ಜನಪ್ರಿಯ ಕಾರು ಟಾಟಾ ನೆಕ್ಸಾನ್ ಹೊಸ ವೇರಿಯೆಂಟ್ ಲಾಂಚ್ ಮಾಡಲಾಗಿದೆ. 9.75 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನೂತನ ವೇರಿಯೆಂಟ್ ಕಾರು ಲಭ್ಯವಿದೆ. ಈ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಜು.14) : ಭಾರತದ ಜನಪ್ರಿಯ ಹಾಗೂ ಅತೀ ಬೇಡಿಕೆಯ ಟಾಟಾ ನೆಕ್ಸಾನ್ ಕಾರು ಇದೀಗ ಹೊಸ ವೇರಿಯೆಂಟ್ ಪರಿಚಯಿಸಿದೆ. XM+(S) ವೇರಿಯೆಂಟ್‌ನಲ್ಲಿ ಎರಡು ಮಾಡೆಲ್ ಬಿಡುಗಡೆ ಮಾಡಿದೆ. XM (S) ಮತ್ತು XZ+ ಕಾರು ಹಲವು ವಿಶೇಷತೆಗಳೊಂದಿಗೆ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಬೆಲೆ 9.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ನೂತನ ಕಾರು ಕ್ಯಾಲಗರಿ ವೈಟ್, ಡೇಟೋನಾ ಗ್ರೇ, ಫ್ಲೇಮ್ ರೆಡ್ ಮತ್ತು ಫೋಲಿಯೇಜ್ ಗ್ರೀನ್ ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ. ನೆಕ್ಸಾನ್ XM+(S) ಎಲೆಕ್ಟ್ರಿಕ್ ಸನ್‍ರೂಫ್, 7" ಫ್ಲೋಟಿಂಗ್ ಇನ್ಫೋಟೈನ್‍ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 4 ಸ್ಪೀಕರ್ ಸಿಸ್ಟಮ್, ಕೂಲ್ಡ್ ಗ್ಲೋವ್ ಬಾಕ್ಸ್, ಹಿಂಭಾಗದ ಎಸಿ ವೆಂಟ್‍ಗಳು, ರೈನ್ ಸೆನ್ಸಿಂಗ್ ವೈಪರ್‍ಗಳು, ಆಟೋ ಹೆಡ್‍ಲ್ಯಾಂಪ್‍ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಡ್ರೈವ್ ಮೋಡ್‍ಗಳು, 12 V ಹಿಂದಿನ ಪವರ್ ಸಾಕೆಟ್ ಮತ್ತು ಶಾರ್ಕ್ ಫಿನ್ ಆಂಟೆನಾ ಗಳನ್ನು ಹೊಂದಿದೆ.
XM+(S)(ಪೆಟ್ರೋಲ್. ಮ್ಯಾನ್ಯುಯಲ್) 9.75 Lakhs (ಎಕ್ಸ್ ಶೋ ರೂಂ)
XMA+(S)(ಪೆಟ್ರೋಲ್, ಟೋಮ್ಯಾಟಿಕ್) 10.40 Lakhs (ಎಕ್ಸ್ ಶೋ ರೂಂ)
XM+ (S) (ಡೀಸೆಲ್, ಮ್ಯಾನ್ಯುಯಲ್ ) 11.05 Lakhs (ಎಕ್ಸ್ ಶೋ ರೂಂ)
XMA+ (S) (ಡೀಸೆಲ್, ಆಟೋಮ್ಯಾಟಿಕ್) 11.70 Lakhs (ಎಕ್ಸ್ ಶೋ ರೂಂ)
ಗರಿಷ್ಠ ಮಾರಾಟವಾದ ಟಾಪ್ 10 ಕಾರು, ಅಗ್ರಸ್ಥಾನದಲ್ಲಿ ವ್ಯಾಗನರ್, ನೆಕ್ಸಾನ್!
ದೇಶದಲ್ಲಿ ನೆಕ್ಸಾನ್ ಮಾರಾಟದ ಮೇಲ್ಮುಖ ರೇಖೆಯು ಅದರ ಅಪಾರ ಜನಪ್ರಿಯತೆ, ಮನ್ನಣೆ ಮತ್ತು ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ತಲುಪಿಸುವ ನಮ್ಮ ಭರವಸೆಯ ಬೆಂಬಲವನ್ನು ಹೊಂದಿದೆ. ರಸ್ತೆಯಲ್ಲಿ 3,50,000 ಕ್ಕೂ ಹೆಚ್ಚು ನೆಕ್ಸಾನ್‍ಗಳೊಂದಿಗೆ, ಇದು ಭಾರತದಲ್ಲಿ #1 SUV ಆಗಿ ತನ್ನ ಸ್ಥಾನವನ್ನು ಯಶಸ್ವಿಯಾಗಿ ಗುರುತಿಸಿಕೊಂಡಿದೆ. ಸುರಕ್ಷತೆಯ ಕಡೆಗಿನ ಟಾಟಾ ಮೋಟಾರ್ಸ್‍ನ ಬದ್ಧತೆಯ ರಾಯಭಾರಿಯಾಗಿದ್ದು, ನಮ್ಮ ಸಂಸ್ಥೆಯ ಇತರ ವಿಭಾಗಗಳನ್ನು-ವ್ಯಾಖ್ಯಾನಿಸುವ ಉತ್ಪನ್ನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಆವೇಗವನ್ನು ಮುಂದಕ್ಕೆ ಒಯ್ಯುತ್ತಾ, ವೈಶಿಷ್ಟ್ಯ-ಸಮೃದ್ಧ XM+(S) ರೂಪಾಂತರವನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ, ಇದು ಖಂಡಿತವಾಗಿಯೂ ನಮ್ಮ ನೆಕ್ಸಾನ್ ಪೋರ್ಟ್‍ಫೋಲಿಯೊವನ್ನು ಮತ್ತಷ್ಟು ವೈವಿಧ್ಯಮಯವಾಗಿಸುತ್ತದೆ ಮತ್ತು ನಮ್ಮ ಶೋರೂಮ್‍ಗಳಿಗೆ ಹೊಸ ಗ್ರಾಹಕರನ್ನು ಸೆಳೆಯುತ್ತದೆ ಎಂದು ಟಾಟಾ ಮೋಟಾರ್ಸ್ ಮಾರ್ಕೆಟಿಂಗ್ ಮತ್ತು ಕಸ್ಟಮರ್ ಕೇರ್ ವಿಭಗಗಳ ಉಪಾಧ್ಯಕ್ಷ ರಾಜನ್ ಅಂಬಾ ಹೇಳಿದ್ದಾರೆ.
ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ ಮೋಟಾರ್ಸ್, ಬರೋಬ್ಬರಿ 70 ಸಾವಿರ ರಿಯಾಯಿತಿ!
ಇತ್ತೀಚೆಗೆ ಭಾರತದಲ್ಲಿ 4 ನೇ ಅತಿ ಹೆಚ್ಚು ಮಾರಾಟವಾದ ಕಾರು ಎಂದು ಪ್ರಸ್ತುತಗೊಂಡಿರುವ ನೆಕ್ಸಾನ್ ತನ್ನ ಹೆಸರಿಗೆ ಅನೇಕ ಪ್ರಶಸ್ತಿಗಳನ್ನು ಹೊಂದಿದೆ. 2017 ರಲ್ಲಿ ಪ್ರಾರಂಭವಾದ ನೆಕ್ಸಾನ್ ಅತ್ಯುತ್ತಮ ದರ್ಜೆಯ ಸುರಕ್ಷತೆ, ಬೆರಗುಗೊಳಿಸುವ ವಿನ್ಯಾಸ ಮತ್ತು ಉನ್ನತ ದರ್ಜೆಯ ಕಾರ್ಯಕ್ಷಮತೆಯೊಂದಿಗೆ ಮಹತ್ವಾಕಾಂಕ್ಷೆಯ ಮತ್ತು ವಿಭಾಗ-ವ್ಯಾಖ್ಯಾನಿತ ವೈಶಿಷ್ಟ್ಯದ ಸೇರ್ಪಡೆಗಳೊಂದಿಗೆ ಪರೀಕ್ಷೆಯ ಸಮಯವನ್ನು ಎದುರಿಸಿದೆ. ಗ್ರಾಹಕರಿಗೆ ಆಯ್ಕೆ ಮಾಡಲು 33 ಪೆಟ್ರೋಲ್ ಮತ್ತು 29 ಡೀಸೆಲ್ ರೂಪಾಂತರಗಳೊಂದಿಗೆ, ನೆಕ್ಸಾನ್ ಪೋಟ್ರ್ಫೋಲಿಯೊ ಒಟ್ಟು 62 ರೂಪಾಂತರಗಳೊಂದಿಗೆ ಸದೃಢವಾಗಿದ್ದು, ವ್ಯಾಪಕ ಶ್ರೇಣಿಯ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ.