
ನವದೆಹಲಿ (ಸೆ.23) ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿದೆ. ಫ್ಲೈಯಿಂಗ್ ಫ್ಲೀ ಇವಿ ಬೈಕ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರೀನ್ ಹಾಗೂ ಬ್ಲಾಕ್ ಬಣ್ಣದಲ್ಲಿ ಲಭ್ಯವಿದೆ ಫ್ಲೈಯಿಂಗ್ ಫ್ಲೀ ಇದೀಗ ಪ್ಯಾರಾಚ್ಯೂಟ್ ವೈಟ್ ಬಣ್ಣದಲ್ಲಿ ಬಿಡುಗಡೆಯಾಗಿದೆ. ವಿಶೇಷ ಅಂದರೆ ಫ್ಲೈಯಿಂಗ್ ಫ್ಲೀ ಯುಕೆ ಹಾಗೂ ಯೂರೋಪ್ ಮಾರುಕಟ್ಟೆಗೂ ಎಂಟ್ರಿಕೊಟ್ಟಿದೆ.
ರಾಯಲ್ ಎನ್‌ಫೀಲ್ಡಿಂಗ್ ಫ್ಲೈಯಿಂಗ್ ಫ್ಲೀ ಸಿ6 ಎಲೆಕ್ಟ್ರಿಕ್ ಬೈಕ್ ಇದೀಗ ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿದೆ. ಹೊಸ ಪ್ಯಾರಾಚ್ಯೂಟ್ ಬೈಕ್, ವೈಟ್ ಬಾಡಿ ಹಾಗೂ ಬ್ಲಾಕ್ ಎಂಜಿನ್ ಎಲಿಮೆಂಟ್ಸ್‌ನೊಂದಿಗೆ ಲಭ್ಯವಿದೆ. ಡ್ಯುಯೆಲ್ ಟೋನ್ ಮಾದರಿಯಲ್ಲಿ ಬೈಕ್ ಅತ್ಯಂತ ಆಕರ್ಷಕವಾಗಿ ಕಾಣುತ್ತಿದೆ. ಆದರೆ ಮೆಕಾನಿಕಲ್, ಎಂಜಿನ್, ಫೀಟರ್, ತಂತ್ರಜ್ಞಾನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಸ ಪ್ಯಾರಾಚ್ಯೂಟ್ ವೈಟ್ ಸಿ6 ಬೈಕ್ ಪ್ರೀಮಿಯಂ ಲುಕ್ ನೀಡುತ್ತಿದೆ.
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಆರಂಭಿಕ ಬೆಲೆ 2.79 ಲಕ್ಷ ರೂಪಾಯಿ. ಇನ್ನು ಬಾಸ್(ಬ್ಯಾಟರಿ ಆನ್ ಸರ್ವೀಸ್) ಮಾದರಿಯಲ್ಲಿ ಈ ಬೈಕ್ ಖರೀದಿಸುವುದಾದರೆ 1.99 ಲಕ್ಷ ರೂಪಾಯಿ (ಎಕ್ಸ್ ಶೋರೂಂ)ಗೆ ಲಭ್ಯವಿದೆ. ಈ ಆಯ್ಕೆಯಲ್ಲಿ ಬ್ಯಾಟರಿಗೆ ಬಾಡಿಗೆ ನೀಡಬೇಕು.
ಫ್ಲೈಯಿಂಗ್ ಸಿ6 ಬೈಕ್ ಯುಕೆ ಹಾಗೂ ಯೂರೋಪ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯೂರೋಪ್ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಬೆಲೆ EUR 5,999 ( ಭಾರತೀಯ ರೂಪಾಯಿಗಳಲ್ಲಿ 6.58 ಲಕ್ಷ ರೂಪಾಯಿ ). ಇನ್ನು ಯುಕೆಯಲ್ಲಿ ಆರಂಭಿಕ ಬೆಲೆ GBP 5300 ( ಭಾರತೀಯ ರೂಪಾಯಿಗಳಲ್ಲಿ 6.78 ಲಕ್ಷ ರೂಪಾಯಿ )
ರಾಯಲ್ ಎನ್‌ಫೀಲ್ಡ್ ಸಿ6 ಬೈಕ್ 3.91kwh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 15.4kw ಎಲೆಕ್ಟ್ರಿಕ್ ಮೋಟಾರ್ ಇದರಲ್ಲಿದೆ. ಹೀಗಾಗಿ 60nm ಟಾರ್ಕ್ ಉತ್ಪಾದಿಸುತ್ತದೆ. 0.60 ಕಿಲೋಮೀಟರ್ ವೇಗವನ್ನು 3.7 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಐಡಿಸಿ ಮೈಲೇಜ್ ರೇಂಜ್ 154 ಕಿಲೋಮೀಟರ್. ಬೈಕ್ ಗರಿಷ್ಠ ವೇಗ 115 ಕಿಲೋಮೀಟರ್ ಪ್ರತಿ ಗಂಟೆಗೆ. ಶೇಕಡಾ 20 ರಿಂದ 80 ರಷ್ಟು ಚಾರ್ಜಿಂಗ್ ಸಮಯ 65 ನಿಮಿಷ. 0-100 ಶೇಕಡಾ ಚಾರ್ಜ್ ಆಗಲು 2 ಗಂಟೆ 16 ನಿಮಿಷ ತೆಗೆದುಕೊಳ್ಳುತ್ತದೆ.