ಆಫ್ ರೋಡ್ ಹಾಗೂ ಆನ್ ರೋಡ್ ಯಾವುದೇ ರಸ್ತೆಗೂ ಸೈ ಎನಿಸಿಕೊಂಡಿರುವ ಪವರ್‌ಫುಲ್ ಬೈಕ್ ಹೀರೋ XPULSE ಇದೀಗ ಮತ್ತೆರೆಡು ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ನೂತನ ಬೈಕ್ ವಿಶೇಷತೆ, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಮೇ.18): ಆನ್ ರೋಡ್ ಹಾಗೂ ಆಫ್ ರೋಡ್ ಬೈಕ್‌ಗಳ ಪೈಕಿ ಹೀರೋ ಮೋಟಾರ್‌ಕಾರ್ಪ್ ಬ್ರ್ಯಾಂಡ್‌ನ ಹೀರೋ XPULSE ಅತ್ಯಂತ ಜನಪ್ರಿಯ. ಕಾರಣ ಈ ವಿಭಾಗದಲ್ಲಿ ಕೈಗೆಟುಕುವ ದರದ ಬೈಕ್ ಇದಾಗಿದೆ. ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್ ಇದಾಗಿದೆ. ಹೀರೋ XPULSE ಇದೀಗ ಮತ್ತೆರೆಡು ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ಹೊಚ್ಚಹೊಸದಾದ OBD-II ಮತ್ತು E20 ಸಾಹಸಮಯ XPulse 200 4 Valve ಬೈಕ್ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ XPulse 200 4V, 20%ವರೆಗೆ ಇಥೆನಾಲ್-ಮಿಶ್ರಿತ ಗೆಸೋಲೀನ್ ಮಿಶ್ರಣದಿಂದ ಓಡಬಲ್ಲ ಎಂಜಿನ್ ಇದಾಗಿದೆ. ವಾಹನದಲ್ಲಿ ಯಾವುದೇ ತಪ್ಪುಗಳು ಅಥವಾ ಕಾರ್ಯವೈಫಲ್ಯವನ್ನು ಪತ್ತೆಹಚ್ಚುವಲ್ಲಿ ನೆರವಾಗಿ ಮಾಲ್‌ಫಂಕ್ಷನ್ ಇಂಡಿಕೇಟರ್ ಲೈಟ್(MIL), ಸ್ವಯಂ ಸಮಸ್ಯೆ-ಪತ್ತೆ ವ್ಯವಸ್ಥೆಯಾದ ಆನ್-ಬೋರ್ಡ್ ಡಯಾಗ್ನೋಸ್ಟಿಕ್ಸ್(OBD)ಅನ್ನು ಈ ಮೋಟಾರುಸೈಕಲ್ ಫೀಚರ್ಸ್ ಹೊಂದಿದೆ.
ಎಲ್ಲಾ ಟೆರೇನ್‌ಗಳಿಗೂ Hero XPulse ಸೂಕ್ತ ಬೈಕ್. ನವೀಕೃತಗೊಂಡ ಎರ್ಗೋನಾಮಿಕ್ಸ್ ಹೆಡ್‌ಲೈಟ್, ಬ್ರೇಕಿಂಗ್ ಮೋಡ್‌ಗಳವರೆಗೆ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ. ನೂತನ ಬೈಕ್ ಬೇಸ್ ಹಾಗೂ ಪ್ರೋ ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. XPulse 200 4V ಬೇಸ್ ಮಾಡೆಲ್ ಬೆಲೆ 1,43,516 ರೂಪಾಯಿ ಹಾಗೂ ಪ್ರೋ ವೇರಿಯೆಂಟ್ ಬೆಲೆ 1,50,891 ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.
undefined
ಕೈಗೆಟುಕುವ ದರ, ಆಕರ್ಷಕ ವಿನ್ಯಾಸ, ಹೀರೋ XPulse 200T 4V ಬೈಕ್ ಬಿಡುಗಡೆ!
ಇಂಜಿನ್ ಮತ್ತು ಕಾರ್ಯಕ್ಷಮತೆ
200cc 4 Valve ಆಯಿಲ್ ಕೂಲ್ಡ್ BS-VI (OBD-II ಮತ್ತು E20 ಅನುಸರಣೀಯವಾದುದು) ಇಂಜಿನ್‌ನ ಶಕ್ತಿ ಇರುವ XPulse 200 4V, 19.1 PS at 8000 rpmನಲ್ಲಿ ಗರಿಷ್ಟ ಶಕ್ತಿ ಮತ್ತು 17.35 Nm at 6500 rpmನಲ್ಲಿ ಉಚ್ಛ ಟಾರ್ಕ್ ಒದಗಿಸುತ್ತದೆ. OBD-IIಸಾಧನವು, ಪರಿವರ್ತಕ ಕನ್ವರ್ಟ್‌ನ ಕಾರ್ಯಕ್ಷಮತೆಯನ್ನು ಮೇಲುಸ್ತುವಾರಿ ಮಾಡುತ್ತಾ, ಯಾವುದೇ ಕಾರ್ಯವೈಫಲ್ಯದ ಕುರಿತು ಸೂಚನೆ ಕಳುಹಿಸುವ ಮೂಲಕ ವಾಹನದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ABS ಮೋಡ್‌ಗಳು
ವಿವಿಧ ಚಾಲನಾ ಪರಿಸ್ಥಿತಿಗಳು ಅಂದರೆ, ರೋಡ್, ಆಫ್-ರೋಡ್ ಮತ್ತು ರಾಲಿಗಳಿಗೆ ಸೂಕ್ತವಾಗಿರುವಂತಹ ಮೂರು ABS ಮೋಡ್‌ಗಳ ಸೇರ್ಪಡಯಿಂದಾಗಿ, ಮೋಟಾರುಸೈಕಲ್‍ನ ಒಟ್ಟಾರೆ ಕಾರ್ಯಕ್ಷಮತೆ ಹೆಚ್ಚಾಗಿದೆ.
• ರೋಡ್ ಮೋಡ್ –ಒಣ ರಸ್ತೆಗಳಲ್ಲಿ ಗರಿಷ್ಟ ಕಾರ್ಯಕ್ಷಮತೆಯನ್ನು ಸಾಧಿಸಲು ಕಂಟ್ರೋಲ್ ಸಿಸ್ಟಮ್‌ಅನ್ನು ಡೀಫಾಲ್ಟ್ ಸಿಂಗಲ್ ಚಾನಲ್ ABSನೊಂದಿಗೆ ಸೆಟ್ ಮಾಡಲಾಗಿದೆ.
• ಆಫ್-ರೋಡ್ ಮೋಡ್ – ತನ್ನ ಆನ್-ರೋಡ್ ಸ್ಪೋರ್ಟಿಂಗ್ ಸ್ವಭಾವವನ್ನು ಪ್ರದರ್ಶಿಸಲು Hero XPulse 200 4V ಗೆ ಅವಕಾಶ ಒದಗಿಸುತ್ತದೆ. ಕಡಿಮೆಗೊಳಿಸಲಾದ ABS ಇಂಟ್‌ವೆನ್ಶನ್, ಸಡಿಲಗೊಂಡ ಮರಳು, ಕೆಸರು, ಬಂಡೆಪ್ರದೇಶದಂತಹ ಆಫ್-ರೋಡ್ ಪರಿಸ್ಥಿತಿಗಳಲ್ಲಿ ಗರಿಷ್ಟ ಡೀಸಿಲರೇಶನ್ ಒದಗಿಸುತ್ತದೆ.
• ರಾಲಿ ಮೋಡ್ – ತನ್ನ ಅತ್ಯುತ್ತಮ ಬದಿಯಿಂದ ಆಫ್-ರೋಡ್ ಚಾಲನೆಯನ್ನು ಪ್ರದರ್ಶಿಸುತ್ತದೆ.
ಜ್ವಲ ವಿನ್ಯಾಸ
ಥ್ಲೆಟಿಕ್, ಶಕ್ತಿಶಾಲಿ ಮತ್ತು ಅತ್ಯುತ್ಕೃಷ್ಟವಾಗಿರುವ ಹೀರೋ XPulse 200 4V, ನಿಜವಾದ ಸಾಹಸವನ್ನು ಪ್ರತಿನಿಧಿಸುತ್ತದೆ. ಇದರ ಹೊಸ 60mm ಉದ್ದದ ರಾಲಿ ಶೈಲಿಯ ವಿಂಡ್‌ಶೀಲ್ಡ್, ಚಾಲಕನ ಮುಖ ಹಾಗೂ ಎದೆಯನ್ನು ಜೋರುಗಾಳಿಯಿಂದ ರಕ್ಷಿಸಿ ಆ ಮೂಲಕ ಅವರ ನಿತ್ರಾಣವನ್ನು ಕಡಿಮೆಗೊಳಿಸುತ್ತದೆ. LED DRLs ಇರುವ ಹೊಚ್ಚ ಹೊಸ Class-D LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಮತ್ತು 230%ವರೆಗೆ ಹೆಚ್ಚಿದ ಬೆಳಕಿನ ತೀವ್ರತೆಯಿಂದಾಗಿ ಚಾಲಕರು ಈಗ ರಾತ್ರಿ ವೇಳೆಯಲ್ಲೂ ಕೂಡ, ಹಿಂದೆಂದಿಗಿಂತಲೂ ಹೆಚ್ಚು ವಿಶ್ವಾಸದಿಂದ ಪ್ರಯಾಣ ಮಾಡಬಹುದು. ಪ್ರೀಮಿಯಮ್ ಸ್ವಿಚ್ ಗೇರ್, ಒಟ್ಟಾರೆ ನೋಟಕ್ಕೆ ಪೂರ್ಣತೆ ಒದಗಿಸುತ್ತದೆ.
ಸಾಹಸ-ಸಿದ್ಧ
Hero XPulse 200 4V, ಪ್ರತಿಯೊಂದು ಪ್ರದೇಶಕ್ಕೆ ಇಂಜಿನಿಯರ್ ಮಾಡಲಾದ ಎರ್ಗೋನಾಮಿಕ್ಸ್‌ನೊಂದಿಗೆ ನಿಖರವಾದ ಮತ್ತು ವಿಶ್ರಾಂತ ಚಾಲನಾ ಸ್ಥಿತಿಯನ್ನು ಒದಗಿಸುತ್ತದೆ. ವಿವಿಧ ಟೆರೇನ್‌ಗಳಲ್ಲಿ ವರ್ಧಿತ ಚಾಲನಾ ಅನುಭವ ಖಾತರಿಪಡಿಸಲು ಈ ಹೊಸ ಮೋಟಾರುಸೈಕಲ್, ನವೀಕೃತ ರೈಡರ್ ಫುಟ್‌ಪೆಗ್‌ನೊಂದಿಗೆ ಬರುತ್ತಿದ್ದು ಇದನ್ನು 35mmನಷ್ಟು ತಗ್ಗಿಸಲಾಗಿದೆ ಮತ್ತು ಹಿಂಬದಿ ಸೆಟ್ 8mm ನಷ್ಟು ತಗ್ಗಿಸಲಾಗಿದೆ. ಈ ನವೀಕೃತ ಚಾಲಕ ತ್ರಿಕೋನವು, ಚಾಲಕನ ಮಣಿಕಟ್ಟುಗಳ ಮೇಲೆ ಸೀಮಿತ ಭಾರ ಹಾಕುವುದರೊಂದಿಗೆ ಮತ್ತು ಸುಲಭವಾಗಿ ತಿರುಗಿಸುವುದಕ್ಕಾಗಿ ಅಧಿಕಗೊಳಿಸಲಾದ ಲೆಗ್ ಹೋಲ್ಡಿಂಗ್ ಪ್ರದೇಶದೊಂದಿಗೆ, ಅವರ ನಿಂತ ಚಾಲನಾಭಂಗಿಯಲ್ಲಿ ಹೆಚ್ಚಿನ ನಿಯಂತ್ರಣ ಒದಗಿಸುತ್ತದೆ.
ಬೆಂಗಳೂರಿನಲ್ಲಿ ಹೀರೋ ಮೋಟೋಕಾರ್ಪ್ Xpulse ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆ!
ತನ್ನ ಮೂಲಭಾಗದಲ್ಲಿ ಚಾಲಕ ಆರಾಮ
ಸುದೀರ್ಘ ಪ್ರಯಾಣಗಳಿಗೆ ಚುರುಕಾಗಿ ಇರುವಂತಹ ಸಂದರ್ಭದಲ್ಲೇ ಹೊಸ XPulse 200 4V, ಚಾಲಕರ ಸುರಕ್ಷತೆ ಮತ್ತು ಆರಾಮವನ್ನು ತನ್ನ ಹೃದ್ಭಾಗದಲ್ಲಿ ಇರಿಸಿಕೊಂಡಿದೆ.ದೊಡ್ಡದಾದ ಮತ್ತು ಮುಚ್ಚಿಕೊಂಡ ಲೂಪ್ ಮಾದರಿಯ ಹ್ಯಾಂಡ್‌ಗಾರ್ಡ್‌ಗಳು ಬಾಹ್ಯ ವಿಷಯಗಳ ವಿರುದ್ಧ ಕೈಗಳಿಗೆ ಸುಧಾರಿತ ರಕ್ಷಣೆ ಒದಗಿಸುತ್ತವೆ. ಒಟ್ಟಾರೆ ಕಾರ್ಯಕ್ಷಮತೆಯನ್ನು ವರ್ಧಿಸುತ್ತಾ ಈ ಮೋಟಾರುಸೈಕಲ್, ಬಂಗೀ ಹುಕ್‌ಗಳನ್ನು ಭದ್ರಪಡಿಸಿ ಲಗೇಜ್‌ಅನ್ನು ಎತ್ತಿಡಲು ನವೀಕೃತ ಲಗೇಜ್ ಪ್ಲೇಟ್‌ನೊಂದಿಗೆ ಬರುತ್ತದೆ. ಡ್ಯಾಶ್‌ಬೋರ್ಡ್ ಬಳಿ ಮರುಸ್ಥಾಪನೆ ಮಾಡಲಾಗಿರುವ ಹೆಚ್ಚಿನ ಸಾಮರ್ಥ್ಯ ಇರುವ ನವೀಕೃತ USB ಚಾರ್ಜಿಂಗ್ ಪೋರ್ಟ್ ಚಾಲನೆಯಲ್ಲಿರುವಾಗಲೇ ಚಾರ್ಜಿಂಗ್ ಮಾಡಿಕೊಳ್ಳುವ ವಾಸ್ತವತೆ ಮತ್ತು ಸೌಲಭ್ಯವನ್ನು ಒದಗಿಸುತ್ತದೆ.
ಹೀರೋ XPulse 200 4V – Pro ವೈವಿಧ್ಯ
ಹೊಸ ಹೀರೋ XPulse 200 4V – Pro ವೈವಿಧ್ಯವು, ಅತಿಬಲ, ರಾಜಿರಹಿತವಾಗಿದ್ದು, ಅತ್ಯಂತ ಕಠಿಣವಾದ ಸವಾಲುಗಳಿಗೂ ಸಿದ್ಧವಾಗಿದೆ. XPulse 200 4V Pro ವೈವಿಧ್ಯದಲ್ಲಿರುವ ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬಹುದಾದ 250mm ಮುಂಬದಿ ಸಸ್ಪೆನ್ಶನ್ ಮತ್ತು 220mm ಹಿಂಬದಿ ಸಸ್ಪೆನ್ಶನ್, ಸುದೀರ್ಘ ಪ್ರಯಾಣಗಳಲ್ಲಿ ಒತ್ತಡ-ಮುಕ್ತ ಚಾಲನೆಯ ಭರವಸೆ ನೀಡುತ್ತದೆ. ಎತ್ತರಿಸಲಾದ ಸೀಟ್ ಎತ್ತರ (850mm), ಹೆಚ್ಚಿಸಲಾಗಿರುವ ಗ್ರೌಂಡ್ ಕ್ಲಿಯರೆನ್ಸ್ (270mm) ಮತ್ತು ಹ್ಯಾಂಡಲ್‌ಬಾರ್ ರೈಸರ್, ಪ್ರಬಲವಾದ ಆಫ್-ರೋಡ್ ಗುಣವಿಶೇಷತೆಗಳನ್ನು ಎತ್ತಿತೋರಿಸುತ್ತದೆ. ವಿಸ್ತರಿಸಲಾಗಿರುವ ಗೇರ್ ಲಿವರ್ ಮತ್ತು ಉದ್ದನೆಯ ಸೈಡ್ ಸ್ಟ್ಯಾಂಡ್, ಸರಿಸಾಟಿಯಿಲ್ಲ ಆಫ್-ರೋಡ್ ಅನುಭವ ಖಾತರಿಪಡಿಸುತ್ತವೆ.
ಕೌತುಕಮಯ ವರ್ಣಗಳು
ಶಕ್ತಿಶಾಲಿಯಾದ, ಆದರೂ ವಿಶಿಷ್ಟ ಗುಣವಿಶೇಷತೆಗಳಿರುವ ಹೊಸ XPulse 200 4V, ದಿಟ್ಟವಾದ ಗ್ರಾಫಿಕ್ಸ್ ಮತ್ತು ಉಜ್ವಲವಾದ ಡ್ಯುಯಲ್ ಟೋನ್ ವರ್ಣಸ್ಕೀಮ್‌ಗಳಲ್ಲಿ ಬರುತ್ತದೆ- ಬೇಸ್ ವೈವಿಧ್ಯದಲ್ಲಿ, Matte Nexus Blue, Techno Blue ಮತ್ತು Black Sports Red. Pro ವೈವಿಧ್ಯದಲ್ಲಿರುವ ರಾಲಿ ಎಡಿಶನ್ ಗ್ರಾಫಿಕ್ಸ್, ಸಾಹಸದ ಇಚ್ಛೆಗೆ ನಿಖರವಾಗಿ ಹೊಂದಿಕೊಳ್ಳುತ್ತದೆ