ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

By Suvarna NewsFirst Published Nov 5, 2020, 4:11 PM IST
Highlights

ಜಗತ್ತಿನ ಹೆಸರಾಂತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಗೆ ಹೆಸರಾಗಿರುವ ಟಿವಿಎಸ್ ಮೋಟಾರ್ ಕಂಪನಿ, ತನ್ನ ಹೊಸ ನಮೂನೆಯ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ ಮಾಡಿದೆ. ಬೈಕ್ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.
 

ಭಾರತೀಯ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಭಾರಿ ಪ್ರದರ್ಶನ ತೋರುತ್ತಿರುವ ಟಿವಿಎಸ್ ಮೋಟಾರ್ ಕಂಪನಿ, ಹಬ್ಬದ ಸಂದರ್ಭದಲ್ಲಿ ಟಿವಿಎಸ್ ಅಪಾಚೆ ಆರ್‌ಟಿಆರ್ ಸರಣಿಯಲ್ಲಿ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗಾಗಲೇ ಟಿವಿಎಸ್, ಅಪಾಚೆ ಆರ್‌ಟಿಆರ್ ಸರಣಿಯ 40 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿ, ಗೆಲುವಿನ ನಗೆ ಬೀರಿದೆ. ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿದೆ. 

ಶೀಘ್ರ ಮಾರುಕಟ್ಟೆಗೆ ಬರಲಿದೆ ಕವಾಸಕಿ W175 ಬೈಕ್?

ಈ ಟಿವಿಎಸ್ ಅಪಾಚೆ ಆರ್‌ಟಿಆರ್ 4ವಿ ಬೈಕ್, ಸ್ಪೋರ್ಟ್, ಅರ್ಬನ್ ಮತ್ತು ಮಳೆ.. ಈ ಮೂರು ಮೋಡ್‌ಗಳನ್ನು ಹೊಂದಿದ್ದು. ಈ ಮೂರು ವಿಭಾಗದಲ್ಲಿ ಸರಾಗವಾಗಿ ಚಾಲನೆಯ ಅನುಭವ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಂದರೆ, ಈ ಬೈಕ್ ಅನ್ನು ನೀವು ನಗರ ಪ್ರದೇಶದಲ್ಲಿ ಆರಾಮವಾಗಿ ಚಲಾಯಿಸಬಹುದು. ಹಾಗೆಯೇ, ಸ್ಪೂರ್ಟ್ಸ್ ಲುಕ್ ಮತ್ತು ಫೀಚರ್‌ಗಳನ್ನೂ ಹೊಂದಿದ್ದು, ಮಳೆಗಾಲದಲ್ಲೂ ಬೈಕ್ ರೈಡಿಂಗ್‌ಗೆ ಯಾವುದೇ ತೊಂದರೆ ಇಲ್ಲದೇ, ಅತ್ಯುತ್ತಮ ಅನುಭವವನ್ನು ನೀಡುತ್ತದೆ.

ಬೈಕ್ ಚಾಲನೆ ವೇಳೆಯ ನೀವು ಮೋಡ್‌ಗಳನ್ನು ಬದಲಿಸಬಹುದು. ಜೊತೆಗೆ ಇದು ಸ್ಫೋರ್ಟ್ಸ್ ಅಡ್ಜಸ್ಟೇಬಲ್ ಫ್ರಂಟ್ ಸಸ್ಪೆನ್ಷನ್ ಹೊಂದಿದೆ. ಈ ರೀತಿಯ ಸೌಲಭ್ಯ ಇರುವ ಈ ಸೆಗ್ಮೆಂಟ್‌ನ ಮೊದಲ ಬೈಕ್ ಇದಾಗಿದೆ.

ಏನು ವಿಶೇಷತೆಗಳು?
ಟಿವಿಎಸ್ ಅಪಾಚೆ ಆರ್‌ಟಿಆರ್ 4ವಿ ಬೈಕ್ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.  ಟೈಕ್ನಿಕಲ್ ಫೀಚರ್‌ಗಳ ಬಗ್ಗೆ ಹೇಳುವುದಾದರೆ, ರೇಸ್ ಟ್ಯೂನ್ಡ್ ಫ್ಯೂಲ್ ಇಂಜೆಕ್ಷನ್, ರೇಸ್ ಟ್ಯೂನ್ಡ್ ಸ್ಲಿಪರ್ ಕ್ಲಚ್, ಬ್ಲೂಟೂಥ್ ಆಧಾರಿತ ಟಿವಿಎಸ್ ಸ್ಮಾರ್ಟ್‌ಎಕ್ಸ್ ಕನೆಕ್ಟ್, ಎಲ್‌ಇಡಿ ಹೆಡ್ ಲ್ಯಾಂಪ್ ಮತ್ತು ಡ್ಯುಯಲ್ ಚಾನೆಲ್/ಸಿಂಗಲ್ ಚಾನೆಲ್ ಎಬಿಎಸ್ ಕೂಡ ಈ ಬೈಕ್ ಒಳಗೊಂಡಿದೆ. ಈ ಬೈಕ್‌ಗೆ ಅಡ್ಜಸ್ಟೇಬಲ್ ಲೀವರ್‌ಗಳನ್ನು ನೀಡಲಾಗಿದ್ದು, ಅದು ಬೈಕ್‌ ಪ್ರೀಮಿಯಮ್ ಮೌಲ್ಯವನ್ನು ತಂದುಕೊಟ್ಟಿದೆ ಎಂದು ಹೇಳಬಹುದು.

ಈ ಮೋಟಾರ್ ಸೈಕಲ್  ಎಲ್ಲ ನ್ಯೂ ಮ್ಯಾಟ್ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. ಈಗಾಗಲೇ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬುಕ್ಕಿಂಕ್ ಆರಂಭವಾಗಿದ್ದು, ಮುಂದಿನ ವಾರದಲ್ಲಿ ಈ ಬೈಕ್‌ಗಳು ರಸ್ತೆಗಿಳಿಯಬಹುದು.

ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ ಕಟ್ಟೋದು ಬೇಡ!

ಈ ಬೈಕ್ ಆರ್‌ಟಿ-ಎಫ್ಐ ತಂತ್ರಜ್ಞಾನದೊಂದಿಗೆ 197.755 ಸಿಸಿ ಸಿಂಗಲ್  ಸಿಲೆಂಡರ್ ಹಾಗೂ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ.  8,500 ಆರ್‌ಪಿಎಂನಲ್ಲಿ ಈ ಬೈಕ್ ಗರಿಷ್ಠ 20.5 ಗರಿಷ್ಠ ಪವರ್ ಉತ್ಪಾದಿಸಿದರೆ, 7,500 ಆರ್‌ಪಿಎಂನಲ್ಲಿ 16.8 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ 6 ಸ್ಪೀಡ್ ಗೇರ್‌ಗಳನ್ನು ಹೊಂದಿದೆ. 

ಬೆಲೆ ಎಷ್ಟು?
ಅತ್ಯಾಧುನಿಕ ತಂತ್ರಜ್ಋನ ಫೀಚರ್‌ಗಳನ್ನು ಹೊಂದಿರುವ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಎಸ್‌6 ನಿಯಮಗಳಡಿ ಸಿದ್ಧಗೊಂಡಿದೆ. ಈ ಬೈಕ್ ಬೆಲೆ 1.25 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಸಿಂಗಲ್ ಚಾನೆಲ್ ಎಬಿಎಸ್ ಮಾದರಿ ಬೈಕ್ ಬೆಲೆ 1.25 ಲಕ್ಷ ರೂಪಾಯಿ(ಎಕ್ಸ್ ಶೋರೂಮ್ ದಿಲ್ಲಿ) ಇದ್ದರೆ, ಡುಯಲ್ ಚಾನೆಲ್ ಎಬಿಎಸ್ ಬೈಕ್ ಬೆಲೆ 1.31 ಲಕ್ಷ ರೂಪಾಯಿಯಾಗಿದೆ. ಗಮನಿಸಬೇಕಾದ ಸಂಗತಿ ಏನೆಂದರೆ, ಹೊಸ ಫೀಚರ್‌ಗಳೆಲ್ಲವೂ ಡುಯಲ್ ಚಾನೆಲ್ ಎಬಿಎಸ್‌ ಮಾಡೆಲ್‌ ಬೈಕ್‌ನಲ್ಲಿ ಲಭ್ಯವಾಗಲಿವೆ.

ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್

click me!