ರಾಯಲ್ ಎನ್‌ಫೀಲ್ಡ್ ಹಂಟರ್ 350 ರೆಟ್ರೋ ಮತ್ತು ಮೆಟ್ರೋ ಎಂಬ 2 ರೂಪಾಂತರಗಳಲ್ಲಿ ಲಭ್ಯವಿದೆ. ರೆಟ್ರೋ ವೇರಿಯೆಂಟ್ ಬೆಲೆ 1.50 ಲಕ್ಷ ರೂಪಾಯಿಯಾಗಿದ್ದರೆ, ಎರಡನೆಯದು ಬಣ್ಣ ಆಯ್ಕೆಯ ಆಧಾರದ ಮೇಲೆ 1.69 ಲಕ್ಷದಿಂದ 1.74 ಲಕ್ಷ ಬೆಲೆ ಹೊಂದಿದೆ.
ನವದೆಹಲಿ (ಜುಲೈ 26, 2023): ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ತನ್ನ ಹಂಟರ್ 350 ಮೋಟಾರ್‌ಸೈಕಲ್ 2,00,000 ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದೆ. ಆಗಸ್ಟ್ 2022 ರಲ್ಲಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹಂಟರ್ 350 ಫೆಬ್ರವರಿ 2023 ರಲ್ಲಿ ಬಿಡುಗಡೆಯಾದ 6 ತಿಂಗಳೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ಮುಟ್ಟಿತ್ತು ಎಂದು ದ್ವಿಚಕ್ರ ವಾಹನ ತಯಾರಕರು ಹೇಳುತ್ತಾರೆ.
ಆಕರ್ಷಕವಾದ ಕಾಂಪ್ಯಾಕ್ಟ್ ವಿನ್ಯಾಸವನ್ನು ಸಂಯೋಜಿಸಿದ ರಾಯಲ್ ಎನ್‌ಫೀಲ್ಡ್ ಹಂಟರ್ 350 ರೆಟ್ರೋ ಮತ್ತು ಮೆಟ್ರೋ ಎಂಬ 2 ರೂಪಾಂತರಗಳಲ್ಲಿ ಲಭ್ಯವಿದೆ. ರೆಟ್ರೋ ವೇರಿಯೆಂಟ್ ಬೆಲೆ 1.50 ಲಕ್ಷ ರೂಪಾಯಿಯಾಗಿದ್ದರೆ, ಎರಡನೆಯದು ಬಣ್ಣ ಆಯ್ಕೆಯ ಆಧಾರದ ಮೇಲೆ 1.69 ಲಕ್ಷದಿಂದ 1.74 ಲಕ್ಷ ಬೆಲೆ (ಎಕ್ಸ್ ಶೋರೂಂ ದೆಹಲಿ).
undefined
ಇದನ್ನು ಓದಿ: ಭಾರತದ ಅತ್ಯಂತ ಸುರಕ್ಷಿತವಾದ ‘ಬಾಂಬ್ ಪ್ರೂಫ್’ ಮರ್ಸಿಡಿಸ್ ಕಾರು ಖರೀದಿಸಿದ ಮುಖೇಶ್ ಅಂಬಾನಿ: ಬೆಲೆ ಎಷ್ಟು ನೋಡಿ..
J-ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಹಂಟರ್ 350 ತನ್ನ ಶಕ್ತಿಯನ್ನು 349 cc ಎಂಜಿನ್‌ನಿಂದ ಪಡೆಯುತ್ತದೆ. ಇದು 6,100 rpm ನಲ್ಲಿ 20.2 hp ಗರಿಷ್ಠ ಶಕ್ತಿಯನ್ನು ಮತ್ತು 4,000 rpm ನಲ್ಲಿ 27 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಬ್ರೇಕ್ ಹಿಡಿಯಲು, ಬೇಸ್ ರೆಟ್ರೋ ರೂಪಾಂತರವು ಹಿಂಭಾಗದ ಡ್ರಮ್ ಬ್ರೇಕ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ. ಆದರೆ ಮೆಟ್ರೋ ಟ್ರಿಮ್ 270 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ. ಇನ್ನು, ಹಂಟರ್ 350 ರೆಟ್ರೋ ಟ್ಯೂಬ್ಯುಲರ್ ಗ್ರ್ಯಾಬ್ ರೈಲ್‌ಗಳೊಂದಿಗೆ ಹ್ಯಾಲೊಜೆನ್ ಬಲ್ಬ್ ಅನ್ನು ಪಡೆಯುತ್ತದೆ ಮತ್ತು ಉನ್ನತ ಸ್ಪೆಸಿಫಿಕೇಷನ್ಸ್ ಹೊಂದಿರುವ ಹಂಟರ್ 350 ಮೆಟ್ರೋ ಸೊಗಸಾದ ಹಿಂಬದಿಯ ಗ್ರ್ಯಾಬ್ ರೈಲ್‌ಗಳೊಂದಿಗೆ LED ಟೈಲ್-ಲ್ಯಾಂಪ್‌ನೊಂದಿಗೆ ಸಜ್ಜುಗೊಂಡಿದೆ.
ಇದನ್ನೂ ಓದಿ: ಅಂಬಾನಿ ಬಳಿ ಇದೆ ಬಣ್ಣ ಬದಲಾಯಿಸೋ ರೋಲ್ಸ್ ರಾಯ್ಸ್ ಕಾರು: ಹೇಗಿದೆ ನೋಡಿ 13 ಕೋಟಿ ಮೌಲ್ಯದ SUV?
ಈ ಮೈಲಿಗಲ್ಲು ಗಳಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ರಾಯಲ್ ಎನ್‌ಫೀಲ್ಡ್‌ನ ಸಿಇಒ ಬಿ.ಗೋವಿಂದರಾಜನ್, "ಹಂಟರ್ 350, ನಿಸ್ಸಂದೇಹವಾಗಿ, ಕಳೆದ ವರ್ಷ ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಿಡುಗಡೆ ಮಾಡಲಾದ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್ ಆಗಿದೆ. ಬಿಡುಗಡೆಯಾದ ಒಂದು ವರ್ಷದೊಳಗೆ ಹಂಟರ್ ಪ್ರಪಂಚದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಸವಾರರ ಹೆಮ್ಮೆಯ ಸಮುದಾಯವನ್ನು ಸಂಗ್ರಹಿಸಿದೆ ಎಂದು ನಮಗೆ ತುಂಬಾ ಹೆಮ್ಮೆಯಿದೆ. ಭಾರತದಲ್ಲಿ ಮಾತ್ರವಲ್ಲದೆ, ನಮ್ಮ ಹೊಸ ಮಾರುಕಟ್ಟೆಯಲ್ಲೂ ಹಂಟರ್ 350 ಹೆಚ್ಚು ಜನಪ್ರಿಯವಾಗುತ್ತಿದೆ. ಹಂಟರ್ 350 ಒಂದು ದೊಡ್ಡ ಯಶಸ್ಸನ್ನು ಕಂಡಿದೆ ಮತ್ತು ಕಡಿಮೆ ಸಮಯದಲ್ಲಿ ಈ ಮೈಲಿಗಲ್ಲನ್ನು ಸಾಧಿಸಲು ನಮಗೆ ಸಹಾಯ ಮಾಡಿದೆ’’ ಎಂದು ಹೇಳಿದ್ದಾರೆ.
ರಾಯಲ್ ಎನ್‌ಫೀಲ್ಡ್ ಹಂಟರ್ 350 20 ಕ್ಕೂ ಹೆಚ್ಚು ಭಾರತೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದೆ. ಇದರಲ್ಲಿ ಗೌರವಾನ್ವಿತ 'ವರ್ಷದ ಭಾರತೀಯ ಮೋಟಾರ್‌ಸೈಕಲ್ 2023' ಪ್ರಶಸ್ತಿ ಮತ್ತು ಥೈಲ್ಯಾಂಡ್‌ನ ಅತ್ಯುತ್ತಮ ಆಧುನಿಕ ಕ್ಲಾಸಿಕ್ ಲೈಟ್‌ವೇಟ್ ಮೋಟಾರ್‌ಸೈಕಲ್ ಸೇರಿವೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕ್ ಮೇಲೆ ಕೂತ ಯುವತಿಯಿಂದ ಬೈಕ್ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್
ಹಂಟರ್ 350 ಈಗ ಇಂಡೋನೇಷ್ಯಾ, ಜಪಾನ್, ಕೊರಿಯಾ, ಥೈಲ್ಯಾಂಡ್; ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುಕೆಯಲ್ಲಿ ಲಭ್ಯವಿದೆ. ಹಾಗೂ, ಅರ್ಜೆಂಟೀನಾ, ಕೊಲಂಬಿಯಾ, ಮೆಕ್ಸಿಕೋ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿಯೂ ಸಹ ಈ ಬೈಕ್ ಸಿಗುತ್ತದೆ. ಇದರ ಜತೆಗೆ, ಮೋಟಾರ್‌ಸೈಕಲ್ ಶೀಘ್ರದಲ್ಲೇ ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದೂ ರಾಯಲ್ ಎನ್‌ಫೀಲ್ಡ್ ಖಚಿತಪಡಿಸಿದೆ.
ಇದನ್ನೂ ಓದಿ: ಇನ್ಮುಂದೆ ಕಾರಲ್ಲೂ ಹಾರಾಡ್ಬೋದು: ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕ ಸರ್ಕಾರ ಅನುಮತಿ! ಬೆಲೆ ಎಷ್ಟು ನೋಡಿ..