ಪ್ರತಿ 2000 ಕಿಲೋ ಮೀಟರ್‍‌ಗೆ ಯಾಕೆ ಬೈಕ್ ಸರ್ವೀಸ್ ಮಾಡಿಸಬೇಕು? ಲೇಟ್ ಆದ್ರೆ ಏನಾಗುತ್ತೆ? ತಿಳಿದುಕೊಳ್ಳಿ..!

Published : Aug 14, 2026, 10:11 PM IST
Best Bikes Under 80000

ಸಾರಾಂಶ

ಪ್ರತಿ 2000 ಕಿಲೋ ಮೀಟರ್‌ಗೆ ಬೈಕ್ ಸರ್ವೀಸ್ ಮಾಡಿಸುವುದು ಯಾಕೆ ಅಗತ್ಯ? ಲೇಟ್ ಆದರೆ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಬೈಕ್ ಓಡಿಸುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಅದರ ಆರೋಗ್ಯದ ಬಗ್ಗೆ ನಾವು ಎಷ್ಟು ಕಾಳಜಿ ವಹಿಸುತ್ತೇವೆ? ಅನೇಕರು ಬೈಕ್ ಚೆನ್ನಾಗಿಯೇ ಓಡುತ್ತಿದೆ ಅಂದುಕೊಂಡು ಸರ್ವೀಸ್ ಮಾಡಿಸುವುದನ್ನು ಮುಂದೂಡುತ್ತಾರೆ. ಈ ಒಂದು ಸಣ್ಣ ನಿರ್ಲಕ್ಷ್ಯ ನಿಮ್ಮ ಬೈಕ್‌ನ ಆಯಸ್ಸನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಜೇಬಿಗೆ ದೊಡ್ಡ ಮಟ್ಟದ ಹೊರೆ ನೀಡಬಹುದು.

ಸರ್ವೀಸ್ ಮಾಡಿಸಲು ಸರಿಯಾದ ಸಮಯ ಯಾವುದು?

ತಜ್ಞರ ಪ್ರಕಾರ, ಸಾಮಾನ್ಯ ಬಳಕೆಯ ಬೈಕ್‌ಗಳನ್ನು ಪ್ರತಿ 2000 ಕಿ.ಮೀ ಗೆ ಒಮ್ಮೆ ಸರ್ವೀಸ್ ಮಾಡಿಸುವುದು ಅತ್ಯಗತ್ಯ. ಒಂದು ವೇಳೆ ನಿಮಗೆ ಅನಿವಾರ್ಯ ಕಾರಣಗಳಿಂದ 2000 ಕಿ.ಮೀ ಗೆ ಸಾಧ್ಯವಾಗದಿದ್ದರೆ, ಗರಿಷ್ಠ ಅಂದರೆ 2500 ಕಿ.ಮೀ ಒಳಗಾದರೂ ಮಾಡಿಸಬೇಕು. ಆದರೆ ಯಾವುದೇ ಕಾರಣಕ್ಕೂ 2500 ಕಿ.ಮೀ ದಾಟಿಸಬೇಡಿ. ಇನ್ನು ಹೊಸ ಬೈಕ್ ಖರೀದಿಸಿದವರು ಮೊದಲ ಸರ್ವೀಸ್ ಅನ್ನು 500 ರಿಂದ 750 ಕಿ.ಮೀ ಒಳಗೇ ಮಾಡಿಸುವುದು ಕಡ್ಡಾಯ.

ಸರ್ವೀಸಿಂಗ್ ತಡವಾದರೆ ಏನಾಗುತ್ತದೆ?

  • ಎಂಜಿನ್ ಆಯಿಲ್ ಗುಣಮಟ್ಟ ಕಳೆದುಕೊಂಡಾಗ ಪಿಸ್ಟನ್ ಮತ್ತು ಕ್ಲಚ್ ಪ್ಲೇಟ್‌ಗಳ ಮೇಲೆ ತೀವ್ರ ಒತ್ತಡ ಬಿದ್ದು ಅವು ಬೇಗನೆ ಹಾಳಾಗುತ್ತವೆ.
  • ಸಮಯಕ್ಕೆ ಸರಿಯಾಗಿ ಆಯಿಲ್ ಬದಲಿಸದಿದ್ದರೆ ಎಂಜಿನ್ ಒಳಭಾಗದ ಭಾಗಗಳು ಸವೆಯುತ್ತವೆ.
  • ಸರ್ವೀಸ್ ಮಾಡಿಸದ ಬೈಕ್‌ಗಳು ಇಂಧನವನ್ನು ಹೆಚ್ಚು ಬಳಸುತ್ತವೆ, ಇದರಿಂದ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಚೈನ್ ಡ್ರೈ ಆಗುವುದರಿಂದ ಚೈನ್ ಕಟ್ ಆಗುವ ಅಥವಾ ಬೇಗನೆ ಸವೆಯುವ ಸಾಧ್ಯತೆ ಇರುತ್ತದೆ.

ಸರ್ವೀಸ್ ಲೇಟ್ ಆದ್ರೆ ಎಷ್ಟು ಖರ್ಚಾಗಬಹುದು?

  • ಪಿಸ್ಟನ್ ರಿಪೇರಿ: ಅಂದಾಜು 3,000 ರೂ.
  • ಕ್ಲಚ್-ಪಿಸ್ಟನ್ ಸೆಟ್: ಅಂದಾಜು 4,500 ರೂ.
  • ಎಂಜಿನ್ ಸೀಜ್ ಅಥವಾ ಹಾನಿ: 6,000 ದಿಂದ 10,000 ರೂ. ವರೆಗೆ ಖರ್ಚು ಬರಬಹುದು (ಇದು ಬೈಕ್ ಮಾದರಿ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ).

ಸರ್ವೀಸಿಂಗ್ ಮಾಡುವಾಗ ಏನೆಲ್ಲಾ ಪರಿಶೀಲಿಸಲಾಗುತ್ತದೆ?

  • ಎಂಜಿನ್ ಆಯಿಲ್ ಮತ್ತು ಆಯಿಲ್ ಫಿಲ್ಟರ್ ಬದಲಾವಣೆ
  • ಏರ್ ಫಿಲ್ಟರ್ ಕ್ಲೀನಿಂಗ್ ಅಥವಾ ಬದಲಾವಣೆ
  • ಚೈನ್ ಲೂಬ್ರಿಕೇಶನ್ ಮತ್ತು ಟೈಟ್ ಮಾಡುವುದು
  • ಬ್ರೇಕ್ ಮತ್ತು ಕೇಬಲ್‌ಗಳ ತಪಾಸಣೆ
  • ವೈರಿಂಗ್ ಮತ್ತು ಎಲೆಕ್ಟ್ರಿಕಲ್ ಸಿಸ್ಟಮ್ ಚೆಕಿಂಗ್

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಸರ್ವೀಸ್ ಮಾಡಿಸಿ

  • ಬೈಕ್ ಎಂಜಿನ್‌ನಿಂದ ವಿಚಿತ್ರ ಶಬ್ದ ಬರುತ್ತಿದ್ದರೆ..
  • ಬೈಕ್ ಅತಿಯಾಗಿ ಹೊಗೆ ಬಿಡುತ್ತಿದ್ದರೆ.
  • ಮೈಲೇಜ್ ದಿಢೀರ್ ಕಡಿಮೆಯಾಗಿದ್ದರೆ.
  • ಬೈಕ್ ಸ್ಟಾರ್ಟ್ ಆಗಲು ತೊಂದರೆ ನೀಡುತ್ತಿದ್ದರೆ..

ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸುವುದು ಕೇವಲ ಬೈಕ್‌ನ ಆರೋಗ್ಯಕ್ಕಷ್ಟೇ ಅಲ್ಲ, ನಿಮ್ಮ ಸುರಕ್ಷತೆಗೂ ಅತೀ ಮುಖ್ಯ.

PREV
Read more Articles on
click me!

Recommended Stories

ಭಾರತದ ಮೊದಲ '2026 ಯೆಜ್ಡಿ ರೋಡ್‌ಸ್ಟರ್' ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!
ಹೀರೋ HF ಡಿಲಕ್ಸ್ ಈಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ, ಕೇವಲ 59,999 ರೂಗೆ ಹೊಸ ಬೈಕ್