ಭಾರತದ ಮಾರುಕಟ್ಟೆಗೆ ಬ್ರಿಟನ್‌ನ ಎಲೆಕ್ಟ್ರಿಕ್ ಬೈಕ್

By Suvarna News  |  First Published May 26, 2021, 12:34 PM IST

ಭಾರತದಲ್ಲಿ ಈಗ ಇ-ಬೈಕ್‌ಗಳಿಗೆ ಶುಕ್ರದೆಸೆ ಶುರುವಾಗಿದೆ. ಹಲವು ಕಂಪನಿಗಳು ಇ ಬೈಕ್‌ಗಳನ್ನು ಬಿಡುಗಡೆ ಮಾಡಿ, ತಮ್ಮ ಗ್ರಾಹಕ ವಲಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಈ ಸಾಲಿಗೆ ಬ್ರಿಟನ್‌ನ ಗೋಝೀರೋ ಮೊಬಿಲಿಟಿ ಕೂಡ ಸೇರಿದೆ. ಈ ಕಂಪನಿ ಭಾರತದಲ್ಲಿ ಸ್ಕೆಲ್ಲಿಗ್ ಪ್ರೋ ವ್ಯಾಪ್ತಿಯ ಇ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.


ಈ ಬೈಕ್‌ಗಳಿಂದ ಎರಡೂ ರೀತಿಯಲ್ಲಿ ಲಾಭವಿದೆ. ಮೊದಲನೆಯದು ನಿಮ್ಮ ನಗರ ಪ್ರಯಾಣಕ್ಕೆ ಅನುಕೂಲವಾಗುತ್ತದೆ. ಎರಡನೆಯದು ನಿಮ್ಮ ಆಫ್ ರೋಡ್ ಆಕ್ಟಿವಿಟಿಗೂ ಇದರಿಂದ ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲೇ ಬ್ರಿಟಿಷ್ ಉತ್ಪಾದಕ ಕಂಪನಿಯಾಗಿರುವ ಗೋಝೀರೋ ಮೊಬಿಲಿಟಿ ಹೊಸದ ಇ-ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಜೊತೆಗೆ ಭಾರತದಲ್ಲಿ ಬೆಳೆಯುತ್ತಿರುವ ಇ-ಬೈಕ್‌ಗಳ ವಲಯದಲ್ಲಿ ತಮ್ಮ ಪಾಲು ಪಡೆಯಲು ಹಲವು ಕಂಪನಿಗಳು ಪ್ರಯತ್ನಿಸುತ್ತಿವೆ. ಈಗಾಗಲೇ ಹಲವು ಇ ಬೈಕ್‌ಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. ಇದೀಗ ಬ್ರಿಟನ್‌ನ ಗೋಝೀರೋ ಮೊಬಿಲಿಟಿ ಕೂಡ ಈ ಸಾಲಿಗೆ ಸೇರಿದೆ.

Tap to resize

Latest Videos

undefined

ಇದು ಜಗತ್ತಿನ ಮೊದಲ ಹಾರುವ ಎಲೆಕ್ಟ್ರಿಕ್ ರೇಸಿಂಗ್ ಕಾರ್!

ಪ್ರೀಮಿಯಂ ಪರ್ಫಾರ್ಮೆನ್ಸ್ ಬೈಕ್‌ಗಳ ಉತ್ಪಾದನೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಗೋಝೀರೋ ಕಂಪನಿ  ಭಾರತೀಯ ಮಾರುಕಟ್ಟೆಗೆ ಸ್ಕೆಲ್ಲಿಗ್ ಪ್ರೋ(Skellig Pro) ಬ್ಯಾಟರಿ ಆಧರಿತ ಎಲೆಕ್ಟ್ರಿಕ್  ಬೈಕ್ ಅನ್ನು ಪರಿಚಯಿಸಿದೆ. ಇ ಬೈಕ್ ಬೆಲೆ 34,999 ರೂಪಾಯಿಂದ ಆರಂಭವಾಗುತ್ತದೆ(ಎಕ್ಸ್ ಶೋರೂಮ್ ದಿಲ್ಲಿ).

ಗೋಝೀರೋ ಮೊಬಿಲಿಟಿ ಕಂಪನಿಯು ಈ ಸ್ಕೆಲ್ಲಿಗ್ ಪ್ರೋ ಇ ಬೈಕ್ ಅನ್ನು ಆಫ್ ರೋಡ್ ಮತ್ತು ಸಿಟಿ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿನ್ಯಾಸ ಮಾಡಿದೆ. ಸ್ಕೆಲ್ಲಿಗ್ ಪ್ರೋ ಇ ಬೈಕ್ ಅನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ 70 ಕಿ.ಮೀ.ವರೆಗೂ ಓಡಿಸಬಹುದು. ಶಕ್ತಿಶಾಲಿ ಪ್ರದರ್ಶನವನ್ನು ನೀಡುವ ಕ್ಷಮತೆಯನ್ನು ಈ ಹೊಂದಿರುವ ಇ ಬೈಕ್ ಅನ್ನು ಕಂಪನಿ ಬ್ರಿಟನ್‌ನಲ್ಲಿ ವಿನ್ಯಾಸಗೊಳಿಸಿದೆ ಮತ್ತು ಭಾರತದಲ್ಲಿ ಉತ್ಪಾದನೆ ಮಾಡಿದೆ.

ಸ್ಕೆಲ್ಲಿಗ್ ಫ್ರೋ ಇ ಬೈಕ್, ಫಿಟ್ನೆಸ್ ಮತ್ತು ಪರಿಸರ ಸ್ನೇಹಿ ಪ್ರಯಾಣ ಪ್ರಜ್ಞೆಯನ್ನು ಸಾರ್ವಜನಿಕರಲ್ಲಿ ಉತ್ತೇಜಿಸುವ ವ್ಯಾಪ್ತಿಯ ಬೈಕ್ ಆಗಿದೆ.  ಈ ಬೈಕ್‌ ಎನ್‌ಡ್ರೈವ್ 400Wh ಲಿಥೀಯಮ್ ಬ್ಯಾಟರಿ ಜೊತೆಗೆ, 7 ಸ್ಪೀಡರ್ ಗಿಯರ್ ಹೊಂದಿದೆ. ಬೈಕ್‌ನ ಹಿಂಭಾಗ ಮತ್ತು ಮುಂಭಾಗದಲ್ಲಿ ಡಿಸ್ಕ್‌ಬ್ರೇಕ್‌ಗಳಿವೆ.

ಮೈಲ್ಡ್ ಸ್ಟೀಲ್ ಫ್ರೇಮ್ ಬಳಸಿಕೊಂಡು ಈ ಇ ಬೈಕ್ ನಿರ್ಮಿಸಲಾಗಿದ್ದು, ಫ್ರಂಟ್‌ ಸಸ್ಪೆನ್ಷನ್ ಫೋರ್ಕ್ ಮತ್ತು ಮಿಶ್ರಲೋಹದ ಸ್ಟೆಮ್ ಹ್ಯಾಂಡ್ ಇದೆ. ಗೋಝೀರೋ ಮೊಬಿಲಿಟಿ ಕಂಪನಿಯ ಈ ಸ್ಕೆಲ್ಲಿಗ್ ಪ್ರೋ ಇ ಬೈಕ್ 26x2.35 ಇಂಚ್ ಅಗಲಿನ ಟೈರ್‌ ಹೊಂದಿದ್ದು, ಇದರಿಂದ ಚಾಲನೆ ವೇಳೆ ಹಿಡಿತ ಸಿಗಲಿದೆ. ಈ ಕಾರಣದಿಂದಾಗಿಯೇ ಈ ಸ್ಕೆಲ್ಲಿಗ್ ಪ್ರೋ ಇ ಬೈಕ್ ಹೆಚ್ಚು ಆಫ್‌ ರೋಡ್ ಸವಾರಿಗೂ ಬಳಕೆಯಾಗುತ್ತಿದೆ.

ಆಫ್‌-ರೋಡ್ ಸ್ಕೂಟರ್ ಯಮಹಾ ಝುಮಾ ಹೇಗಿದೆ ಗೊತ್ತಾ?

ಬ್ರಿಟನ್ ಮೂಲದ ಗೋಝೀರೋ ಮೊಬಿಲಿಟಿ ಕಂಪನಿಯ ಸ್ಕೆಲ್ಲಿಗ್ ಪ್ರೋ ಇ ಬೈಕ್‌ನಲ್ಲಿ ಗೋಝೀರೋ ಡ್ರೈವ್ ಕಂಟ್ರೋಲ್ ವರ್ಷನ್ 4.0 ಇಂಚ್ ಎಲ್‌ಸಿಡಿ ಡಿಸ್‌ಪ್ಲೇ, ಗೈಡ್ ಮೀ ಹೋಮ್ ಸಕ್ರಿಯ ಲೈಟಿಂಗ್ ಸಿಸ್ಟಮ್‌ ‌ನೊಂದಿಗೆ ಫ್ಲ್ಯಾಶ್ ಲೈಟ್ ಕೂಡ ಇರಲಿದೆ.
 
ಗಂಟೆಗೆ ಗರಿಷ್ಠ 25 ಕಿ.ಮೀ ವೇಗದಲ್ಲಿ ಈ ಸ್ಕೆಲ್ಲಿಗ್ ಪ್ರೋ ಬೈಕ್ ಓಡುತ್ತದೆ ಮತ್ತು ಒಮ್ಮೆ ನೀವು ಬ್ಯಾಟರಿ ಚಾರ್ಜ್ ಮಾಡಿದರೆ ಅದು 70 ಕಿ.ಮೀ.ವರೆಗೂ ಬಾಳಕೆ  ಬರುತ್ತದೆ. ಝೀರೋದಿಂದ ಶೇ.95ರಷ್ಟು ಬ್ಯಾಟರಿ ಚಾರ್ಜ್ ಆಗಲು ಸುಮಾರು ಮೂರು ಗಂಟೆಗಳಾದರೂ ಬೇಕಾಗುತ್ತದೆ ಎನ್ನುತ್ತದೆ ಕಂಪನಿ. ಈ ಸ್ಕೆಲಿಗ್ ಪ್ರೋ ಇ ಬೈಕ್ ನಿಮಗೆ ಆನ್‌ಲೈನ್ ಮತ್ತು ಆಯ್ದ ಆಫ್ ಲೈನ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ದೊರೆಯುತ್ತದೆ.

ಇತ್ತೀಚಿನ ದಿನಗಳಲ್ಲಿ ಸೈಕ್ಲಿಂಗ್ ಬಗ್ಗೆ ಬಹುತೇಕರು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಿದ್ದಾರೆ. ಆರೋಗ್ಯ ಪ್ರಜ್ಞೆ ಹೆಚ್ಚಾಗುತ್ತಿದ್ದಂತೆ ಮತ್ತು ಸೈಕ್ಲಿಂಗ್‌ನಿಂದಾಗುವ ಆರೋಗ್ಯ ಉಪಯೋಗಗಳ ಬಗ್ಗೆ ಜಾಗೃತಿ ಮೂಡುತ್ತಿರುವುದರ ಪರಿಣಾಮವಿದು. ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಸಾಂಪ್ರದಾಯಿಕ ಬೈಸಿಕಲ್‌ಗಳ ಜತೆಗೆ ಇ-ಬೈಕ್‌ಗಳನ್ನೂ ಪರಿಚಯಿಸುತ್ತಿವೆ.

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

click me!