ಓಲಾ ಸ್ಕೂಟರ್ ಬಗ್ಗೆ ಅಸಮಾಧಾನ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಲೀಕ

By Supreetha HebbarFirst Published Apr 27, 2022, 7:51 PM IST
Highlights

ತಮಿಳುನಾಡಿನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕ ಡಾ. ಪೃಥ್ವಿರಾಜ್, ಕಾರ್ಯಕ್ಷಮತೆ ಮತ್ತು ಶ್ರೇಣಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ಹಚ್ಚಿದ್ದಾರೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ (Ola Electric Scooter) ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗೆ ಓಲಾ ಸ್ಕೂಟರ್ಗಳಿಗೆ ಬೆಂಕಿ ಕಾಣಿಸಿಕೊಂಡಿದ್ದು, ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲಾ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಮಾಲೀಕರೊಬ್ಬರು ಬೆಂಕಿ ಹಚ್ಚಿದ ಹೊಸ ಘಟನೆಯೊಂದು ಬೆಳಕಿಗೆ ಬಂದಿದೆ. ತಮಿಳುನಾಡಿನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕ ಡಾ. ಪೃಥ್ವಿರಾಜ್, ಕಾರ್ಯಕ್ಷಮತೆ ಮತ್ತು ಶ್ರೇಣಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ಹಚ್ಚಿದ್ದಾರೆ.

ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೃಥ್ವಿರಾಜ್ ಅವರಿಗೆ ಸುಮಾರು 3 ತಿಂಗಳ ಹಿಂದೆ ವಾಹನ ಡೆಲಿವರಿ ದೊರೆತಿತ್ತು. ಈ ಕುರಿತು ಹಲವು ಬಾರಿ ಓಲಾ ಎಲೆಕ್ಟ್ರಿಕ್ಗೆ ದೂರು ನೀಡಿದ್ದರು. 

ಓಲಾ ಬೆಂಬಲ ತಂಡ ಸ್ಕೂಟರ್ ಅನ್ನು ಪರಿಶೀಲಿಸಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ವರದಿ ನೀಡಿತ್ತು. ಆದರೆ, ಸ್ಕೂಟರ್ನ ವ್ಯಾಪ್ತಿಯು ಅನಿಯಮಿತವಾಗಿದೆ ಎಂದು ಮಾಲೀಕರು ದೂರು ಸಲ್ಲಿಸಿದ್ದರು. ನಿನ್ನೆ ಅವರ ಸ್ಕೂಟರ್ 44 ಕಿ.ಮೀ ನಂತರ ಸ್ಥಗಿತಗೊಂಡಿತ್ತು. ಇದರಿಂದ ಕೋಪಗೊಂಡ ಅವರು ತನ್ನ ಸ್ಕೂಟರ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತಮಿಳುನಾಡಿನ ಅಂಬೂರು ಬೈಪಾಸ್ ರಸ್ತೆ ಬಳಿ ಈ ಘಟನೆ ನಡೆದಿದೆ. 

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ  ಕೂಡ ವ್ಯಕ್ತಿಯೊಬ್ಬರು ಓಲಾ ಸ್ಕೂಟರ್ ಅನ್ನು ಕತ್ತೆಗೆ ಕಟ್ಟಿ ಮೆರವಣಿಗೆ ಮಾಡಿ, ಸ್ಕೂಟರ್ನ ಕಾರ್ಯಕ್ಷಮತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರೊಂದಿಗೆ ಇತ್ತೀಚೆಗೆ ನಡೆದ ಬೆಂಕಿ ಅವಘಡಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳು ಸಾವು, ನೋವುಗಳಿಗೆ ಕಾರಣವಾದ ನಂತರ, ಓಲಾ ಎಲೆಕ್ಟ್ರಿಕ್ ತನ್ನ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ಗಳ 1,441 ವಾಹನಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಕೂಲಂಕಶ ತಪಾಸಣೆ ನಡೆಸಲಾಗುವುದು. ಕಳೆದ ತಿಂಗಳು ಪುಣೆಯಲ್ಲಿ ನಿಲ್ಲಿಸಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡಿತ್ತು. 

ಓಲಾ ಎಲೆಕ್ಟ್ರಿಕ್ ಪ್ರಕಾರ, ಇದು ಒಂದು ಪ್ರತ್ಯೇಕ ಘಟನೆಯಾಗಿದೆ ಮತ್ತು ಬ್ಯಾಟರಿ ಅಥವಾ ಅದರ ಸ್ಕೂಟರ್ಗಳಿಗೆ ಅಳವಡಿಸಲಾದ ಇತರ ಭಾಗಗಳ ಅಂತರ್ಗತ ಸಮಸ್ಯೆಯಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಬ್ಯಾಟರಿ ಮತ್ತು ಶಾಖ ನಿರ್ವಹಣಾ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸುವ ತನಿಖೆಯು ಸ್ಕೂಟರ್ ಹೇಗೆ ಬೆಂಕಿಗೆ ಆಹುತಿಯಾಯಿತು ಎಂಬುದರ ತನಿಖೆ ನಡೆಯುತ್ತಿದೆ ಎಂದು ಕಂಪನಿ ಹೇಳಿದೆ.

Ola S1 Pro ಬೆಂಕಿಯನ್ನು ಹಿಡಿಯುವ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. 2020 ರಲ್ಲಿ ತಮಿಳುನಾಡಿನಲ್ಲಿ ಸ್ಕೂಟರ್ ಉತ್ಪಾದನಾ ಕಾರ್ಖಾನೆಯನ್ನು ಸ್ಥಾಪಿಸಲು 2,400 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಕಂಪನಿಯನ್ನು ಮುಜುಗರಕ್ಕೀಡುಮಾಡಿದೆ. 

ಆದರೆ,  ಈ ಸಮಸ್ಯೆ ಎದುರಿಸುತ್ತಿರುವುದು ಓಲಾ ಎಲೆಕ್ಟ್ರಿಕ್ ಮಾತ್ರವಲ್ಲಿ. ಬ್ಯಾಟರಿ-ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಲು ಓಕಿನಾವಾ ಕೂಢ ತನ್ನ 3,215 ಪ್ರೈಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಹಿಂಪಡೆದಿದೆ. ಕಳೆದ ವಾರ ಹೈದರಾಬಾದ್ನಲ್ಲಿ, ಪ್ಯೂರ್ ಇವಿ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಚಾರ್ಜ್ ಆಗುತ್ತಿರುವಾಗ ಸ್ಫೋಟಗೊಂಡಿತು, ಇದರ ಪರಿಣಾಮವಾಗಿ ಒಬ್ಬರು ಸಾವನ್ನಪ್ಪಿದರು ಮತ್ತು ಇಬ್ಬರು ಗಾಯಗೊಂಡಿದ್ದರು. ಇದರಿಮದ ಪ್ಯೂರ್ ಇವಿ ತಮ್ಮ ಬ್ಯಾಟರಿಗಳು ಮತ್ತು ಚಾರ್ಜರ್ಗಳನ್ನು ಪರಿಶೀಲಿಸಲು ಎಟ್ರಾನ್ಸ್+ ಮತ್ತು ಇಪ್ಲುಟೊ 7ಜಿ ಎಲೆಕ್ಟ್ರಿಕ್ ಸ್ಕೂಟರ್ಗಳ 2,000 ವಾಹನಗಳನ್ನು ಹಿಂಪಡೆದಿದೆ. 

ಈ ಘಟನೆಗಳ ನಂತರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಎಲೆಕ್ಟ್ರಿಕ್ ವಾಹನ ತಯಾರಕರು ತಮ್ಮ ವಾಹನಗಳನ್ನು ಹಿಂಪಡೆದುಕೊಳ್ಳದಿದ್ದರೆ ಮತ್ತು ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸದಿದ್ದರೆ, ಕಾನೂನು ಕ್ರಮ  ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಇದನ್ನೂ ಓದಿ: ಪುಣೆಯಲ್ಲಿ ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ: ವಿಡಿಯೋ ವೈರಲ್

ಪ್ರಸ್ತುತ ಭಾರತದಲ್ಲಿ ಓಲಾ ಎರಡನೇ ಅತಿ ಬೇಡಿಕೆಯ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ಆಗಿದೆ. ಮೊದಲನೆಯ ಸ್ಥಾನವನ್ನು ಹೀರೋ ಎಲೆಕ್ಟ್ರಿಕ್ ಪಡೆದುಕೊಂಡಿದೆ. ಎಫ್ಎಡಿಎ (FADA) ವರದಿ ಪ್ರಕಾರ, 2022ರ ಮಾರ್ಚ್ನಲ್ಲಿ  Ola 9 ಸಾವಿರಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ವಿತರಿಸಿದೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಓಲಾ ಸಿಇಓ, ಪ್ರಸ್ತುತ ದಿನಕ್ಕೆ ಸುಮಾರು 800 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ತಯಾರಿಸುತ್ತಿರುವುದಾಗಿ ತಿಳಿಸಿದರು.

ಇದನ್ನೂ ಓದಿ: Ola Hypercharger ಚಾರ್ಜಿಂಗ್ ಚಿಂತೆ ಬಿಡಿ, ಇ-ಸ್ಕೂಟರ್ಗಳಿಗೆ ಹೈಪರ್ ಚಾರ್ಜರ್ ಅಳವಡಿಕೆ ಆರಂಭಿಸಿದ ಓಲಾ!

ಓಲಾ ಎಸ್ 1 ಪ್ರೋ (Ola S1 Pro), 181 ಕಿಲೋಮೀಟರ್ಗಳ ವ್ಯಾಪ್ತಿಯನ್ನು ಹೊಂದಿದೆ ಮತ್ತು 3.97 kWh ಬ್ಯಾಟರಿ ಅಳವಡಿಸಲಾಗಿದೆ. ಇದು 8.5kW ಮತ್ತು 58 Nm ನ ಟಾರ್ಕ್ ಉತ್ಪಾದನೆಯನ್ನು ನೀಡುವ 'ಹೈಪರ್ಡ್ರೈವ್' ಮೋಟಾರ್ಗೆ ಪವರ್ ನೀಡುತ್ತದೆ. ಸ್ಕೂಟರ್ನ 115 ಕಿಮೀ ಗರಿಷ್ಠ ವೇಗ ನೀಡಬಲ್ಲದು ಮತ್ತು  ಕೇವಲ 5 ಸೆಕೆಂಡುಗಳಲ್ಲಿ 0-60 ಕಿಮೀ  ವೇಗ ಹೆಚ್ಚಿಸಿಕೊಳ್ಳಬಲ್ಲದು. 

click me!