ಸುಲಭ, ಸುಗಮ ರೈಡ್ ಅನುಭವ ನೀಡುವ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್!

By Kannadaprabha NewsFirst Published Jul 25, 2023, 2:44 PM IST
Highlights

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. ಗರಿಷ್ಠ ಮೈಲೇಜ್ ರೇಂಜ್, ಸುಲಭ ಸವಾರಿ, ಸರಳ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಈ ಪೈಕಿ ಓಲಾ ಎಸ್‌1 ಪ್ರೊ ಸ್ಕೂಟರ್ ಹೇಗಿದೆ? ರೈಡಿಂಗ್, ಇದರ ಫೀಚರ್ಸ್ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು(ಜು.25) ಎಲೆಕ್ಟ್ರಿಕ್‌ ಸ್ಕೂಟರ್‌ಗಳ ತಯಾರಿಯಲ್ಲಿ ದೊಡ್ಡ ದೊಡ್ಡ ಕಂಪನಿಗಳೆಲ್ಲಾ ನಿರತರಾಗಿರುವ ವೇಳೆಯಲ್ಲಿ ಇದ್ದಕ್ಕಿದ್ದಂತೆ ಬಂದು ಜನಮನ ಗೆದ್ದ ಎಲೆಕ್ಟ್ರಿಕ್ ಕಂಪನಿ ಓಲಾ ತನ್ನ ಹೊಸ ಸ್ಕೂಟರ್ ಓಲಾ ಎಸ್1 ಏರ್‌ ಬಿಡುಗಡೆಗೆ ಸನ್ನದ್ಧವಾಗಿದೆ. ಈ ಸಂದರ್ಭದಲ್ಲಿ ಓಲಾದ ಜನಪ್ರಿಯ ಸ್ಕೂಟರ್ ಓಲಾ ಎಸ್‌1 ಪ್ರೊ ಹೇಗಿದೆ ಎಂದು ಕೇಳುವವರಿಗೆ ಆ ಕುರಿತ ಒಂದು ಸಣ್ಣ ಅನುಭವ ಕಥನ.

ಈ ಸ್ಕೂಟರ್‌ಗೆ ಕೀ ಇಲ್ಲ. 6 ಅಂಕಿಯ ಪಾಸ್‌ವರ್ಡ್ ಇರುತ್ತದೆ. ನೀವು ಬ್ರೇಕ್ ಹಿಡಿದು ಎರಡು ಬಾರಿ ಪವರ್ ಬಟನ್ ಒತ್ತಿದರೆ ಪಾಸ್‌ವರ್ಡ್ ಕಿಂಡಿ ತೆರೆದುಕೊ‍ಳ್ಳುತ್ತದೆ. ಅಲ್ಲಿ ಪಾಸ್‌ವರ್ಡ್ ಹಾಕಿದರೆ ಸ್ಕೂಟರ್ ಆನ್ ಆಗುತ್ತದೆ. ಸ್ಟ್ಯಾಂಡ್ ತೆಗೆದು ಮತ್ತೊಮ್ಮೆ ಪವರ್ ಬಟನ್ ಒತ್ತಿದರೆ ಮುಂದೆ ನುಗ್ಗಲು ರೆಡಿ. ಇದರ ವಿಶೇಷತೆ ಎಂದರೆ ಆ್ಯಕ್ಸಿಲೇಟರ್‌ ತಿರುವಿದ ತಕ್ಷಣ ಸ್ಕೂಟರ್ ಮುಂದೆ ಹೋಗುವುದಿಲ್ಲ ಒಂದರೆಡು ಕ್ಷಣದ ನಂತರ ಬಿಟ್ಟ ಬಾಣದಂತೆ ಓಡುತ್ತದೆ.

ಓಲಾ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಮಾಹಿತಿಯುಳ್ಳ ಟೀಸರ್ ಬಿಡುಗಡೆ

ಇದರಲ್ಲಿ ಮೂರು ಡ್ರೈವಿಂಗ್ ಮೋಡ್‌ಗಳಿವೆ. ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್. ನಾರ್ಮಲ್ ಮೋಡ್‌ನಲ್ಲಿ ವೇಗ ಕೂಡ ನಾರ್ಮಲ್ಲಾಗಿರುತ್ತದೆ. ಇನ್ನೆರಡು ಮೋಡ್‌ಗಳು ವೇಗವನ್ನು ಪ್ರೀತಿಸುವವರಿಗೆ ನೆಚ್ಚಿನ ಮೋಡ್‌ಗಳು. ಈ ಸ್ಕೂಟರ್‌ನ ಬ್ಯಾಟರಿ 15 ಪರ್ಸೆಂಟ್‌ಗಿಂತ ಕಡಿಮೆ ಬಂದರೆ ತನ್ನಿಂತಾನೇ ಇಕೋ ಮೋಡ್‌ಗೆ ಹೋಗುತ್ತದೆ. ಆಗ ವೇಗವಾಗಿ ಹೋಗುವ ಆಸೆಯನ್ನೆಲ್ಲಾ ನೀವು ಬದಿಗಿಡಬೇಕು. ಎತ್ತರ ಏರುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಹಾಗಾಗಿ 15 ಪರ್ಸೆಂಟ್‌ವರೆಗೆ ಹೋಗದಂತೆ ನೋಡಿಕೊಳ್ಳುವುದೇ ಒಳಿತು.

ಸ್ಕೂಟರನ್ನು ಹಿಂದೆ ಎಳೆಯಲು ಕಷ್ಟಪಡುವವರಿಗೆ ಇದರಲ್ಲಿ ರಿವರ್ಸ್ ಗೇರ್ ಇದೆ. ಇಂಡಿಕೇಟರ್‌ ಹಾಕುವುದಕ್ಕೆ ಮಾತ್ರ ಎಡಬದಿಯ ಹ್ಯಾಂಡಲ್‌ನಲ್ಲಿ ಸ್ವಿಚ್‌ಗಳಿವೆ. ಅದನ್ನು ಅವಸರದಲ್ಲಿ ಒತ್ತುವುದು ಕೊಂಚ ಕಷ್ಟ. ಅಭ್ಯಾಸವಾದ ಮೇಲೆ ಎಲ್ಲವೂ ಸುಲಭ.

ಇದರಲ್ಲಿ ದೊಡ್ಡದಾದ ಡಿಕ್ಕಿ ಇದೆ. ತರಕಾರಿ ತುಂಬಿಸಿಕೊಂಡು ಹೋಗುವುದು ಸುಲಭ. ಡಿಕ್ಕಿ ತೆಗೆಯುವುದಕ್ಕೂ ಕೀ ಇಲ್ಲ. ಡಿಸ್‌ಪ್ಲೇಯಲ್ಲಿ ಒಂದು ಸಿಂಬಲ್ ಇರುತ್ತದೆ. ಅದನ್ನು ಒತ್ತಿದರೆ ಡಿಕ್ಕಿ ತೆರೆದುಕೊಳ್ಳುತ್ತದೆ. ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ನುಣುಪಾಗಿದ್ದು, ಬೇಕು ಬೇಕಾದಂತೆ ಅಡ್ಜಸ್ಟ್‌ ಮಾಡಿಕೊಳ್ಳಬಹುದು.

ಓಲಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಬಿಡುಗಡೆ, 2024ರಲ್ಲಿ ಬರಲಿದೆ ಓಲಾ ಕಾರು!

ಇದರ ಎಕ್ಸ್‌ಶೋರೂಮ್‌ ಬೆಲೆ ರೂ.139,999. ರೂ.3099ಗೆ ಇಎಂಐ ಶುರು ಆಗುತ್ತದೆ. ಕಂಪನಿ ನೀಡಿರುವ ಇದರ ಟಾಪ್‌ಸ್ಪೀಡ್ ಗಂಟೆಗೆ 116 ಕಿಮೀ. ಇದನ್ನು ಮನೆಯಲ್ಲಿ ಪೂರ್ತಿ ಚಾರ್ಜ್ ಮಾಡುವುದಕ್ಕೆ ಸುಮಾರು ಆರೂವರೆ ಗಂಟೆ ಬೇಕು. ಪೂರ್ತಿ ಚಾರ್ಜ್ ಮಾಡಿದರೆ 135 ಕಿಲೋಮೀಟರ್ ಓಡಬಹುದು ಎಂದು ಇಂಡಿಕೇಟರ್ ಸೂಚಿಸುತ್ತದೆ. ಎಷ್ಟು ದೂರ ಹೋಗುವುದು ಎಂಬುದು ನಿಮ್ಮ ರೈಡಿಂಗು ಮತ್ತು ರಸ್ತೆಗೆ ಬಿಟ್ಟದ್ದು. ಇದರ ಗುಣ, ವೈಶಿಷ್ಟ್ಯಗಳಿಂದ ಇದನ್ನು ಲಾಂಗ್‌ಡ್ರೈವ್‌ಗಳಿಗೆ ಹೊರತಾದ ಯೂಸರ್ ಫ್ರೆಂಡ್ಲೀ ಸ್ಕೂಟರ್ ಎನ್ನಬಹುದು.
 

click me!