ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೆಲೆ ಕೇವಲ 18,700 ರೂ ಮಾತ್ರ, 1986ರ ಬಿಲ್ ವೈರಲ್!

By Suvarna News  |  First Published May 16, 2023, 5:56 PM IST

ರಾಯಲ್ ಎನ್‌ಫೀಲ್ಡ್ ಯಾವುದೇ ಬೈಕ್ ಬೆಲೆ ಕನಿಷ್ಠ 2 ಲಕ್ಷ ರೂಪಾಯಿ. ಇನ್ನು ಇತರ ಯಾವುದೇ ಬೈಕ್ ಬೆಲೆ ಸರಾಸರಿ 1 ಲಕ್ಷ ರೂಪಾಯಿ. ಆದರೆ 1986ರಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೆಲೆ ಕೇವಲ 18,700 ರೂಪಾಯಿ ಮಾತ್ರ. ಇದು ಆನ್‌ರೋಡ್ ಬೆಲೆ. ಇದೀಗ ಹಳೇ ಬಿಲ್ ವೈರಲ್ ಆಗಿದೆ.


ನವದೆಹಲಿ(ಮೇ.16): ರಾಯಲ್ ಎನ್‌ಫೀಲ್ಡ್ ಬೈಕ್ ಭಾರತದಲ್ಲಿ ಅತ್ಯಂತ ಜನಪ್ರಿಯ ಬೈಕ್. ಯುವಕರಿಂದ ಹಿಡಿದು ಎಲ್ಲಾ ವರ್ಗದವರಿಗೆ ರಾಯಲ್ ಎನ್‌ಫೀಲ್ಡ್ ಅಚ್ಚುಮೆಚ್ಚು.  ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಸರಿಸುಮಾರು 7 ದಶಕಗಳ ಭಾಂದವ್ಯವಿದೆ. ಸದ್ಯ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಸರಿಸುಮಾರು 2 ಲಕ್ಷ ರೂಪಾಯಿ ಬೇಕು. ಆದರೆ 1086ರಲ್ಲಿ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಕೇವಲ 18,700 ರೂಪಾಯಿ ಮಾತ್ರ. ಇದು ಆನ್‌ರೋಡ್ ಬೆಲೆ. 36 ವರ್ಷಗಳ ಹಿಂದೆ ಇಷ್ಟು ಕಡಿಮೆ ಬೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಭಾರತದಲ್ಲಿ ಸಿಗುತ್ತಿತ್ತಾ ಅನ್ನೋ ಅಚ್ಚರಿ ಬೈಕ್ ಪ್ರೇಮಿಗಳಲ್ಲಿ ಮೂಡುವುದು ಸಹಜ. ಹೌದು ಇದು ನಿಜ, 1986ರಲ್ಲಿ 18,700 ರೂಪಾಯಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಸಾಧ್ಯವಿತ್ತು. ಇದೀಗ ಈ ಮೊತ್ತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಡೌನ್ ಪೇಮೆಂಟ್ ಕೂಡ ಸಾಧ್ಯವಿಲ್ಲ. ಕಾಲ ಎಷ್ಟು ಬದಲಾಗಿದೆ ಎಂದು ಹಲವು ಸಾಮಾಜಿಕ ಜಾಲತಾಣಧಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1986ರ ರಾಯಲ್ ಎನ್‌ಫೀಲ್ಡ್ ಬೈಕ್ ರಶೀದಿ ಇದೀಗ ವೈರಲ್ ಆಗಿದೆ. ಜಾರ್ಖಂಡ್‌ನ ಸಂದೀಪ್ ಆಟೋ ಕಂಪನಿ ಶೋ ರೂಂ ನೀಡಿದ ಬಿಲ್ ಇದು. 1986, ಜನವರಿ 23 ರಂದು ಈ ಬಿಲ್ ನೀಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಬಿಲ್ ಪೋಸ್ಟ್ ಮಾಡಲಾಗಿದೆ. ವಿಶೇಷ ಅಂದರೆ 250 ರೂಪಾಯಿ ಡಿಸ್ಕೌಂಟ್ ಕೂಡ ಮಾಡಲಾಗಿದೆ. ಆದರೆ ಹೊಸ ಆಕ್ಸಸರಿ ಸೇರ್ಪಡೆ ಕಾರಣ 150 ರೂಪಾಯಿ ಹೆಚ್ಚುವರಿ ಬಿಲ್ ಆಗಿದೆ. ಹೀಗಾಗಿ ಒಟ್ಟು ಆನ್‌ರೋಡ್ ಬೆಲೆ 18,700 ರೂಪಾಯಿ ಮಾತ್ರ. 

Tap to resize

Latest Videos

undefined

ಕೈಗೆಟುಕುವ ದರ, ಸಿಟಿ ಹಾಗೂ ಲಾಂಗ್ ರೈಡ್‌ಗೂ ಸೈ ಎನಿಸುವ ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಲಾಂಚ್!

ಈ ಪೋಸ್ಟ್ ಭಾರಿ ಲೈಕ್ಸ್ ಹಾಗೂ ಕಮೆಂಟ್ ಪಡೆದಿದೆ. ಇದೇ ವೇಳೆ ಹಲವು ಬೈಕ್ ಪ್ರಿಯರು ರಾಯಲ್ ಎನ್‌ಫೀಲ್ಡ್ ಜೊತೆ ತಮ್ಮ ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಈ ಪೋಸ್ಟ್‌ಗೆ ಕಮೆಂಟ್ ಮಾಡಿದ ವ್ಯಕ್ತಿಯೊಬ್ಬರು ತಾನು 1984ರಲ್ಲಿ 16,100 ರೂಪಾಯಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿದ್ದೇನೆ. 38 ವರ್ಷಗಳಿಂದ ನನ್ನ ಸಾರಥಿಯಾಗಿದೆ. ಈಗಲೂ ಇದೇ ನನ್ನ ಸಾರಥಿ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ ಈಗ ರಾಯಲ್ ಎನ್‌ಫೀಲ್ಡ್ 250 ರೂಪಾಯಿ ಕೂಡ ಡಿಸ್ಕೌಂಟ್ ನೀಡುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

 

 

ಮುಂಬೈ ವ್ಯಕ್ತಿಯೊಬ್ಬರು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್ ಕುರಿತು ಕಮೆಂಟ್ ಮಾಡಿದ್ದಾರೆ. 1980ರಲ್ಲಿ ತಾವು 10,500 ರೂಪಾಯಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿರುವುದಾಗಿ ಹೇಳಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. 1958ರಿಂದ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಉತ್ಪಾದನೆ ಆರಂಭಗೊಂಡಿತು. ಹಲವು ಬದಲಾವಣೆ, ಹೊಸ ಮಾಡೆಲ್ ಸೇರಿದಂತೆ ರಾಯಲ್ ಎನ್‌ಫೀಲ್ಡ್ ಹತ್ತು ಹಲವು ಬೈಕ್ ಬಿಡುಗಡೆ ಮಾಡಿದೆ. ಆದರೆ ಮೂಲ ರಾಯಲ್ ಎನ್‌ಫೀಲ್ಡ್ ಬೈಕ್‌ ವಿನ್ಯಾಸಕ್ಕೆ ಹೆಚ್ಚಿನ ಧಕ್ಕೆಯಾಗದಂತೆ ಬೈಕ್ ಬಿಡುಗಡೆ ಮಾಡಲಾಗಿದೆ. 

ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಅತ್ಯಾಕರ್ಷಕ MS ಕಸ್ಟಮ್ಸ್‌ ಬೈಕ್ ಅನಾವರಣ!

click me!