Bike Thief 60 ಸೆಕೆಂಡ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಕಳ್ಳತನ, ಕರಾಮತ್ತು ನೋಡಿ ಪೊಲೀಸರೆ ದಂಗು!

By Suvarna News  |  First Published Mar 14, 2022, 4:41 PM IST
  • ಲಾಕ್ ಹಾಕಿ ನಿಲ್ಲಿಸಿದ್ದ ಬೈಕ್ ಕಳ್ಳತನ, 1 ನಿಮಿಷವೂ ಬೇಡ
  • ಕಳ್ಳರ ಹಿಡಿದ ಪೊಲೀಸ್, ಕಳ್ಳತನ ಕುರಿತು ಮಾಹಿತಿ ಸಂಗ್ರಹ
  • ಪೊಲೀಸರ ಎದರು ಕಳ್ಳತನ ಹೇಗ ಮಾಡುತ್ತಿದ್ದರು ಅನ್ನೋ ಮಾಹಿತಿ
  • ಕಿರಾತಕರ ಕರಾಮತ್ತು ನೋಡಿದ ಪೊಲೀಸರೇ ದಂಗು

ನವದೆಹಲಿ(ಮಾ.14): ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ, ಪಾರ್ಕಿಂಗ್ ಮಾಡಿದ್ದ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹೀಗೆ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಹಿಡಿದ ಪೊಲೀಸರಿಗೆ ಅಚ್ಚರಿ ಎದುರಾಗಿದೆ. ಕಳ್ಳತನ ಹೇಗೆ ಮಾಡುತ್ತೀರಿ ಅನ್ನೋ ಪೊಲೀಸರ ಪ್ರಶ್ನೆ ಕೇವಲ 60 ಸೆಕೆಂಡ್ ತೆಗೆದುಕೊಳ್ಳದೆ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನದ ಕುರಿತು ಸ್ವತಃ ಕಳನ್ನೇ ಪೊಲೀಸರಿಗೆ ವಿವರಿಸಿದ್ದಾನೆ.

ಇದು ಉತ್ತರದ ರಾಜ್ಯದಲ್ಲಿ ನಡೆದ ಘಟನೆ. ಮನೆ ಮುಂದಿ ನಿಲ್ಲಿಸಿದ್ದ, ಪಾರ್ಕಿಂಗ್ ಸೇರಿದಂತೆ ಹಲವೆಡೆಗಳಲ್ಲಿ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರ ಗ್ಯಾಂಗನ್ನು ಪೊಲೀಸರು ಹಿಡಿದಿದ್ದಾರೆ. ಈ ಗ್ಯಾಂಗ್‌ನಿಂದ ಹಲವು ರಾಯಲ್ ಎನ್‌ಫೀಲ್ಡ್ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಬೈಕ್‌ಗಳನ್ನು ಹೇಗೆ ಕದಿಯಲಾಗುತ್ತದೆ? ಲಾಕ್ ಹಾಕಿರುವುದರಿಂದ ಬೈಕ್ ಕದಿಯುವುದು ಸುಲಭದ ಮಾತಲ್ಲ. ಅದರೂ ಅದು ಹೇಗೆ ಸಾಧ್ಯ ಎಂದು ಪೊಲೀಸರು ಕಳ್ಳನನ್ನೇ ಪ್ರಶ್ನಿಸಿದ್ದಾರೆ.

Latest Videos

undefined

Bengaluru Crime: ಬೈಕ್‌ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್‌ ಕಳ್ಳನ ಸೆರೆ

ಕಳ್ಳ ನೇರವಾಗಿ ಕದ್ದ ಬೈಕ್ ಒಂದರಲ್ಲಿ ಕುಳಿತು ಪ್ರಾತ್ಯಕ್ಷಿಕೆ ನೀಡಿದ್ದಾನೆ. ಕಾಲಿನಿಂದ ಮತ್ತಗೆ ದೂಡಿದಾಗ ಹ್ಯಾಂಡಲ್ ಲಾಕ್ ಕಟ್ ಆಗಿದೆ. ಇನ್ನು ಹೆಡ್‌ಲೈಟ್ ಕೆಳಗಿರುವ ವೈಯರ್ ಕಟ್ ಮಾಡಿ ಡೈರೆಕ್ಟ್ ಮಾಡಿದ್ದಾನೆ. ಬಳಿಕ ಸೆಲ್ಫ್ ಸ್ಟಾರ್ಟ್ ಅಥವಾ ಕಿಕ್ ಸ್ಟಾರ್ಟ್ ಬೈಕ್ ಆರಾಮಾಗಿ ಸ್ಟಾರ್ಟ್ ಆಗಿದೆ. ಬೈಕ್ ಕಳ್ಳತನ ಹೇಗೆ ಮಾಡುತ್ತೇವೆ ಎಂದು ತೋರಿಸಲು ಈತ 60 ಸೆಕೆಂಡ್ ಕೂಡ ತೆಗೆದುಕೊಂಡಿಲ್ಲ. ಈತನ ಕರಾಮತ್ತು ನೋಡಿದ ಪೊಲೀಸರಿಗೆ ಅಚ್ಚರಿಯಾಗಿದೆ. 

ಬೈಕ್‌ ಕಳ್ಳತನ: ಆರೋಪಿ ಬಂಧನ
ಹೊಸಪೇಟೆ ಚಿತ್ತವಾಡ್ಗಿಯ ಠಾಣೆಯ ಪೊಲೀಸರು ಬೈಕ್‌ ಕಳ್ಳತನದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಿ . 6.55 ಲಕ್ಷ ಬೆಲೆಬಾಳುವ ವಿವಿಧ ಕಂಪನಿಯ ಏಳು ಬೈಕ್‌ಗಳನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ.ಬಳ್ಳಾರಿ ನಿವಾಸಿ ಸುಧೀರ್‌ (41) ಬಂಧಿತ ಆರೋಪಿ. ನಗರದ ಬಸವೇಶ್ವರ ಬಡಾವಣೆಯಲ್ಲಿ ನಂಬರ್‌ ಪ್ಲೇಟ್‌ ಹೊಂದಿರದ ಬುಲೆಟ್‌ ಬೈಕ್‌ನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ತಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ಕಳೆದ ಜನವರಿಯಲ್ಲಿ ವಿಜಯನಗರ ಕಾಲೇಜ್‌ ರಸ್ತೆಯಲ್ಲಿ ಬುಲೆಟ್‌ ಬೈಕ್‌ ಕಳ್ಳತನವಾದ ಬಗ್ಗೆ ಸಮೀಪದ ಸಂಕ್ಲಾಪುರ ಗ್ರಾಮದ ರಾಜೇಶ್‌ ಎಂಬವರು ಚಿತ್ತವಾಡ್ಗಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು.

Traffic Violation ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!

ಹೊಸಪೇಟೆ ಹಾಗೂ ಬಳ್ಳಾರಿಯಲ್ಲಿ ಆರೋಪಿ ಬೈಕ್‌ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಡಿವೈಎಸ್ಪಿ ವಿಶ್ವನಾಥರಾವ್‌ ಮಾರ್ಗದರ್ಶನದಲ್ಲಿ ಚಿತ್ತವಾಡ್ಗಿ ಠಾಣೆಯ ಪಿಐ ಜಯಪ್ರಕಾಶ್‌ ನೇತೃತ್ವದಲ್ಲಿ ಸಿಬ್ಬಂದಿಯಾದ ನಾಗರಾಜ, ಶಿವಕುಮಾರ, ಧ್ರುವ ಚಂದ್ರು, ಕೋಟೇಶ್‌ ಹಾಗೂ ತಿರುಮಲೇಶ್‌ ಕಾರ್ಯಾಚರಣೆ ನಡೆಸಿದರು. ವಿಜಯನಗರ ಎಸ್ಪಿ ಡಾ. ಅರುಣ್‌ ಕೆ. ಅವರು ಶ್ಲಾಘಿಸಿದ್ದಾರೆ.ಹೊಸಪೇಟೆಯ ಚಿತ್ತವಾಡ್ಗಿ ಠಾಣೆಯ ಪೊಲೀಸರು ಬೈಕ್‌ ಕಳ್ಳತನ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಏಳು ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಇಬ್ಬರು ಕಳ್ಳ ಮೆಕ್ಯಾನಿಕ್‌ಗಳ ಸೆರೆ; 20 ದ್ವಿಚಕ್ರ ವಾಹನ ಜಪ್ತಿ
ಬೆಂಗಳೂರುಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಮೆಕ್ಯಾನಿಕ್‌ಗಳನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿ, 20 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಮೈಸೂರು ರಸ್ತೆಯ ಟಿ.ಆರ್‌.ಮಿಲ್‌ ಸಮೀಪದ ನಿವಾಸಿಗಳಾದ ರಾಮದಾಸ್‌ ಹಾಗೂ ಶರವಣ್‌ ಬಂಧಿತರಾಗಿದ್ದು, ಆರೋಪಿಗಳಿಂದ .11.45 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಚಾಮರಾಜ ಠಾಣಾ ವ್ಯಾಪ್ತಿಯಲ್ಲಿ ಪಲ್ಸರ್‌ ಬೈಕ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರ ಬಂಧನದಿಂದ ಚಾಮರಾಜಪೇಟೆ, ಹನುಮಂತ ನಗರ, ಚಂದ್ರಾ ಲೇಔಟ್‌, ಕುಮಾರಸ್ವಾಮಿ ಹಾಗೂ ಕೆಂಪೇಗೌಡ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!