ಕರ್ನಾಟಕ ಕೊರೊನಾ ಹೋರಾಟಕ್ಕೆ TVS ಮೋಟಾರ್ 4 ಕೋಟಿ ನೆರವು

Published : May 21, 2021, 07:19 PM ISTUpdated : May 21, 2021, 07:45 PM IST
ಕರ್ನಾಟಕ ಕೊರೊನಾ  ಹೋರಾಟಕ್ಕೆ TVS ಮೋಟಾರ್ 4 ಕೋಟಿ ನೆರವು

ಸಾರಾಂಶ

ಕೊರೋನಾ ವಿರುದ್ಧದ ಹೋರಾಟಕ್ಕೆ ಟಿವಿಎಸ್ ಮೋಟಾರ್ ನೆರವು ಹೆಚ್ಚುವರಿಯಾಗಿ 300 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸೇರಿದಂತೆ ವೈದ್ಯಕೀಯ ಸಲಕರಣೆ ನೆರವು

ಬೆಂಗಳೂರು(ಮೇ.21):  ಕರ್ನಾಟಕದ ಸರ್ಕಾರದ ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವು ಕಂಪನಿಗಳು, ಸಂಘ ಸಂಸ್ಥೆಗಳು ನೆರವು ನೀಡುತ್ತಿದೆ. ಈ ಮೂಲಕ ಕರ್ನಾಟಕವನ್ನು ಕೋವಿಡ್‌ನಿಂದ ಮುಕ್ತ ಮಾಡುಲು ಒಗ್ಗಟ್ಟಾಗಿ ಹೋರಾಟ ನಡೆಯುತ್ತಿದೆ. ಇದೀಗ ಟಿವಿಎಸ್ ಮೋಟಾರ್ಸ್ 1 ಕೋಟಿ ರೂಪಾಯಿ ನಗದು ಹಾಗೂ ಇತರ 3 ಕೋಟಿ ರೂಪಾಯಿ ವೈದ್ಯಕೀಯ ಸಲಕರಣೆ  ನೆರವು ನೀಡಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ TVS ಆಟೋ ಸವಾರಿ ಅಭಿಯಾನ; ಬೆಂಗಳೂರಲ್ಲಿ ಚಾಲನೆ!

ಟಿವಿಎಸ್ ಮೋಟಾರ್ ಕಂಪನಿಯು ಸುಂದರಂ ಕ್ಲೇಟನ್ ಲಿಮಿಟೆಡ್  ಹಾಗೂ ತನ್ನ ಸಾಮಾಜಿಕ ಸೇವಾ ಸಂಸ್ಥೆಯಾದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ ಮೂಲಕ ಕೋವಿಡ್ ಪರಿಹಾರ ಕಾರ್ಯಗಳಿಗಾಗಿ  1 ಕೋಟಿ ರೂಪಾಯಿ ನೆರವು ನೀಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ 1 ಕೋಟಿ ರೂಪಾಯಿ ಚೆಕ್ ನೀಡಿತು.

ಮಹಿಳಾ ಸಬಲೀಕರಣಕ್ಕೆ TVS ಮೋಟಾರ್ ಒನ್ ಡ್ರೀಮ್ ಒನ್ ರೈಡ್‌ಗೆ ಭಾರಿ ಬೆಂಬಲ!

ಹೆಚ್ಚುವರಿಯಾಗಿ 300 ಆಕ್ಸಿಜನ್ ಕಾನ್ಸನ್‍ಟ್ರೇಟರ್ಸ್, ಅಗತ್ಯ ವೈದ್ಯಕೀಯ ಪರಿಕರಗಳು ಸೇರಿದಂತೆ ರೂ. 3 ಕೋಟಿ ಮೌಲ್ಯದ ಪರಿಕರಗಳನ್ನು ಕೊಡುಗೆ ನೀಡಿದೆ.  ಟಿವಿಎಸ್ ಮೋಟಾರ್ ಕಂಪನಿಯ ಉಪಾಧ್ಯಕ್ಷ ವಿ.ಆರ್.ಕರುಣಾಕರ ರೆಡ್ಡಿ ಮತ್ತು ಟಿವಿಎಸ್ ಮೋಟಾರ್ ಕಂಪನಿಯ ಸಹ ಉಪಾಧ್ಯಕ್ಷರಾದ ಸೇತುರಾಮನ್ ಅವರಿಂದ ಬಿಎಸ್‌ವೈ ಚೆಕ್ ಹಾಗೂ ಇತರ ವೈದ್ಯಕೀಯ ನೆರವು ಸ್ವೀಕರಿಸಿದರು.

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್