Electric Bike ಇಗ್ನಿಟ್ರಾನ್ ಮೋಟೋಕಾರ್ಪ್‌ನಿಂದ ದೇಶದಲ್ಲಿ 2ನೇ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಸೈಬೊರ್ಗ್ ಬಾಬ್ ಅನಾವರಣ!

By Suvarna NewsFirst Published Jan 15, 2022, 5:42 PM IST
Highlights

*ಮೊದಲ ವಾಹನ ಸೈಬೋರ್ಗ್‌ ಯೋಡಾಗೆ ಉತ್ತಮ ಪ್ರತಿಕ್ರಿಯೆ

* ಎರಡನೇ ಎಲೆಕ್ಟ್ರಿಕ್‌ ಕ್ರೂಸರ್‌ ಬೈಕ್‌ ಬಿಡುಗಡೆ

*ಜ.16ರಿಂದ ಬುಕಿಂಗ್‌ ಆರಂಭ

Auto Desk(ಜ.15): ದೇಶದ ಎಲೆಕ್ಟ್ರಿಕ್ ಸ್ಟಾರ್ಟ್-ಅಪ್ ಕಂಪನಿ ಇಗ್ನಿಟ್ರಾನ್ ಮೋಟೋಕಾರ್ಪ್ ಪ್ರೈವೇಟ್ ಲಿಮಿಟೆಡ್ (ignition Motocorp Private Limited), ಭಾರತದಲ್ಲಿ ತನ್ನ ಎರಡನೇ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸಿದೆ. ಕಳೆದ ವರ್ಷ ಸೈಬೋರ್ಗ್ ಯೋಡಾ (Cyborg yoda) ಎಲೆಕ್ಟ್ರಿಕ್ ಮೋಟಾರ್ಸೈಕಲ್ ಅನ್ನು ಬಿಡುಗೊಳಿಸಿದ ನಂತರ, ಕಂಪನಿ  ತನ್ನ ಎರಡನೇ ಎಲೆಕ್ಟ್ರಿಕ್ ಉತ್ಪನ್ನವನ್ನು ಸೈಬೋರ್ಗ್ ಬ್ರಾಂಡ್ ಹೆಸರಿನಲ್ಲಿ ಅನಾವರಣಗೊಳಿಸಿದೆ.

 ಇದನ್ನು ಸೈಬೋರ್ಗ್ ಬಾಬ್-ಇ ಎಲೆಕ್ಟ್ರಿಕ್ (Cyborg bob E-electric) ಮೋಟಾರ್ಸೈಕಲ್ ಎಂದು ಕೂಡ ಕರೆಯಲಾಗುತ್ತದೆ.  ಕಂಪನಿಯ ಈ ಹೊಸ ಶ್ರೇಣಿಯ ಉತ್ಪನ್ನಗಳು ಶೀಘ್ರದಲ್ಲೇ ಮಾರುಕಟ್ಟೆ ಬಿಡುಗಡೆಗೆ ಲಭ್ಯವಿರಲಿದ್ದು, ಕಂಪನಿಯು ತನ್ನ ವೆಬ್ಸೈಟ್ ಅನ್ನು ಜನವರಿ 16ರಿಂದ ಲೈವ್ ಮಾಡಲು ನಿರ್ಧರಿಸಿದ್ದು, ತಕ್ಷಣದಿಂದಲೇ ವಾಹನಗಳ ಬುಕಿಂಗ್ ಲಭ್ಯವಿರಲಿದೆ.

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

ಇಗ್ನಿಟ್ರಾನ್ ಮೋಟೋಕಾರ್ಪ್ ಪ್ರೈ.ಲಿಮಿಟೆಡ್ನ ಸಂಸ್ಥಾಪಕ ರಾಘವ್ ಕಲ್ರಾ, "ಸೈಬೋರ್ಗ್ನ ಯಶಸ್ವಿ ಬಿಡುಗಡೆ ಹಾಗೂ ಮತ್ತು ನಮ್ಮ ಮೊದಲ ಕ್ರೂಸರ್ ಮೋಟಾರ್ಬೈಕ್ ಯೋಡಾಗೆ ಜನರಿಂದ ದೊರೆತ ಉತ್ತಮ ಪ್ರತಿಕ್ರಿಯೆಯ ಬೆನ್ನಲ್ಲೇ ಈಗ ಕಂಪನಿ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಸ್ಪೋರ್ಟ್ಸ್ ವಿಭಾಗದಲ್ಲಿ ಎರಡನೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಅನಾವರಣಗೊಳಿಸಲು ಸಂತಸವಾಗುತ್ತಿದೆ. ನವೀನ ತಂತ್ರಜ್ಞಾನದೊಂದಿಗೆ ಕಾಂಪ್ಯಾಕ್ಟ್ ಮತ್ತು ಆರಾಮದಾಯಕ ಸವಾರಿ ಅನುಭವ ಎದುರುನೋಡುತ್ತಿರುವ ಗ್ರಾಹಕರಿಗೆ ಬಾಬ್-ಇ ಸಂಪೂರ್ಣ ಪ್ಯಾಕೇಜ್ ಆಗಿರಲಿದೆ” ಎಂದಿದ್ದಾರೆ.

Electric Bike ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ದಾಖಲೆ, 350 ಕಿ.ಮೀ ಮೈಲೇಜ್!

"ಬಾಬ್-ಇ ಭಾರತದ ಮೊದಲ ಕಾಂಪ್ಯಾಕ್ಟ್ ಸ್ಪೋರ್ಟಿ ಎಐ-ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕ್ ಡರ್ಟ್ ಮೋಟಾರ್ಬೈಕ್ನ ವಿನ್ಯಾಶಗಳನನ್ನೇಒಳಗೊಂಡಿದೆ. ಇದು ಅತ್ಯಂತ ವೇಗ ಹಾಗೂ ರೋಮಾಂಚಕ ಅನುಭವ ಬಯಸುವ ಯುವಕರಿಗೆ ಉತ್ತಮ ಆಯ್ಕೆಯಾಗಿದೆ’ ಎಂದಿದ್ದಾರೆ. ಸೈಬೋರ್ಗ್ ಇ- ಎಲೆಕ್ಟ್ರಿಕ್ (Cyborg Bob-E Electric) ಮೋಟಾರ್ಸೈಕಲ್ ಒಂದು ಎಲೆಕ್ಟ್ರಿಕ್ ಡರ್ಟ್ ಬೈಕ್ ಆಗಿದ್ದು, 2.88ಕಿಲೋ ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ, ಇದು 110 ಕಿಮೀ ವ್ಯಾಪ್ತಿಯೊಂದಿಗೆ ಗಂಟೆಗೆ 85 ಕಿಮೀ ಗರಿಷ್ಠ ವೇಗ ನೀಡುತ್ತದೆ. ಇದು ಜಿಯೋ-ಲೊಕೇಟ್/ಜಿಯೋ-ಫೆನ್ಸಿಂಗ್, ಬ್ಯಾಟರಿ, USB ಚಾರ್ಜಿಂಗ್, ಬ್ಲೂಟೂತ್, ಕೀಲೆಸ್ ಇಗ್ನಿಷನ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಕಪ್ಪು ಮತ್ತು ಕೆಂಪು ಎರಡು ಬಣ್ಣಗಳಲ್ಲಿ ಬರುತ್ತದೆ.

ಸೈಬೋರ್ಗ್ ಯೋಡಾದಂತೆಯೇ, ಸೈಬೋರ್ಗ್ ಬಾಬ್-ಇ ಕೂಡ ಬದಲಾಯಿಸಬಹುದಾದ ಬ್ಯಾಟರಿಯನ್ನು ಹೊಂದಿದೆ. ಇದು 15 ಎಎಂಪಿ ಹೋಮ್ ಚಾರ್ಜರ್ನಿಂದ 4ರಿಂದ 5 ಗಂಟೆಗಳ ಒಳಗೆ  ಶೇ.100ರಷ್ಟು ಚಾರ್ಜ್ ನೀಢಲಿದೆ. ಸೈಬೋರ್ಗ್ ಬಾಬ್-ಇ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ನಂತಹ ಮೂರು ರೈಡಿಂಗ್ ಮೋಡ್ಗಳಲ್ಲಿ ಬರಲಿದೆ. ಇವುಗಳಲ್ಲಿ ಪ್ರತಿಯೊಂದೂ ರೈಡಿಂಗ್ ಶೈಲಿ ಮತ್ತು ಸವಾರನ ಅಗತ್ಯಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಮೋಟರ್ಬೈಕ್ನಲ್ಲಿ ರಿವರ್ಸ್ ಮೋಡ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಅಳವಡಿಸಲಾಗಿದೆ, ಜೊತೆಗೆ ಟೆಲಿಸ್ಕೋಪಿಕ್ ಫೋರ್ಕ್ಗಳಿದ್ದು, ಹಿಂಭಾಗದಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಇದೆ.

Simple Scooter ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ದಿನಾಂಕ ಪ್ರಕಟ, 30 ಸಾವಿರ ಬುಕಿಂಗ್!

ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯಿಸುವ ಮೊದಲೇ, ಇಗ್ನಿಟ್ರಾನ್ ಮೋಟೋಕಾರ್ಪ್ ಭಾರತದಾದ್ಯಂತ ದೃಢವಾದ ಮಾರಾಟ ಮತ್ತು ಸೇವಾ ಜಾಲವನ್ನು ನಿರ್ಮಿಸಿದೆ. ಕಂಪನಿಯು ಗ್ರಾಹಕರಿಗೆ ರಸ್ತೆಬದಿಯ ಸಹಾಯ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳು ಮತ್ತು ಪೇ ಆಸ್ ಯು-ಗೋ ಸ್ಟೇಷನ್ಗಳ ಜೊತೆಗೆ ಪಾಲುದಾರಿಕೆ ಹೊಂದಿದೆ, ಇದು 30 ನಿಮಿಷಗಳಲ್ಲಿ ಶೇ.50 ರಷ್ಟು ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಸರಬರಾಜು ಮತ್ತು ಸೇವೆಗಳ ಮೇಲೆ ಹಣವನ್ನು ಗಳಿಸಲು ಮಾರಾಟಗಾರರಿಗೆ 
 

click me!