44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್

Published : Jul 02, 2026, 10:13 PM IST
Revolt Motors

ಸಾರಾಂಶ

ರಿವೋಲ್ಟ್‌ ಮೋಟಾರ್ಸ್, ಹೊಸ ರಿವೋಲ್ಟ್ ಆರ್‌ವಿಎಕ್ಸ್ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ 160 ಕಿ.ಮೀ ಮೈಲೇಜ್, 90 ಕಿ.ಮೀ ಗರಿಷ್ಠ ವೇಗ, ಮತ್ತು 3.24 kWh ಪೋರ್ಟಬಲ್ ಬ್ಯಾಟರಿಯನ್ನು ಹೊಂದಿದೆ.

ನವದೆಹಲಿ: ಎಲೆಕ್ಟ್ರಿಕ್ ಟೂ ವ್ಹೀಲರ್ ಮಾರುಕಟ್ಟೆಗೆ ಹೊಸ ಚೈತನ್ಯ ತುಂಬಲು ರಿವೋಲ್ಟ್‌ ಮೋಟಾರ್ಸ್‌ನಿಂದ ಹೊಸ ಬೈಕ್ ಲಾಂಚ್ ಅಗಿದೆ. ರಿವೋಲ್ಟ್ ಆರ್‌ವಿಎಕ್ಸ್ ಎಲೆಕ್ಟ್ರಿಕ್ ಬೈಕ್ ಹೆಚ್ಚು ಮೈಲೇಜ್, ನ್ಯೂ ವರ್ಷನ್ ಸೇರಿದಂತೆ ಹಲವು ಅಪ್‌ಡೇಟ್‌ ಫೀಚರ್ಸ್ ಜೊತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈಗ ರಿವೋಲ್ಟ್‌ ಮೋಟಾರ್ಸ್‌ ಬಿಡುಗಡೆ ಮಾಡಿರುವ ಹೊಸ ಎಲೆಕ್ಟ್ರಿಕ್ ಬೈಕ್ ಬೆಲೆ, ವಿನ್ಯಾಸ, ವಿಶೇಷತೆ, ಬ್ಯಾಟರಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಬ್ಯಾಟರಿ, ರೇಂಜ್ ಮತ್ತು ಚಾರ್ಜಿಂಗ್ ವೇಗದ ಮಾಹಿತಿ

*3.24 kWh ಸಾಮರ್ಥ್ಯದ ಪೋರ್ಟಬಲ್ ಬ್ಯಾಟರಿಯನ್ನು ಈ ಬೈಕ್ ಹೊಂದಿದ್ದು, ಬೈಕ್‌ಗೆ ಹೆಚ್ಚಿನ ಪವರ್‌ನ್ನು ಇದು ನೀಡುತ್ತದೆ.

* ಈ ಬ್ಯಾಟರಿಯು ಒಂದು ಚಾರ್ಜ್‌ನಲ್ಲಿ 160 ಕಿ.ಮೀನಷ್ಟು ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಬೈಕ್ ಗಂಟೆಗೆ 90 ಕಿಮೀ ವೇಗದಲ್ಲಿ ಚಲಿಸಬಹುದು. ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಬಳಕೆ ಮಾಡಲಾಗಿದೆ.

ಚಾರ್ಜಿಂಗ್ ಸಮಯ

ಸ್ಟ್ಯಾಂಡರ್ಡ್ ಚಾರ್ಜರ್: ಬ್ಯಾಟರಿಯನ್ನು 0 ರಿಂದ ಶೇ.80 ಚಾರ್ಜ್ ಮಾಡಲು 3 ಗಂಟೆ 30 ನಿಮಿಷಗಳು ಬೇಕಾಗುತ್ತದೆ. ಫಾಸ್ಟ್ ಚಾರ್ಜರ್ ಸಹಾಯದಿಂದ ಕೇವಲ 80 ನಿಮಿಷಗಳಲ್ಲಿ ಚಾರ್ಜಿಂಗ್ ಆಗುತ್ತದೆ.

ಬೈಕ್ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

Revolt RVX Electric ಬೈಕ್ ಬ್ಲೂ, ಪರ್ಲ್ ಬ್ಲ್ಯಾಕ್ ಮತ್ತು ಎಕ್ಲಿಪ್ಸ್ ವೈಟ್ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ವಿನ್ಯಾಸವೂ ಶಾರ್ಕ್ ರೀತಿಯಲ್ಲಿದೆ. ಕಂಪನಿಯೂ ಶಾರ್ಕ್‌ ಪ್ರೇರಿತ ವಿನ್ಯಾಸ ಎಂದು ಹೇಳಿಕೊಂಡಿದೆ. ಹಾಗೆಯೇ ಕ್ವಿಕ್ ಬೂಸ್ಟ್ ಮೋಡ್, ಹಿಲ್ ಹೋಲ್ಡ್ ಕಂಟ್ರೋಲ್, ಅಪ್‌ಡೇಟ್ ಟೆಕ್ನಾಲಜಿ, ರಿವರ್ಸ್ ಮೋಡ್ ಮತ್ತು ವಾಕ್ ಅಸಿಸ್ಟ್ ಹೊಂದಿದೆ. ಹಾಗೆಯೇ ಲೈಟ್ ವೇಟ್ ಮತ್ತು ಪವರ್‌ಫುಲ್ ಕಾರ್ಬನ್ ಪ್ಯಾನೆಲ್ ಹಾಗೂ ಲಾಂಗ್ ಸೀಟ್‌ ಸಹ ಹೊಂದಿದೆ. ಓರ್ವ ಸವಾರನೊಂದಿಗೆ 14 ಡಿಗ್ರಿ ಮತ್ತು ಹಿಂಬದಿ ಸವಾರನೊಂದಿಗೆ 11 ಡಿಗ್ರಿ ಕ್ಲೈಂಬಿಂಗ್ ಸಾಮರ್ಥ್ಯ ಹೊಂದಿದೆ.

ಡಿಜಿಟಲ್ ಡಿಸ್‌ಪ್ಲೇ ಮತ್ತು ಸೌಂಡ್ ಬಾಕ್ಸ್: ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗ ಮತ್ತು ಹಿಂಭಾಗದಲ್ಲಿ ಪೂರ್ಣ ಎಲ್ಇಡಿ ಲೈಟಿಂಗ್, ನಾಲ್ಕು ವಿಭಿನ್ನ ಶಬ್ಧದ ಸೌಂಡ್ ಬಾಕ್ಸ್ ಹೊಂದಿದೆ.

ರಿವೋಲ್ಟ್ ಈಗಾಗಲೇ ಹಲವು ಅದ್ಭುತ ವಿನ್ಯಾಸದ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ರಿವೋಲ್ಟ್‌ನ ಫ್ಲೀಟ್ ಈಗಾಗಲೇ RV1, RV1+, RV BlazeX, RV400 BRZ ಮತ್ತು RV400 ನಂತಹ ಮಾದರಿಗಳನ್ನು ಒಳಗೊಂಡಿದೆ. RV BlazeX ಡೇಲಿ ಯೂಸರ್‌ಗಳಿಗಾಗಿಯೇ ರಚಿಸಲಾಗಿದೆ. ಹಾಗೆಯೇ 'RV400'Performance ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.

ಬೆಲೆ ಮತ್ತು ಆಫರ್

ರಿವೋಲ್ಟ್ ಆರ್‌ವಿಎಕ್ಸ್ ಎಲೆಕ್ಟ್ರಿಕ್ ಬೈಕ್‌ನ ಬೆಲೆ ₹1.29 ಲಕ್ಷ (ಎಕ್ಸ್ ಶೋ ರೂಂ), ಸಬ್ಸಿಡಿ ಅನ್ವಯಿಸಿದ ₹1.24 ಲಕ್ಷ (ಎಕ್ಸ್ ಶೋ ರೂಂ) ಲಭ್ಯವಾಗುತ್ತದೆ.

ದೆಹಲಿ ಸರ್ಕಾರ ಇ ಬೈಕ್ ಖರೀದಿಗೆ ಸಬ್ಸಿಡಿಯನ್ನು ನೀಡುತ್ತದೆ. ಒಂದು ವೇಳೆ ದೆಹಲಿಯ ಇವಿ ನೀತಿಯಡಿಯಲ್ಲಿ ಖರೀದಿಸಿದರೆ 95 ಸಾವಿರ ರೂಪಾಯಿ ಆಗುತ್ತದೆ. ದೆಹಲಿಯ ಗ್ರಾಹಕರು ತಮ್ಮ ಹಳೆಯ ಪೆಟ್ರೋಲ್-ಡೀಸೆಲ್ ಅಂದರೆ ICE ಬೈಕ್ ಅನ್ನು ಸ್ಕ್ರ್ಯಾಪ್ ಮಾಡಿ ಹೊಸ ಬೈಕ್ ಖರೀದಿಸಿದ್ರೆ ಕೇವಲ 85,000 ರೂ.ಗಳಿಗೆ ರಿವೋಲ್ಟ್ ಆರ್‌ವಿಎಕ್ಸ್ ನಿಮಗೆ ಸಿಗುತ್ತದೆ. ಈ ತಿಂಗಳು ಅಂದ್ರೆ ಜುಲೈ ಅಂತ್ಯದಿಂದ ರಿವೋಲ್ಟ್ ಆರ್‌ವಿಎಕ್ಸ್ ಬುಕಿಂಗ್ ಆರಂಭವಾಗುತ್ತದೆ.

 

 

PREV
Read more Articles on
click me!

Recommended Stories

ಜೂನ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಭರ್ಜರಿ ಕಮಾಲ್!; ಒಂದೇ ತಿಂಗಳಲ್ಲಿ 1.14 ಲಕ್ಷ ಬೈಕ್ ಮಾರಾಟ, ಶೇ. 27 ರಷ್ಟು ವೃದ್ಧಿಸಿದ ಸೇಲ್ಸ್!
ಟಿವಿಎಸ್ ಮೋಟಾರ್ ಷೇರು ಅಬ್ಬರ: ಜೂನ್ ಮಾರಾಟದಲ್ಲಿ ಶೇ.47 ಪ್ರಗತಿ; ನಾರ್ಟನ್ ನಷ್ಟದ ನಡುವೆಯೂ ಹೂಡಿಕೆದಾರರ ವಿಶ್ವಾಸ