ನವದಹೆಲಿ(ಜ.15): ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಕ್ಷೇತ್ರ ಅತೀ ಹೆಚ್ಚು ಪೈಪೋಟಿ ಸ್ಪರ್ಧೆ ಎದುರಿಸುತ್ತಿದೆ. ಕಾರಣ ಖ್ಯಾತ ಆಟೋಮೊಬೈಲ್ (Automobile) ಕಂಪನಿಗಳ ಜೊತೆಗೆ ಸ್ಟಾರ್ಟ್ ಅಪ್(Startup) ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಸದ್ಯ ದೇಶದಲ್ಲಿ 20ಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ವಿಶ್ವದಲ್ಲೂ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ(Electric Vehicle Production) ಹೆಚ್ಚಿನ ಒತ್ತು ಸಿಗುತ್ತಿದೆ. ಇದೀಗ ಯಮಹಾ(Yamaha) ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಯಮಹಾ E01 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಸದ್ಯ ರೋಡ್ ಟೆಸ್ಟ್‌ನಲ್ಲಿ(Road Test) ತೊಡಗಿರುವ ಯಮಹಾ ಶೀಘ್ರದಲ್ಲೇ ಎಲ್ಲಾ ರೋಡ್ ಟೆಸ್ಟ್ ಮುಗಿಸಿ ಬಿಡುಗಡೆ ದಿನಾಂಕ ಘೋಷಿಸಲಿದೆ. ಜಪಾನ್‌ನಲ್ಲಿ(Japan) ರೋಡ್ ಟೆಸ್ಟ್ ವೇಳೆ ಯಮಹಾ ಎಲೆಕ್ಟ್ರಿಕ್ ಸ್ಕೂಟರ್ ಕಾಣಿಸಿಕೊಂಡಿದೆ. ವಿಶೇಷ ಅಂದರೆ ಈ ಸ್ಕೂಟರ್ ಭಾರತದಲ್ಲೂ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಮುಂದಿನ ವಾರದಿಂದ ಜಪಾನ್‌ನಲ್ಲಿ ಟೆಸ್ಟ್ ಡ್ರೈವ್(Test Drive) ಆರಂಭಗೊಳ್ಳಲಿದೆ.
undefined
Simple Scooter ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ದಿನಾಂಕ ಪ್ರಕಟ, 30 ಸಾವಿರ ಬುಕಿಂಗ್!
ನೂತನ ಯಮಹಾ ಎಲೆಕ್ಟ್ರಿಕ್ ಸ್ಕೂಟರ್ ಮ್ಯಾಕ್ಸಿ ಸ್ಕೂಟರ್ ಶೈಲಿಯಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನದ(Technology) ಸ್ಕೂಟರ್ ಇದಾಗಿದ್ದು, ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. LCD ಡಿಜಿಟಲ್(Digital) ಇನ್ಸ್ಟ್ರುಮೆಂಟ್ ಕನ್ಸೋಲ್ ನೀಡಲಾಗಿದೆ. ಈ ಕನ್ಸೋಲ್ ಬ್ಯಾಟರಿ ಮಾಹಿತಿ, ಸ್ಪೀಡೋ ಮೀಟರ್ ಸೇರಿದಂತೆ ಹಲವು ಮಾಹಿತಿ ನೀಡಲಿದೆ.
ಕಿಲೆಸ್ ಇಗ್ನಿಶನ್, ಹಲವು ರೈಡ್ ಮೊಡ್‌ಗಳು ಈ ಸ್ಕೂಟರ್‌ನಲ್ಲಿದೆ. ನೂತನ ಯಮಹಾ E01 ಎಲೆಕ್ಟ್ರಿಕ್ ಸ್ಕೂಟರ್ 13 ಇಂಚಿನ ಅಲೋಯ್ ವ್ಹೀಲ್ಸ್ ಹೊಂದಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಟ್ವಿನ್ ಶಾಕಾಬ್ಸರ್ ಹೊಂದಿದೆ. ಇನ್ನು ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಹೊಂದಿದ್ದು, ಡ್ಯುಯೆಲ್ ಚಾನೆಲ್ ABS ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಈ ಮೂಲಕ ಸುರಕ್ಷತೆಹೆ ಯಮಹಾ ಹೆಚ್ಚಿನ ಆದ್ಯತೆ ನೀಡಿದೆ. ಇನ್ನು ನೂತನ ಸ್ಕೂಟರ್ ಮೈಲೇಜ್ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 80 ರಿಂದ 90 ಕಿ.ಮೀ ಮೈಲೇಜ್ ನೀಡಲಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
Electric Bike 273KM ವೇಗ, 235 ಕಿ.ಮೀ ಮೈಲೇಜ್, ಮಾರುಕಟ್ಟೆಗೆ ಅತ್ಯಂತ ಆಕರ್ಷಕ ಬೈಕ್ ಅನಾವರಣ!
ಯಮಹಾ ಚಾರ್ಜಿಂಗ್ ಆಯ್ಕೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 2019ರ ಜಪಾನ್ ಮೋಟಾರ್ ಶೋನಲ್ಲಿ ಯಮಹಾ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ E01 ಅನಾವರಣ ಮಾಡಿತ್ತು. ಈ ವೇಳೆ ಸ್ವಾಪೇಬಲ್ ಬ್ಯಾಟರಿ ಪರಿಚಯಿಸಿತ್ತು. ಇನ್ನು 2 ರಿಂದ 3 ಗಂಟೆಯಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಚ್ ಆಗಲಿದೆ ಎಂದು ಜಪಾನ್ ಮೋಟಾರು ಶೋನಲ್ಲಿ ಹೇಳಿತ್ತು. ಹೀಗಾಗಿ ಮೋಟಾರು ಶೋನಲ್ಲಿ ಪರಿಚಯಿಸಿದ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಬದಲಾವಣೆಗಳಿಲ್ಲ ಬಿಡುಗಡೆಯಾಗುವ ಸಾಧ್ಯತೆ ಇದೆ.
ಯಮಹಾ ಮೊದಲು ಜಪಾನ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಬಳಿಕ ಭಾರತದಲ್ಲಿ ಬಿಡುಗಡೆಯಾಗಲಿದೆ. ಆದರೆ ಭಾರತದಲ್ಲಿ ಅತೀವ ಎಲೆಕ್ಟ್ರಿಕ್ ಸ್ಕೂಟರ್ ಪೈಪೋಟಿ ಎದುರಿಸಬೇಕಾಗಿದೆ. ಕಾರಣ ಸದ್ಯ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ 150ಕ್ಕಿಂತ ಹೆಚ್ಚು ಮೈಲೇಜ್ ನೀಡಬಲ್ಲ ಸ್ಕೂಟರ್. ಇಷ್ಟೇ ಅಲ್ಲ 1 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಟ ಮೈಲೇಜ್ ನೀಡಬಲ್ಲ ಸ್ಕೂಟರ್ ಲಭ್ಯವಿದೆ. ಹೀಗಾಗಿ ಯಮಹಾ ತೀವ್ರ ಪೈಪೋಟಿ ಎದುರಿಸುವುದು ಖಚಿತ. ಸದ್ಯ ಭಾರದದಲ್ಲಿ ಓಲಾ, ಬೌನ್ಸ್, ಎದರ್, ಬಜಾಜ್ ಚೇತಕ್, ಟಿವಿಎಸ್ ಔಕ್ಯೂಬ್, ಒಕಿನಾವಾ, ಪ್ಯೂರ್ ಸೇರಿದಂತೆ 20ಕ್ಕೂ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ.