ಬೆಂಗಳೂರು: ಒಮ್ಮೆ ಚಾರ್ಜ್‌ ಮಾಡಿದ್ರೆ 200 ಕಿ.ಮೀ ಕ್ರಮಿಸುವ ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ

Published : May 19, 2023, 08:48 AM IST
ಬೆಂಗಳೂರು: ಒಮ್ಮೆ ಚಾರ್ಜ್‌ ಮಾಡಿದ್ರೆ 200 ಕಿ.ಮೀ ಕ್ರಮಿಸುವ ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ

ಸಾರಾಂಶ

ಗರಿಷ್ಟ 135 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಈ ಬೈಕ್‌ ಒಮ್ಮೆ ಚಾರ್ಜ್‌ ಮಾಡಿದರೆ 200 ಕಿ.ಮೀ ಕ್ರಮಿಸುತ್ತದೆ. 55 ಕಿಲೋವ್ಯಾಟ್‌ ನ, 9.5 ಕೆ.ಜಿ. ತೂಕದ ಬ್ಯಾಟರಿ ವಾಹನ ಚಲಿಸುತ್ತಿರುವಾಗಲೇ ಚಾರ್ಜಿಂಗ್‌ ಆಗುವ ವ್ಯವಸ್ಥೆ ಹೊಂದಿದೆ. ಕ್ಯಾಮೆರಾ, ಬ್ಲೂ ಟೂಥ್‌, ಡಿಜಿಟಲ್‌ ಕೀ ಒಳಗೊಂಡಿದೆ. 

ಬೆಂಗಳೂರು(ಮೇ.19):  ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಡಿ ಟೌ ಲೋಟಸ್‌ ಮೋಟಾರ್ಸ್‌ ಇಂಡಿಯಾ ಸಂಸ್ಥೆಯ ವೂಲ್ಪ್‌ ಹೌಂಡ್‌ ಮೋಟಾರ್ಸ್‌ ಸಂಸ್ಥೆಯು ಹೊಸ ತಲೆಮಾರಿನ ಆಧುನಿಕ ತಂತ್ರಜ್ಞಾನದ ಇ18ಆರ್‌ ಎಲೆಕ್ಟ್ರಿಕ್‌ ಬೈಕ್‌ ಮಾರುಕಟ್ಟೆಗೆ ಪ್ರವೇಶಿಸಿದ್ದು, ಗುರುವಾರದಿಂದಲೇ(ಮೇ 18) ಬುಕ್ಕಿಂಗ್‌ ಆರಂಭಿಸಿದೆ.

ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ವಾಸು ರಾಮ್‌ ಐತಿ ನೂತನ ಬೈಕ್‌ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ಇ18ಆರ್‌ ಎಲೆಕ್ಟ್ರಿಕ್‌ ಬೈಕ್‌ ಕಡುಗಪ್ಪು, ಕೆಂಪು, ನೀಲಿ ಸೇರಿ ಆರು ಬಣ್ಣಗಳಲ್ಲಿ ಬೈಕ್‌ ಗಳು ದೊರೆಯಲಿವೆ ಎಂದು ಹೇಳಿದರು.

Auto Expo 2023 ಹೆಚ್ಚು ಸ್ಪೋರ್ಟೀವ್, ಟಾರ್ಕ್ ಕ್ರಾಟೋಸ್ X ಎಲೆಕ್ಟ್ರಿಕ್ ಬೈಕ್ ಅನಾವರಣ!

ಗರಿಷ್ಟ 135 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಈ ಬೈಕ್‌ ಒಮ್ಮೆ ಚಾರ್ಜ್‌ ಮಾಡಿದರೆ 200 ಕಿ.ಮೀ ಕ್ರಮಿಸುತ್ತದೆ. 55 ಕಿಲೋವ್ಯಾಟ್‌ ನ, 9.5 ಕೆ.ಜಿ. ತೂಕದ ಬ್ಯಾಟರಿ ವಾಹನ ಚಲಿಸುತ್ತಿರುವಾಗಲೇ ಚಾರ್ಜಿಂಗ್‌ ಆಗುವ ವ್ಯವಸ್ಥೆ ಹೊಂದಿದೆ. ಕ್ಯಾಮೆರಾ, ಬ್ಲೂ ಟೂಥ್‌, ಡಿಜಿಟಲ್‌ ಕೀ ಒಳಗೊಂಡಿದೆ. ಬೈಕ್‌ ಜೊತೆ ಚಾರ್ಜ್‌ ಮಾಡುವ ಬ್ಯಾಟರಿ, ಹೆಲ್ಮೆಟ್‌ ನೀಡಲಾಗುವುದು ಎಂದು ತಿಳಿಸಿದರು.

20 ಸಾವಿರ ರು.ಗಳನ್ನು ಪಾವತಿಸಿ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಬೈಕ್‌ ಶೋÜರೂಂ ಬೆಲೆ 3,91,800 ರು.ಗಳಿದ್ದು, ವಿವಿಧ ಸಬ್ಸಿಡಿ ಸಿಗಲಿದೆ. ಬೈಕ್‌ ಬುಕ್ಕಿಂಗ್‌ಗೆ ವೆಬ್‌ಸೈಟ್‌: https://wolfhoundmotors.com/, ಮೊಬೈಲ್‌: 90193 68900 ಸಂಪರ್ಕಿಸಬಹುದು.

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್