ತು ಇತ್ತೀಚೆಗೆ ಅವರು ದ್ವಿಚಕ್ರ ವಾಹನ ಶೋರೂಮ್ ಮೂಲಕ ಹಾದುಹೋಗುವಾಗ, ಹೊಸ ಮೋಟಾರು ಸೈಕಲ್ ಗಾಗಿ ತಮ್ಮ ಉಳಿತಾಯವನ್ನು ಖರ್ಚು ಮಾಡಬಹುದು ಎಂದು ಸುಬ್ರತಾ ನಿರ್ಧರಿಸಿದರು.

ಬಳಿಕ, ಸುಬ್ರತಾ ಸರ್ಕಾರ್ ಈ ಆಲೊಚನೆಯನ್ನು ತಮ್ಮ 17 ವರ್ಷ ವಯಸ್ಸಿನ ಮಗನೊಂದಿಗೆ ಹಂಚಿಕೊಂಡರು. ನಂತರ ಡೀಲರ್ಶಿಪ್ ಸಿಬ್ಬಂದಿಯೊಂದಿಗೆ ಮಾತನಾಡಿದರು. ಆಗ ಡೀಲರ್ಶಿಪ್ ಸಿಬ್ಬಂದಿ ಪಾವತಿಯನ್ನು ನಾಣ್ಯಗಳಲ್ಲಿ ತೆಗೆದುಕೊಳ್ಳಲು ಒಪ್ಪಿಕೊಂಡರು. ನಂತರ, ಸುಬ್ರತಾ ಅವರ ಕುಟುಂಬ ಸದಸ್ಯರ ನೆರವಿನಿಂದ ನಾಣ್ಯಗಳನ್ನು ಎಣಿಸಿ, ತಲಾ ರೂ. 10,000 ಇರುವ 5 ಚೀಲಗಳಾಗಿ ಜೋಡಿಸಿದರು. ಈ 5 ಚೀಲಗಳನ್ನು ಹೊರತುಪಡಿಸಿ, ಸುಬ್ರತಾ ಹೆಚ್ಚುವರಿಯಾಗಿ ಎರಡು ಚೀಲಗಳಲ್ಲಿ ನಾಣ್ಯಗಳನ್ನು ಹೊಂದಿದ್ದರು. ಅವನು ರಿಕ್ಷಾವನ್ನು ಬಾಡಿಗೆಗೆ ತೆಗೆದುಕೊಂಡು ತನ್ನ ಹೊಸ ಮೋಟಾರ್ಸೈಕಲ್ ಖರೀದಿಸಲು ಡೀಲರ್ಶಿಪ್ಗೆ ಹೋದರು.
ನಾಣ್ಯಗಳನ್ನು ಮಂಗಳವಾರ ಶೋರೂಮ್ಗೆ ತಲುಪಿಸಲಾಯಿತು ಮತ್ತು ನಾಣ್ಯಗಳ ಎಣಿಕೆಯನ್ನು ಮುಗಿಸಲು ಐದು ಸಿಬ್ಬಂದಿಗೆ ಸುಮಾರು 3 ದಿನಗಳು ಬೇಕಾಯಿತು. ಹೊಸ ಮೋಟಾರ್ಸೈಕಲ್ನ ಕೀಗಳನ್ನು ಮಂಗಳವಾರವೇ ಸುಬ್ರತಾ ಸರ್ಕಾರ್ ಅವರಿಗೆ ಹಸ್ತಾಂತರಿಸಲಾಗಿದೆ. ಅವರು ಸುಮಾರು 1.5 ಲಕ್ಷ ರೂಪಾಯಿ ನಾಣ್ಯಗಳನ್ನು ಪಾವತಿಸಿದ್ದಾರೆ ಎಂದು ಶೋರೂಂ ವ್ಯವಸ್ಥಾಪಕರು ಖಚಿತಪಡಿಸಿದ್ದಾರೆ. ಸುಬ್ರತಾ ಅವರು ಯಾವ ಮೋಟಾರ್ ಸೈಕಲ್ ಖರೀದಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. 

'ಪಪ್ಪ' ನಂಬರ್ ಪ್ಲೇಟ್‌ನ ಕಾರಿಗೆ ದಂಡ ಹಾಕಿದ ಪೊಲೀಸರು

ಈ ಹಿಂದೆ, ಅಸ್ಸಾಂನ ತರಕಾರಿ ಮಾರಾಟಗಾರರೊಬ್ಬರು ನಾಣ್ಯಗಳನ್ನು ಬಳಸಿ ಹೊಸ ಸುಜುಕಿ ಅವೆನಿಸ್ (Suzuki Avenis) ಸ್ಕೂಟರ್ ಖರೀದಿಸಿದ್ದರು. ಜನರು ನಾಣ್ಯಗಳನ್ನು ಬಳಸಿ ಕಾರುಗಳನ್ನು ಸಹ ಖರೀದಿಸಿದ್ದಾರೆ. ಓರ್ವ ವ್ಲಾಗರ್ (Vlogger) ನಾಣ್ಯಗಳನ್ನು ಬಳಸಿ ಹೊಚ್ಚಹೊಸ ಮಹೀಂದ್ರಾ ಬೊಲೆರೊ ಎಂಯುವಿ (Mahindra Bolero MUV) ಅನ್ನು ಖರೀದಿಸಿದ್ದರು ಮತ್ತು ಅದೇ ರೀತಿ, ತಮಿಳುನಾಡಿನ ವ್ಯಕ್ತಿಯೊಬ್ಬರು 6 ಲಕ್ಷ ರೂ. ಮೌಲ್ಯದ 10 ರೂ. ನಾಣ್ಯಗಳನ್ನು ನೀಡಿ ಮಾರುತಿ ಇಕೋ (maruti Eco) ಖರೀದಿಸಿದ್ದರು.

click me!