ಶೀಘ್ರ ಮಾರುಕಟ್ಟೆಗೆ ಬರಲಿದೆ ಕವಾಸಕಿ W175 ಬೈಕ್?

By Suvarna News  |  First Published Oct 19, 2020, 2:25 PM IST

ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸಿದ್ದ ಜಪಾನ್‌ನ ಕವಾಸಕಿ ಕಂಪನಿಯು ಇದೀಗ ತನ್ನ ಹೊಸ ರೆಟ್ರೋ ಮಾದರಿಯ ಬೈಕ್‌ನೊಂದಿಗೆ ಮತ್ತೆ ಬರುವ ಸಿದ್ಧತೆಯಲ್ಲಿದೆ.


ಕವಾಸಕಿ ಎಂದರೆ ಯಾರಿಗೂ ಅಷ್ಟು ನೆನಪಿಗೆ ಬರುವುದಿಲ್ಲ. ಆದರೆ, ನೀವು ಅದೇ ಕವಾಸಕಿ ಬಜಾಜ್ ಎಂದ ಕೂಡಲೇ ನಿಮ್ಮ ಕಣ್ಣ ಮುಂದೆ ರೆಟ್ರೊ ಮಾದರಿಯ ಮೋಟಾರ್‌ಸೈಕಲ್‌ಗಳು ಹಾದು ಹೋಗುತ್ತವೆ. ಜಪಾನ್‌ನ ಕವಾಸಕಿ ಕಂಪನಿಯೊಂದಿಗೆ ಬಜಾಜ್ ಭಾರತದ ಮಾರುಕಟ್ಟೆಯಲ್ಲಿ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿತ್ತು. ಸಾಕಷ್ಟು ಮೋಟಾರ್ ಸೈಕಲ್‌ಗಳು ಬಳಕೆದಾರರ ಪ್ರೀತಿಯನ್ನು ಗಳಿಸಿದ್ದವು. ಫೋರ್ ಸ್ಟ್ರೋಕ್ ಎಂಜಿನ್ ಹೆಚ್ಚು ಜನಪ್ರಿಯವಾಗಿದ್ದವು. ಪವರ್ ಹಾಗೂ ಮೈಲೇಜ್ ದೃಷ್ಟಿಯಿಂದ ಜನರು ಮೋಟಾರ್ ಸೈಕಲ್‌ಗಳಿಗೆ ಮಾರು ಹೋಗಿದ್ದರು. ಇದೀಗ ಅದೇ ಕವಾಸಕಿ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾದೂ ತೋರಿಸಲು ಮತ್ತೆ ಬರುತ್ತಿದೆ.

ಹೌದು ಇದು ನಿಜ. ಈಗ ರೆಟ್ರೋ ಬೈಕ್‌ಗಳನ್ನು ಆಧುನಿಕ ಸ್ಪರ್ಶದೊಂದಿಗೆ ಮರು ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಪರಿಚಿಯಿಸುವ ಟ್ರೆಂಡ್ ಶುರವಾಗಿದೆ. ಈಗಾಗಲೇ ಮಹಿಂದ್ರಾ ಕಂಪನಿ ಜಾವಾ ಬೈಕ್‌ಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ. ಹೊಂಡಾ ಕೂಡ ರೆಟ್ರೊ ಮಾದರಿಯ ಹೊಂಡಾ ಹೈನೆಸ್‌ ಬಿಡುಗಡೆ ಮಾಡಿ ಸದ್ದು ಮಾಡುತ್ತಿದೆ. ಇದೀಗ ಅದೇ ರೀತಿಯ ರೆಟ್ರೋ ಬೈಕ್‌ ಅನ್ನು ಕವಾಸಕಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಸೆಗ್ಮೆಂಟ್‌ನಲ್ಲಿ ಈಗಾಗಲೇ ಪ್ರಭುತ್ವ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಬೈಕುಗಳಿಗೆ ಕವಾಸಕಿಯ ಹೊಸ ಮೋಟಾರ್ ಸೈಕಲ್ ಪೈಪೋಟಿ ನೀಡಲು ಸಜ್ಜಾಗಿದೆ.

Tap to resize

Latest Videos

undefined

ಕೈಗೆಟುಕುವ ದರದಲ್ಲಿ ಕ್ವಿಡ್ ರೀತಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾದ ರೆನಾಲ್ಟ್!...

ಈ ಬೈಕ್ ಹೆಸರು ಕವಾಸಕಿ ಡಬ್ಲ್ಯೂ175
ಕವಾಸಕಿ ಡಬ್ಲ್ಯೂ175 ಬೈಕ್ ಕ್ಲಾಸಿಕಲ್ ಬೈಕ್ ಆಗಿದ್ದು, ವಿನ್ಯಾಸದಲ್ಲಿ ರೆಟ್ರೋ ಮಾದರಿಯನ್ನು ಹೊಂದಿದೆ. ಅಂದರೆ, ಇದು ರಾಯಲ್‌ ಎನ್‌ಫೀಲ್ಡ್ 350 ಬೈಕ್‌ಗೆ ನೇರವಾಗಿ ಟಕ್ಕರ್ ನೀಡಲಿದೆ. ಆದರೆ, 350 ಸಿಸಿ ಬೈಕ್ ಅಲ್ಲ, ಬದಲಿಗೆ 175 ಸಿಸಿ ಬೈಕ್ ಆಗಿರಲಿದೆ ಎನ್ನುತ್ತವೆ ಕಂಪನಿಯ ಮೂಲಗಳು. ಆದರೆ, 175 ಸಿಸಿ ಬೈಕ್ ಭಾರತದಲ್ಲಿ ಸಕ್ಸಸ್ ಆಗುತ್ತಾ ಕಾದು ನೋಡಬೇಕು. ಯಾಕೆಂದರೆ, ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ 150 ಸಿಸಿ ಬೈಕ್‌ಗಳು ಬೇಕಾದಷ್ಟಿವೆ ಮತ್ತು ಜನಪ್ರಿಯವಾಗಿವೆ. ಹಾಗಾಗಿ 300 ಸಿಸಿ ಸೆಗ್ಮೆಂಟ್‌ನಲ್ಲಿ ಕವಾಸಕಿ 175 ಸಿಸಿ ಪವರ್‌ನೊಂದಿಗೆ ಹೇಗೆ ಟಕ್ಕರ್ ನೀಡಲಿದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ.

ಬೆಂಜ್‌ನೊಂದಿಗೆ ಅನ್‌ಲಾಕ್ ಸಂಭ್ರಮ: ಕನಸಿನ ಕಾರು ನಿಮ್ಮದಾಗಿಸಿಕೊಳ್ಳಿ

ಅಗ್ಗದ ಬೆಲೆಗೆ ದೊರೆಯುತ್ತಾ?
ರಾಯಲ್ ಎನ್‌ಫೀಲ್ಡ್ ಆಗಲಿ ಮತ್ತು ಆ ಸೆಗ್ಮಂಟ್‌ನ ಇನ್ನಾವುದೇ ಬೈಕ್ ಆಗಲಿ ಅಗ್ಗದ ಬೆಲೆಗೆ ದೊರೆಯುವುದಿಲ್ಲ. ಅವು ತುಸು ತುಟ್ಟಿಯಾಗಿವೆ. ಆದರೆ, ಕವಾಸಕಿ ಡಬ್ಲ್ಯೂ175 ಅಗ್ಗದ ಬೆಲೆಗೆ ದೊರೆಯಬಹುದು ಎಂಬ ವರ್ತಮಾನಗಳಿವೆ. ಹಾಗಾಗಿ, ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಕಡಿಮೆ ಬೆಲೆ ದೊರೆಯುವ ಉತ್ತಮ ಮಾದರಿಯ ಬೈಕ್ ಇದಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಈವರೆಗೂ ಕಂಪನಿ ಈ ಬೈಕ್‌ನ ದರ ಎಷ್ಟಿರಬಹುದು ಎಂಬ ಮಾಹಿತಿಯನ್ನು  ಬಿಟ್ಟು ಕೊಟ್ಟಿಲ್ಲ.

126 ಕೆ.ಜಿ ತೂಕವಿದೆ
ಸಾಮಾನ್ಯವಾಗಿ 300 ಸಿಸಿ ಬೈಕ್‌ ಸೆಗ್ಮೆಂಟ್‌ನಲ್ಲಿರುವ ಬರುವ ಬೈಕ್‌ಗಳು ಹೆಚ್ಚು ಭಾರವಿರುತ್ತವೆ. ಅದೇ ಸೆಗ್ಮೆಂಟ್‌ನಲ್ಲಿ ಸ್ಪರ್ಧೆ ನೀಡಲು ಹೊರಟಿರುವ ಈ ಕವಾಸಕಿ ಡಬ್ಲ್ಯೂ175 ಕೇವಲ 126 ಕೆ.ಜಿ.ತೂಕವನ್ನು ಹೊಂದಿದೆ. ಇದು ನಿಮಗೆ ಹಗುರು ಮಾತ್ರ ಎನಿಸಿದೇ ಪೆಪ್ಪಿ ಅಕ್ಸೆಲೇರಷನ್ ಅನುಭವವನ್ನು ಕೂಡ ನೀಡುತ್ತದೆ. ಜೊತೆಗೆ ಈ ಬೈಕ್‌ಗೆ ಡ್ಯೂಯಲ್ ಡಿಸ್ಕ್ ಸೆಟ್‌ಅಪ್ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗೆಯೇ ರಿಯರ್ ಬ್ರೇಕ್ ಸೆಟ್‌ಅಪ್  ಸಾಂಪ್ರದಾಯಿಕ ಡ್ರಮ್ ಮಾದರಿಯನ್ನು ಹೊಂದಿರುತ್ತದೆ.

ಯಾವಾಗ ಬಿಡುಗಡೆ?
ಭಾರತೀಯ ಮಾರುಕಟ್ಟೆಗೆ ಕವಾಸಕಿ ತನ್ನ ಈ ಹೊಸ ಮಾದರಿ ಬೈಕ್‌ನ್ನು ಯಾವಾಗ ಬಿಡುಗಡೆ ಮಾಡಲಿದೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಆದರೂ ಕೆಲವು ವರದಿಗಳ ಪ್ರಕಾರ 2021ರ ಮಧ್ಯದ ಅವಧಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಂಪನಿಯ ಖಚಿತ ಮಾಹಿತಿಗಾಗಿ ಕಾದು ನೋಡಬೇಕು. 

ಬೆಟ್ಟ ಗುಡ್ಡ, ನದಿ ಯಾವುದೂ ಲೆಕ್ಕಕ್ಕಿಲ್ಲ: ಆಫ್ ರೋಡ್ ದಿಗ್ಗಜ ಲ್ಯಾಂಡ್ ರೋವರ್ ಡಿಫೆಂಡರ್!

click me!