ಕಡಿಮೆ ಬೆಲೆ ಅತ್ಯುತ್ತಮ ಮೈಲೇಜ್‌, ಖರೀದಿಸಲು ಈ ಕಂಪನಿಯ 5 ಬೈಕ್‌ಗಳು ನಿಜಕ್ಕೂ ವರ್ಥ್‌

Published : Sep 20, 2026, 09:16 AM IST
bajaj bike

ಸಾರಾಂಶ

ಬೈಕ್‌ ಖರೀದಿ ಪ್ಲಾನ್‌ನಲ್ಲಿ ನೀವು ಇದ್ದೀರಾ?‌ ಕಡಿಮೆ ಬೆಲೆಯಲ್ಲಿ ಒಳ್ಳೆಯ ಮೈಲೇಜ್ ನೀಡುವ ಬೈಕ್‌ಗಳನ್ನ ಬಜಾಜ್‌ ಕಂಪನಿಯಲ್ಲಿ ಲಭ್ಯ ಇವೆ. ಅವುಗಳ ಪಟ್ಟಿ ಇಲ್ಲಿದೆ. ಸ್ಟೋರಿ ಓದಿ..

ಬಜೆಟ್‌ ಸ್ನೇಹಿ ಬೈಕ್‌ ಬೇಕು ಅಂದ್ರೆ ಬಜಾಜ್‌ ಕಂಪನಿಯಲ್ಲಿ ಒಳ್ಳೊಳ್ಳೆ ಆಯ್ಕೆಗಳಿವೆ. ನಿಮ್ಮ ದೈನಂದಿನ ಪ್ರಯಾಣಕ್ಕೆ ಅನುಕೂಲ ಆಗಲು ಕೈಗೆಟಕುವ ಬೆಲೆಯಲ್ಲಿ ನೋಡುತ್ತಿದ್ದರೆ ಇದಕ್ಕಿಂತ ಮತ್ತೊಂದು ಅವಕಾಶ ಇಲ್ಲ. ಪ್ಲಾಟಿನಾ, CT 110X, CT 125X, ಫ್ರೀಡಂ CNG, ಮತ್ತು ಪಲ್ಸರ್ 125 ಕುರಿತ ಮಾಹಿತಿ ಇಲ್ಲಿದೆ. ಬಾಳಿಕೆ ಮತ್ತು ಇಂಧನ ದಕ್ಷತೆಗೆ ಬಜಾಜ್‌ ಬೈಕ್‌ಗಳು ಹೆಸರು. ಅವುಗಳ ವಿವರ ಇಲ್ಲಿದೆ.

ಬಜಾಜ್‌ ಪ್ಲಾಟಿನಾ 100

  • ಬಜಾಜ್‌ ಕಂಪನಿಯ ಅತ್ಯಂತ ಕೈಗೆಟಕುವ ಬೈಕ್‌
  • ವಿಶ್ವಾಸರ್ಹತೆ ವಿಚಾರದಲ್ಲೂ ಅಗ್ರಸ್ಥಾನದಲ್ಲಿದೆ
  • ಆರಂಭಿಕ ಬೆಲೆ 68 ಸಾವಿರ ರೂಪಾಯಿಯಿಂದ ಆರಂಭ
  • ಈ ಬೈಕ್‌ ಕಂಫರ್ಟೆಕ್‌ ಸಸ್ಪೆನ್ಸ್‌ಗೆ ಹೆಸರುವಾಸಿ
  • ಅತ್ಯಂತ ಒರಟಾದ ರಸ್ತೆಯಲ್ಲೂ ಸುಲಭವಾಗಿ ಓಡಿಸಬಹುದು
  • 70ಕ್ಕೂ ಹೆಚ್ಚು ಕಿಲೋ ಮೀಟರ್‌ ಮೈಲೇಜ್‌ ನೀಡುತ್ತವೆ

ಜಾಜ್ CT 110X

  • ಖಡಕ್‌ ಲುಕ್‌ ನೋಡುತ್ತಿದ್ದ ಬಜಾಜ್ CT 110X ಬೆಸ್ಟ್‌ ಆಯ್ಕೆ
  • ಸುಮಾರು ₹70,000 ರಿಂದ ಬೆಲೆ ಆರಂಭ
  • ಬೈಕ್ ಕ್ಯಾಶ್ ಗಾರ್ಡ್, ಹಿಂಭಾಗದ ರ್ಯಾಕ್ ಹೊಂದಿದೆ
  • ಅತ್ಯಂತ ಗುಣಮಟ್ಟ ಬೈಕ್‌ಗಳಲ್ಲಿ ಇದು ಒಂದು
  • 65 ರಿಂದ 70 ಕಿಮೀ /ಲೀಟರ್ ಮೈಲೇಜ್ ನೀಡುತ್ತದೆ

ಬಜಾಜ್ CT 125X

  • ಹೆಚ್ಚಿನ ಶಕ್ತಿ ಮತ್ತು ಸೊಗಸಾದ ನೋಟಕ್ಕೆ ಹೆಸರುವಾಸಿ
  • ಬಜಾಜ್ CT 125X ಬಹಳ ಪ್ರಾಯೋಗಿಕ ಮತ್ತು ಒಳ್ಳೆಯ ಆಯ್ಕೆ
  • ₹74,000 ಆರಂಭಿಕ ಎಕ್ಸ್-ಶೋರೂಂ ಬೆಲೆ
  • 125 cc ಎಂಜಿನ್ ಹೊಂದಿದೆ
  • ದೈನಂದಿನ ಪ್ರಯಾಣಕ್ಕೆ ಆರಾಮದಾಯಕ
  • ಈಸಿಯಾಗಿ 60 ಕಿಮೀ/ಲೀ ವರೆಗೆ ಮೈಲೇಜ್

ಬಜಾಜ್ ಫ್ರೀಡಂ 125

  • ಇದು ವಿಶ್ವದ ಮೊದಲ CNG ಬೈಕ್
  • ಪೆಟ್ರೋಲ್‌ ಹಾಕಿಸಿಕೊಳ್ಳುವ ಕಿರಿಕಿರಿ ಇಲ್ಲ
  • ಬೆಲೆ ₹95,000 ರಿಂದ ಪ್ರಾರಂಭ
  • ಇದು CNG ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುತ್ತದೆ
  • 100 ಕಿಲೋಮೀಟರ್‌ಗಿಂತ ಹೆಚ್ಚು ಮೈಲೇಜ್

ಬಜಾಜ್ ಪಲ್ಸರ್ 125

  • ಬಜೆಟ್‌ನಲ್ಲಿ ಸ್ಪೋರ್ಟಿ ಫೀಲ್‌, ಸ್ಪೋರ್ಟಿ ಲುಕ್‌
  • ₹81,000 ಆರಂಭಿಕ ಬೆಲೆಯೊಂದಿಗೆ ಆರಂಭ
  • ಪಲ್ಸರ್ ಸರಣಿಯಲ್ಲಿ ಅತ್ಯಂತ ಕೈಗೆಟುಕುವ ಮಾಡೆಲ್‌
  • 125 ಸಿಸಿ ಎಂಜಿನ್ ಮತ್ತು ಸ್ಪೋರ್ಟಿ ವಿನ್ಯಾಸ
  • 50 ರಿಂದ 55 ಕಿಮೀ/ಲೀಟರ್‌ನ ಅತ್ಯುತ್ತಮ ಮೈಲೇಜ್

ಬಜಾಜ್‌ ಬೈಕ್‌ಗಳ ಅದ್ಭುತ ಏನೆಂದರೆ ಅದರ ನಿರ್ವಹಣಾ ವೆಚ್ಚಗಳು ತುಂಬಾ ಕಡಿಮೆ. ಬಿಡಿಭಾಗಗಳು ಎಲ್ಲಾ ಕಡೆ ಸುಲಭಕ್ಕೆ ಸಿಗುತ್ತದೆ. ರೀ ಸೇಲ್‌ ವ್ಯಾಲ್ಯೂ ಕೂಡ ಚೆನ್ನಾಗಿದೆ. ಕೆಲವು ವರ್ಷಗಳ ಬಳಸಿ ನೀವು ಮಾರಾಟ ಮಾಡ್ತೀರಿ ಅಂದರೂ ಒಳ್ಳೆಯ ಬೆಲೆಗೆ ಮಾರಾಟ ಮಾಡಬಹುದು. ಕಡಿಮೆ ಬೆಲೆಯಲ್ಲಿ ಬಾಳಿಕೆ ಬರುವ, ಆರಾಮದಾಯಕ ಮತ್ತು ಇಂಧನ-ಸಮರ್ಥ ಬೈಕು ಹುಡುಕುತ್ತಿದ್ದರೆ ಬಜಾಜ್‌ ಒಳ್ಳೆಯ ಆಯ್ಕೆ ಆಗಬಹುದು. ನಿಮ್ಮ ಅಗತ್ಯತೆಗಳು ಮತ್ತು ಬಜೆಟ್‌ಗೆ ಸರಿಯಾದ ಬೈಕನ್ನು ಆರಿಸಿ ಮತ್ತು ಟೆಸ್ಟ್ ಡ್ರೈವ್‌ಗಾಗಿ ಹತ್ತಿರದ ಶೋರೂಮ್‌ ಗೆ ಭೇಟಿ ನೀಡಿ.

PREV
Read more Articles on
click me!

Recommended Stories

ಬಜಾಜ್ Pulsar NS125 ಹೊಸ ಲುಕ್, ಖಡಕ್ ಫೀಚರ್‍‌ನೊಂದಿಗೆ ಕ್ರೇಜಿ ಯುವಕರ ಫ್ರೆಂಡ್ಲಿ ಬೈಕ್!
ಯಮಹಾ ಬೈಕ್, ಸ್ಕೂಟರ್ ಮೇಲೆ ಹಬ್ಬದ ಆಫರ್, ಕೇವಲ 2499 ರೂ.ಗೆ ಮನಗೆ ತನ್ನಿ ಡ್ರೀಮ್ ರೈಡ್