ಹೀರೋ HF ಡಿಲಕ್ಸ್ ಈಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ, ಕೇವಲ 59,999 ರೂಗೆ ಹೊಸ ಬೈಕ್

Published : Aug 11, 2026, 11:45 AM IST
Hero HF Deluxe

ಸಾರಾಂಶ

ಹೀರೋ ಮೋಟಾರ್ ಇದೀಗ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬೈಕ್ ಲಾಂಚ್ ಮಾಡಿದೆ. ತನ್ನ HF ಡಿಲಕ್ಸ್ ಬೈಕ್ ಬೆಲೆ ಮತ್ತಷ್ಟು ಕಡಿತಗೊಳಿಸಿದೆ. ಜೊತೆಗೆ ಹೊಸ ಫೀಚರ್ ಜೊತೆ ಲಭ್ಯವಿದೆ. ಕೇವಲ 59,999 ರೂಪಾಯಿಗೆ ಬೈಕ್ ನಿಮ್ಮ ಕೈಸೇರಲಿದೆ.

ಬೆಂಗಳೂರು (ಆ.11) ಹೀರೋ ಮೋಟಾರ್ ಭಾರತದಲ್ಲಿ ಅಗ್ಗದ ಬೈಕ್‌ನಿಂದ ದುಬಾರಿ ಬೈಕ್‌ವೆರೆಗೂ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ತನ್ನ ಜನಪ್ರಿಯ HF ಡಿಲಕ್ಸ್ ಬೈಕ್‌ ಬೆಲೆ ಕಡಿತಗೊಳಿಸಿ ಹೊಸ ಫೀಚರ್ ಜೊತೆ ನೀಡುತ್ತಿದೆ. HF ಡಿಲಕ್ಸ್ ಬೈಕ್ 66,782 ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿದ್ದ ಬೈಕ್ ಇದೀಗ ಕೇವಲ 59,999 ರೂಪಾಯಿಗೆ ಲಭ್ಯವಿದೆ. ಭಾರಿ ಬೆಲೆ ಕಡಿತದ ಜೊತೆಗೆ ಹೀರೋ ಮೋಟಾರ್ ಭಾರತದ ಬೈಕ್ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬೈಕ್ ಹಾಗೂ ಸ್ಕೂಟರ್ ವಿಭಾಗದಲ್ಲಿ ಇದು ಅತ್ಯಂತ ಅಗ್ಗದ ದರವಾಗಿದೆ.

ಲಿಮಿಟೆಡ್ ಪಿರಿಯೆಡ್ ಆಫರ್

ಹೀರೋ HF ಡಿಲಕ್ಸ್ ಬೈಕ್ ಈ ಆಫರ್ ಲಿಮಿಟೆಡ್ ಪಿರಿಯೆಡ್ ಆಫರ್ ಆಗಿದೆ. ಇಷ್ಟೇ ಅಲ್ಲ ಸ್ಟಾಕ್ಸ್ ಕ್ಲಿಯರೆನ್ಸ್ ಆಫರ್ ಆಗಿದೆ. ಹೀಗಾಗಿ ಯಾವ ಡೀಲರ್ ಬಳಿ HF ಡಿಲಕ್ಸ್ ಸ್ಟಾಕ್ಸ್ ಲಭ್ಯವಿದೆಯೋ ಅಲ್ಲಿ ಕೇವಲ 59,999 ರೂಪಾಯಿ ಬೆಲೆಗೆ ಬೈಕ್ ಲಭ್ಯವಿದೆ. ಪ್ರತಿ ದಿನ ಕಚೇರಿ ಸೇರಿದಂತೆ ವಿವಿಧ ಕೆಲಸಗಳಿಗೆ ಬೈಕ್ ಬಳಸುವ ಮಂದಿಗೆ HF ಡಿಲಕ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಪ್ರಮುಖವಾಗಿ ಅತೀ ಕಡಿಮೆ ಬೆಲೆ ಜೊತೆಗೆ ಪ್ರಾಕ್ಟಿಲ್ ಆಗ 60 ರಿಂದ 70 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ. ಹೀಗಾಗಿ ಬೈಕ್ ಖರೀದಿ ಮಾತ್ರವಲ್ಲ ನಿರ್ವಹಣೆ ಕೂಡ ಅತೀ ಕಡಿಮೆ.

ಎಂಟ್ರಿ ಲೆವೆಲ್ ಬೈಕ್ ವಿಭಾಗದಲ್ಲಿ ಇದೀಗ HF ಡಿಲಕ್ಸ್ ಬೈಕ್ ಹಿಂದಿಕ್ಕಿಲು ಅಸಾಧ್ಯವಾಗಿದೆ. ಕಾರಣ ಕೈಗೆಟುಕುವ ಬೆಲೆಯ ಎಲ್ಲಾ ಸ್ಕೂಟರ್ ಅಥವಾ ಬೈಕ್ ಬೆಲೆ ಸರಿಸುಮಾರು 75 ರಿಂದ 1 ಲಕ್ಷ ರೂಪಾಯಿ ಇದೆ. ಆದರೆ HF ಡಿಲಕ್ಸ್ ಕೇವಲ 59,999 ರೂಪಾಯಿಗೆ ಲಭ್ಯವಿದೆ.

ಹೀರೋ HF ಡಿಲಕ್ಸ್ ಬೈಕ್ 97.2ಸಿಸಿ , ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಏರ್ ಕೂಲ್ಡ್ ಎಂಜಿನ್ 8.02 ಪಿಎಸ್ ಪವರ್ ಹಾಗೂ 8.056 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. ಸಿಟಿ ಹಾಗೂ ಹಳ್ಳಿಯ ಪ್ರತಿದಿನ ಸವಾರಿಗೆ ಇದು ಉತ್ತಮ ಬೈಕ್ ಆಗಿ ಹೊಹೊಮ್ಮಿದೆ. 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. i3S ತಂತ್ರಜ್ಞಾನ ಹೊಂದಿರುವ ಹೀರೋ ಟ್ರಾಫಿಕ್‌ನಲ್ಲೂ ಇಂಧನ ಉಳಿತಾಯ ಮಾಡಲು ನೆರವಾಗುತ್ತದೆ.

ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ರೇರ್ 2 ಸ್ಟೆಪ್ ಅಡ್ಜಸ್ಟೇಬಲ್ ಹೆಡ್ರಾಲಿಕ್ ಶಾಕ್‌ಅಬ್ಸಾರ್ಬರ್ ಹೊಂದಿದೆ. ಹೀಗಾಗಿ ಗುಂಡಿಗಳ ರಸ್ತೆಯಲ್ಲಿ ಸುಗಮ ಸವಾರಿ ನೀಡಲಿದೆ. ಫ್ರಂಟ್ ಹಾಗೂ ರೇರ್ ಡ್ರೇಮ್ ಬ್ರೇಕ್ ನೀಡಲಾಗಿದೆ. ಹೆಚ್ಚಿನ ಸುರಕ್ಷತೆಗಾಗಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ವ್ಯವಸ್ಥೆ ನೀಡಲಾಗಿದೆ.

PREV
Read more Articles on
click me!

Recommended Stories

Mileage Bikes: ಕಡಿಮೆ ಬೆಲೆ, ಭರ್ಜರಿ ಮೈಲೇಜ್! 80,000 ರೂ.ಗಿಂತ ಕಡಿಮೆ ಬೆಲೆಯ ಬೈಕ್‌ಗಳಿವು
ರೆಡ್ ಡಾಟ್ ಪ್ರಶಸ್ತಿ ಗೆದ್ದ ಡುಕಾಟಿ ಮಾನ್‌ಸ್ಟರ್ ಬೈಕ್ ಭಾರತದ ರಸ್ತೆಗೆ ಎಂಟ್ರಿ, ಏನಿದರ ಬೆಲೆ?