ಪ್ರತಿ 3 ತಿಂಗಳಿಗೆ ಒಂದು ಹೊಸ ರಾಯಲ್‌ ಎನ್‌ಫೀಲ್ಡ್ ಬೈಕ್!

By Suvarna NewsFirst Published Nov 10, 2020, 4:44 PM IST
Highlights

ಭಾರತೀಯ ದ್ವಿಚಕ್ರ ಮಾರುಕಟ್ಟೆಯನ್ನು ಆಳುತ್ತಿರುವ ರಾಯಲ್ ಎನ್‌ಫೀಲ್ಡ್ ದೊಡ್ಡ ಮಟ್ಟದ ಪ್ಲ್ಯಾನ್ ಹಾಕಿಕೊಂಡಿದ್ದು ಮುಂದಿನ ಏಳು ವರ್ಷಗಳಲ್ಲಿ 28 ಹೊಸ ಮಾಡೆಲ್‌ ಬೈಕ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
 

ಇತ್ತೀಚೆಗಷ್ಟೇ ಮೀಟಿಯೋರ್ ಮಾಡೆಲ್ ಬಿಡುಗಡೆ ಮಾಡಿ ಬೀಗುತ್ತಿರುವ ರಾಯಲ್ ‌ಎನ್‌ಫೀಲ್ಡ್ ಮುಂದಿನ 7 ವರ್ಷಗಳಲ್ಲಿ 28 ಹೊಸ ಮಾಡೆಲ್‌ ಬೈಕ್‌ಗಳನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ. ಪ್ರತಿ ಮೂರು ತಿಂಗಳಿಗೊಂದು ಒಂದು ಹೊಸ ಮಾಡೆಲ್‌ ಬೈಕ್ ಅನ್ನು ಪರಿಚಯಿಸುವುದು ಅದರ ಉದ್ದೇಶವಾಗಿದೆ. ಈ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಸದೃಢಗೊಳಿಸುವುದು ಕಂಪನಿಯ ಉದ್ದೇಶವಾಗಿದೆ. 

ಮುಂದಿನ 5ರಿಂದ 7 ವರ್ಷಗಳವರೆಗೆ ನಾವು ಉತ್ಪಾದನಾ ಪ್ಲ್ಯಾನ್ ಹಾಕಿಕೊಂಡಿದ್ದೇವೆ. ಪ್ರತಿ ತ್ರೈಮಾಸಿಕಕ್ಕೆ ಹೊಸ ಮಾಡೆಲ್ ಬೈಕ್ ಅನ್ನು ಪರಿಚಯಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಅಂದರೆ, ಕೇವಲ ಬಣ್ಣ ಮತ್ತು ಇತರ ವಿನ್ಯಾಸಗಳ ಬದಲಾವಣೆ ಮಾತ್ರವಲ್ಲ. ಬಿಡುಗಡೆ ಮಾಡಲು ಉದ್ದೇಶಿಲಾಗಿರುವ 28 ಮಾಡೆಲ್‌ಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ ಎನ್ನುತ್ತಾರೆ ರಾಯಲ್ ಎನ್‌ಫೀಲ್ಡ್ ಸಿಇಒ ವಿನೋದ್ ಕೆ ದಾಸರಿ ಅವರು.

ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್

ಈ ಎಲ್ಲ ಹೊಸ ಮಾಡೆಲ್‌ಗಳು ಮಿಡ್ ಸೆಗ್ಮೆಂಟ್‌ಗೆ ಸಂಬಂಧಿಸಿದ್ದಾಗಿವೆ. ಅಂದರೆ 250ಸಿಸಿಯಿಂದ 750 ಸಿಸಿವರೆಗಿನ ಬೈಕ್‌ಗಳು ಮತ್ತು ನಮ್ಮ ಕಂಪನಿಯು ಗಮನ ಕೇಂದ್ರೀಕರಿಸಿದ ಸಂಗತಿಯೂ ಇದೇ ಆಗಿದೆ. ನಿಜ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೈಕ್‌ಗಳನ್ನು ಬಿಡುಗಡೆ ಮಾಡುವ ಮೂಲಕ ನಾವು ನಮ್ಮ ಸ್ಥಾನವನ್ನು ಇನ್ನಷ್ಟು ಸದೃಢಗೊಳಿಸುತ್ತೇವೆ ಎನ್ನುತ್ತಾರೆ ಅವರು.

ಆದರೆ, ಈ ಸಂಬಂಧ ಹೂಡಿಕೆಯ ಬಗ್ಗೆ ದಾಸರಿ ಅವರು ಏನೂ ಹೇಳಲಿಲ್ಲ. ಆದರೆ, ಹೊಸ ಉತ್ಪನ್ನಗಳು, ಹೊಸ ತಂತ್ರಜ್ಞಾನಗಳು ಅಂದರೆ ಎಲೆಕ್ಟ್ರಿಕ್ ವೆಹಿಕಲ್ಸ್, ಡಿಜಿಟಲ್ ಸಲೂಷನ್ ಸೇರಿದಂತೆ ಇನ್ನಿತರ ಸಂಗತಿಗಳ ಮೇಲೆ ಕಂಪನಿ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎನ್ನುತ್ತಾರೆ ಅವರು. 

ಮುಂದಿನ 2 ರಿಂದ 3 ವರ್ಷಗಳವರೆಗೆ ನಮಗೆ ಸಾಕಷ್ಟು ಉತ್ಪಾದನಾ ಸಾಮರ್ಥ್ಯವಿದೆ. ಆದ್ದರಿಂದ, ನಮ್ಮ ಹೂಡಿಕೆಗಳ ಗಮನಾರ್ಹ ಭಾಗವನ್ನು ಹೊಸ ಉತ್ಪನ್ನಗಳು, ತಂತ್ರಜ್ಞಾನ ಮತ್ತು ಸಾಮರ್ಥ್ಯ ವರ್ಧನೆ ಮತ್ತು ಜಾಗತಿಕ ವಿಸ್ತರಣೆಯತ್ತವೇ ನಮ್ಮ ನೋಟ ಇರಲಿದೆ ಎನ್ನುತ್ತಾರೆ ಅವರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಮೊದಲ ನಾಲ್ಕರಿಂದ ಐದು ತಿಂಗಳುಗಳು ಸಂಪೂರ್ಣವಾಗಿ ಆದಾಯರಹಿತವಾದವು. ಆದರೆ, ಇದೀಗ ಕೊರೊನಾ ಪೂರ್ವಕ್ಕೆ ಹೋಲಿಸಿದರೆ ಬುಕ್ಕಿಂಗ್ ಹೆಚ್ಚಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಬುಕ್ಕಿಂಗ್ ಹೆಚ್ಚಾಗಿದೆ. ಕಳೆದ ವರ್ಷ ಅಕ್ಟೋಬರ್‌ ವ್ಯಾಪಾರಕ್ಕೆ ಈ ತಿಂಗಳ ವ್ಯವಹಾರಕ್ಕೆ ಅಷ್ಟೇನೂ ವ್ಯತ್ಯಾಸವಾಗಿಲ್ಲ ಎಂಬುದು ದಾಸರಿ ಅವರ ಅಭಿಪ್ರಾಯವಾಗಿದೆ. 

ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ ಕಟ್ಟೋದು ಬೇಡ!...

ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ನಮ್ಮ ಬೆಳವಣಿಗೆಯು ಅದ್ಭುತವಾಗಿದೆ. ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಉತ್ತೇಜಿತರಾಗಿದ್ದೇವೆ. ಇತ್ತೀಚೆಗಷ್ಟೇ ಅರ್ಜೇಂಟೈನಾ ಹೊಸ ಅಸೆಂಬಲ್ ಯುನಿಟ್ ಹಾಕಿದ್ದೇವೆ. ಥಾಯಲೆಂಡ್‌ನಲ್ಲೂ ಇಂಥದ್ದೇ ಅಸೆಂಬಲ್ ಯುನಿಟ್ ಹಾಕುವ ಯೋಜನೆ ಜಾರಿಯಲ್ಲಿದೆ. ಅದು ಮುಂದಿನ 6ರಿಂದ 12 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಿಜವಾಗಿಯೂ ಕಂಪನಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರಾಟ ಹೆಚ್ಚಳವಾಗಿದೆ. ಬ್ರಿಟನ್ ಮಾರುಕಟ್ಟೆಯಲ್ಲಿ ಕಳೆದ ಒಂದು ವ ರ್ಷದಿಂದ ರಾಯಲ್ ಎನ್‌ಫೀಲ್ಡ್‌ನ ಇಂಟರ್‌ಸೆಪ್ಟರ್ ಮಾಡೆಲ್‌ ಅತ್ಯುತ್ತಮವಾಗಿ ಮಾರಾಟವಾಗುತ್ತಿದೆ.

ಹೀರೋ ಮೊಟೊಕಾರ್ಪ್-ಹಾರ್ಲೆ ಡೇವಿಡ್ಸನ್ ಪಾಲುದಾರಿಕೆಯ ಹಿನ್ನೆಲೆಯಲ್ಲಿ ಭಾರತದ ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ವಿಭಾಗದಲ್ಲಿ ಸ್ಪರ್ಧೆಯ ಬಿಸಿ ಹೆಚ್ಚಾಗುವ ಸಾಧ್ಯತೆಯಿದೆ. ಹೋಂಡಾ ತನ್ನ ಹೈನೆಸ್ ಸಿಬಿ 350 ಮತ್ತು ಬಜಾಜ್-ಟ್ರಯಂಫ್ ಉತ್ಪನ್ನಗಳೊಂದಿಗೆ ಕ್ರೂಸರ್ ವಿಭಾಗಕ್ಕೆ ಅಡಿ ಇಟ್ಟಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿವೆ. ಮಧ್ಯಮ ಗಾತ್ರದ ವಿಭಾಗದತ್ತ ಹೆಚ್ಚಿನ ಗಮನ ಹರಿಸುವುದರೊಂದಿಗೆ ಮಾರುಕಟ್ಟೆಯನ್ನು ವಿಸ್ತರಿಸಲು ಇದು ಸಹಾಯ ಮಾಡುತ್ತದೆ ಎಂದು ದಾಸರಿ ಅವರು ಇದೇ ವೇಳೆ ಅಭಿಪ್ರಾಯಪಟ್ಟರು. 

ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!

click me!