ತೆಲಂಗಾಣದ ವಾರಂಗಲ್ನಲ್ಲಿ ಪ್ಯೂರ್ ಇವಿ (PureEV)ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡಿದೆ. ಕಳೆದ ಏಳು ತಿಂಗಳಲ್ಲಿ ಬೆಂಕಿ ಹೊತ್ತಿಕೊಂಡ ಪ್ಯೂರ್ ಇವಿಯ ನಾಲ್ಕನೇ ಸ್ಕೂಟರ್ ಇದಾಗಿದೆ.
ಎಲೆಕ್ಟ್ರಿಕ್ ವಾಹನಗಳ ಬೆಂಕಿ ಅವಘಡಗಳು ಮತ್ತೆ ಸದ್ದು ಮಾಡುತ್ತಿವೆ. ಮಂಗಳವಾರ ತೆಲಂಗಾಣದ ವಾರಂಗಲ್ನಲ್ಲಿ ಪ್ಯೂರ್ ಇವಿ (PureEV)ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡಿದೆ. ಕಳೆದ ಏಳು ತಿಂಗಳಲ್ಲಿ ಬೆಂಕಿ ಹೊತ್ತಿಕೊಂಡ ಪ್ಯೂರ್ ಇವಿಯ ನಾಲ್ಕನೇ ಸ್ಕೂಟರ್ ಇದಾಗಿದೆ. ಇದರೊಂದಿಗೆ, ದೇಶದಲ್ಲಿ ಈ ವರ್ಷ ಬೇಸಿಗೆ ಪ್ರಾರಂಭವಾದಾಗಿನಿಂದ ಸುಮಾರು ಎರಡು ಡಜನ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ 36 ಸೆಕೆಂಡುಗಳ ಕ್ಲಿಪ್ನಲ್ಲಿ, ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವ ಕೆಂಪು ಬಣ್ಣದ ಇಪ್ಲೂಟೊ ಸ್ಕೂಟರ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವುದು ಕಾಣಬಹುದು. ಬ್ಯಾಟರಿ ಪ್ಯಾಕ್ನೊಳಗಿನ ತಾಜಾ ಲಿಥಿಯಂ ಅಯಾನ್ ಸೆಲ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಬ್ಯಾಟರಿಯಲ್ಲಿ ಥರ್ಮಲ್ ರನ್ಅವೇ ಉಂಟಾಗಿರುವ ಚಿಹ್ನೆಗಳು ಕಾಣಿಸಿಕೊಂಡಿವೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೈದರಾಬಾದ್ನಲ್ಲಿ ಎರಡು ಪ್ಯೂರ್ ಇವಿ ಸ್ಕೂಟರ್ಗಳಿಗೆ ಇದೇ ರೀತಿ ಬೆಂಕಿ ಕಾಣಿಸಿಕೊಂಡಿತ್ತು. ಅದೇ ರೀತಿ ಈ ವರ್ಷದ ಮಾರ್ಚ್ನಲ್ಲಿ ಚೆನ್ನೈ ಬಳಿ ಮತ್ತೊಂದು ಸ್ಕೂಟರ್ ಕೂಡ ಬೆಂಕಿಗೆ ಆಹುತಿಯಾಗಿತ್ತು.
ಈ ವರ್ಷ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ಹೊತ್ತಿಕೊಂಡ ಆರನೇ ಘಟನೆ ಇದಾಗಿದೆ. ಮಾರ್ಚ್ 26 ರಂದು ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ ಎಸ್1 ಪ್ರೊ ಸ್ಕೂಟರ್ ಬೆಂಕಿಗೆ ಆಹುತಿಯಾಗಿತ್ತು. ಅದೇ ದಿನ, ತಮಿಳುನಾಡಿನ ವೆಲ್ಲೂರಿನಲ್ಲಿ ಚಾರ್ಜ್ ಆಗುತ್ತಿದ್ದ ಅವರ ಓಕಿನಾವಾ ಸ್ಕೂಟರ್ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಓರ್ವ ವ್ಯಕ್ತಿ ಮತ್ತು 13 ವರ್ಷದ ಮಗಳ ಸಾವಿನ ಘಟನೆಗಳು ವರದಿಯಾಗಿದ್ದವು.
2021ರ ಡಿಸೆಂಬರ್ನಲ್ಲಿ, ರಾತ್ರಿಯ ಸಮಯದಲ್ಲಿ ಚಾರ್ಜ್ ಆಗುತ್ತಿದ್ದ ಕಾರ್ಗೋ ಸ್ಕೂಟರ್ನಿಂದ ಉಂಟಾದ ಬೆಂಕಿ ಪಕ್ಕದ ಕೋಣೆಗೆ ಕೂಡ ಹರಡಿ ಅದರಲ್ಲಿದ್ದ 60 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಈ ಸ್ಕೂಟರ್ ಅನ್ನು ಮನೇಸರ್ ಮೂಲದ ಎಚ್ಸಿಡಿ ಇಂಡಿಯಾ ತಯಾರಿಸಿದೆ.
ಇವುಗಳನ್ನು ಅನುಸರಿಸಿ, ಮಾರ್ಚ್ 28 ರಂದು ತಮಿಳುನಾಡಿನ ಮತ್ತೊಂದು ಸ್ಕೂಟರ್ ಬೆಂಕಿಗೆ ಆಹುತಿಯಾಯಿತು, ತಕ್ಷಣವೇ ಚೆನ್ನೈನಲ್ಲಿ ಪ್ಯೂರ್ ಇವಿ ಘಟನೆ ನಡೆಯಿತು. ನಾಸಿಕ್ ಬಳಿ ಏಪ್ರಿಲ್ 9 ರಂದು ಕಂಟೈನರ್ ಟ್ರಕ್ನಲ್ಲಿ ಸಾಗುತ್ತಿದ್ದಾಗ ಜಿತೇಂದ್ರ ಇವಿಯಿಂದ 20 ಎಲೆಕ್ಟ್ರಿಕ್ ಸ್ಕೂಟರ್ಗಳು ಬೆಂಕಿಗೆ ಆಹುತಿಯಾಗಿವೆ.
ಇದನ್ನೂ ಓದಿ: Number Plate 70 ಸಾವಿರ ರೂ ಆ್ಯಕ್ಟಿವಾ ಸ್ಕೂಟರ್ ಫ್ಯಾನ್ಸಿ ನಂಬರ್‌ಗಾಗಿ ಮಾಲೀಕನಿಂದ 15.14 ಲಕ್ಷ ರೂ ಖರ್ಚು!
ಎಲೆಕ್ಟ್ರಿಕ್ ಸ್ಕೂಟರ್ಗಳು ನಿಯಮಿತವಾಗಿ ಬೆಂಕಿಗೆ ಸಿಲುಕುವ ಘಟನೆಗಳಿಮದ, ಅದರಲ್ಲೂ ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ತೀವ್ರವಾದ ಶಾಖದ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಸುರಕ್ಷತೆಯ ಕುರಿತು ದೇಶದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಈ ಘಟನೆಗಳನ್ನು ಗಮನಿಸಿ ರಸ್ತೆ ಸಾರಿಗೆ ಸಚಿವಾಲಯ ಬೆಂಕಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರಕ್ಕೆ (CFEES) ಬೆಂಕಿಯ ಕಾರಣವನ್ನು ತನಿಖೆ ಮಾಡಲು ಮತ್ತು ಈ ತಿಂಗಳ ಅಂತ್ಯದೊಳಗೆ ವರದಿಯನ್ನು ಸಲ್ಲಿಸಲು ಕೇಳಿದೆ. CFEES ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ರಕ್ಷಣಾ ಪ್ರಯೋಗಾಲಯವಾಗಿದೆ.
ಈ ಘಟನೆಯ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ನ ಸಿಇಒ, ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು ಸುದ್ದಿಯಾಗಿತ್ತು. ಈಗಾಗಲೇ ಸಚಿವಾಲಯದ ಕಾರ್ಯದರ್ಶಿಗಳು, ಅಗತ್ಯಬಿದ್ದಲ್ಲಿ ಓಲಾ ತಯಾರಕರನ್ನು ಕೂಡ ವಿಚಾರಣೆಗೆ ಕರೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಗ್ನಿ ಅವಘಡ ಹಿನ್ನೆಲೆ: ತಪಾಸಣೆಗಾಗಿ 3,215 ವಾಹನಗಳನ್ನು ಹಿಂಪಡೆದ ಒಕಿನಾವ
ಓಲಾ ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈಗಾಗಲೇ ಬ್ಯಾಟರಿಗಳ ಬಗ್ಗೆ ಅನುಮಾನದಲ್ಲಿರುವ ಜನರು ಇವುಗಳ ಖರೀದಿಯಿಂದ ಇನ್ನಷ್ಟು ಹಿಂದಕ್ಕೆ ಸರಿಯುವ ನಿರೀಕ್ಷೆಯಿದೆ.