
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಹಾಗಾಗಿ ಅನೇಕ ಕಂಪನಿಗಳು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಮಾರ್ಕೆಟ್ ಗೆ ತರ್ತಿವೆ. ಇದೀಗ ಯಮಹಾ ತನ್ನ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಯಮಹಾ ಏರೋಕ್ಸ್ ಇ (Yamaha Aerox e) ಅನ್ನು ಭಾರತದಲ್ಲಿ ಪರಿಚಯಿಸಿದೆ. ಆಕರ್ಷಕ ವಿನ್ಯಾಸ, ಉತ್ತಮ ರೇಂಜ್ ಮತ್ತು ಹಲವು ಆಧುನಿಕ ಫೀಚರ್ಗಳೊಂದಿಗೆ ಈ ಸ್ಕೂಟರ್ ಗಮನ ಸೆಳೆಯುತ್ತಿದೆ.
ಈ ಸ್ಕೂಟರ್ನಲ್ಲಿ ಎಲ್ ಇಡಿ ಹೆಡ್ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲ್ಯೂಟೂತ್, ಕನೆಕ್ಟಿವಿಟಿ, ಇಸಿಒ ಮತ್ತು Boost Riding Modes ನೀಡಲಾಗಿದೆ. ಸುರಕ್ಷತೆಗಾಗಿ ಎಬಿಎಸ್, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ಗಳು ಹಾಗೂ 14 ಇಂಚಿನ ಅಲಾಯ್ ವೀಲ್ಗಳು ಕೂಡ ಇವೆ. ಪರ್ಫಾರ್ಮೆನ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9.5 kW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಎರಡು ತೆಗೆಯಬಹುದಾದ 1.5 kWh ಬ್ಯಾಟರಿಗಳನ್ನು ನೀಡಲಾಗಿದೆ. ಈ ಮೋಟಾರ್ ಸುಮಾರು 12.9 hp ಪವರ್ ಮತ್ತು 48 Nm ಟಾರ್ಕ್ ಉತ್ಪಾದಿಸುತ್ತದೆ.
Bike Tyres: ನಿಮ್ಮ ಬೈಕ್‌ಗಳಿಗೆ ಯಾವ ಟೈರ್ ಬೆಸ್ಟ್? ಇಲ್ಲಿದೆ ಟ್ಯೂಬ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳ ವ್ಯತ್ಯಾಸ
ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಈ ಸ್ಕೂಟರ್ 117 ಕಿಲೋಮೀಟರ್ವರೆಗೆ ಓಡಬಲ್ಲದು ಎಂದು ಕಂಪನಿ ಹೇಳಿದೆ. ಇದರ ಗರಿಷ್ಠ ವೇಗ ಗಂಟೆಗೆ 95.5 ಕಿಲೋಮೀಟರ್. ನೀವು ಸಿಟಿಯಲ್ಲಿ ಮಾತ್ರವಲ್ಲ ದೂರದ ಪ್ರಯಾಣಕ್ಕೂ ಇದನ್ನು ಬಳಕೆ ಮಾಡ್ಬಹುದು.
ಸ್ಟೈಲ್, ಮೈಲೇಜ್, ಪವರ್… ಎಲ್ಲವೂ ಇದೆ! ಕಾಲೇಜ್ ಸ್ಟೂಡೆಂಟ್ಸ್‌ಗೆ ₹2 ಲಕ್ಷದೊಳಗೆ ಸಿಗುವ ಟಾಪ್ ಬೈಕ್‌ಗಳು
ಬೆಲೆ ಎಷ್ಟು?
ಇನ್ನು ಬೆಲೆಯ ವಿಷ್ಯಕ್ಕೆ ಬರೋದಾದ್ರೆ Yamaha Aerox e ಅನ್ನು ಆರಂಭಿಕ 2.82 ಲಕ್ಷ ಎಕ್ಸ್-ಶೋರೂಂ ಬೆಲೆಗೆ ನೀವು ಖರೀದಿ ಮಾಡ್ಬಹುದು. ಇದು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸ್ಪರ್ಧಿಸಲಿದೆ. ಉತ್ತಮ ಫೀಚರ್ಗಳು ಮತ್ತು ಪರ್ಫಾರ್ಮೆನ್ಸ್ ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಸ್ಕೂಟರ್ ತಯಾರಿಸಲಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಯೋಚನೆಯಲ್ಲಿದ್ದರೆ, Yamaha Aerox e ಹೊಸ ಆಯ್ಕೆಯಾಗಿದೆ.