ಭಾರತದ ಮೊದಲ '2026 ಯೆಜ್ಡಿ ರೋಡ್‌ಸ್ಟರ್' ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!

Published : Aug 12, 2026, 05:36 PM IST
PR Sreejeesh

ಸಾರಾಂಶ

ಒಲಿಂಪಿಕ್ ಪದಕ ವಿಜೇತ ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್, ಹೊಸ '2026 ಯೆಜ್ಡಿ ರೋಡ್‌ಸ್ಟರ್' ಬೈಕ್ ಖರೀದಿಸಿದ ಭಾರತದ ಮೊದಲ ಗ್ರಾಹಕರಾಗಿದ್ದಾರೆ. ಅವರು 'ಯೆಜ್ಡಿ ಗ್ರೀನ್ ಮಾಂಬಾ ರೋಡ್‌ಸ್ಟರ್' ಮಾದರಿಯನ್ನು ಡೆಲಿವರಿ ಪಡೆದುಕೊಂಡಿದ್ದು, ಈ ಬೈಕ್‌ನ ವಿಶಿಷ್ಟ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.

ಒಲಿಂಪಿಕ್ ಪದಕ ವಿಜೇತ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪಿ.ಆರ್. ಶ್ರೀಜೇಶ್ ಅವರು ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಜಾವಾ - ಯೆಜ್ಡಿ ಮೋಟಾರ್‌ಸೈಕಲ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ '2026 ಯೆಜ್ಡಿ ರೋಡ್‌ಸ್ಟರ್ʼ ಬೈಕ್ ಅನ್ನು ಖರೀದಿಸಿದ ಭಾರತದ ಮೊಟ್ಟಮೊದಲ ಗ್ರಾಹಕ ಎಂಬ ಹೆಗ್ಗಳಿಕೆಗೆ ಶ್ರೀಜೇಶ್ ಪಾತ್ರರಾಗಿದ್ದಾರೆ. ಅವರು ವಿಶಿಷ್ಟವಾದ 'ಯೆಜ್ಡಿ ಗ್ರೀನ್ ಮಾಂಬಾ ರೋಡ್‌ಸ್ಟರ್' ಬೈಕ್‌ನ ಡೆಲಿವರಿ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ನಡೆದ ರಾಷ್ಟ್ರೀಯ ಬಿಡುಗಡೆ ಸಮಾರಂಭದಲ್ಲಿ ಈ ಬೈಕ್ ಅನ್ನು ನೋಡಿದ್ದ ಶ್ರೀಜೇಶ್, ಅದರ ವಿಶಿಷ್ಟ ಸ್ಟೈಲ್ ಮತ್ತು ರಾಯಲ್ ಲುಕ್‌ಗೆ ಮಾರುಹೋಗಿದ್ದರು. ಇದೀಗ ಅದೇ ಬೈಕ್‌ ಅನ್ನು ಖರೀದಿಸಿ, ಡೆಲಿವರಿ ಪಡೆದುಕೊಂಡಿದ್ದಾರೆ. ಆಟದ ಮೈದಾನದಲ್ಲಿ ಅಪಾರ ಆತ್ಮವಿಶ್ವಾಸ ಮತ್ತು ಛಲದಿಂದ ಎದುರಾಳಿಗಳನ್ನು ಎದುರಿಸುವ ʼಗೋಡೆʼ ಖ್ಯಾತಿಯ ಶ್ರೀಜೇಶ್ ಅವರ ವ್ಯಕ್ತಿತ್ವಕ್ಕೆ ಈ ಯೆಜ್ಡಿ ರೋಡ್‌ಸ್ಟರ್ ಬೈಕ್ ಹೇಳಿಮಾಡಿಸಿದಂತಿದೆ.

ಏನು ಈ ಗ್ರೀನ್ ಮಾಂಬಾ ರೋಡ್‌ಸ್ಟರ್‌ನ ವಿಶೇಷತೆ?

ರಸ್ತೆಯಲ್ಲಿ ಸಾಗುವಾಗ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಆಕರ್ಷಕ ವಿನ್ಯಾಸವನ್ನು ಇದು ಹೊಂದಿದೆ.

ಮ್ಯಾಟ್-ಗ್ರೀನ್ ಬಣ್ಣದ ಈ ಬೈಕ್‌ಗೆ, ಅರೇಬಿಕಾ-ಬ್ರೌನ್‌ ಬಣ್ಣದ ಕುಶನ್ ಸೀಟ್ ಹಾಗೂ ತಾಮ್ರದ ಬಣ್ಣದ ಡೀಕ್ಯಾಲ್‌ಗಳನ್ನು ನೀಡಲಾಗಿದ್ದು, ಇದು ಬೈಕ್‌ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಇದು 334ಸಿಸಿ ಸಾಮರ್ಥ್ಯದ ಲಿಕ್ವಿಡ್-ಕೂಲ್ಡ್ ಆಲ್ಫಾ2 ಇಂಜಿನ್ ಹೊಂದಿದ್ದು, 6 ಸ್ಪೀಡ್ ಗೇರ್‌ಬಾಕ್ಸ್, ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್, ಎಬಿಎಸ್ ಮತ್ತು ಮಾಡ್ಯುಲರ್ ಸೀಟಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಸಂತಸ ಹಂಚಿಕೊಂಡ ಮಾಜಿ ನಾಯಕ ಶ್ರೀಜೇಶ್‌

ಬೈಕ್‌ ಖರೀದಿಯ ಸಂತಸ ಹಂಚಿಕೊಂಡ ಶ್ರೀಜೇಶ್‌, "ಆಟದ ಮೈದಾನದಷ್ಟೇ, ಮೈದಾನದ ಹೊರಗಿನ ಜೀವನವೂ ಬಹಳ ಮುಖ್ಯ ಎಂದು ನಾನು ನಂಬಿದ್ದೇನೆ. ಕೊಚ್ಚಿಯಲ್ಲಿ ನಡೆದ ಸಮಾರಂಭದಲ್ಲಿ ಈ ಬೈಕ್‌ನ ಡಿಸೈನ್ ಹಾಗೂ ಲುಕ್ ನನ್ನನ್ನು ಮೊದಲ ನೋಟದಲ್ಲೇ ಸೆಳೆದಿತ್ತು. ಯೆಜ್ಡಿ ಬೈಕ್‌ಗಳಿಗೆ ತಲೆಮಾರುಗಳು ಮೆಚ್ಚುವಂತಹ ದೊಡ್ಡ ಇತಿಹಾಸವಿದೆ. ಆ ಇತಿಹಾಸದ ಒಂದು ಭಾಗವಾಗಲು ನಾನು ಇಷ್ಟಪಟ್ಟೆ. ಆಟದ ಮೈದಾನವಿರಲಿ, ರಸ್ತೆಯಿರಲಿ ಅಥವಾ ಜೀವನವಿರಲಿ. ನಮಗೆ ಇಷ್ಟವಾದದ್ದನ್ನು ನಾವು ಬೆನ್ನಟ್ಟಬೇಕು ಎಂಬುದನ್ನೇ ಈ ಬೈಕ್ ನನಗೆ ನೆನಪಿಸುತ್ತದೆ" ಎಂದರು.

ಈ ಬಗ್ಗೆ ಮಾತನಾಡಿದ ಜಾವಾ - ಯೆಜ್ಡಿ ಬ್ರ್ಯಾಂಡ್‌ನ ಮಾತೃಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ ಸಂಸ್ಥಾಪಕ ಅನುಪಮ್ ಥರೇಜಾ, "ರೋಡ್‌ಸ್ಟರ್ ಬೈಕ್ ಎಂದರೆ ಧೈರ್ಯ, ಆತ್ಮವಿಶ್ವಾಸ ಮತ್ತು ಚಾಲೆಂಜರ್ ಸ್ಪಿರಿಟ್. ಇಂತಹ ಬೈಕ್‌ನ ಮೊದಲ ಗ್ರಾಹಕನಾಗಿ ಶ್ರೀಜೇಶ್ ಅವರಂತಹ ಕ್ರೀಡಾ ದಿಗ್ಗಜರು ಸೇರ್ಪಡೆಯಾಗಿರುವುದು ನಮಗೆ ಅತೀವ ಸಂತಸ ತಂದಿದೆ. ಅವರ ಛಲ ಮತ್ತು ಸಾಧನೆ ನಮ್ಮ ಬ್ರ್ಯಾಂಡ್‌ಗೆ ಕನ್ನಡಿಯಂತಿದೆ. ಶ್ರೀಜೇಶ್ ಅವರೊಂದಿಗೆ ನಮ್ಮ 2026ರ ಹೊಸ ಸರಣಿಯ ಬೈಕ್‌ಗಳ ಜರ್ನಿ ಶುರುವಾಗಿರುವುದು ರೋಮಾಂಚನಕಾರಿಯಾಗಿದೆ,” ಎಂದರು.

ಗ್ರೀನ್ ಮಾಂಬಾ ರೋಡ್‌ಸ್ಟರ್ ನಿಂದ ಡೆಲಿವರಿ

ಶ್ರೀಜೇಶ್ ಅವರಿಗೆ ಗ್ರೀನ್ ಮಾಂಬಾ ರೋಡ್‌ಸ್ಟರ್ ಡೆಲಿವರಿ ಮಾಡುವುದರೊಂದಿಗೆ ಯೆಜ್ಡಿಯ 2026ರ ಹೊಸ ಸರಣಿಯ ಬೈಕ್‌ಗಳ ಡೆಲಿವರಿ ಭಾರತದಾದ್ಯಂತ ಅಧಿಕೃತವಾಗಿ ಶುರುವಾಗಿದೆ.

ಜಾವಾ, ಯೆಜ್ಡಿ ಹಾಗೂ ಬಿಎಸ್‌ಎನಂತಹ ಐಕಾನಿಕ್ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳಿಗೆ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಮರುಜೀವ ನೀಡುವ ದೃಷ್ಟಿಯಿಂದ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆ ಸ್ಥಾಪನೆಯಾಗಿದೆ. ಗ್ರಾಹಕರಿಗೆ ಅತ್ಯುತ್ತಮ ಮೋಟಾರ್‌ಸೈಕಲ್ ಅನುಭವವನ್ನು ನೀಡುವುದು ಈ ಕಂಪನಿಯ ಗುರಿಯಾಗಿದೆ.

PREV
Read more Articles on
click me!

Recommended Stories

ಹೀರೋ HF ಡಿಲಕ್ಸ್ ಈಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ, ಕೇವಲ 59,999 ರೂಗೆ ಹೊಸ ಬೈಕ್
Mileage Bikes: ಕಡಿಮೆ ಬೆಲೆ, ಭರ್ಜರಿ ಮೈಲೇಜ್! 80,000 ರೂ.ಗಿಂತ ಕಡಿಮೆ ಬೆಲೆಯ ಬೈಕ್‌ಗಳಿವು