ನವದೆಹಲಿ(ಜ.15): ಭಾರತದಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಪ್ರತಿ ದಿನ ಇದೀಗ ಹೊಸ ಹೊಸ ಬೈಕ್ ಅನಾವರಣಗೊಳ್ಳುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ಸೇರಿಕೊಂಡಿದೆ. ಇಗ್ನಿಟ್ರಾನ್ ಮೊಟೊಕಾರ್ಪ್ ಇದೀಗ ಎರಡನೇ ಎಲೆಕ್ಟ್ರಿಕ್ ಬೈಕ್ ಅನಾವರಣ ಮಾಡಿದೆ. ಮೊದಲು ಸೈಬಾರ್ಗ್ ಬ್ರ್ಯಾಂಡ್ ನೇಮ್ ಅಡಿ ಕ್ರ್ಯೂಸರ್ ಬೈಕ್ ಬಿಡುಗಡೆ ಮಾಡಲಾಗಿತ್ತು. ಇದೀಗ ಯುವಜನತೆ ಗುರಿಯಾಗಿಸಿಕೊಂಡು ಸೈಬಾರ್ಗ್ ಬಾಂಬ್ ಇ ಬೈಕ್ ಅನಾವರ ಮಾಡಿದೆ.
ಸೈಬಾರ್ಗ್ ಇ ಬಾಬ್ ಬೈಕ್ ಡರ್ಟ್ ಸ್ಪೂರ್ತಿಯ ಬೈಕ್ ಆಗಿದೆ. ಹೀಗಾಗಿ ಸ್ಪೋರ್ಟ್ಸ್ ಲುಕ್ ಹಾಗೂ ಸ್ಪೋರ್ಟಿ ಪರ್ಫಾಮೆನ್ಸ್ ಈ ಬೈಕ್ ನೀಡಲಿದೆ. ಕೆಳಭಾಗದಲ್ಲಿರುವ ಹ್ಯಾಂಡ್ಲ್ ಬಾರ್, LED ಸ್ಲೀಕ್ ಹೆಡ್‌ಲ್ಯಾಂಪ್ಸ್ ಹಾಗೂ ಡಿಆರ್‌ಎಲ್, LED ಇಂಡಿಕೇಟರ್, ಸಿಂಗಲ್ ಪೀಸ್ ಸೀಟ್ ಹೊಂದಿದೆ. ಆರಂಭಿಕ ಹಂತದಲ್ಲಿ ಎರಡು ಬಣ್ಣಗಳಲ್ಲಿ ಸೈಬಾರ್ಗ್ ಬಾಬ್ ಇ ಬೈಕ್ ಲಭ್ಯವಿದೆ. ರೆಡ್ ಹಾಗೂ ಬ್ಲಾಕ್ ಬಣ್ಣಗಳಲ್ಲಿ ಅನಾವರಣ ಮಾಡಲಾಗಿದೆ.
undefined
Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!
IP65 LED ಡಿಸ್‌ಪ್ಲೆ, ಜಿಯೊ ಲೊಕೆಟ್, ಜಿಯೊ ಫೆನ್ಸಿಂಗ್, USB ಚಾರ್ಜಿಂಗ್, ಬ್ಲೂಟೂಥ್ ಕೆನೆಕ್ಟಿವಿಟಿ, ರಿಮೂಟ್ ಕಿಲೆಸ್ ಇಗ್ನಿಶನ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನದ ಫೀಚರ್ಸ್ ಈ ಬೈಕ್‌ನಲ್ಲಿ ಲಭ್ಯವಿದೆ. ಇದರ ಜೊತೆಗೆ ರಿವರ್ಸ್ ಮೊಡ್ ಆಯ್ಕೆಯೂ ಲಭ್ಯವಿದೆ. ಜೊತೆ ಕ್ರ್ಯೂಸ್ ಕಂಟ್ರೋಲ್ ಆಯ್ಕೆಯೂ ಇದೆ.
ಸೈಬಾರ್ಗ್ ಇ ಬಾಬ್ ಎಲೆಕ್ಟ್ರಿಕ್ ಬೈಕ್ 2.88 KwH ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಬೈಕ್‌ನಲ್ಲಿ BLDC ಹಬ್ ಮೊಟಾರ್ ಬಳಕೆ ಮಾಡಲಾಗಿದೆ. ಸೈಬಾರ್ಗ್ ಇ ಬಾಬ್ ಬೈಕ್ ಗರಿಷ್ಠ ವೇಗ 85 ಕಿ.ಮೀ ಪ್ರತಿ ಗಂಟೆಗೆ. ಸಂಪೂರ್ಣ ಚಾರ್ಜ್‌ಗೆ 110 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸೈಬಾರ್ಗ್ ಬೈಕ್‌ನಲ್ಲಿ ಸ್ವಾಪ್ ಬ್ಯಾಟರಿ ಬಳಕೆ ಮಾಡಲಾಗಿದೆ. ಅಂದರೆ ಬ್ಯಾಟರಿ ಮುಗಿದಾಗ ಸೈಬಾರ್ಗ್ ಕೇಂದ್ರಗಳಲ್ಲಿ ಚಾರ್ಜ್ ಇರುವ ಬ್ಯಾಟರಿ ಬದಲಾಯಿಸುವ ಅವಕಾಶವಿದೆ. ಇನ್ನು 3 ಗಂಟೆಗಳಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಬ್ಯಾಟರಿ ಸಂಪೂರ್ಣ ಚಾರ್ಜ್‌ಗೆ 4 ರಿಂದ 5 ಗಂಟೆ ಸಮಯ ತೆಗೆದುಕೊಳ್ಳಲಿದೆ. ಬೈಕ್ ಜೊತೆಗೆ 15AMP ಚಾರ್ಜರ್ ಲಭ್ಯವಿದೆ.
ಸೈಬಾರ್ಗ್ ಬಾಬ್ ಇ ಸ್ಪೋರ್ಟ್ಸ್ ಬೈಕ್ ವಾರೆಂಟಿ 5 ವರ್ಷ, ಬ್ಯಾಟರಿ ವಾರೆಂಟಿ 5 ಹಾಗೂ ಎಲೆಕ್ಟ್ರಿಕ್ ಮೋಟಾರ್ ವಾರೆಂಟಿ 3 ವರ್ಷ ನೀಡಲಾಗಿದೆ. ಭಾರತದಾದ್ಯಂತ ಸೈಬಾರ್ಗ್ ನೆಟ್‌ವರ್ಕ್ ಆರಂಭಿಸುತ್ತಿದೆ. ಸೈಬಾರ್ಗ್ ಬ್ಯಾಟರಿ ಸ್ವಾಪ್ ಕೇಂದ್ರಗಳನ್ನು ಆರಂಭಿಸುತ್ತಿದೆ. ಈ ಮೂಲಕ ಸೈಬಾರ್ಗ್ ಬೈಕ್ ಖರೀದಿಸುವ ಗ್ರಾಹಕರಿಗೆ ಯಾವುದೇ ಹಂತದಲ್ಲಿ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಇದರ ಜೊತೆಗೆ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಕಾರ್ಯವೂ ಪ್ರಗತಿಯಲ್ಲಿದೆ.
ಸೈಬಾರಾಗ್ ಬ್ರ್ಯಾಂಡ್ ನೇಮ್ ಅಡಿ ಇಗ್ನಿಟ್ರಾನ್ ಮೋಟೊಕಾರ್ಪ್ ಅನಾವರಣ ಮಾಡಿದ ಎರಡನೇ ಬೈಕ್ ಸೈಬಾರ್ಗ್ ಬಾಬ್ ಇ. ಇದಕ್ಕೂ ಮೊದಲು ಅಂದರೆ ಡಿಸೆಂಬರ್ 2021ರಲ್ಲಿ ಸೈಬಾರ್ಗ್ ಯೋಧ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಅನಾವರಣ ಮಾಡಲಾಗಿದೆ. ಯೋಧಾ ಬೈಕ್ ವೇಗ 90 ಕಿ.ಮೀ ಪ್ರತಿ ಗಂಟೆಗೆ ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ. 3.24KwH ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದರಲ್ಲಿ ಇಕೊ, ನಾರ್ಮಲ್ ಹಾಗೂ ಸ್ಪೋರ್ಟ್ಸ ಎಂಬ ಮೂರು ರೈಡ್ ಮೊಡ್‌ಗಳಿವೆ.
ಯೋಧಾ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಶೇಕಡಾ 80 ರಷ್ಟು ಚಾರ್ಜ್ ಆಗಲು 3 ಗಂಟೆ ಸಮಯ ತೆಗೆದುಕೊಳ್ಳಲಿದೆ. ಇನ್ನು ಸಂಪೂರ್ಣ ಚಾರ್ಜ್‌ಗೆ 4 ರಿಂದ 5 ಗಂಟೆ ಸಮಯ ತೆಗೆದುಕೊಳ್ಳಲಿದೆ. ಡಿಸ್ಕ್ ಬ್ರೇಕ್, LED ಹೆಡ್‌ಲ್ಯಾಂಪ್ಸ್, ಇಂಡಿಕೇಟರ್, ಡಿಜಿಟಲ್ ಡಿಸ್‌ಪ್ಲೇ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.