ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!

By Suvarna News  |  First Published Nov 5, 2020, 4:02 PM IST

ಹಬ್ಬದ ಹಿನ್ನೆಲೆಯಲ್ಲಿ ಹೋಂಡಾ ಕಂಪನಿ ತನ್ನ ಹೈನೆಸ್ ಬೈಕ್ ಖರೀದಿಯ ಮೇಲೆ ಬೃಹತ್ ಆಫರ್‌ಗಳನ್ನು ನೀಡುತ್ತಿದೆ. ಆಸಕ್ತ ಬೈಕ್ ಗ್ರಾಹಕರು ಈ ಬಗ್ಗೆ ಆಫರ್‌ಗಳ ಲಾಭವನ್ನು ಪಡೆದುಕೊಳ್ಳಬಹುದು.
 


ಭಾರತೀಯ ರಸ್ತೆಗಳಲ್ಲಿ ರಾಯಲ್‌ ಎನ್‌ಫೀಲ್ಡ್ ಮತ್ತು ಜಾವಾ ಬೈಕುಗಳಿಗೆ ಠಕ್ಕರ್ ಕೊಡಲು ಮುಂದಾಗಿರುವ ಹೊಂಡಾ  ಹೈನೆಸ್ ಈಗ ಭಾರಿ ಸದ್ದು ಮಾಡುತ್ತಿದೆ. ನೀವೇನಾದರೂ ಈ ಹಬ್ಬದ ಸಂದರ್ಭದಲ್ಲಿ ಹೊಂಡಾ ಹೈನೆಸ್ ಸಿಬಿ350 ಬೈಕ್ ಖರೀದಿಸುವ ಇಚ್ಛೆ ಹೊಂದಿದ್ದಾರೆ. ಈಗಲೇ ಖರೀದಿಸಿ. ಯಾಕೆಂದರೆ, 43,000 ರೂಪಾಯಿವರೆಗೂ ನೀವು ಉಳಿತಾಯ ಮಾಡಬಹುದು!

ಹೌದು, ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಂಡಾ ಸಂಸ್ಥೆಯ ಹಬ್ಬದ ಸಂದರ್ಭದಲ್ಲಿ ವಿಶೇಷ ಆಫರ್‌ಗಳನ್ನು ನೀಡುತ್ತಿದೆ. ಬಿಎಸ್‌6 ನಿಯಮಗಳಡಿ ಉತ್ಪಾದಿಸಲಾಗುತ್ತಿರುವ ಈ ಪ್ರೀಮಿಯಮ್ ಬೈಕ್ ಖರೀದಿಯನ್ನು ಹೆಚ್ಚಿಸಲು ಸಂಸ್ಥೆ ಮುಂದಾಗಿದೆ. ಹಾಗಾಗಿ, ಕಂಪನಿ ಈಗ ನೀಡುತ್ತಿರುವ ಆಫರ್ ಅನ್ನು ಹಬ್ಬದ ಸಂದರ್ಭದಲ್ಲಿ ನೀಡಲಾಗುತ್ತಿರುವ ಅತ್ಯಂತ ಬೃಹತ್ ಆಫರ್ ಎಂದು ಬಣ್ಣಿಸಿದೆ. ಐಸಿಸಿಐ ಬ್ಯಾಂಕ್‌ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿರುವ ಕಂಪನಿ, ಹೊಂಡಾ ಹೈನೆಸ್‌ ಖರೀದಿಗೆ ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದೆ.

Tap to resize

Latest Videos

undefined

ಬಿಡುಗಡೆಯಾದ ತಿಂಗಳಲ್ಲೇ ಥಾರ್‌ಗೆ 20000 ಬುಕ್ಕಿಂಗ್!

ಆಫರ್‌ಗಳೇನು ?
ಹೊಂಡಾ ಹೈನೆಸ್ ಖರೀದಿಸುವ ಗ್ರಾಹಕರಿಗೆ ಕಂಪನಿ ನೀಡುತ್ತಿರುವ ಆಫರ್‌ಗಳು ಅನೇಕ ರೀತಿಯಲ್ಲಿ ಲಾಭ ತಂದುಕೊಡುವಂತಿವೆ. ನಿಗದಿತ ಅವಧಿಯವರೆಗೆ ಗ್ರಾಹಕರಿಗೆ ಕಂಪನಿಯು ಶೇ.100ರಷ್ಟು ಹಣಕಾಸು ನೆರವು ಒದಗಿಸಲಿದೆ. ಅದು ಕೂಡ ಆನ್‌ ರೋಡ್ ಬೆಲೆ ಇದು ಈ ನೆರವು ದೊರೆಯಲಿದೆ. ಇದರ ಜೊತೆಗೆ ಕಡಿಮೆ ಬಡ್ಡಿ ದರದ ಆಫರ್ ಅನ್ನು ಕೂಡ ಕಂಪನಿ ನೀಡುತ್ತಿದೆ. ಈ ಬಡ್ಡಿ ದರವು ಶೇ.5.6ರಿಂದ ಆರಂಭವಾಗುತ್ತದೆ. ಇದು ಈಗಾಗಲೇ ಮಾರುಕಟ್ಟೆಯಲ್ಲಿ ಒದಗಿಸಲಾಗುತ್ತಿರುವ ಬಡ್ಡಿ ದರಕ್ಕೆ ಹೋಲಿಸಿದರೆ ಅರ್ಧದಷ್ಟು ಬಡ್ಡಿದರವಾಗುತ್ತದೆ ಎಂಬುದು ಕಂಪನಿಯ ಕ್ಲೇಮು. ಅಂದರೆ, ಈಗ ಕಂಪನಿ ಒದಗಿಸುತ್ತಿರುವ ಶೇ.5.6ರಷ್ಟು ಬಡ್ಡಿದರದಲ್ಲಿ ಹೋಂಡಾ ಹೈನೆಸ್ ಖರೀದಿಸಿದರೆ 43 ಸಾವಿರ ರೂಪಾಯಿವರೆಗೂ ನೀವು ಉಳಿತಾಯ ಮಾಡಬಹುದು. ಮತ್ತೊಂದು ಪ್ರಮುಖ ಆಫರ್ ಎಂದರೆ, ಇಎಂಐ ಕೂಡ ಕಡಿಮೆ ಇರಲಿದೆ. ಕನಿಷ್ಠ 4,999 ರೂಪಾಯಿಂದ ಇಎಂಐ ಆರಂಭವಾಗಲಿದೆ. ಈ ಎಲ್ ಆಫರ್‌ಗಳು ಜಬರ್ದಸ್ತ್ ಆಗಿದ್ದು, ಖರೀದಿದಾರರಿಗೆ ಅನುಕೂಲಕರವಾಗಿವೆ. 

ಹೈನೆಸ್ ವಿಶೇಷತೆಗಳೇನು?
ಐದು ಸ್ಟ್ರೋಕ್ ಒಎಚ್‌ಸಿ ಸಿಂಗಲ್ ಸಿಲೆಂಡರ್ ಇಂಜಿನ್ ಹೊಂದಿರುವ ಹೈನೆಸ್ 3000 ಆರ್‌ಪಿಎಂಗೆ 30 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಥದ್ದೇ ರೋಡುಗಳಲ್ಲೂ ಚಲಿಸುವಂತೆ ಬೈಕ್ ರೂಪಿಸಾಗಿದೆ ಎಂಬುದು ಹೋಂಡಾ ಸಂಸ್ಥೆಯ ಭರವಸೆಯಾಗಿದೆ. 1107 ಮಿಮೀ ಎಂತ್ತರ, 181 ಕೆಜಿ ಭಾರದ ಈ ಬೈಕು 166 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಆರು ಬಣ್ಣಗಳಲ್ಲಿ  ಈ ಬೈಕ್ ಗ್ರಾಹಕರಿಗೆ ಲಭ್ಯವಿದೆ.

ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ್ ಕಟ್ಟೋದು ಬೇಡ!...

ಎಲ್ಇಡಿ ಲೈಟ್‌ಗಳು, ಟ್ರಾಕ್ಷನ್ ಕಂಟ್ರೋಲ್, ಡುಯಲ್ ಎಬಿಎಸ್ ಹೋಂಡಾ ಹೈನೆಸ್ ಬೈಕ್‌ನ ಪ್ರಮುಖ ಆಕರ್ಷಣೆಗಳು ಎಂದು ಹೇಳಬಹುದು. ಫೋನ್‌ಗೆ ಬ್ಲೂಟೂಥ್ ಮೂಲಕ ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಿಕೊಂಡರೆ ಧ್ವನಿ ಮೂಲಕವೇ ಮ್ಯೂಸಿಕ್, ಕರೆಗಳನ್ನು ನಿರ್ವಹಣೆ ಮಾಡಬಹುದಾದ ಸ್ಮಾರ್ಟ್ ವಾಯ್ಸ್ ಕಂಟ್ರೋಲ್ ಸಿಸ್ಟಮ್ ಕೂಡ ಈ ಬೈಕ್‌ನಲ್ಲಿದ್ದು, ಅದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. 350 ಸಿಸಿ ಸಾಮರ್ಥ್ಯದ ಈ ಬೈಕು ಎರಡು ಮಾದರಿಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ನೋಡುವುದಕ್ಕೂ ತುಂಬಾ ಆಕರ್ಷಕವಾಗಿರುವ ಈ ಬೈಕಿನ ರೈಡಿಂಗ್ ಕೂಡ ನಿಮಗೆ ಅತ್ಯದ್ಭುದವಾದ ಅನುಭವವನ್ನು ನೀಡುತ್ತದೆ. ಈ ಬೈಕಿನ ಆರಂಭಿಕ ಬೆಲೆ ಅಂದಾಜು 1.90 ಲಕ್ಷ ರೂಪಾಯಿ(ಎಕ್ಸ್ ಶೋರೂಮ್ ಬೆಲೆ) ಆಗಿದೆ.

ಭಾರತದ ದ್ವಿಚಕ್ರವಾಹನದ ಮಾರುಕಟ್ಟೆಯಲ್ಲಿ ಅದರಲ್ಲೂ 350 ಸಿಸಿ ಎಂಜಿನ್ ಸೆಗ್ಮೆಂಟ್‌ನಲ್ಲೂ ಸ್ವಾಮತ್ಯ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯ ದ್ವಿಚಕ್ರವಾಹನಗಳಿಗೆ ಸ್ಪರ್ಧೆ ನೀಡುವ ಭರವಸೆಯನ್ನು ಹೋಂಡಾ ಈ ಹೈನೆಸ್ ಹೊರ ಹಾಕಿದೆ. ಈಗಾಗಲೇ ಅನೇಕ ಬಳಕೆದಾರರು ಈ ಬೈಕಿನ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್

click me!